ಉಡುದಾರದ ಪಜೀತಿ

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅನೇಕ ಪದ್ದತಿಗಳು ನಮ್ಮ ಜೀವನದ ಅವಿಭಾಜ್ಯವಾಗಿ ರೂಢಿಯಲ್ಲಿರುತ್ತವೆ. ಅನೇಕರಿಗೆ ಅದರ ಅವಶ್ಯಕತೆಯಾಗಲೀ ಅದರ ಅನುಕೂಲವಾಗಲೀ ವೈಜ್ಞಾನಿಕ ಕಾರಣಗಳಾಗಲೀ ಗೊತ್ತಿಲ್ಲದಿದ್ದರೂ ಹಿರಿಯರಿಂದ ಬಂದ ಸಂಪ್ರದಾಯ ಎಂದು ಅದಕ್ಕೆ ಪ್ರತಿರೋಧ ತೋರದೆ ಚಾಚೂ ತಪ್ಪದೆ ಅದನ್ನು ಆಚರಿಸಿಕೊಂಡು ಬರುತ್ತಾರೆ. ಅಂತಹ ಪದ್ದತಿಯಲ್ಲಿ ಗಂಡು ಮಕ್ಕಳ ಸೊಂಟಕ್ಕೆ ಕಟ್ಟುವ ಉಡುದಾರವೂ ಹೌದು. ಹಾಗೆ ಕಟ್ಟಿ ಕೊಂಡ ಉಡುದಾರವೇ ನಮ್ಮ ಶಂಕರನನ್ನು ಪಜೀತಿಗೆ ಸಿಕ್ಕಿಸಿದ ಮೋಜಿನ ಪ್ರಸಂಗವನ್ನೇ ಇಲ್ಲಿ ಹೇಳ ಹೊರಟಿದ್ದೇನೆ. ಉಡುದಾರ ಧರಿಸುವುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದ್ದು,… Read More ಉಡುದಾರದ ಪಜೀತಿ

ಹಂಸ ಕ್ಷೀರ ನ್ಯಾಯ

ಸರಿ ಸುಮಾರು 90ರ ದಶಕ, ನಾನಿನ್ನೂ ಆಗ ತಾನೇ ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ಕೆಲಸ ಹುಡುಕುತ್ತಿದ್ದೆ. ಸರಿಯಾದ ಕೆಲಸ ಸಿಗುವವರೆಗೆ ಸಣ್ಣ ಪುಟ್ಟ ಕಂಪ್ಯೂಟರ್ ರಿಪೇರಿಗಳನ್ನು ಮಾಡುತ್ತಾ, ಅವಶ್ಯಕತೆ ಇದ್ದವರಿಗೆ ಅವರು ಕೇಳುತ್ತಿದ್ದ ಸಾಫ್ಟವೇರ್ ಇನ್ಸ್ಟಾಲ್ ಮಾಡುತ್ತಾ ಅಷ್ಟೋ ಇಷ್ಟು ಸಂಪಾದನೆ ಮಾಡುತ್ತಾ ತಂದೆಗೆ ಹೊರೆಯಾಗದೆ, ಕಂತಿನಲ್ಲಿ ಕೊಂಡಿದ್ದ ಹೀರೋ ಪುಕ್ ಸಾಲವನ್ನು ತೀರಿಸುತ್ತಾ ಜೀವನ ನಡೆಸುತ್ತಿದ್ದ ಕಾಲವದು. ಅಂದೆಲ್ಲಾ ಫ್ಲಾಫಿ ಡಿಸ್ಕ್ ಜಮಾನ, ಏನೇ ಸಾಫ್ಟ್ವೇರ್ ಬೇಕಿದ್ದರೂ ಫ್ಲಾಫಿ ಡಿಸ್ಕನಲ್ಲಿ ಕಾಪಿ ಮಾಡಿಕೊಂಡು ತಂದು ಇನ್ಸ್ಟಾಲ್… Read More ಹಂಸ ಕ್ಷೀರ ನ್ಯಾಯ

ಸುಬ್ರಹ್ಮಣ್ಯ ಷಷ್ಠಿ ಅವಾಂತರ

ಬೆಟ್ಟದ ನೆಲ್ಲಿ ಕಾಯಿ ಸಮುದ್ರ ಉಪ್ಪು ಎತ್ತಲಿಂದೆತ್ತ ಸಂಬಂಧವಯ್ಯಾ? ಎನ್ನುವಂತೆ ಕ್ರಿಕೆಟ್ ಮ್ಯಾಚ್ ಮತ್ತು ಸುಬ್ರಹ್ಮಣ್ಯ ಷಷ್ಥಿಯ ನಡುವೆ ಬ್ರಹ್ಮಚಾರಿ ವಟುವಿನ ಪರದಾಟದ ಸ್ವಾರಸ್ಯಕರ ಪ್ರಸಂಗ ಇದೋ ನಿಮಗಾಗಿ. … Read More ಸುಬ್ರಹ್ಮಣ್ಯ ಷಷ್ಠಿ ಅವಾಂತರ

ಡೆಬಿಟ್ ಕಾರ್ಡ್ ಅವಾಂತರ

ಇನ್ನೇನು ಸಂಕ್ರಾಂತಿ ಹಬ್ಬ‌‌ ಬರ್ತಾ‌ಇದೆ. ಸಂಕ್ರಾಂತಿಯಿಂದ ರಥ ಸಪ್ತಮಿ ಮುಗಿಯುವವರೆಗೂ ಎಲ್ಲರ ಮನೆಯಲ್ಲಿ ಸಂಭ್ರಮದ ವಾತಾವರಣ. ಸಂಬಂಧೀಕರ ಮತ್ತು ಆಪ್ತ ಸ್ನೇಹಿತರ ಮನೆಗೆಳಿಗೆ ಹೋಗಿ ಎಳ್ಳು ಬೀರುತ್ತಾ, ಎಳ್ಳು ಬೆಲ್ಲಾ ತಿಂದು ಒಳ್ಳೇ ಮತಾನಾಡೋಣ ಎನ್ನುತ್ತಾ ಬಾಂಧ್ಯವ್ಯ/ಗೆಳೆತನ ಹೆಚ್ಚಿಸುಕೊಳ್ಳುವ ಉತ್ತಮ ಕಾರ್ಯಕ್ರಮ. ನಮ್ಮ ಎಲ್ಲಾ ಹಬ್ಬಗಳ ಹಿಂದಿನ ಸಾರವೂ ಅದೇ. ಹಬ್ಬಗಳ ನೆಪದಲ್ಲಿ ಎಲ್ಲಾ ಕಷ್ಟಗಳನ್ನು, ದ್ವೇಷಗಳನ್ನು ಮರೆತು ಒಟ್ಟಿಗೆ ಒಂದೆಡೆ ಸೇರಿ ಯಥಾಶಕ್ತಿ ಅಥಿತಿ ಸತ್ಕಾರ ಮಾಡುತ್ತಲೋ ಇಲ್ಲವೇ ಮಾಡಿಸಿಕೊಳ್ಳುವ ಸತ್ ಸಂಪ್ರದಾಯ ನಮ್ಮಲ್ಲಿ ಹಿಂದಿನಿಂದಲೂ… Read More ಡೆಬಿಟ್ ಕಾರ್ಡ್ ಅವಾಂತರ

ಆಭರಣ ಅಂಗಡಿಯ ಅವಾಂತರ

ಅದೊಮ್ಮೆ ಗಂಡ ತನ್ನ ಹೆಂಡತಿಗೆ ತಮ್ಮ ವಿವಾಹ ವಾರ್ಷಿಕೋತ್ಸವ ನೆನಪಿನ ಕಾಣಿಕೆಯಾಗಿ ವಿಶೇಷ ಉಡುಗೊರೆಯನ್ನು ನೀಡಲು ಹತ್ತಿರದ ಚಿನ್ನದ ಅಂಗಡಿಗೆ ಕರೆದುಕೊಂಡು ಹೋದರು. ಸೀರೆ, ಚಿನ್ನದ ಅಂಗಡಿಗಳಿಗೆ ಹೆಂಗಸರೊಂದಿಗೆ ಹೋದರೆ ಆಗಬಹುದಾದ ಸಮಯವೇ ಅಂದೂ ಕೂಡಾ ಆಗಿತ್ತು. ಇದು ತೋರಿಸಿ, ಅದು ತೋರಿಸಿ. ಇಷ್ಟೇ ದುಡ್ದಿನಲ್ಲಿ ಮತ್ತೊಂದು ಡಿಝೈನ್ ತೋರಿಸಿ. ಇದು ಸ್ವಲ್ಪ ದೊಡ್ಡದಾಯ್ತು. ಸ್ವಲ್ಪ ಚಿಕ್ಕದಿದ್ದರೆ ನೋಡಿ. ಇಲ್ಲಾ ಇಲ್ಲ ಇದು ತುಂಬಾನೇ ಚಿಕ್ಕದಾಯ್ತು ನನಗೆ ಸರಿ ಹೊಂದದು ಎಂದು ಹೀಗೇ ಹಾಗೆ ತರತರಹದ ಆಭರಣಗಳನ್ನು… Read More ಆಭರಣ ಅಂಗಡಿಯ ಅವಾಂತರ

ಅಲ್ಲಾಭಕ್ಷ್ ರೀ ಸರಾ!!

ಶಂಕರ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯಲ್ಲಿ ‌ಮ್ಯಾನೇಜರ್‌ ಆಗಿ ಕೆಲಸ‌ ಮಾಡುತ್ತಿದ್ದ. ಅದೊಂದು ದಿನ ಅವನ ಸಹೋದ್ಯೋಗಿ ವೀರೇಶ್ ತನ್ನ ಮದುವೆಗೆ ಕಛೇರಿಯಲ್ಲಿ ಎಲ್ಲರ ಸಮ್ಮುಖದಲ್ಲಿಯೂ ಆಹ್ವಾನಿಸಿದ್ದಲ್ಲದೆ, ಖುದ್ದಾಗಿ ‌ಮನೆಗೂ ಬಂದೂ ಕುಟುಂಬ ಸಮೇತರಾಗಿ ‌ಬಾಗಲಕೋಟೆಯ‌ ಸಮೀಪದ ಗುಳೇದಗುಡ್ಡದಲ್ಲಿ ನಡೆಯುವ ತನ್ನ ವಿವಾಹಕ್ಕೆ ಬರಲು ಆಹ್ವಾನಿಸಿದ. ಮದುವೆಗೆ ಒಂದೆರಡು‌‌ ದಿನ ಮುಂಚಿತವಾಗಿ ಬಂದರೆ ‌ಸುತ್ತ ಮುತ್ತಲಿನ, ಕೂಡಲ ಸಂಗಮ, ಐಹೊಳೆ, ಬಾದಾಮಿ,ಬನಶಂಕರಿ, ಪಟ್ಟದಕಲ್ಲು ಮಹಾಕೂಟ ಹೀಗೆ ಹತ್ತು ಹಲವಾರು ಪ್ರೇಕ್ಷಣೀಯ ‌ಸ್ಥಳಗಳನ್ನೂ ನೋಡಬಹುದು ಎಂದು‌ ತಿಳಿಸಿದ. ಹೇಗೂ ಕೆಲವೇ… Read More ಅಲ್ಲಾಭಕ್ಷ್ ರೀ ಸರಾ!!

ಮಡಿ ಬಟ್ಟೆ

ಶಂಕರ ಆಗಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ.  ಬೇಸಿಗೆಯ ರಜೆಯಲ್ಲಿ  ಸುಮ್ಮನೆ ಮನೆಯ ಬಳಿ ಹುಡುಗರೊಂದಿಗೆ ಬಿಸಿಲಿನಲ್ಲಿ ಬೀದಿ ಸುತ್ತುವ ಬದಲು, ಬೇಸಿಗೆ ರಜೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ಅವನ ತಾಯಿ ಅವನನ್ನು ಮಂಗಳೂರಿನ ಸಮೀಪದ ವೇದಶಿಬಿರಕ್ಕೆ ಕಳುಹಿಸಿದರು. ನಾಲ್ಕುವಾರಗಳ ಉಚಿತ ವೇದಶಿಬಿರ.  ಬೆಳಿಗ್ಗೆ  4.45ಕ್ಕೇ ಎಲ್ಲರೂ ಎದ್ದು ಕಡ್ಡಾಯವಾಗಿ ತಣ್ಣೀರಿನ ಸ್ನಾನ ಮಾಡಿ 5:30 ಕ್ಕೆಲ್ಲಾ ನಿತ್ಯಪೂಜೆಯಿಂದ ಆರಂಭವಾಗುವ ದಿನಚರಿ ಯೋಗಾಭ್ಯಾಸ, ವೇದಾಧ್ಯಯನ, ಸಂಸ್ಕೃತ ಪಾಠ, ತಿಂಡಿ, ಊಟಗಳ ಜೊತೆ ರಾತ್ರಿ  10 ಘಂಟೆಗೆ ಅನೌಪಚಾರಿಕದೊಂದಿಗೆ ದಿನ ಮುಕ್ತಾಯವಾಗುತ್ತಿತ್ತು. ಆರಂಭದಲ್ಲಿ… Read More ಮಡಿ ಬಟ್ಟೆ

ಕಾಫೀ ಪುರಾಣ

ಶಂಕರನ ಮನೆಯವರು ಒಟ್ಟು ಕುಟುಂಬದವರು.  ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವೇ. ಹಾಗೆಯೇ ಮನೆಗೆ ಬಂದು  ಹೋಗುವವರು ತುಸು ಹೆಚ್ಚೇ.  ಬಂದವರಿಗೆ ಕಾಫೀ ತಿಂಡಿ, ಊಟೋಪಚಾರ ಮಾಡುವುದು ಅವರ ಮನೆಯಲ್ಲಿ  ನಡೆದು ಬಂದ ಸಂಪ್ರದಾಯ. ಹಾಗೆ ಪ್ರತೀ ಬಾರಿ ಕಾಫೀ ಮಾಡಿದಾಗಲೂ ಮಕ್ಕಳೂ ಕಾಫಿ ಕುಡಿಯಲು ಬಯಸುವುದು ಸಹಜ.  ಹಾಗಾಗಿ ಸುಮ್ಮನೆ ಬಂದು ಹೋದವರೆಲ್ಲರ ಜೊತೆಯೂ ಕಾಫಿ ಕುಡಿಯುತ್ತಾ ಹೋದರೆ ಮಕ್ಕಳಿಗೆ ಕಾಫಿ ಚಟವಾಗುತ್ತದೆ ಎಂದು ತಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಫೀ ಅಭ್ಯಾಸ ಮಾಡಿಸದೇ ಇದ್ದರೆ ಮಕ್ಕಳ… Read More ಕಾಫೀ ಪುರಾಣ