ಸಾವಿರದ ಶರಣು

ಪ್ರತೀ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಬಂದಿತೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಆಯವ್ಯಯವನ್ನು ಪ್ರಕಟಿಸುವಂತೆ, ಪ್ರತೀ ವರ್ಷ ಶಿವರಾತ್ರಿ ಬಂದಿತೆಂದರೆ ನಮ್ಮ ಏನಂತೀರೀ? ಬ್ಲಾಗಿನ ವಾರ್ಷಿಕೋತ್ಸವದಲ್ಲಿ ನಮ್ಮ ಇದುವರೆಗಿನ ಸಾಹಸ ಮತ್ತು ಅದಕ್ಕೆ ನಿಮ್ಮ ಸಹಕಾರವನ್ನು ನೆನೆಯುವ ಸುಸಂದರ್ಭವಾಗಿದೆ. … Read More ಸಾವಿರದ ಶರಣು

ದೇಹ ಮತ್ತು ದುಡಿತ

ನನ್ನ ಶಾಲಾ ಸಹಪಾಠಿಯೊಬ್ಬ ನೆನ್ನೆಯ ದಿನ ಸಂಜೆ ಶಟಲ್ ಆಡುವ ವೇಳೆಯಲ್ಲಿ ಶಟಲ್ ಕೋರ್ಟಿನಲ್ಲಿಯೇ ಬಿದ್ದು ತೀವ್ರತರವಾದ ಹೃದಯಸ್ಥಂಭನದಿಂದಾಗಿ ಮೃತನಾದ ಎಂದು ಇಂದು ಬೆಳಿಗ್ಗೆ ಗೆಳೆಯನೊಬ್ಬ ಫೋಟೋದೊಂದಿಗೆ ಕಳುಹಿದ್ದ ವ್ಯಾಟ್ಯಾಪ್ ಸಂದೇಶವೊಂದನ್ನು ನೋಡಿ ಮನಸ್ಸಿಗೆ ಬಹಳ ದುಃಖವುಂಟಾಯಿತು. ಪಾಶ್ವಾತ್ಯ ಬದುಕಿಗೆ ಒಗ್ಗಿಹೋಗಿರುವ ಇಂದಿನ ಯುವ ಜನತೆ ವಾರಪೂರ್ತಿ ಹೊತ್ತಲ್ಲದ ಹೊತ್ತಿನಲ್ಲಿ ನಿಶಾಚರರಂತೆ ದುಡಿಯುತ್ತಾರೆ ಮತ್ತು ವಾರಾಂತ್ಯದಲ್ಲಿ ಆ ದುಡಿತದ ದಣಿವಾರಿಸಿಕೊಳ್ಳಲು ನಾನಾ ರೀತಿಯ ಹವ್ಯಾಸಗಳಿಗೆ ದಾಸರಾಗಿ ತಮ್ಮ ದೇಶ ಮತ್ತು ದೇಹದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸದ… Read More ದೇಹ ಮತ್ತು ದುಡಿತ

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಏಳು ಕೋಟಿ ಕನ್ನಡಿಗರು ಇರುವ ಈ ಕರ್ನಾಟಕದ ಕನ್ನಡ ಪರ ಹೋರಾಟಗಾರರು ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಹೊಂದಾಣಿಕೆಗಳೇ ಇಲ್ಲದೇ, ತಮ್ಮ ತಮ್ಮ ಅಹಂ ಮತ್ತು ಅಸ್ತಿತ್ವಕ್ಕಾಗಿ ಪದೇ ಪದೇ ಕರ್ನಾಟಕ ಬಂದ್ ಕರೆ ನೀಡುವುದು ಎಷ್ಟು ಸರಿ? ಈ ರೀತಿಯ ಬಂದ್ ನಿಂದ ಸಾಧಿಸುವುದಾದರೂ ಏನು?… Read More ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

EatOut

ಧಾರವಾಡದ ಸಾಧನ ಕೇರಿಯಲ್ಲಿ ನಿಂತು ಕಲ್ಲೆಸೆದರೆ ಅದು ಒಂದಲ್ಲಾ ಒಂದು ಸಾಹಿತಿಗಳ ಮನೆಯ ಮೇಲೆ ಬೀಳುವಂತೆ  ಬೆಂಗಳೂರಿನ ವಿದ್ಯಾರಣ್ಯಪುರದ ಯಾವುದೇ ಭಾಗದಲ್ಲಿ ನಿಂತು ಕಲ್ಲೆಸೆದರೆ ಅದು ಬೀಳುವುದು ಒಂದೋ ಯಾವುದಾದರೂ ಐಟಿ ಬಿಟಿ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಯ ಮನೆಗೋ ಇಲ್ಲವೇ ಯಾವುದಾದರೂ ಉಪಹಾರ ಗೃಹಗಳಿಗೋ  ಎಂದರೆ ಅತಿಶಯೋಕ್ತಿಯೇನಲ್ಲ. ಮಧ್ಯಮ ವರ್ಗದವರು ಇಲ್ಲವೇ ತುಸು ಹೆಚ್ಚಿನ ಮಧ್ಯಮವವರ್ಗದವರೇ ಹೆಚ್ಚಾಗಿಯೇ ನೆಲಸಿರುವ ವಿದ್ಯಾರಣ್ಯಪುರ, ಪ್ರಖ್ಯಾತವಾಗಿರುವುದು  ಇಲ್ಲಿರುವ ಜಗತ್ಪ್ರಸಿದ್ಧ ದೇವಾಲಯಗಳಿಗೆ ಮತ್ತು  ಕೈಗೆಟುಕುವ ಬೆಲೆಯಲ್ಲಿ ರುಚಿ ರುಚಿಯಾಗಿ ಸಿಗುವ ಬಗೆ ಬಗೆ… Read More EatOut

ಬದುಕು ಜಟಕಾ ಬಂಡಿ

ಇಂದು ಬೆಳಿಗ್ಗೆ ಮನೆಯ ಹತ್ತಿರ ಜಾಗಿಂಗ್ ಮಾಡುತ್ತಿದ್ದೆ. ಹಾಗೆ ಮಾಡುವಾಗ ನನಗಿಂತ ಸುಮಾರು ಅರ್ಧ ಕಿಲೋ ಮೀಟರ್ ಮುಂದೆ ಜಾಗಿಂಗ್ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಗಮನಿಸಿದೆ. ಅವರು ಸ್ವಲ್ಪ ನಿಧಾನವಾಗಿ ಓಡುತ್ತಿರುವುದನ್ನು ಗಮನಿಸಿ ಅವರನ್ನು ಹಿಂದಿಕ್ಕಬೇಕೆಂದು ನನ್ನ ಒಳ ಮನಸ್ಸು ಹೇಳಿತು. ಹಾಗಾಗಿ ನಾನು ಮತ್ತಷ್ಟೂ ವೇಗ ಮತ್ತು ವೇಗವಾಗಿ ಓಡಲು ಪ್ರಾರಂಭಿಸಿ, ಕೆಲವೇ ನಿಮಿಷಗಳಲ್ಲಿ ಅವರಿಗಿಂತ 100 ಅಡಿಗಳ ಹಿಂದೆ ಬಂದಿದ್ದನ್ನು ಗಮನಿಸಿದ ಅವರೂ ತಮ್ಮ ವೇಗವನ್ನು ಹೆಚ್ಚಿಸಿಕೊಂಡರು. ನಾನೂ ಕೂಡ ಅವರನ್ನು ಹಿಂದಿಕ್ಕಲು ಸರ್ವ… Read More ಬದುಕು ಜಟಕಾ ಬಂಡಿ

ಅಭ್ಯಾಸ- ದುರಭ್ಯಾಸ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಹುಡುಗನೊಬ್ಬ ಜಾರುತ್ತಿರುವ ತನ್ನ ದೊಡ್ಡದಾದ ಚೆಡ್ಡಿಯನ್ನು ಎಡಗೈನಲ್ಲಿ ಹಿಡಿದುಕೊಂಡು ಹೋಗುತ್ತಿರುವ ಚಿತ್ರ ವೈರಲ್ ಆಗಿದೆ. ಆ ಪುಟ್ಟ ಬಾಲಕನು ಬೆರಳು ಚೀಪುವ ದುರಾಭ್ಯಾಸವನ್ನು ತಪ್ಪಿಸಲು ಅವನ ಪೋಷಕರು ಈ ರೀತಿಯ ಜಾಣ್ಮೆಗೆ ಮೊರೆ ಹೋಗಿದ್ದಾರೆ ಎಂಬ ತಲೆಬರಹ ನನ್ನನ್ನು ನನ್ನ ಬ್ಯಾಲ್ಯಾವಸ್ಥೆಗೆ ಕರೆದುಕೊಂಡು ಹೋಯಿತು. ನಾನು ಮತ್ತು ನನ್ನ ಚಿಕ್ಕ ತಂಗಿ ಇಬ್ಬರೂ ಸಹಾ ಬೆರಳು ಚೀಪುತ್ತಿದ್ದವರೇ. ನಾನು ಎಡಗೈ ಹೆಬ್ಬರಳನ್ನು ಮಲಗುವಾಗ ಮಾತ್ರ, ಒಂದು ಶುಭ್ರವಾದ ಪಂಚೆಯ ತುದಿಯೊಂದಿಗೆ ಚಿಪುತ್ತಿದ್ದರೆ,… Read More ಅಭ್ಯಾಸ- ದುರಭ್ಯಾಸ

ಇದೇನು ಸಭ್ಯತೆ, ಇದೇನು ಸಂಸ್ಕೃತಿ

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುತ್ತದೆ ನಮ್ಮ ಶಾಸ್ತ್ರಗಳು. ಅಹಲ್ಯ, ದ್ರೌಪತಿ, ಕುಂತಿ, ತಾರ ಮಂಡೋದರಿಯರಂತಹ ಪತಿವ್ರತೆಯರು ಜನ್ಮಿಸಿದ ನಾಡು ನಮ್ಮ ನಾಡು. ಪರ ಪುರುಷರೊಂದಿಗೆ ಸಂಭಾಷಣೆ ಮಾಡುವಾಗ ಸೆರೆಗಿನಿಂದ ಇಡೀ ಮುಖವನ್ನೇ ಮುಚ್ಚಿಕೊಂಡು ತಲೆ ಬಗ್ಗಿಸಿಯೇ ಮಾತನಾಡಿಸುವ ಸಂಸ್ಕೃತಿ ನಮ್ಮದು. ಪತಿಯೇ ತನ್ನ ಮುಂದೆ ನಿಂತಿದ್ದರೂ ಪತಿಯನ್ನು ತಲೆ ಎತ್ತಿನೋಡದೆ ಮಗನ ಅಂತ್ಯಕ್ರಿಯೆಗೆ… Read More ಇದೇನು ಸಭ್ಯತೆ, ಇದೇನು ಸಂಸ್ಕೃತಿ

ಸ್ವಾಮಿ ವಿವೇಕಾನಂದರ ದಿಗ್ವಿಜಯ

ಜನವರಿ 12 ಸ್ವಾಮಿ ವಿವೇಕಾನಂದರ ಜಯಂತಿ. 1893, ಸೆಪ್ಟಂಬರ್ 11ಕ್ಕೆ ಅಮೇರಿಕಾದ ಚಿಕಾಗೋದಲ್ಲಿ ಅವರು ಮಾಡಿದ ದಿಕ್ಸೂಚಿ ಭಾಷಣ. ಈ ಎರಡೂ ಸಂಧರ್ಭಗಳನ್ನು ನೆನಪಿಸಿಕೊಳ್ಳುವ ಸಲುವಾಗಿಯೇ ಸ್ವಾಮಿ ವಿವೇಕಾನಂದರ ದಿಗ್ವಿಜಯ ಎಂಬೀ ಲೇಖನ. ಕ್ರಿ.ಶ. 1893 ಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅಂದರೆ ಕ್ರಿ.ಶ. 1492 ಕ್ಕೆ ಭಾರತಕ್ಕೆ ಬರಲು ಹವಣಿಸಿ ಹಡಗನ್ನೇರಿ ಹೊರಟಿದ್ದ ನಾವಿಕ ಕ್ರಿಸ್ಟೋಫರ್ ಕೋಲಂಬಸ್ ನೌಕೆ ದಿಕ್ಕು ತಪ್ಪಿ ಅಮೇರಿಕಾಕ್ಕೆ ತಲುಪಿ ಅಲ್ಲಿನ ಜನರನ್ನೇ ಅವನು ಭಾರತೀಯರೆಂದು ತಿಳಿದು ಆವರನ್ನೇ… Read More ಸ್ವಾಮಿ ವಿವೇಕಾನಂದರ ದಿಗ್ವಿಜಯ

ಸಂಬಂಧಗಳು

ಅಕ್ಕ-ತಂಗಿ, ಅಣ್ಣ-ತಮ್ಮ, ಭಾವ-ಭಾವಮೈದ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ, ಅತ್ತೆ-ಮಾವ, ನಾದನಿ-ಷಡ್ಕ, ಇಂದು ನಮಗೆಲ್ಲಾ ಈ ಪದಗಳು ಚಿರಪರಿಚಿತ. ನಮ್ಮ‌ ಸಂಬಂಧಿಕರನ್ನು ಈ ಪದಗಳ ಮೂಲಕವೇ ಸಂಭೋದಿಸುವುದು ವಾಡಿಕೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ಪದಗಳಿಗೆ ಬೆಲೆಯೇ ಇಲ್ಲದೆ ಹೋಗಿ ಕೇವಲ ನಿಘಂಟಿನಲ್ಲಿ ಹುದುಗಿ‌ ಹೋಗುತ್ತದೆ ಎಂದರೆ ನಂಬಲು ಸಾಧ್ಯವೇ? ಖಂಡಿತವಾಗಿಯೂ ನಂಬಲೇ ಬೇಕಾಗಿದೆ. ಹಿಂದೆಲ್ಲಾ ಮತ್ತೊವ್ಬರಿಗೆ ನಮ್ಮ ಸಂಬಂಧೀಕರನ್ನು ಪರಿಚಯಿಸಿಕೊಡುವಾಗ ಅವರವರ ಸಂಬಂಧಕ್ಕೆ ಅನುಗುಣವಾಗಿ ಇವರು ನಮ್ಮ ಸೋದರ ಮಾವ ಎಂದಾಗ, ತಾಯಿಯ ತಮ್ಮನೋ ಇಲ್ಲವೇ ಅಣ್ಣನೋ… Read More ಸಂಬಂಧಗಳು