ನಾಟಕಗಳಿಗೇ ಮಾಸ್ಟರ್, ಮಾಸ್ಟರ್ ಹಿರಣ್ಣಯ್ಯ

ಅದು 1973-74ನೇ ಇಸ್ವಿಯಿರಬಹುದು. ವಾಟಾಳ್ ನಾಗರಾಜರ ಕನ್ನಡ ಹೋರಾಟದ ಉಚ್ಛ್ರಾಯ ಸ್ಥಿತಿ. ರಾಜಾಜೀನಗರದ ಬಳಿ ಅವರು ಏರ್ಪಡಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಮಾ.ಹಿರಣ್ಣಯ್ಯನವರ ನಾಟಕ ಪ್ರದರ್ಶನಕ್ಕೆ ಕರೆದುಕೊಂಡು ಹೋದ ನಮ್ಮ ತಂದೆಯವರು ಮೊತ್ತ ಮೊದಲಬಾರಿಗೆ ನನಗೆ ಶ್ರೀ ಮಾ.ಹಿರಣ್ಣಯ್ಯನವರ ಪರಿಚಯ ಮಾಡಿಸಿಕೊಟ್ಟರು. ಆನಂತರ ಪ್ರತೀ ವರ್ಷವೂ ನಮ್ಮ ಬಿಇಎಲ್ ಲಲಿತಕಲಾ ಅಕಾಡೆಮಿಯವರು ನಡೆಸುತ್ತಿದ್ದ ಬೇಸಿಗೆ ಮೇಳದಲ್ಲಿ ಹಿರಣ್ಣಯ್ಯನವರ ಒಂದಲ್ಲಾ ಒಂದು ನಾಟಕದ ಪ್ರದರ್ಶನ ಕಡ್ಡಾಯವಾಗಿದ್ದು, ಅವರ ನಾಟಕಗಳನ್ನು ನೋಡಿ ಬೆಳೆದೆ ಎಂದರೆ ತಪ್ಪಾಗಲಾರದು. ಇನ್ನು ಎಂಬತ್ತರ ದಶಕದಲ್ಲಿ ಟೇಪ್… Read More ನಾಟಕಗಳಿಗೇ ಮಾಸ್ಟರ್, ಮಾಸ್ಟರ್ ಹಿರಣ್ಣಯ್ಯ

ಮದುವೆ ಮಾಡಿ ನೋಡು..

ಮದುವೆ ಎಂಬುದು ಕೇವಲ ಗಂಡು ಮತ್ತು ಹೆಣ್ಣುಗಳ ಬಂಧವಲ್ಲ. ಅದು ಎರಡು ಕುಟುಂಬಗಳ ನಡುವಿನ ಸಂಬಂಧದ ಬೆಸುಗೆ. ಕೇವಲ ಕುಟುಂಬ ಏಕೆ ? ಹಿಂದೆಲ್ಲಾ ಅದು ಎರಡು ಊರುಗಳನ್ನು ಒಗ್ಗೂಡಿಸುವ ಇಲ್ಲವೇ ಎರಡು ದೇಶಗಳ ನಡುವಿನ ಶತ್ರುತ್ವವನ್ನು ಬಂಧುತ್ವವನ್ನಾಗಿ ಬೆಸೆಯುವ ಕೊಂಡಿಯಾಗಿತ್ತು. ಮದುವೆಯ ಬಗ್ಗೆ ಇಷ್ಟೆಲ್ಲಾ ಏಕೆ ಪೀಠಿಕೆ ಅಂದ್ರಾ, ಅದು ಏನು ಇಲ್ಲಾ ಕಳೆದ ಎರಡು ಮೂರು ದಿನಗಳಿಂದ ನಮ್ಮ ಕುಟುಂಬದ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾಗ ಮದುವೆಯಲ್ಲಿ ಆಗುವ ಕೆಲವೊಂದು ಗಂಭಿರವಾದ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳ… Read More ಮದುವೆ ಮಾಡಿ ನೋಡು..

ಬಾಳಗಂಚಿ ಹೊನ್ನಾದೇವಿ ಹಬ್ಬ

ಹಿಂದಿನ ಲೇಖನದಲ್ಲಿ ನಮ್ಮೂರಿನ ಚೋಮನ ಹಬ್ಬದ ಬಗ್ಗೆ ತಿಳಿದುಕೊಂಡಿದ್ದೆವು. ಇಂದು ನಮ್ಮ ಊರಿನ ಗ್ರಾಮ ದೇವತೆ, ಹೊನ್ನಾದೇವಿ ಅಥವಾ ಹೊನ್ನಮ್ಮ ಅಥವಾ ಸ್ವರ್ಣಾಂಬಾ ದೇವಿಯ ಊರ ಹಬ್ಬದ ಬಗ್ಗೆ ತಿಳಿದುಕೊಳ್ಳೊಣ. ಸಾವಿರಾರು ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ನಮ್ಮ ಬಾಳಗಂಚಿ ಗ್ರಾಮವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನ ವಂಶಸ್ಥ ನಾರಸಿಂಹದೇವ 76 ವೃತ್ತಿನಿರತ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟಿದ್ದ ಎಂಬ ಬಗ್ಗೆ 1256ರಲ್ಲಿ ಬರೆಸಿದ ತಾಮ್ರ ಶಾಸನ ಸಾರುತ್ತದೆ. ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಖ್ಯಾತರಾಗಿದ್ದ ಹಾಗೂ ವಿಜಯನಗರ ಸಾಮ್ರಾಜ್ಯದ… Read More ಬಾಳಗಂಚಿ ಹೊನ್ನಾದೇವಿ ಹಬ್ಬ

ದಾನ- ಮತದಾನ

ನಮ್ಮ ಸನಾತನದ ಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಪುಣ್ಯ ಕೆಲಸ ಮಾಡುವ ಮೊದಲು ನಾವು ಏನಾದರೂ ದಾನ ಮಾಡಿಯೇ ಮುಂದಿನ ಶಾಸ್ತ್ರಗಳಲ್ಲಿ ತೊಡಗುತ್ತೇವೆ. ದಾನ ಎಂದರೆ ಅಗತ್ಯವಿದ್ದವರಿಗೆ ತಮ್ಮಲ್ಲಿರುವ ವಸ್ತುಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದು ಎಂದರ್ಥ. ಹಾಗೆ ದಾನ ಮಾಡುವವರು ಶ್ರೀಮಂತರಾಗಿಯೇ ಇರಬೇಕೆಂದಿಲ್ಲ. ಕೊಡಲು ಕೈಯಲ್ಲಿ ಏನಿಲ್ಲದಿದ್ದರೂ ಸಂಕಷ್ಟದಲ್ಲಿರುವವರನ್ನು ಸಂತೈಸುವುದು, ಸಾಂತ್ವನದ ನುಡಿಗಳನ್ನು ಆಡುವುದು, ಅಷ್ಟೇ ಏಕೆ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಅವನನ್ನು ಕಂಡು ಮುಗುಳ್ನಗುವುದೂ ಸಹ ದಾನದ ಚೌಕಟ್ಟಿನಲ್ಲಿಯೇ ಬರುತ್ತದೆ. ಹಾಗೆ ದಾನ ಮಾಡುವುದರಿಂದ… Read More ದಾನ- ಮತದಾನ

ಭಯೋತ್ಪಾದಕತೆಗೆ ಧರ್ಮವಿಲ್ಲವೇ?

ಏಪ್ರಿಲ್ 21 , 2019 ಭಾನುವಾರ, ವಿಶ್ವಾದ್ಯಂತ ಕ್ರಿಶ್ಚಿಯನ್ನರು ಈಸ್ಟರ್ ಹಬ್ಬವನ್ನು ಅಚರಿಸುತ್ತಿದ್ದರು. ಅದೇ ರೀತಿ ಶ್ರೀಲಂಕಾದ ಕೊಲೊಂಬೋ ನಗರದ ಒಂದು ಚರ್ಚಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಅಚಾನಕ್ಕಾಗಿ ನಡೆಸಿದ ಬಾಂಬ್ ಸ್ಪೋಟದಲ್ಲಿ ಅನೇಕರು ಮೃತಪಟ್ಟಿದ್ದಾರೆ. ಕೇವಲ ಚರ್ಚ್ ಅಲ್ಲದೇ ,ಕೊಲೊಂಬೋ ನಗರಾದ್ಯಂತ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಅನೇಕ ಅಮಾಯಕರು ಮೃತಪಟ್ಟಿರುವುದು ನಿಜಕ್ಕೂ ದುಖಃಕರ ಮತ್ತು ಖಂಡನೀಯ. ಸರಣಿ ಬಾಂಬ್ ಕುಕೃತ್ಯದ ಹಿಂದಿನ ಕೈವಾಡ ಹಿಂದೆ ಉಗ್ರ ಮುಸಲ್ಮಾನರ ಮತಾಂಧತೆಯ ಕರಿನೆರಳು ಇರುವುದು ಸ್ವಷ್ಟವಾಗಿ ಗೋಚರಿಸಲ್ಪಟ್ಟಿದೆ.… Read More ಭಯೋತ್ಪಾದಕತೆಗೆ ಧರ್ಮವಿಲ್ಲವೇ?

ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ. ಸುಮಾರು ಮೂರ್ನಾಲ್ಕು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿಯಾಗಿದೆ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ. ಈ ಹಳ್ಳಿಯಲ್ಲಿ ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು… Read More ನಮ್ಮೂರು ಬಾಳಗಂಚಿ ಗ್ರಾಮದ ಹಬ್ಬ

ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ

ಚುನಾವಣೆಯಲ್ಲಿ ನಾವುಗಳು ಮಾಡುವುದು ಮತದಾನ. ದಾನ ಮಾಡುವ ಕೈಗಳು ಅರ್ಥಾತ್ ಕೊಡುವ ಕೈಗಳು ಎಂದಿಗೂ ಮೇಲೆ ಇರುತ್ತವೆಯೇ ಹೊರತು, ಬೇಡುವ ರೀತಿಯಲ್ಲಿ ಇರುವುವುದಿಲ್ಲ. ಹಾಗಾಗಿ ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ನೀಡುವ ಹಣ, ಹೆಂಡ ಮತ್ತು ಗೃಹೋಪಯೋಗಿ ವಸ್ತುಗಳ ಉಚಿತ ಆಮೀಷಗಳಿಗೆ ಬಲಿಯಾಗಿ ದೇಶದ ಆರ್ಥಿಕತೆಯನ್ನು ಅಧೋಗತಿಗೆ ತಳ್ಳದೇ, ಸ್ವಾಭಿಮಾನಿಗಳಾಗಿ, ಸ್ವಾವಲಂಭಿಗಳಾಗಿ, ನಮ್ಮ ರಾಜ್ಯದ ಒಳಿತಿಗಾಗಿ ಮೇ 10ರಂದು ನಿರ್ಭೆಡೆಯಿಂದ ತಪ್ಪದೇ ಮತದಾನ ಮಾಡೋಣ ಅಲ್ವೇ?… Read More ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ

ಪ್ರಜ್ಞಾವಂತ ಮತದಾರರಲ್ಲಿ ಒಂದು ಸಣ್ಣ ಮನವಿ

ಏಪ್ರಿಲ್ 18 ಮತ್ತು 23 ರಂದು ಕರ್ನಾಟಕಾದ್ಯಂತ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಮಾಡುವುದು ಸಾಂವಿಧಾನಿಕವಾಗಿ ಕಡ್ಡಾಯವಾಗಿರುವ ಕಾರಣ, ಎಲ್ಲರೂ ಯಾವುದೇ ಕುಂಟು ನೆಪಗಳಿಲ್ಲದೆ, ಮತ ಚಲಾವಣೆ ಮಾಡಬೇಕಾಗಿ ಸವಿನಯ ಪ್ರಾರ್ಥನೆ. ಚುನಾವಣಾ ದಿನ ಬೆಳಿಗ್ಗೆ ರಜೆ ಎಂದು ತಡವಾಗಿ ಎದ್ದು ಕಾಪಿ ಗೀಪಿ ಕುಡ್ಕಂಡು… ಓ ಸೋ ಹಾಟ್ ಅಂತಾನೋ ಇಲ್ಲಾ ಅಪರೂಪಕ್ಕೆ ಬೀಳ್ತಾ ಇರೋ ಸೋನೆ ಮಳೆ ನೆಪ ಒಡ್ಡಿ …ಯಾರ್ ಹೋಗ್ತಾರೆ ವೋಟ್ ಹಾಕಕ್ಕೆ? ಯಾರ್ ಬಂದ್ರೂ ನಮಗೇನು? ಅಂತ ಕಾಲ್… Read More ಪ್ರಜ್ಞಾವಂತ ಮತದಾರರಲ್ಲಿ ಒಂದು ಸಣ್ಣ ಮನವಿ

ಒಗ್ಗಟ್ಟಿನಲ್ಲಿ ಬಲವಿದೆ

ಅದೊಂದು ಕಾಲೇಜು ಹಾಸ್ಟೆಲ್ ಕ್ಯಾಂಟೀನ್, ಅಲ್ಲಿ ಪ್ರತಿದಿನ ಉಪಾಹಾರಕ್ಕಾಗಿ ಉಪ್ಪಿಟ್ಟನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದರು. ಹೆಚ್ಚಿನ ವಿದ್ಯಾರ್ಥಿಗಳಿಗೆ ಉಪ್ಪಿಟ್ಟನ್ನು ತಿನ್ನಲು ಮನಸ್ಸಿರಲಿಲ್ಲ. ಅದಕ್ಕಾಗಿ ಉಪ್ಪಿಟ್ಟಿನ ಬದಲಾಗಿ ಬೇರೆಂದು ಉಪಹಾರವನ್ನು ತಯಾರಿಸಲು ತಮ್ಮ ವಾರ್ಡನ್ ಅವರಿಗೆ ದೂರು ಕೊಟ್ಟರು. ಸುಮಾರು100 ವಿದ್ಯಾರ್ಥಿಗಳಲ್ಲಿ 20 ಮಂದಿಗೆ ಉಪ್ಪಿಟ್ಟು ರುಚಿಸದೇ ಇದ್ದರೂ ದೂರು ಕೊಟ್ಟವರ ಪರವಾಗಿ ಬೆಂಬಲ ನೀಡಲು ಹೆದರಿಕೊಂಡು ತಟಸ್ಥರಾಗಿ ಇದ್ದರು. ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿದ ವಾರ್ಡನ್ ಉಪಾಹಾರಕ್ಕಾಗಿ ವಿವಿಧ ಉಪ್ಪಿಟ್ಟಿನ ಸಹಿತ ತಿಂಡಿಗಳ ಪಟ್ಟಿಯನ್ನು ನೀಡಿ ವಿದ್ಯಾರ್ಥಿಗಳಿಗೇ ಮಾಡಿಕೊಳ್ಳಲು ತಿಳಿಸಿ… Read More ಒಗ್ಗಟ್ಟಿನಲ್ಲಿ ಬಲವಿದೆ