ಅಮೃತಸರ ಸ್ವರ್ಣ ಮಂದಿರ, ವಿಶ್ವದ ಅತೀ ದೊಡ್ಡ ಅಡುಗೆ ಮನೆ

ಧಾರ್ಮಿಕ ಕ್ಷೇತ್ರಗಳಿಗೆ ಆಗಾಗ ಹೋಗಿ ಭಗವಂತನ ದರ್ಶನ ಪಡೆಯುವ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುವುದಲ್ಲದೇ, ಅ ಕ್ಷೇತ್ರಗಳ ಮಹಿಮೆ ಮತ್ತು ಅಲ್ಲಿಯ ಧನಾತ್ಮಕ ಕಂಪನಗಳು ನಮ್ಮಲ್ಲಿ ಸೇರಿಕೊಳ್ಳುತ್ತವೆ. ಅದೇ ರೀತಿ ನೂರಾರು ಮೈಲಿಗಳ ದೂರಗಳಿಂದ ಬರುವ ಭಕ್ತಾದಿಗಳಿಗೆ ಆದರಾತಿಥ್ಯವನ್ನು ನೀಡಲು ಅಲ್ಲಿಯ ದೇವಾಲಯಗಳೂ,ಯಾತ್ರಿ ನಿವಾಸಗಳು ಮತ್ತು ಪ್ರಸಾದ ರೂಪದಲ್ಲಿ ಊಟೋಪಚಾರಗಳನ್ನು ನೀಡಲು ಸಿದ್ಧವಾಗಿರುತ್ತದೆ. ತಿರುಪತಿ, ಧರ್ಮಸ್ಥಳ, ಉಡುಪಿ, ಕೊಲ್ಲೂರು, ಶೃಂಗೇರಿ, ಹೊರನಾಡು ಶ್ರೀಕ್ಷೇತ್ರಗಳು ಈ ರೀತಿಯ ಅದರಾತಿಥ್ಯಗಳಿಗೆ ಹೆಸರುವಾಸಿಯಾಗಿವೆ. ಇವೆಲ್ಲಕ್ಕಿಂತಲೂ ಒಂದು ಕೈ ಮೇಲೇ ಎನ್ನಬಹುದಾದ ಅಮೃತಸರದ… Read More ಅಮೃತಸರ ಸ್ವರ್ಣ ಮಂದಿರ, ವಿಶ್ವದ ಅತೀ ದೊಡ್ಡ ಅಡುಗೆ ಮನೆ

ಐಎಎಸ್ ಅಧಿಕಾರಿ ಆರತಿ ಡೋಗ್ರಾ 

ಮನುಷ್ಯರಿಗೆ ಎಲ್ಲವೂ ಸರಿ ಇದ್ದಾಗಲೇ ಆಡಿ ಕೊಳ್ಳುವವರಿಗೇನೂ ಬರ ಇಲ್ಲ. ಅಂತಹದ್ದರಲ್ಲಿ ದೈಹಿಕವಾಗಿ ನ್ಯೂನತೆ ಇದ್ದರಂತೂ ಹೇಳತೀರದು. ಅಂತಹದ್ದರಲ್ಲಿ ಕೇವಲ 3 ಅಡಿ 2 ಇಂಚು ಎತ್ತರದ ತರುಣಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ 2006ರ ಬ್ಯಾಚ್’ನ IAS ಪರಿಕ್ಷೆಯಲ್ಲಿ ಉತ್ತಿರ್ಣರಾಗಿ ರಾಜಾಸ್ಥಾನದ ಅಜ್ಮೀರ್ ಜಿಲ್ಲಾಧಿಕಾರಿಯಾಗಿ ಬಹಳಷ್ಟು ದಿಟ್ಟತನದಿಂದ ಕರ್ತವ್ಯ ನಿಭಾಯಿಸಿದ ಆರತಿ ಡೋಗ್ರಾ ಅವರ ಸಾಧನೆಯ ಬಗ್ಗೆ ತಿಳಿಯೋಣ. ಡೆಹ್ರಾಡೂನ್‌ನ ವಿಜಯ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಕರ್ನಲ್ ರಾಜೇಂದ್ರ ದೋಗ್ರಾ ಮತ್ತು ಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾನಿಯಾಗಿರುವ… Read More ಐಎಎಸ್ ಅಧಿಕಾರಿ ಆರತಿ ಡೋಗ್ರಾ 

ಮಜ್ಜಿಗೆ ಹುಳಿ

ಹಬ್ಬ ಹರಿದಿನಗಳಲ್ಲಿ ಮತ್ತು ಸಭೆ ಸಮಾರಂಭಗಳಲ್ಲಿ ಉಣಬಡಿಸುವ ಸಾಂಪ್ರದಾಯಕವಾದ ಮಜ್ಜಿಗೆಹುಳಿಯನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 5-6 ಜನರಿಗೆ ಸಾಕಾಗುವಷ್ಟು ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೇ ಬೇಳೆ/ಹುರಿಗಡಲೆ – 1 ಬಟ್ಟಲು ತೆಂಗಿನ ತುರಿ – 1 ಬಟ್ಟಲು ಮೊಸರು – 1 ಬಟ್ಟಲು ಜೀರಿಗೆ – 8-10 ಸಾಸಿವೆ – 8-10 ಒಣಮೆಣಸಿನಕಾಯಿ – 2-3 ಹಸೀಮೆಣಸಿನಕಾಯಿ – 6-8 ಖಾರಕ್ಕೆ ತಕ್ಕಷ್ಟು… Read More ಮಜ್ಜಿಗೆ ಹುಳಿ

ದೇವರ ಲೆಕ್ಕಾಚಾರ

ಒಮ್ಮೆ ಇಬ್ಬರು ವ್ಯಕ್ತಿಗಳು ಅರಳೀ ಕಟ್ಟೆಯ ಬಳಿ ಕುಳಿತು ಲೋಕೋಭಿರಾಮವಾಗಿ ಹರಟುತ್ತಿದ್ದರು. ಅದಾಗಲೇ ಸಂಜೆಯಾಗಿದ್ದು ದಟ್ಟವಾದ ಕಾರ್ಮೋಡ ಕವಿದಿತ್ತು. ಅಷ್ಟೊತ್ತಿಗೆ ಅಲ್ಲಿಗೆ ಅಪರಿಚಿತ ವ್ಯಕ್ತಿಯೊಬ್ಬರ ಆಗಮನವಾಗಿ, ಅಭ್ಯಂತರವಿಲ್ಲದಿದ್ದರೆ, ನಾನೂ ನಿಮ್ಮೊಂದಿಗೆ ಸೇರಿಕೊಳ್ಳಬಹುದೇ ಎಂದು ಕೇಳಿದಾಗ ಅವರಿಬ್ಬರೂ ಓಹೋ ಅಗತ್ಯವಾಗಿ ಎಂದು ಹೇಳಿದರು. ಅವರೆಲ್ಲರೂ ತಮ್ಮ ಮಾತುಕಥೆ ಮುಂದುವರೆಸುತ್ತಿದ್ದಂತೆಯೇ, ಜೋರಾಗಿ ಮಳೆ ಬರಲು ಪ್ರಾರಂಭಿಸಿದಾಗ ಎಲ್ಲರೂ ಹತ್ತಿರದ ದೇವಸ್ಥಾನದ ಒಳಗೆ ಹೋಗಿ ಮಳೆಯಿಂದ ತಮ್ಮನ್ನು ರಕ್ಷಿಸಿಕೊಂಡರು. ಆಷ್ಟರಲ್ಲಿ ಆ ಆಗಂತುಕನು ನನಗೆ ಹಸಿವಾಗುತ್ತಿದೆ ಎಂದಾಗ ಉಳಿದ್ದಬ್ಬರೂ ಸಹಾ ಹೌದು… Read More ದೇವರ ಲೆಕ್ಕಾಚಾರ

ಅನನ್ಯ ಮತ್ತು ಅನುಕರಣಿಯರು ನಮ್ಮ ಕರಿಯಪ್ಪ ಮೇಷ್ಟ್ರು

ಇವತ್ತಿನ ದಿವಸ ಯಾವುದೇ ಟಿವಿ ಚಾನೆಲ್ ನೋಡಿದ್ರೂ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೂ ಕೂರೋನಾ ಬಗ್ಗೆಯೇ ಮಾತು. ಅವರಿಗೆ ಕೋರೋನಾ+ve ಅಂತೇ ಇವರಿಗೆ +ve ಅಂತೇ ಅನ್ನೋದರ ಜೊತೆಗೆ ಆ ಕೂರೋನಾ ಸೆಂಟರ್ನಲ್ಲಿ ಒಂದು ಚೂರೂ ವ್ಯವಸ್ಥೆ ಸರಿ ಇರ್ಲಿಲ್ವಂತೇ. ಅಲ್ಲಿ ಊಟ ತಿಂಡಿ ಹೋಗ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದೇ ಗಲೀಜ್ ಅಂತೇ ಎಂದರೆ. ಮತ್ತೊಬ್ಬರು ನಮ್ಮನ್ನು ಇಂತಹ ಕೆಟ್ಟ ಸ್ಥಳಕ್ಕೆ ಕರೆದುಕೊಂಡು ಬರುವ ಬದಲು ಸೆರೆಮನೆಗೆ ತಳ್ಳಿಬಿಡಿ ಅಲ್ಲಿ ಮುದ್ದೆ ತಿಂದು ಕೊಂಡು… Read More ಅನನ್ಯ ಮತ್ತು ಅನುಕರಣಿಯರು ನಮ್ಮ ಕರಿಯಪ್ಪ ಮೇಷ್ಟ್ರು

ಎಲೆಕೋಸು ಚೆಟ್ನಿ

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಚೆಟ್ನಿ ಇದ್ರೇನೆ ಚೆನ್ನ. ಸಾಮಾನ್ಯವಾಗಿ ಎಲ್ಲರೂ ಮಾಡೋ ಕಾಯಿ ಚೆಟ್ನಿ ಮತ್ತು ಹುರಿಗಡಲೇ ಚೆಟ್ನಿ ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿ ಎಲೇ ಕೋಸು ಚೆಟ್ನಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಎಲೆಕೋಸು ತಯಾರಿಸಲು ಬೇಕಾಗುವ ಸಾಮಗ್ರಿಗಳು ಸಾಸಿವೆ – 1/2 ಚಮಚ ಕಡಲೇ ಬೇಳೆ – 1 ಚಮಚ ಉದ್ದಿನ ಬೇಳೆ – 2 ಚಮಚ ಒಣಮೆಣಸಿನ ಕಾಯಿ – […]

Read More ಎಲೆಕೋಸು ಚೆಟ್ನಿ

ಭೀಮನ ಅಮಾವಾಸ್ಯೆ ಅಣ್ಣಾವ್ರ ನೆನಪು

ಕಹಿ ಘಟನೆಗಳನ್ನು ಆದಷ್ಟು ಬೇಗ ಮರೆತು ಬಿಡಬೇಕು ಅಂತಾ ದೊಡ್ಡವರು ಹೇಳ್ತಾರೆ. ಆದ್ರೇ ಏನ್ಮಾಡೋದು? ಕೆಲವೊಂದು ಘಟನೆಗಳು ಒಂದೊಂದು ಜಾಗ ಒಂದೊಂದು ಹಬ್ಬ ಇಲ್ಲವೇ ವಸ್ತುಗಳೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಅದನ್ನು ನೋಡಿದ ತಕ್ಷಣವೇ ಥಟ್ ಅಂತಾ ನೆನಪಾಗಿ ಬಿಡುತ್ತವೆ. ಅದೇ ರೀತಿಯಲ್ಲಿ ಭೀಮನ ಅಮಾವಾಸ್ಯೆ ಬಂದ್ರೇ ಗಂಡನ ಪೂಜೆ, ಭಂಡಾರ ಒಡೆಯುವ ಜೊತೆ ವರ‌ನಟ ಅಣ್ಣಾವ್ರೇ ನೆನಪಾಗ್ತಾರೆ ನೋಡಿ. ಅದು 2000ನೇ ಇಸವಿ ಜುಲೈ ತಿಂಗಳು ಭೀಮನ ಅಮಾವಾಸ್ಯೆಯ ದಿನ. ನಮ್ಮ ಮನೆಗೆ ಮಹಾಲಕ್ಷ್ಮಿಯಾಗಿ ಮಗಳು ಬಂದು… Read More ಭೀಮನ ಅಮಾವಾಸ್ಯೆ ಅಣ್ಣಾವ್ರ ನೆನಪು

ಗಂಡಸರೇ ಹುಷಾರ್ !!

ಸಾಧಾರಣವಾಗಿ ಪತ್ರಿಕೆಗಳ ಮೂರನೇಯ ಪುಟದಲ್ಲಿ ಪ್ರಕಟವಾಗುವ ಕ್ರೈಮ್ ಸುದ್ದಿ ನೋಡುವಾಗ ಅಮಾಯಕ ಹುಡುಗಿಗೆ ಮೋಸ ಮಾಡಿದ ಹುಡುಗ ಎಂಬ ಸುದ್ದಿ ಇತ್ತೀಚಿನ‌ ದಿನಗಳಲ್ಲಿ ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ಸುದ್ದಿ ಅದರ ತದ್ವಿರುದ್ಧವಾಗಿ ಹುಡುಗರೇ ಯುವತಿಯರಿಂದ ಮೋಸ ಹೋದ ಅಪರೂಪ ಪ್ರಕರಣಗಳು ಹೆಚ್ಚಾಗಿ ಸಭ್ಯ ಗಂಡಸರೆಲ್ಲಾ ತಲೆ ತಗ್ಗಿಸುವಂತಾಗಿದೆ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೈಟ್‌ ಫೀಲ್ಡ್‌ ನ ದೊಡ್ಡನೆಕ್ಕುಂದಿ ಬಳಿಯ ಯುವಕನೊಬ್ಬ ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಹದಿಹರೆಯದ ವಯಸ್ಸು ಮತ್ತು ಅಂತರ್ಜಾಲದಲ್ಲಿ… Read More ಗಂಡಸರೇ ಹುಷಾರ್ !!

ಆಲ್ ರೈಟ್ ಮುಂದಕ್ಕೆ ಹೋಗೋಣ

ಸುಮಾರು ದಿನಗಳಿಂದ ಕರೆ ಮಾಡದಿದ್ದ ನನ್ನ ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ಸ್ನೇಹಿತ ನಿನ್ನೆ ರಾತ್ರಿ ಕರೆ ಮಾಡಿದ್ದ. ಸಾಧಾರಣವಾಗಿ ತಿಂಗಳಿಗೊಮ್ಮೆಯೋ ಇಲ್ಲವೇ ಎರಡು ತಿಂಗಳಿಗಳಿಗೆ ಒಮ್ಮೆ ಕರೆ ಮಾಡಿ ಗಂಟೆ ಗಟ್ಟಲೆಗಳ ಕಾಲ ಉಭಯ ಕುಶಲೋಪರಿಯನ್ನು ವಿಚಾರಿಸುವುದು ನಮ್ಮಿಬ್ಬರ ನಡುವಿನ ವಾಡಿಕೆ. ಇತ್ತೀಚೆಗೆ ಸುಮಾರು ಐದಾರು ತಿಂಗಳುಗಳಿಂದ ಆತ ಕರೆ ಮಾಡಿರಲಿಲ್ಲ. ಬಹುಶಃ ಕೆಲಸದ ಬಾಹುಳ್ಯದಿಂದಲೋ ಇಲ್ಲವೇ ಕೂರೋನಾ ಪರಿಸ್ಥಿತಿಯಿಂದಾಗಿ ಆತ ಕರೆ ಮಾಡದಿರಬಹುದು ಎಂದು ನಾನೂ ಕೂಡಾ ಸುಮ್ಮನಾಗಿದ್ದೆ. ಯಥಾ ಪ್ರಕಾರ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ಮಕ್ಕಳ… Read More ಆಲ್ ರೈಟ್ ಮುಂದಕ್ಕೆ ಹೋಗೋಣ