ಆಂಬೋಡೆ ಮತ್ತು ಮಸಾಲ ವಡೆ

ಶುಭ ಇರಲಿ ಅಶುಭ ಇರಲಿ ಎರಡೂ ಕಾರ್ಯಕ್ರಮಗಳಲ್ಲಿಯೂ ನೈವೇದ್ಯಕ್ಕೆ ಸಲ್ಲುವ  ಸಾಂಪ್ರದಾಯಕ ಖಾದ್ಯವಾದ ಆಂಬೊಡೆ ಮತ್ತು ಜಿಹ್ವಾ ಚಪಲಕ್ಕಾಗಿ ಮಾಡುವ ಮಸಾಲ ವಡೆಯನ್ನು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಸುಮಾರು 4-6 ಜನರಿಗೆ ಸಾಕಾಗುವಷ್ಟು ಆಂಬೋಡೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ನೆನೆಸಿದ ಕಡಲೇ ಬೇಳೆ – 1 ಬಟ್ಟಲು ಹಸಿರು ಮೆಣಸಿನಕಾಯಿ – 8-10 ಶುಂಠಿ – 1 ಇಂಚು ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವು ರುಚಿಗೆ ತಕ್ಕಷ್ಟು ಉಪ್ಪು ಕರಿಯಲು ಅಡುಗೆ ಎಣ್ಣೆ… Read More ಆಂಬೋಡೆ ಮತ್ತು ಮಸಾಲ ವಡೆ

ಗರಡಿ ಮನೆ

ಸುಮಾರು ಎರಡು ದಶಕಗಳ ಹಿಂದೆ ನಮ್ಮ ದೇಶದ ಬಹುತೇಕ ಹಳ್ಳಿಗಳಿಗೆ ಇನ್ನೇನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿಯೇ ಅಲ್ಲೊಂದು ಸುಮಾರಾಗಿರುವ ಕಟ್ಟಡ ಅದರ ಮೇಲೊಂದು ಕೇಸರಿ ಬಾವುಟ ಎದ್ದು ಕಾಣುತ್ತಿದ್ದಲ್ಲಿ ಆ ಊರಿನಲ್ಲಿ ಯಾವುದೇ ಕಳ್ಳಕಾಕರ ಭಯವಿಲ್ಲ. ಆ ಊರಿನ ಹೆಣ್ಣುಮಕ್ಕಳು ನಿರ್ಭಿಡೆಯಾಗಿ ಯಾವ ಹೊತ್ತಿನಲ್ಲಾದರೂ ಓಡಾಡಬಹುದು. ಅಲ್ಲಿ ಯಾವುದೇ ಪುಂಡ ಪೋಕರಿಗಳ ಕಾಟವಿರುವುದಿಲ್ಲ ಎಂಬ ಭರವಸೆಯನ್ನು ಮೂಡಿಸುತ್ತಿದ್ದವು. ಅರೇ, ಒಂದು ಕಟ್ಟಡದಿಂದಾಗಿ ಇಷ್ಟೊಂದು ಸಾಮಾಜಿಕ ಬದಲಾವಣೆಯೇ ಎಂದು ತಿಳಿದಲ್ಲಿ, ಆ ಕಟ್ಟಡ ಸಾಮ್ಯಾನ್ಯ ಕಟ್ಟಡವಾಗಿರದೇ, ಅದನ್ನು ಗರಡಿ ಮನೆ… Read More ಗರಡಿ ಮನೆ

ಮಣಿಕರಣ್ ಸಿಖ್ಖರ ಮತ್ತು ಉಳಿದ ಹಿಂದೂಗಳ ಧಾರ್ಮಿಕ ಕೇಂದ್ರ

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ವಿಶಿಷ್ಟವಾದ ದೇಶ. ಇಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್, ಜೈನ, ಪಾರಸೀ ಹೀಗೆ ಸರ್ವಧರ್ಮಗಳ ಭಾವೈಕ್ಯತೆಗಳ ಸಂಗಮವಾಗಿದೆ. ದೇಶಾದ್ಯಂತ ಈ ಧರ್ಮಗಳ ನಾನಾ ಧಾರ್ಮಿಕ ಕ್ಷೇತ್ರಗಳಿದ್ದು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಅಲ್ಲಿಗೆ ಹೋಗಿ ತಮ್ಮ ಭವರೋಗಗಳನ್ನು ಕಳೆದುಕೊಳ್ಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಒಂದೇ ಪುಣ್ಯಕ್ಷೇತ್ರ ಹಲವು ಧರ್ಮಗಳಿಗೆ ಶ್ರದ್ಧಾಕೇಂದ್ರವಾಗಿದ್ದು ಎರಡೂ ಪಂಗಡದವರು ಅಲ್ಲಿಗೆ ಹೋಗುತ್ತಾರೆ. ನಾನಿಂದು ಸಿಖ್ಖರಿಗೂ ಮತ್ತು ಉಳಿದ ಹಿಂದೂಗಳಿಗೆ ಪವಿತ್ರವಾದಂತಹ ಮಣಿಕರಣ್ ಬಗ್ಗೆ ತಿಳಿದುಕೊಳ್ಳೋಣ. ಸಿಖ್ಖರ ಮತ್ತು ಉಳಿದ ಹಿಂದೂಗಳ ಪವಿತ್ರ… Read More ಮಣಿಕರಣ್ ಸಿಖ್ಖರ ಮತ್ತು ಉಳಿದ ಹಿಂದೂಗಳ ಧಾರ್ಮಿಕ ಕೇಂದ್ರ

ಶ್ರೀ ಕೃಷ್ಣನ ತಂಗಿ ಯೋಗಮಾಯ

ಉಗ್ರಸೇನ ಎಂಬ ಪರೋಪಕಾರಿ ರಾಜನು ಮಥುರಾ ರಾಜ್ಯವನ್ನು ಆಳುತ್ತಿರಲು ಅತನ ಮಗನಾದ ಕಂಸನೇ ತನ್ನ ತಂದೆಯಿಂದ ಸಿಂಹಾಸನವನ್ನು ಕಸಿದುಕೊಂಡಿದ್ದಲ್ಲದೇ ಪ್ರಜಾಪೀಡಿತನಾಗಿದ್ದ. ಈತನ ದಬ್ಬಾಳಿಕೆಯನ್ನು ಹೇಗಾದರೂ ಪರಿಹಸಲೇ ಬೇಕೆಂದು ಜನ ಭಗವಂತನಲ್ಲಿ ಮೊರೆ ಹೋದಾಗ ಈತನನ್ನು ಸಂಹರಿಸಲು ಸಾಕ್ಷಾತ್ ವಿಷ್ಣು, ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಜನ್ಮ ತಳೆಯುವುದಾಗಿ ಭರವಸೆ ಕೊಟ್ಟಿದ್ದಲ್ಲದೇ, ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿಯೇ ಮಹಾ ವಿಷ್ಣು ಕೃಷ್ಣನಾಗಿ ಭೂಮಿಗೆ ಬರುವ ಮೊದಲು ವಿಷ್ಣುವಿನ ಆಸನವಾದ ಆದಿಶೇಷನು ವಾಸುದೇವ ಮತ್ತು ರೋಹಿಣಿ ದಂಪತಿಗಳಿಗೆ ಬಲರಾಮನ… Read More ಶ್ರೀ ಕೃಷ್ಣನ ತಂಗಿ ಯೋಗಮಾಯ

ಪೈಲೆಟ್ ದೀಪಕ್ ಸಾಠೆ

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರ ಪ್ರಾರಂಭಿಸಿದ ವಂದೇ ಭಾರತ್ ವಿಮಾನ ಕಾರ್ಯಾಚರಣೆಯ ಭಾಗವಾಗಿ ಅರಬ್ ರಾಷ್ಟ್ರದಿಂದ ಪ್ರಯಾಣಿಕರನ್ನು ಭಾರತಕ್ಕೆ ಕರೆತರುತ್ತಿದ್ದ ಸಂದರ್ಭದಲ್ಲಿ ಮೊನ್ನೆ ಶುಕ್ರವಾರ, 7.8.2010 ರಂದು ಕೋಯಿಕ್ಕೋಡ್ ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ಪೈಲೆಟ್, ತಮ್ಮ ಪ್ರಾಣವನ್ನು ತೆತ್ತು ಭಾರೀ ಪ್ರಾಣಹಾನಿಯನ್ನು ತಪ್ಪಿಸಿದ ವೀರ ಸೇನಾನಿ. Once a Soldier Always a Soldier ಎನ್ನುವ ಮಾತಿನಂತೆ ಒಬ್ಬ ಸೈನಿಕನು ತನ್ನ… Read More ಪೈಲೆಟ್ ದೀಪಕ್ ಸಾಠೆ

ಪ್ರಕೃತಿ ವಿಕೋಪ

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ನಿರ್ಮಿಸಲು ನೆರವೇರಿದ ಶಿಲಾನ್ಯಾಸದಲ್ಲಿ ದೇಶದ ಎಲ್ಲಾ ಭಾಗಗಳ ನದಿಗಳ ನೀರು ಮತ್ತು ಪುಣ್ಯಕ್ಷೇತ್ರಗಳ ಮೃತ್ತಿಕೆಯನ್ನು ಬಳೆಸಲಾಗಿತ್ತು. ಅಂತಹ ಪುಣ್ಯಕಾರ್ಯಕ್ಕೆ ಕನ್ನಡಿಗರ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿಂದಲೂ ಜುಲೈ 23ರಂದು ಕಾವೇರಿ ತೀರ್ಥ ಹಾಗೂ ಮೃತ್ತಿಯನ್ನು ಕಳುಹಿಸಿ, ಮನೆಯಿಂದಲೇ ರಾಮಮಂದಿರದ ಶಿಲಾನ್ಯಸ ನೋಡಿ ಸಂಭ್ರಮಿಸಿದ್ದ ತಲಕಾವೇರಿಯ ಪ್ರಧಾನ ಅರ್ಚಕರಾದ ಟಿ.ಎಸ್. ನಾರಾಯಣಾಚಾರ್ ಸೇರಿದಂತೆ ಅವರ ಹಿರಿಯ ಸೋದರ, ಪತ್ನಿ ಹಾಗೂ ಇಬ್ಬರು ಸಹಾಯಕ ಅರ್ಚಕರು ಮತ್ತು ಅವರ… Read More ಪ್ರಕೃತಿ ವಿಕೋಪ

ಅಕ್ಕಿ ಕಡಲೇಬೇಳೆ ಪಾಯಸ

ಸಾಂಪ್ರದಾಯಕ  ಸಿಹಿ ಖಾದ್ಯವಾದ ಅಕ್ಕಿ ಕಡಲೇಬೇಳೆ ಪಾಯಸವನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 4-6 ಜನರಿಗೆ ಸಾಕಾಗುವಷ್ಟು ಅಕ್ಕಿ ಕಡಲೇಬೇಳೆ ಪಾಯಸ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೇ ಬೇಳೆ – 1 ಬಟ್ಟಲು ಅಕ್ಕಿ -– 1 ಬಟ್ಟಲು ಪುಡಿ ಮಾಡಿದ ಉಂಡೇ ಬೆಲ್ಲ – 1 ಬಟ್ಟಲು ತುರಿದ ಕೊಬ್ಬರಿ – 1 ಬಟ್ಟಲು ಬಾದಾಮಿ – 2-3 ಗೊಡಂಬಿ – 8-10 ದ್ರಾಕ್ಷಿ –… Read More ಅಕ್ಕಿ ಕಡಲೇಬೇಳೆ ಪಾಯಸ

ಪಾತಾಳ ಗರಡಿ

ಬಾವಿಯಿಂದ ನೀರೆತ್ತುವಾಗ ಕೈಜಾರಿಯೋ ಇಲ್ಲವೇ ಹಗ್ಗ ಸಡಿಲವಾಗಿ ನೀರು ತುಂಬಿದ ಕೊಡ ಬಾವಿಯಲ್ಲಿ ಬಿದ್ದಾಗ ಮೇಲೆತ್ತಲು ಬಳಸುವ ಪದಾರ್ಥವನ್ನೇ ಪಾತಾಳ ಗರಡಿ ಅಥವಾ ಪಾತಾಳ ಸೂಜೀ ಅಂತ ಕರೆಯುತ್ತಾರೆ.… Read More ಪಾತಾಳ ಗರಡಿ

ಶ್ರೀ ರಾಮ ಜನ್ಮಭೂಮಿ ನಡೆದು ಬಂದ ಹಾದಿ

ನಮ್ಮ ದೇಶದ ಯಾವುದೇ ಪ್ರದೇಶಕ್ಕೆ ಹೋಗಿ ಯಾರನ್ನಾದರೂ ನಿಮ್ಮ ಹೆಸರೇನು? ನಿಮ್ಮ ತಂದೆಯ ಹೆಸರೇನು? ನಿಮ್ಮ ತಾತನ ಹೆಸರೇನು? ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಮುತ್ತಾತನ ಹೆಸರೇನು? ಎಂದು ಕೇಳ ಬಹುದು ಅದಕ್ಕಿಂತ ಹೆಚ್ಚಿನದ್ದೇನೂ ಅವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅದೇ ರಾಮನ ಬಗ್ಗೆ ಕೇಳಿ ಆತ ಥಟ್ ಅಂತಾ,‌ ಪ್ರಭು ಶ್ರೀ ರಾಮಾ, ವಿಷ್ಣುವಿನ ದಶಾವತಾರದಲ್ಲಿ ಏಳನೇ ಅವತಾರ. ದಶರಥನಿಗೆ ಮೂರು ಜನ ಆಧಿಕೃತವಾದ ರಾಣಿಯರಿದ್ದರೂ ಮಕ್ಕಳಾಗದಿದ್ದಾಗ ಪುತ್ರಕಾಮೇಷ್ಟಿ ಯಾಗದ ಫಲವಾಗಿ ಜನಿಸಿದ ನಾಲ್ಕು… Read More ಶ್ರೀ ರಾಮ ಜನ್ಮಭೂಮಿ ನಡೆದು ಬಂದ ಹಾದಿ