ಕಲ್ಪವೃಕ್ಷ

ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ನನ್ನನ್ನು ಏಳು ವರ್ಷ ಜನನದಿಂದ ಕಾಪಾಡು. ನಾನು ನಿನ್ನನ್ನು ಎಪ್ಪತ್ತು ವರ್ಷದ ವರೆಗೂ ನೆಮ್ಮದಿಯಿಂದ ಕಾಪಾಡುತ್ತೇನೆ ಎಂದು ತೆಂಗಿನಮರ ಹೇಳುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದದ ಮಾತಿನಲ್ಲಿ ಖಂಡಿತವಾಗಿಯೂ ಸತ್ಯವಿದೆ. ತೆಂಗಿನ ಮರದ ಪ್ರತಿಯೊಂದು ಭಾಗಗಳೂ ಉಪಯೋಗಿಸುವಂತಹದ್ದೇ ಅಗಿದ್ದು ಅದರಲ್ಲಿ ಬಿಸಾಡುವಂತಹ ತ್ರಾಜ್ಯಗಳೇ ಇಲ್ಲದಿರುವುದು ಮೆಚ್ಚಬೇಕಾದಂತಹ ಸಂಗತಿ. ತೆಂಗಿನ ಮರ ಇದ್ದಾಗ ಅನುಭವಿಸಿದ ಸಂತೋಷ ಮತ್ತು ಈಗ ತೆಂಗಿನ ಮರ ಇಲ್ಲದಿರುವಾಗ ಅನುಭವಿಸುತ್ತಿರುವ ಸಂಕಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.… Read More ಕಲ್ಪವೃಕ್ಷ

ಸತ್ತವರಿಬ್ಬರೂ ಭಾರತೀಯರೇ ಆಗಿದ್ದರೂ, ಭಾರತೀಯರ ಭಾವನೆಗಳು ಮಾತ್ರ ತದ್ವಿರುದ್ಧ

ಈ ವಾರವಿಡೀ ದೇಶಾದ್ಯಂತ ಎರಡು ಹತ್ಯೆಯ ಬಗ್ಗೆಯೇ ಪರ ವಿರೋಧಗಳ ಚರ್ಚೆಗಳು ತೀವ್ರವಾಗಿ ನಡೆಯುತ್ತಲಿದೆ.  ಸತ್ತವರಿಬ್ಬರೂ ಭಾರತೀಯರೇ. ಧರ್ಮದಲ್ಲಿ ನೋಡಿದರೆ ಒಬ್ಬ ಮುಸಲ್ಮಾನ ಮತ್ತೊಬ್ಬ ಹಿಂದೂ ಬ್ರಾಹ್ಮಣ. ಒಬ್ಬನ ಸಾವಿನ ಬಗ್ಗೆ ಸಂತಾಪ ವ್ಯಕ್ತ ಪಡಿಸುತ್ತಿದ್ದರೆ ಮತ್ತೊಬ್ಬನ ಸಾವನ್ನು ಸಂಭ್ರಮಿಸದಿದ್ದರೂ, ಅವನು ಸತ್ತ ರೀತಿಗೆ ಸಂತಸ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ವಿಪರ್ಯಾಸ. ವಾಸೀಂ ಬಾರಿ : ಹೆಸರೇ ಸೂಚಿಸುವಂತೆ ಆತ ಒಬ್ಬ ಮುಸಲ್ಮಾನ. ಅದರೇ ಬಹುತೇಕ ಕಾಶ್ಮೀರೀ ಮುಸಲ್ಮಾನರಂತೆ ಭಾರತದ ವಿರೋಧಿಯಾಗಿರದೇ ಅಪ್ಪಟ ದೇಶ ಪ್ರೇಮಿ. ತನ್ನ ಕುಲಬಾಂಧವರ… Read More ಸತ್ತವರಿಬ್ಬರೂ ಭಾರತೀಯರೇ ಆಗಿದ್ದರೂ, ಭಾರತೀಯರ ಭಾವನೆಗಳು ಮಾತ್ರ ತದ್ವಿರುದ್ಧ

ವಿಕಾಸ್‌ ದುಬೆ

ನಿಜವಾಗಲೂ ಈತನ ಕುರಿತಾಗಿ ಈ ರೀತಿ ಒಂದು ಲೇಖನವನ್ನಾಗಲೀ ಅಥವಾ ಆತನ ಬಗ್ಗೆ ಮಾತನಾಡಿಕೊಳ್ಳ ಬೇಕಾದಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯೇ ಅಲ್ಲದಿದ್ದರೂ ಕಳೆದ ಒಂದು ವಾರಗಳಿಂದ ಈತ ದೇಶಾದ್ಯಂತ ಎಲ್ಲಾ ದೃಶ್ಯಮಾದ್ಯಮಗಳಿಗೂ ಟಿ.ಆರ್.ಪಿ ತಂದು ಕೊಟ್ಟಂತಹ ವ್ಯಕ್ತಿ ಎನ್ನುವುದಂತೂ ಸತ್ಯ. 2001 ರಲ್ಲಿ, ಉತ್ತರ ಪ್ರದೇಶದ ಬಿಜೆಪಿ ಸಚಿವರಾಗಿದ್ದ ಸಂತೋಷ್ ಶುಕ್ಲಾ ಅವರನ್ನು ಹಾಡಹಗಲಲ್ಲೇ ಗುಂಡಿಕ್ಕಿ ಕೊಲ್ಲುವ ಮೂಲಕ ಒಮ್ಮೆಂದೊಮ್ಮೆಲೆ ಪ್ರವರ್ಧಮಾನಕ್ಕೆ ಬಂದಂತಹ ಪಾತಕಿ ಸುಮಾರು ಆರು ತಿಂಗಳ ಪೋಲೀಸರಿಗೆ ಶರಣಾಗಿ ಕೊಲೆಯಾದ ಸಚಿವರ ಗನ್ ಮೆನ್… Read More ವಿಕಾಸ್‌ ದುಬೆ

ಖಾರಾ ಅವಲಕ್ಕಿ (ಚೂಡಾ)

ಈಗಂತೂ ಮಳೆಗಾಲ. ಸಂಜೆ ಧೋ ಎಂದು ಮಳೆ ಬೀಳುತ್ತಿದ್ದರೆ, ನಾಲಿಗೆ ಬಿಸಿ ಬಿಸಿಯಾದ ಮತ್ತು ಖಾರವಾದ  ಕುರುಕಲನ್ನು ಬಯಸುತ್ತದೆ. ಚಹಾದ ಜೊತೆ ಚೂಡಾ ಹಂಗಾ ಎನ್ನುವಂತೆ ಬಿಸಿಬಿಸಿಯಾದ ಕಾಫೀ/ಟೀ  ಜೊತೆ ಖಾರದ ಅವಲಕ್ಕಿ ಅರ್ಥಾತ್ ಚೂಡ ತಿನ್ನಲು ಮಜವಾಗಿರುತ್ತದೆ. ಹಾಗಾಗಿ ನಮ್ಮ ನಳಪಾಕ ಮಾಲಿಕೆಯಲ್ಲಿ ಖಾರದ ಅವಲಕ್ಕಿಯನ್ನು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಖಾರ ಅವಲಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ತೆಳು(ಪೇಪರ್) ಅವಲಕ್ಕಿ 4 ಬಟ್ಟಲು ಕಡಲೆಬೀಜ – 2 ಚಮಚ ಹುರಿಗಡಲೆ – … Read More ಖಾರಾ ಅವಲಕ್ಕಿ (ಚೂಡಾ)

ಗಾಂಧಿ ಕುಟುಂಬದ ಮೇಲೆ ತನಿಖೆ ಎಂಬ ಗುಮ್ಮ?

ನನಗೆ ಬುದ್ದಿ ತಿಳಿದು ಬರುವ ಹೊತ್ತಿಗೆ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು ಮನೆಗೆ ಬರುತ್ತಿದ್ದ ನಂದೀ ಬ್ರಾಂಡ್ ಪ್ರಜಾವಾಣಿ ಅಂದಿಗೂ ಇಂದಿಗೂ ಕಾಂಗ್ರೇಸ್ ಮುಖವಾಣಿಯಾಗಿಯೇ ಇದ್ದ ಕಾರಣ ಅಲ್ಲಿ ಪ್ರಕಟವಾಗುತ್ತಿದ್ದದ್ದನ್ನೇ ಜೋಡಿಸಿ ಕೊಂಡು ಓದಿ ಅರ್ಥ ಮಾಡಿಕೊಳ್ಳುತ್ತಿದ್ದಂತೆಯೇ, ದೇಶದಲ್ಲಿ ಚುನಾವಣೆ ನಡೆದು ಎಲ್ಲಾ ವಿರೋಧ ಪಕ್ಷಗಳೂ ಒಮ್ಮತವಾಗಿ ಜನತಾಪಕ್ಷದ ಅಡಿಯಲ್ಲಿ ಅಭೂತಪೂರ್ವವಾಗಿ ಜಯಿಸಿ ಬಂದು ಒಂದು ಕಾಲದಲ್ಲಿ ಇಂದಿರಾ ಸಂಪುಟದಲ್ಲಿ ಸಚಿವರಾಗಿದ್ದ ಮೊರಾರ್ಜೀ ದೇಸಾಯಿ ದೇಶದ ಪ್ರಪ್ರಥಮ ಕಾಂಗ್ರೇಸ್ಸೇತರ ಪ್ರಧಾನ ಮಂತ್ರಿಗಳಾದರು. ಅವರ ಸಂಪುಟದಲ್ಲಿ ವಾಜಪೇಯಿ, ಅಡ್ವಾಣಿ, ಜಾರ್ಜ್… Read More ಗಾಂಧಿ ಕುಟುಂಬದ ಮೇಲೆ ತನಿಖೆ ಎಂಬ ಗುಮ್ಮ?

Google ಮತ್ತು ಗುರು ನಡುವಿನ ಅಂತರ, ಮಹತ್ವ

ಹಿಂದಿನ ಕಾಲದವರು‌ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣಾ ಮುಕುತಿ ಎಂದರೆ, ಇಂದಿನ ಕಾಲದವರು Google ಮುಂದೆ ಗುರು ಏನ್ ಮಹಾ? ಎನ್ನುವಂತಾಗಿರುವಾಗ, Google ಮತ್ತು ಗುರು ನಡುವಿನ ಅಂತರ, ಮಹತ್ವದ ಕುರಿತಾದ ವಿಶಿಷ್ಟವಾದ ಲೇಖನ ಇದೋ ನಿಮಗಾಗಿ… Read More Google ಮತ್ತು ಗುರು ನಡುವಿನ ಅಂತರ, ಮಹತ್ವ

ಅವಕಾಶವಾದಿಗಳು

ಕರ್ನಾಟಕದ ರಾಜಾಧಾನಿಯಾದ ಬೆಂಗಳೂರು ಒಂದು ರೀತಿಯ ಮಾಯಾನಗರಿಯೇ ಹೌದು. ಭಾರತದ ವಾಣಿಜ್ಯ ನಗರಿ ಮುಂಬೈ ಮತ್ತು ರಾಜಧಾನಿ ದೆಹಲಿಯ ನಂತರದ ಶ್ರೀಮಂತ ನಗರಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಹಾಗಾಗೀಯೇ ಪ್ರತೀ ದಿನ ಈ ನಗರಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ತಮ್ಮ ಜೀವನೋಪಾಯಕ್ಕಾಗಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಬಂದು ಹೋಗುತ್ತಿದ್ದರೂ, ಯಾರನ್ನೂ ದ್ವೇಷಿಸದೇ, ಎಲ್ಲರನ್ನೂ ಕೈಬೀಸಿ ಕರೆಯುವ ಏಕೈಕ ನಗರ ಎಂಬ ಹೆಗ್ಗಳಿಕೆಯೂ ನಮ್ಮ ಬೆಂಗಳೂರಿನದ್ದೇ. ಕ್ರಿ.ಶ. 1573ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಿತವಾದ ಈ ಬೆಂಗಳೂರು ನಗರ… Read More ಅವಕಾಶವಾದಿಗಳು

ಹಾಗಲಕಾಯಿ ಗೊಜ್ಜು

ಸಾಧಾರಣವಾಗಿ ಹಾಗಲಕಾಯಿ ಗೊಜ್ಜು ಎಂದರೆ ಅದರ ಕಹಿ ಗುಣದಿಂದಾಗಿ ಮೂಗು ಮುರಿಯುವವರೇ ಹೆಚ್ಚು. ಆದರೆ ಹಾಗಲಕಾಯಿಯ ಈ ಕಹೀ ಗುಣವೇ ಮಧುಮೇಹಿಗಳಿಗೆ ರಾಮಬಾಣ. ಬರೀ ಹಾಗಲಕಾಯಿಯನ್ನು ತಿನ್ನಲು ಅಸಾಧ್ಯವಾದ್ದರಿಂದ ಕಾಯಿ, ಹುಣಸೇಹಣ್ಣು, ಬೆಲ್ಲ ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ರುಚಿಕರವಾದ ಮತ್ತು ಆರೋಗ್ಯಕರವಾದ ಹಾಗಲಕಾಯಿ ಗೊಜ್ಜನ್ನು ತಯಾರಿಸುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಸುಮಾರು 4-5 ಜನರು ಸವಿಯಬಹುದಾದಷ್ಟು ಹಾಗಲಕಾಯಿ ಗೊಜ್ಜು ತಯಾರಿಸಲು ಬೇಕಾಗುವ ಪದಾರ್ಥಗಳು ಮಧ್ಯಮ ಗಾತ್ರದ ಹಾಗಲಕಾಯಿ – 2 ನೆನಸಿದ ಹುಣಸೇ ಹಣ್ಣು… Read More ಹಾಗಲಕಾಯಿ ಗೊಜ್ಜು

ಸಿಹಿ-ಕಹಿ ಪ್ರಸಂಗ-1

ಯಾವುದೇ ಸಮಾರಂಭಗಳಲ್ಲಿ ಸಿಹಿ ತಿಂಡಿಯದ್ದೇ ಭರಾಟೆ. ಸಮಾರಂಭಕ್ಕೆ ಅಡುಗೆಯವರನ್ನು ಮಾತು ಕಥೆಗೆ ಕರೆಸಿದಾಗ, ಪಾಯಸ, ಎರಡು ಪಲ್ಯ, ಎರಡು ಕೋಸಂಬರಿ, ಗೊಜ್ಜು, ಅನ್ನಾ ಸಾರು, ಕೂಟು ಎಂಬೆಲ್ಲವೂ ಮಾಮೂಲಿನ ಅಡುಗೆಯಾದರೇ, ಸಮಾರಂಭಗಳ ಊಟದ ಘಮ್ಮತ್ತನ್ನು ಹೆಚ್ಚಿಸುವುದೇ ಸಿಹಿ ತಿಂಡಿಗಳು. ಸಮಾರಂಭದಲ್ಲಿ  ಎಷ್ಟು ಬಗೆಯ ಸಿಹಿ ತಿಂಡಿಗಳು ಮತ್ತು ಯಾವ ಯಾವ ಸಿಹಿತಿಂಡಿಗಳನ್ನು ಮಾಡಿಸಿರುತ್ತಾರೋ ಅದರ ಮೇಲೆ ಅವರ ಅಂತಸ್ತು ಮತ್ತು ಸಮಾರಂಭದ ಘನತೆಯನ್ನು ಹೆಚ್ಚಿಸುತ್ತದೆ ಎಂದರೂ ತಪ್ಪಾಗಲಾರದು.  ಸಮಾರಂಭ ಮುಗಿದ  ಎಷ್ಟೋ ದಿನಗಳ ನಂತರವೂ ಅಲ್ಲಿ ತಿಂದಿದ್ದ … Read More ಸಿಹಿ-ಕಹಿ ಪ್ರಸಂಗ-1