ಮಲ್ಲೇಶ್ವರದ ಕಾಡುಮಲ್ಲೇಶ್ವರ ಕಡಲೇಕಾಯಿ ಪರಿಷೆ

ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ನಮ್ಮಬೆಂಗಳೂರು ಒಂದು. ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಶ್ರಾವಣ ಮಾಸ ಮತ್ತು ಆಶ್ವಯುಜ ಮಾಸದ ಸಾಲು ಸಾಲು ಹಬ್ಬಗಳು ಮುಗಿದು ಇನ್ನೇನು ಮಾಗಿಯ ಚಳಿ ನಮ್ಮೆಲ್ಲರನ್ನು ಅಪ್ಪುವುದಕ್ಕೆ ಶುರುವಾಗುತ್ತಿದ್ದಂತೆಯೇ ಬರುವುದೇ ಕಾರ್ತೀಕ ಮಾಸ. ಶೈವಾರಾಧಕರಿಗೆ ಪ್ರತೀ ಕಾರ್ತೀಕ ಸೋಮವಾರವೂ ಅತ್ಯಂತ ಪುಣ್ಯಕರವಾದ ದಿನ. ಬಹುತೇಕರು ಕಾರ್ತೀಕ ಸೋಮವಾರ… Read More ಮಲ್ಲೇಶ್ವರದ ಕಾಡುಮಲ್ಲೇಶ್ವರ ಕಡಲೇಕಾಯಿ ಪರಿಷೆ

ನವ್ಯ ಕವಿ ಗೋಪಾಲಕೃಷ್ಣ ಅಡಿಗ

ತಮ್ಮ ಸೈದ್ಧಾಂತಿಕ ನಿಲುವುಗಳಿಂದಾಗಿಯೇ ಅನೇಕ ಮಾನ ಸನ್ಮಾನಗಳು ಮತ್ತು ಪ್ರಶಸ್ತಿಗಳಿಂದ ವಂಚಿತರಾದರೂ, ನೂರಾರು ನವ್ಯ ಲೇಖಕರಿಗೆ ಅಂದಿಗೂ ಇಂದಿಗೂ ಪ್ರೇರಣಾದಾಯಿಗಳಾಗಿರುವ ಶ್ರೀ ಎಂ. ಗೋಪಾಲ ಕೃಷ್ಣ ಅಡಿಗರು ೧೦೬ನೇ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರುನೋಟ ಇದೋ ನಿಮಗಾಗಿ… Read More ನವ್ಯ ಕವಿ ಗೋಪಾಲಕೃಷ್ಣ ಅಡಿಗ

ಕನ್ನಡದ ಕಣ್ವ  ಬಿ.ಎಂ.ಶ್ರೀಕಂಠಯ್ಯ

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು| ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ ಕೈ ಹಿಡಿದು ನಡೆಸೆನ್ನನು|| ಈ ಹಾಡನ್ನು ಕೇಳದಿರುವ ಕನ್ನಡಿಗನೇ ಇಲ್ಲ ಎಂದರೂ ತಪ್ಪಾಗಲಾರದು. ಈ ಕವಿತೆ ಮೂಲತಃ ಆಂಗ್ಲ ಸಾಹಿತಿ ಶ್ರೀ ನ್ಯೂಮನ್ ಅವರು ಬರೆದ Lead Kindly Light ಎಂಬ ಕವಿತೆಯ ಕನ್ನಡದ ಅನುವಾದ ಎಂದರೆ ಆಶ್ವರ್ಯವಾಗುತ್ತದಲ್ಲವೇ? ಹೌದು ಇಂಗ್ಲೀಷ್ ಭಾಷೆಯ ಅನೇಕ ಸುಪ್ರಸಿದ್ದ ಕೃತಿಗಳನ್ನು ಕನ್ನಡದ ಸೊಗಡಿಗೆ ತಕ್ಕಂತೆ ಇಲ್ಲಿಯ ಸಂಸ್ಕೃತಿಗೆ ಹೊಂದುವಂತೆ ಕನ್ನಡಕ್ಕೆ… Read More ಕನ್ನಡದ ಕಣ್ವ  ಬಿ.ಎಂ.ಶ್ರೀಕಂಠಯ್ಯ

ಮಾಸ್ತಿ ವೆಂಕಟೇಶ ಐಯ್ಯಂಗಾರ್

ನಾನಿಂದು  ದೇಶದ ಕಾಫೀ ಕಣಜ ಕೊಡಗಿಗೆ ಕಛೇರಿಯಿಂದ ವಿಹಾರ್ಥವಾಗಿ ಬಂದಿದ್ದೆ.  ಎಲ್ಲರಂತೆ ಸುಮ್ಮನೇ ಜಾಗಗಳನ್ನು ನೋಡುತ್ತ ಹೋಗದೇ,  ಅಲ್ಲಿಯ ಸಂಸ್ಕೃತಿ,  ಇತಿಹಾಸ, ಭಾಷೆ ಜನರ ಬಗ್ಗೆ ತಿಳಿಯುವುದು ನನ್ನ ವಾಡಿಕೆ.   ಒಂದು ಪಕ್ಷ ಅದು ಕುತೂಹಲವಾಗಿದ್ದಲ್ಲಿ ಅದನ್ನು ಎಲ್ಲರೊಡನೆ ಹಂಚಿಕೊಳ್ಳುವ ಸ್ವಭಾವ ನನ್ನದು ಇಂದು ಕೊಡಗಿನ ಕುರಿತು ವಿಚಾರಿಸುತ್ತಿದ್ದಾಗ, ಸ್ವಾತಂತ್ರ್ಯಪೂರ್ವ ಕೊಡಗೇ ಒಂದು ಸಣ್ಣ ರಾಜ್ಯವಾಗಿದ್ದು  ಕೊಡಗನ್ನು ಆಳುತ್ತಿದ್ದ ಚಿಕವೀರ ರಾಜೇಂದ್ರನನ್ನು ಟಿಪ್ಪು ಸುಲ್ತಾನ್ ಮೋಸದಿಂದ ಸೋಲಿಸಿ ಸಾವಿರಾರು ಕೊಡವರನ್ನು ಹತ್ಯೆಗೈದು ಕೊಡಗನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿಕೊಂಡು… Read More ಮಾಸ್ತಿ ವೆಂಕಟೇಶ ಐಯ್ಯಂಗಾರ್

ಅಯೋಧ್ಯೆ ರಾಮ ಮಂದಿರದ ವಕೀಲ ಶ್ರೀ ಪರಾಶರನ್

ವಯಸ್ಸು 60+ ಆಗುತ್ತಿದ್ದಂತೆಯೇ ಸ್ವಂತ ಮಕ್ಕಳೇ ನೆನಪಿಲ್ಲದಿರುವಷ್ಟು ಮರೆವು ಬರುವಂತಹ ಇಂದಿನ ಕಾಲದಲ್ಲಿ, 9೨ ವರ್ಷದಲ್ಲಿಯೂ ಏನನ್ನೂ ಮರೆಯದೇ ವೇದ ಶಾಸ್ತ್ರಗಳಲ್ಲಿರುವ ಶ್ಲೋಕವನ್ನೂ ನೆನೆದು, ಆಯೋಧ್ಯಾ ರಾಮ ಮಂದಿರದ ಪರವಾಗಿ ನ್ಯಾಯಾಲಯದಲ್ಲಿ ಗಂಟೆ ಗಟ್ಟಲೆಗಳ ಕಾಲ ನಿಂತುಕೊಂಡೇ ವಾದಿಸಿ ಗೆಲುವನ್ನು ತಂದುಕೊಟ್ಟಂತಹ ಶ್ರೀ ಪರಾಶರನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ಅಯೋಧ್ಯೆ ರಾಮ ಮಂದಿರದ ವಕೀಲ ಶ್ರೀ ಪರಾಶರನ್

ಟಿಪಿಕಲ್ ಟಿ. ಪಿ. ಕೈಲಾಸಂ

ಮಾತೃಭಾಷೆ ತಮಿಳು, ಓದಿ ಪದವಿ ಪಡೆದದ್ದು ಲಂಡನ್ನಿನಲ್ಲಾದರೂ, ಕನ್ನಡ ಸಾರಸ್ವತ ಲೋಕದಲ್ಲೇ ತನ್ನ ಇಡೀ ಜೀವನವನ್ನು ಕಳೆದು, ಕರ್ನಾಟಕದ ಪ್ರಹಸನ ಪಿತಾಮಹ ಅಷ್ಟೇ ಅಲ್ಲದೇ, ಕನ್ನಡಕ್ಕೊಬ್ಬನೇ ಕೈಲಾಸಂ ಎಂಬ ಕೀರ್ತಿಗೆ ಭಾಜನರಾಗಿದ್ದಂತಹ ಟಿಪಿಕಲ್ ಟಿ. ಪಿ. ಕೈಲಾಸಂ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ನೋಟ ಇದೋ ನಿಮಗಾಗಿ
Read More ಟಿಪಿಕಲ್ ಟಿ. ಪಿ. ಕೈಲಾಸಂ

ವಿ. ಸೀತಾರಾಮಯ್ಯ

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು, ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು ಈ ಹಾಡನ್ನು ಪ್ರತೀ ಮದುವೆಗಳ ವೀಡೀಯೋದಲ್ಲಿ ಹೆಣ್ಣು ಮಗಳನ್ನು ಗಂಡನ ಮನೆ ತುಂಬಿಸುವಾಗ ಹಾಕುತ್ತಾರೆ. ಅದೇ ರೀತಿ ನಾವು ಚಿಕ್ಕವರಿದ್ದಾಗ ನಮ್ಮ ಪ್ರಾಥಮಿಕ ಶಾಲೆಯಲ್ಲಿ ಓದಿದ್ದ ಕಾದಿರುವಳು ಶಬರಿ, ರಾಮ ಬರುವನೆಂದು, ತನ್ನ ಪೂಜೆಗೊಳುವನೆಂದು ಎಂಬ ಶಬರಿ ಪದ್ಯ. ಇಂತಹ ಸೊಗಸಾದ ಗೀತೆಯಲ್ಲದೇ, ಇಂತಹ ಅನೇಕ ನೂರಾರು ಅದ್ಭುತ ಮನ ಮಿಡಿಯುವ ಗೀತೆಗಳ ಕರ್ತೃ ನಮ್ಮ… Read More ವಿ. ಸೀತಾರಾಮಯ್ಯ

ಕೊರವಂಜಿ ರಾಶಿ

ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಹಾಸ್ಯಲೇಖಕರಾಗಿ, ಸಮಾಜ ಸೇವೆಗಾಗಿ ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪಿಸಿ, ಕಿರ್ಲೋಸ್ಕರ್ ಕಾರ್ಖಾನೆಯ ನಿರ್ದೇಶಕರಾಗಿ, ಮೈಸೂರು ಲ್ಯಾಂಪ್ಸ್, ಇಂಡಿಯನ್ ಆಕ್ಸಿಜನ್ ಕಂಪನಿಗಳ ಸಲಹೆಗಾರರಾಗಿ, ಇಂಡಸ್ಟ್ರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿಯ ನಿರ್ದೇಶಕರಾಗಿ ಕೈಗಾರಿಕೋದ್ಯಮದಲ್ಲಿ ಸೇವೆ ಸಲ್ಲಿಸಿ, ಮೈಸೂರು ಕ್ಯಾನ್ಸರ್ ಸೊಸೈಟಿ ಸ್ಥಾಪಕ ಸದಸ್ಯರಲ್ಲೊಬ್ಬಗಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ರಾಜ್ಯ ಶಾಖೆಯ ಅಧ್ಯಕ್ಷರಾಗಿ ಹೀಗೆ ಬಹುಮುಖದ ಪ್ರತಿಭೆಯಾಗಿದ್ದ. ಡಾ. ಎಂ. ಶಿವರಾಂ ಹೆಸರು ವಾಸಿಯಾಗಿದ್ದೇ ರಾಶಿ ಎಂಬ ತಮ್ಮ ಕಾವ್ಯನಾಮದಿಂದಲೇ. ತಮ್ಮ ಹೆಸರಿನ ಎರಡು ಪದಗಳ ಪ್ರಥಮಾಕ್ಷರಗಳನ್ನು ತಿರುವು… Read More ಕೊರವಂಜಿ ರಾಶಿ

ಡಾ. ಅನುಪಮಾ ನಿರಂಜನ

ವೃತ್ತಿಯಲ್ಲಿ ವೈದ್ಯೆಯಾದರೂ, ಪ್ರವೃತ್ತಿಯಲ್ಲಿ ಅದ್ಭುತವಾದ ಬರಹಗಾರ್ತಿ ಮತ್ತು ಜನಾನುರಾಗಿ. ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯಕ್ಕಾಗಿ (ದಿನಕ್ಕೊಂದು ಕಥೆ) ಇಡೀ ಜೀವನವನ್ನೇ ಮುಡುಪಾಗಿಟ್ಟ ಶ್ರೀಮತಿ ವೆಂಕಟಲಕ್ಷ್ಮಿ ನಿರಂಜನ ಅರ್ಥಾತ್ ಡಾ. ಅನುಪಮಾ ನಿರಂಜನ ಅವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಡಾ. ಅನುಪಮಾ ನಿರಂಜನ