ಶ್ರೀ ಮದನ್ ಲಾಲ್ ಡಿಂಗ್ರಾ

ಆಗ 1900 ಆರಂಭದ ದಿನಗಳು. ಇಂಗ್ಲೇಂಡಿನ ನೈಟ್ ಕ್ಲಬ್ಬಿನಲ್ಲಿ ಚೆನ್ನಾಗಿ ಉಡುಪು ಧರಿಸಿಕೊಂಡು ಅಲ್ಲಿಯ ರಂಗು ರಂಗಿನ ಬೆಳೆಕಿನಲ್ಲಿ ರಂಗಾದ ಹುಡುಗಿಯರೊಂದಿಗೆ ಶೋಕಿ ಮಾಡುತ್ತಿದ್ದ ಭಾರತೀಯ ತರುಣನೊಬ್ಬ ಶ್ಯಾಮ್ ಜೀ ವರ್ಮ ಮತ್ತು ವೀರಸಾವರ್ಕರ್ ಅವರ ಪ್ರಖರ ಮಾತುಗಳಿಂದ ಪ್ರೇರಿತನಾಗಿ ಇದ್ದಕ್ಕಿದ್ದಂತೆಯೇ ತನ್ನ ಶೋಕಿಗಳನ್ನೆಲ್ಲಾ ಬದಿಗೊತ್ತಿ ತನ್ನ ತಾಯ್ನಾಡು ಭಾರತವನ್ನು ದಾಸ್ಯದಲ್ಲಿ ಇಟ್ಟುಕೊಂಡಿದ್ದ ಬ್ರಿಟೀಷರಿಗೆ ಅವರ ನೆಲದಲ್ಲಿಯೇ ಬುದ್ದಿ ಕಲೆಸಬೇಕೆಂದು ಫಣ ತೊಟ್ಟು ಇಂಗ್ಲೆಂಡಿನಲ್ಲಿಯೇ ಮರಣ ದಂಡನೆಗೆ ಒಳಗಾಗಿ ಬ್ರಿಟೀಷರನ್ನು ಭಾರತದಿಂದ ಹೊರಹಾಕಲು ತನ್ನ ಪ್ರಾಣವನ್ನೇ ತ್ಯಾಗ… Read More ಶ್ರೀ ಮದನ್ ಲಾಲ್ ಡಿಂಗ್ರಾ

ಅಯೋಧ್ಯೆ ರಾಮ ಮಂದಿರದ ವಕೀಲ ಶ್ರೀ ಪರಾಶರನ್

ವಯಸ್ಸು 60+ ಆಗುತ್ತಿದ್ದಂತೆಯೇ ಸ್ವಂತ ಮಕ್ಕಳೇ ನೆನಪಿಲ್ಲದಿರುವಷ್ಟು ಮರೆವು ಬರುವಂತಹ ಇಂದಿನ ಕಾಲದಲ್ಲಿ, 9೨ ವರ್ಷದಲ್ಲಿಯೂ ಏನನ್ನೂ ಮರೆಯದೇ ವೇದ ಶಾಸ್ತ್ರಗಳಲ್ಲಿರುವ ಶ್ಲೋಕವನ್ನೂ ನೆನೆದು, ಆಯೋಧ್ಯಾ ರಾಮ ಮಂದಿರದ ಪರವಾಗಿ ನ್ಯಾಯಾಲಯದಲ್ಲಿ ಗಂಟೆ ಗಟ್ಟಲೆಗಳ ಕಾಲ ನಿಂತುಕೊಂಡೇ ವಾದಿಸಿ ಗೆಲುವನ್ನು ತಂದುಕೊಟ್ಟಂತಹ ಶ್ರೀ ಪರಾಶರನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ಅಯೋಧ್ಯೆ ರಾಮ ಮಂದಿರದ ವಕೀಲ ಶ್ರೀ ಪರಾಶರನ್

ಟಿಪಿಕಲ್ ಟಿ. ಪಿ. ಕೈಲಾಸಂ

ಮಾತೃಭಾಷೆ ತಮಿಳು, ಓದಿ ಪದವಿ ಪಡೆದದ್ದು ಲಂಡನ್ನಿನಲ್ಲಾದರೂ, ಕನ್ನಡ ಸಾರಸ್ವತ ಲೋಕದಲ್ಲೇ ತನ್ನ ಇಡೀ ಜೀವನವನ್ನು ಕಳೆದು, ಕರ್ನಾಟಕದ ಪ್ರಹಸನ ಪಿತಾಮಹ ಅಷ್ಟೇ ಅಲ್ಲದೇ, ಕನ್ನಡಕ್ಕೊಬ್ಬನೇ ಕೈಲಾಸಂ ಎಂಬ ಕೀರ್ತಿಗೆ ಭಾಜನರಾಗಿದ್ದಂತಹ ಟಿಪಿಕಲ್ ಟಿ. ಪಿ. ಕೈಲಾಸಂ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ನೋಟ ಇದೋ ನಿಮಗಾಗಿ
Read More ಟಿಪಿಕಲ್ ಟಿ. ಪಿ. ಕೈಲಾಸಂ

ಶ್ರೀ ಆಲೂರು ವೆಂಕಟರಾಯರು

ವಕೀಲರಾಗಿ, ಸಾಹಿತಿಗಳಾಗಿ, ಪತ್ರಿಕಾ ಸಂಪಾದಕರಾಗಿ, ಪ್ರಕಾಶಕರಾಗಿ, ಅನೇಕ ಸಂಘ ಸಂಸ್ಥೆಗಳ ಸಂಸ್ಕಾಪಕರಾಗಿ, ಸಂಘಟಿಕರಾಗಿ, ಸಂಶೋಧಕರಾಗಿ, ಸ್ವಾತಂತ್ಯ್ರ ಹೋರಾಟಗಾರರಾಗಿ ಒಟ್ಟಿನಲ್ಲಿ *ಆಡು ಮುಟ್ಟದ ಸೊಪ್ಪಿಲ್ಲ ಆಲೂರು ವೆಂಟರಾಯರು* ಮಾಡದ ಕೆಲಸವಿಲ್ಲ ಎಂಬಂತೆ ಕರ್ನಾಟಕದ ಏಕೀಕರಣಕ್ಕೆ ಅಹಿರ್ನಿಶಿಯಾಗಿ ದುಡಿದ ಕನ್ನಡದ ಕುಲಪುರೋಹಿತರ ಜಯಂತಿಯಂದು ಅವರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವೇ ಸರಿ… Read More ಶ್ರೀ ಆಲೂರು ವೆಂಕಟರಾಯರು

ಭಗತ್ ಸಿಂಗ್

ಭಾರತಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಲು ತನ್ನ ಅಮೂಲ್ಯವಾದ ಜೀವನವನ್ನೇ ರಾಷ್ಟ್ರಕ್ಕಾಗಿ ಅರ್ಪಿಸಿದ ಮತ್ತು ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಿಯಾದ ಶ್ರೀ ಭಗತ್ ಸಿಂಗ್ ಅವರ ಜನ್ಮದಿನದಂದು ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಪರಿಚಯ ಇದೋ ನಿಮಗಾಗಿ… Read More ಭಗತ್ ಸಿಂಗ್

ನಾಟಕಗಳಿಗೇ ಮಾಸ್ಟರ್, ಮಾಸ್ಟರ್ ಹಿರಣ್ಣಯ್ಯ

ಅದು 1973-74ನೇ ಇಸ್ವಿಯಿರಬಹುದು. ವಾಟಾಳ್ ನಾಗರಾಜರ ಕನ್ನಡ ಹೋರಾಟದ ಉಚ್ಛ್ರಾಯ ಸ್ಥಿತಿ. ರಾಜಾಜೀನಗರದ ಬಳಿ ಅವರು ಏರ್ಪಡಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಮಾ.ಹಿರಣ್ಣಯ್ಯನವರ ನಾಟಕ ಪ್ರದರ್ಶನಕ್ಕೆ ಕರೆದುಕೊಂಡು ಹೋದ ನಮ್ಮ ತಂದೆಯವರು ಮೊತ್ತ ಮೊದಲಬಾರಿಗೆ ನನಗೆ ಶ್ರೀ ಮಾ.ಹಿರಣ್ಣಯ್ಯನವರ ಪರಿಚಯ ಮಾಡಿಸಿಕೊಟ್ಟರು. ಆನಂತರ ಪ್ರತೀ ವರ್ಷವೂ ನಮ್ಮ ಬಿಇಎಲ್ ಲಲಿತಕಲಾ ಅಕಾಡೆಮಿಯವರು ನಡೆಸುತ್ತಿದ್ದ ಬೇಸಿಗೆ ಮೇಳದಲ್ಲಿ ಹಿರಣ್ಣಯ್ಯನವರ ಒಂದಲ್ಲಾ ಒಂದು ನಾಟಕದ ಪ್ರದರ್ಶನ ಕಡ್ಡಾಯವಾಗಿದ್ದು, ಅವರ ನಾಟಕಗಳನ್ನು ನೋಡಿ ಬೆಳೆದೆ ಎಂದರೆ ತಪ್ಪಾಗಲಾರದು. ಇನ್ನು ಎಂಬತ್ತರ ದಶಕದಲ್ಲಿ ಟೇಪ್… Read More ನಾಟಕಗಳಿಗೇ ಮಾಸ್ಟರ್, ಮಾಸ್ಟರ್ ಹಿರಣ್ಣಯ್ಯ

ವೀರ ಸಾವರ್ಕರ್

ಭಾರತದ ಇತಿಹಾಸದಲ್ಲಿ ಸಾವರ್ಕರ್ ಎನ್ನುವ ಹೆಸರೇ ಹೋರಾಟಕ್ಕೆ ಪರ್ಯಾಯ. ಕ್ರಾಂತಿಕಾರಿಗಳಿಗೆ ಸ್ಪೂರ್ತಿ. ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ.… Read More ವೀರ ಸಾವರ್ಕರ್

ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ಯೋಗಾನರಸಿಂಹ ಸ್ವಾಮಿ ಜಗದ್ವಿಖ್ಯಾತವಾದ ದೇವಾಲಯಗಳು. ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುನುಜಾಚಾರ್ಯರ ಆರಾಧ್ಯ ದೈವವೂ ಹೌದು. ಪ್ರತಿನಿತ್ಯ ನೂರಾರೂ ಮತ್ತು ವಾರಾಂತ್ಯದಲ್ಲಿ ಸಾವಿರಾರು ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈರಮುಡಿ ಉತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತಾದಿಗಳು ಸೇರುವ ಸ್ಥಳವಾಗಿದೆ. ಕಡಿದಾದ ಬೆಟ್ಟದ ತುದಿಯಲ್ಲಿ ಕಟ್ಟಿರುವ ದೇವಾಲಯ ನಿಜಕ್ಕೂ ಅಂದಿನ ದಿನದ ವಾಸ್ತುಪಂಡಿತರ ಮತ್ತು ಕುಶಲ ಕರ್ಮಿಗಳ ಅಧ್ಭುತ ಪರಿಣಿತಿಯ ದ್ಯೋತಕವಾಗಿದೆ. ಸುಮಾರು 300 ರಷ್ಟು ಕಡಿದಾದ ಎತ್ತರದ ಮೆಟ್ಟುಲುಗಳ… Read More ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಸಿದ್ದಗಂಗಾ ಶ್ರೀಗಳು

ಒಂದೂರಲ್ಲೊಬ್ಬ ನಾಸ್ತಿಕನಿದ್ದ. ಅವನು ದೇವರನ್ನೂ ನಂಬುತ್ತಿರಲಿಲ್ಲ ಹಾಗೆಯೇ ಜ್ಯೋತಿಷಿಗಳನ್ನೂ ನಂಬುತ್ತಿರಲಿಲ್ಲ. ಹೇಗಾದರೂ ಮಾಡಿ ಜ್ಯೋತಿಷಿಗಳ ಬಂಡವಾಳವನ್ನು ಬಯಲು ಮಾಡಬೇಕೆಂದು ಹವಣಿಸುತ್ತಿದ್ದ. ಒಂದು ದಿನ ಅವನ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಗೆ ಬಂದಿದ್ದ ಪ್ರಖ್ಯಾತ ಜ್ಯೋತಿಷಿಗಳನ್ನು ಇವನಿಗೆ ಪರಿಚಯಿಸಲಾಯಿತು. ಇಂತಹದ್ದೇ ಸುಸಂಧರ್ಭವನ್ನು ಎದುರು ನೋಡುತ್ತಿದ್ದ ಅವನಿಗೆ ರೊಟ್ಟಿ ಜಾರಿ ತುಪ್ಪಕ್ಕೇ ಬಿದ್ದಹಾಗಾಯಿತು.  ಹಾಗೆಯೇ ಜ್ಯೋತಿಷಿಗಳನ್ನು ಮಾತಿಗೆಳೆದು ನನ್ನಲ್ಲಿ ಒಂದು ಸಮಸ್ಯೆಯಿದೆ ಅದನ್ನು ಸ್ವಲ್ಪ ಬಗಹರಿಸುವಿರಾ ಎಂದು ಕೇಳಿದ. ಅವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದ ಜ್ಯೋತಿಷಿಗಳು ಮುಗುಳ್ನಗೆಯಿಂದ… Read More ಸಿದ್ದಗಂಗಾ ಶ್ರೀಗಳು