ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ)

ಸುಮಾರು 100 ವರ್ಷಗಳ ಇತಿಹಾಸವಿರುವ, ಏಷ್ಯಾದ ಅತಿ ದೊಡ್ಡ ಸಗಟು ಹೂವಿನ ಮಾರುಕಟ್ಟೆಗಳಲ್ಲಿ ಒಂದಾದ ಮೊದಲಿಗೆ ಕಲ್ಯಾಣಿ, ಯುದ್ದ ಭೂಮಿ, ಸಂತೆ ಕಟ್ಟೆ, ಅಂತಿಮವಾಗಿ ಮಾರುಕಟ್ಟೆಯಾಗಿದ್ದಲ್ಲದೇ ಇನ್ನೂ ಹತ್ತು ಹಲವಾರು ಹೊಸತನದ ರೋಚಕ ಇತಿಹಾಸವನ್ನು ಹೊಂದಿರುವ ಕೃಷ್ಣರಾಜ ಮಾರುಕಟ್ಟೆಯ ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೃಷ್ಣರಾಜ ಮಾರುಕಟ್ಟೆ (ಕೆ.ಆರ್. ಮಾರುಕಟ್ಟೆ)

ವಿಧಾನಸೌಧ

ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧವನ್ನು ಯಾರು? ಎಂದು? ಏಕಾಕಿ ನಿರ್ಮಿಸಿದರು? ಅದರ ವಿಶೇಷತೆಗಳು ಏನು? ಹೀಗೆ ವಿಧಾನ ಸೌಧ ನಿರ್ಮಾಣದ ಹಿಂದಿರುವ ರೋಚಕ ವಿಷಯಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಧಾನಸೌಧ

ಬ್ರಿಗೇಡ್ ರಸ್ತೆಯ ಸಪ್ಪರ್ಸ್ ಯುದ್ಧ ಸ್ಮಾರಕ

ಅನೇಕ ಊರುಗಳಲ್ಲಿ ತಮ್ಮ ಊರನ್ನು ಶತ್ರುಗಳ ಆಕ್ರಮಣದಿಂದ ತಡೆದ ವೀರ ಮತ್ತು ಶೂರರ ಕುರಿತಾದ ವೀರಗಲ್ಲುಗಳು ಇರುವಂತೆ, ಮೊದಲ ವಿಶ್ವ ಯುದ್ಧದಲ್ಲಿ ಬ್ರಿಟೀಷ್ ಸೈನ್ಯದ ಬಾಗವಾಗಿ ಶತ್ರುಗಳ ವಿರುದ್ದ ಹೋರಾಟ ನಡೆಸಿ ಹುತಾತ್ಮರಾದ ಮದ್ರಾಸ್ ಸಪ್ಪರ್ಸ್ ಮತ್ತು ಮೈನರ್ಸ್ (MEG) ಸೈನಿಕರ ನೆನಪಿನಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ನಿರ್ಮಿಸಿಸಲಾಗಿರುವ ಸುಮಾರು 100ವರ್ಷ ಹಳೆಯದಾದ ಸಪ್ಪರ್ಸ್ ವಾರ್ ಮೆಮೋರಿಯಲ್ ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. … Read More ಬ್ರಿಗೇಡ್ ರಸ್ತೆಯ ಸಪ್ಪರ್ಸ್ ಯುದ್ಧ ಸ್ಮಾರಕ

ಟಿ ಆರ್ ಶಾಮಣ್ಣ ನಗರ ಮತ್ತು ಉದ್ಯಾನವನ

ಬೆಂಗಳೂರಿನಲ್ಲಿ ಹತ್ತು ಹಲವಾರು ಶಿಕ್ಷಣ ಸಂಸ್ಧೆಗಳು, ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಆರಂಭಿಸಿದ್ದಲ್ಲದೇ ನಗರಪಾಲಿಕೆ ಸದಸ್ಯರಾಗಿ ಮಾಡಿದ ಅನೇಕ ಸಾಧನೆಗಳಿಂದ ಬೆಂಗಳೂರು ನಗರಸಭೆಯ ಪಿತಾಮಹ ಎಂದೇ ಖ್ಯಾತರಾಗಿದ್ದಲ್ಲದೇ, ತಮ್ಮ ಸರಳ ಸಜ್ಜನಿಕೆಯಿಂದ ಕರ್ನಾಟಕದ ಗಾಂಧಿ ಎಂಬ ಬಿರುದಾಂಕಿತ, ಸೈಕಲ್ ಶಾಮಣ್ಣನವರಿಗೆ, ಆ ಹೆಸರು ಬರಲು ಕಾರಣವೇನು? ಆವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯದ ಜೊತೆ ಸಾಧನೆಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಟಿ ಆರ್ ಶಾಮಣ್ಣ ನಗರ ಮತ್ತು ಉದ್ಯಾನವನ

ಮಾವಳ್ಳಿ ಟಿಫನ್ ರೂಂ (MTR)

ಸುಮಾರು 99 ವರ್ಷಗಳ ಹಿಂದೆ ಬೆಂಗಳೂರಿನ ಲಾಲ್‌ಬಾಗ್ ರಸ್ತೆಯ ಮಾವಳ್ಳಿಯಲ್ಲಿ ಸಣ್ಣದಾಗಿ ಆರಂಭವಾದ ಮಾವಳ್ಳಿ ಟಿಫನ್ ರೂಂ ಇಂದು ಎಂಟಿಆರ್ ಹೆಸರಿನಲ್ಲಿ, ಬೆಂಗಳೂರು, ಉಡುಪಿ, ಮೈಸೂರು, ಸಿಂಗಾಪುರ್, ಕೌಲಾಲಂಪುರ್, ಲಂಡನ್ ಮತ್ತು ದುಬೈನಲ್ಲಿಯೂ ಸಹಾ ಶಾಖೆಗಳನ್ನು ಹೊಂದಿರುವುದಲ್ಲದೇ, ಸಿದ್ಧ ಪಡಿಸಿದ ಬಗೆ ಬಗೆಯ ಮಸಾಲೆ ಮತ್ತು ರೆಡಿ ಟು ಈಟ್ ಪದಾರ್ಥಗಳಲ್ಲಿ ವಿಶ್ವವಿಖ್ಯಾತಿ ಪಡೆದಿದೆ.

ಅಂತಹ ವಿಶ್ವವಿಖ್ಯಾತ ಎಂಟಿಆರ್ ಬೆಳೆದು ಬಂದ ದಾರಿ ಮತ್ತು ಮಾಡಿರುವ ಸಾಧನೆಗಳ ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಾವಳ್ಳಿ ಟಿಫನ್ ರೂಂ (MTR)

ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ಕಾಫಿ ಎಂಬುದು ಹುರಿದ ಕಾಫಿ ಬೀಜಗಳಿಂದ ತಯಾರಿಸಿದ ಗಾಢ ಬಣ್ಣದ ಸ್ವಲ್ಪ ಕಹಿ ಮತ್ತು ಸ್ವಲ್ಪ ಆಮ್ಲೀಯ ಇರುವ ಪಾನೀಯವಾಗಿದ್ದು, ಅದರಲ್ಲಿರುವ ಕೆಫಿನ್ ಎಂಬ ಅಂಶ ಕುಡಿದವರ ಮೇಲೆ ಅಲ್ಪಪ್ರಮಾಣದ ಉತ್ತೇಜಕ ಪರಿಣಾಮವನ್ನು ಬೀರಿ ಅವರನ್ನು ಚೈತನ್ಯದಯಕವಾಗಿ ಇಡುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರಪಂಚಾದ್ಯಂತ ಕಾಫೀ ಒಂದು ಜನಪ್ರಿಯ ಪಾನೀಯವಾಗಿದೆ. ಹಾಗಾಗಿ ಅತ್ಯುತ್ತಮವಾದ ಕಾಫೀ ಬೀಜವನ್ನು ಹದವಾಗಿ ಹುರಿದು ಪುಡಿಮಾಡಿ ಹಬೆಯಾಡುವ ಬಿಸಿನೀರಿನಿಂದ ಅದರ ಕಷಾಯ (decoction)ವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆಯನ್ನು… Read More ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ಸರ್. ಕೆ.ಪಿ. ಪುಟ್ಟಣ್ಣ ಚಟ್ಟಿ ಪುರಭವನ

ಬೆಂಗಳೂರಿನ ಹೃದಯಭಾಗದಲ್ಲಿರುವ ಪುರಭವನಕ್ಕೆ ಸರ್ ಕೆ.ಪಿ.ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಎಂಬ ಹೆಸರು ಇಡಲು ಕಾರಣವೇನು? ಆ ಕಟ್ಟಡದ ಇತಿಹಾಸ ಮತ್ತು ವೈಶಿಷ್ಟ್ಯತೆಗಳೇನು? ಆ ಕಟ್ಟಡದ ಮುಂದೆಯೇ ಪ್ರತಿಭಟನೆಗಳು ಏಕೆ ನಡೆಯುತ್ತವೆ? ಸರ್ ಪುಟ್ಟಣ್ಣ ಚೆಟ್ಟಿ ಎಂದರೆ ಯಾರು? ಅವರ ಯಶೋಗಾಧೆ ಏನು? ಎಂಬೆಲ್ಲಾ ಕುತೂಹಲಕಾರಿ ವಿಷಯಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸರ್. ಕೆ.ಪಿ. ಪುಟ್ಟಣ್ಣ ಚಟ್ಟಿ ಪುರಭವನ

ಪೋಲೀಸ್ ತಿಮ್ಮಯ್ಯ ವೃತ್ತ

ಬೆಂಗಳೂರಿನ ವಿಧಾನ ಸೌಧದ ಹತ್ತಿರವೇ ಇರುವ ಜಿಪಿಓ ಬಳಿಯ ವೃತ್ತಕ್ಕೆ ಪೋಲೀಸ್ ಮೀಸೆ ತಿಮ್ಮಯ್ಯ ವೃತ್ತ ಎಂಬ ಹೆಸರು ಇಡಲು ಕಾರಣವೇನು? ಎಂಬುವ ರೋಚಕ ಅದರೇ ಅಷ್ಟೇ ಹೃದಯವಿದ್ರಾವಕವಾದ ಸಂಗತಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಪೋಲೀಸ್ ತಿಮ್ಮಯ್ಯ ವೃತ್ತ

ಭಾರತೀಯ ವಿಜ್ಞಾನ ಸಂಸ್ಥೆ (IISc.)

ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಜಗತ್ಪ್ರಸಿದ್ಧವಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc.)ಯನ್ನು ದೇಶದ ಖ್ಯಾತ ಕೈಗಾರಿಗೋದ್ಯಮಿಗಳಾದ ಜೆಮ್ ಷಡ್ ಜೀ ಟಾಟಾರವರು ಆರಂಭಿಸಲು ಸ್ವಾಮಿ ವಿವೇಕಾನಂದರು ಹೇಗೆ ಕಾರಣರಾದರು? ಮತ್ತು ಇಂತಹ ಮಹಾನ್ ಸಂಸ್ಥೆಗೆ ನಮ್ಮ ಮೈಸೂರು ಸಂಸ್ಥಾನದ ಕೊಡುಗೆಗಳೇನು? IISc. ಬೆಳೆದು ಬಂದ ಹಾದಿಯ ಕುರಿತಾದ ಅದ್ಭುತವಾದ ಮಾಹಿತಿಗಳು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಭಾರತೀಯ ವಿಜ್ಞಾನ ಸಂಸ್ಥೆ (IISc.)