ಅತ್ತ ದರಿ ಇತ್ತ ಪುಲಿ

ಅದು 2014 ಲೋಕಸಭಾ ಚುನಾವಣಾ ಸಮಯ. ಅದಾಗಲೇ ಎರಡು ಆಡಳಿತಾವಧಿಯಲ್ಲಿ ಹಗರಣದ ಮೇಲೆ ಹಗರಣಗಳ ಆಡಳಿತ ನಡೆಸಿದ್ದ ಮನಮೋಹನ್ ಸಿಂಗ್ ಅವರ ಸರ್ಕಾರದ ಮೇಲೆ ಇಡೀ ದೇಶವಾಸಿಗಳ ಆಕ್ರೋಶವಿದ್ದಾಗ ಶುದ್ಧ ಹಸ್ತನಾಗಿ, ದಕ್ಷ ಆಡಳಿತಗಾರನಾಗಿ ಗುಜರಾತನ್ನು ಮುನ್ನೆಡೆಸಿದ್ದ ನರೇಂದ ಮೋದಿಯವರು ಇಡೀ ದೇಶಕ್ಕೆ ಆಶಾವಾದಿಯಾಗಿ ಕಂಡ ಪರಿಣಾಮವಾಗಿ ಅದ್ಭುತವಾದ ಬಹುಮತದೊಂದಿಗೆ ಆಡಳಿತಕ್ಕೆ ಬಂದಿದ್ದು ಈಗ ಇತಿಹಾಸ. ಮೊದಲ ಬಾರಿಗೆ ಸಂಸತ್ತನ್ನು ಪ್ರವೇಶಿಸುವಾಗ ಸಂಸತ್ತಿನ ಮೆಟ್ಟಿಲುಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಸಂಸತ್ತನ್ನು ಪ್ರವೇಶಿಸಿ ನಾ ಮೇ ಖಾವುಂಗಾ ಔರ್ ಖಾನೇ… Read More ಅತ್ತ ದರಿ ಇತ್ತ ಪುಲಿ

ಮೂರ್ತಿ ಪೂಜೆ

ರಸ್ತೇ ಅಗಲೀಕರಣದ ನೆಪದಲ್ಲಿ ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಕಳೆದ ವಾರ ನಂಜನಗೂಡಿನ ಬಳಿ 800 ವರ್ಷದ ಹಳೆಯದಾದ ಚೋಳರ ಕಾಲದ  ದೇವಾಲಯವನ್ನು ಒಡೆದು ಹಾಕಿರುವ ವಿಷಯ ಇನ್ನೂ ಆರದಿರುವಾಗ ಅದೇ ಪ್ರಾಂತ್ಯದ ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ಹಾಕಲಾಗಿದ್ದ ಮೈಸೂರು ಮಹಾರಾಜರ ಫೋಟೋಗಳನ್ನು ತೆರವು ಮಾಡುವ ಎಡವಟ್ಟೊಂದನ್ನು ಮಾಡುವ ಮೂಲಕ  ಆಸ್ತಿಕ ಮಹಾಶಯರ ಸಾತ್ವಿಕ ಕೋಪ ಹೆಚ್ಚುವಂತಾಗಿದೆ. ನಮ್ಮ ರಾಜ್ಯದ ಹಲವಾರು ದೇವಾಲಯಗಳಿಗೆ ನಮ್ಮ ಮೈಸೂರು ಅರಸರ ಕೊಡುಗೆ ಅಪಾರ ಎನ್ನುವುದು ನಿರ್ವಿವಾದ. ಅದರಲ್ಲೂ… Read More ಮೂರ್ತಿ ಪೂಜೆ

ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

ಭಾರತ ಎಂದರೆ ಹಾವಾಡಿಗರ ದೇಶ, ಹಿಂದೂಗಳು ಎಂದರೆ ಮೂಢ ನಂಬಿಕೆಯ ಜನರು ಎಂದು ಇಡೀ ಜಗತ್ತೇ ಮೂದಲಿಸುತ್ತಿದ್ದಾಗ ವಿಶ್ವ ಧರ್ಮಗಳ ಸಂಸತ್ತು 11 ಸೆಪ್ಟೆಂಬರ್ 1893 ರಂದು ಚಿಕಾಗೋದಲ್ಲಿ ಐತಿಹಾಸಿಕ ದಿಕ್ಸೂಚಿ ಭಾಷಣವನ್ನು ಮಾಡಿ ಜಗತ್ತೇ ಭಾರತ ಮತ್ತು ಹಿಂದೂ ಧರ್ಮದತ್ತ ಬೆಚ್ಚಿ ಬೀಳುವಂತೆ ಮಾಡುವ ಮುನ್ನಾ ದೇಶಾದ್ಯಂತ ಪರಿವಾಜ್ರಕರಾಗಿ ಪರ್ಯಟನೆ ಮಾಡುತ್ತಿದ್ದಂತಹ ಸಮಯದಲ್ಲಿ, 24 ಡಿಸೆಂಬರ್ 1892 ರಂದು ಸ್ವಾಮೀ ವಿವೇಕಾನಂದರು ಕನ್ಯಾಕುಮಾರಿಯನ್ನು ತಲುಪಿದ್ದರು. ಸಮುದ್ರದ ದಂಡೆಯಲ್ಲೇ ಇರುವ ದೇವಿಯ ದರ್ಶನ ಪಡೆದು ಹಿಂದೂಮಹಾಸಾಗರ, ಅರಬ್ಬೀ… Read More ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

ಮಾಡಾಳು ಸ್ವರ್ಣಗೌರಿ

ನಮ್ಮ ಭರತಖಂಡ ನಮ್ಮ ಸನಾತನ ಧರ್ಮದ ತವರೂರು. ದೇವಾಲಯಗಳ ಬೀಡು. ಬ್ರಹ್ಮ ವಿಷ್ಣು ಮಹೇಶ್ವರ, ಗಣೇಶ ಸುಬ್ರಹ್ಮಣ್ಯ, ಲಕ್ಷ್ಮೀ ಸರಸ್ವತಿ ಪಾರ್ವತಿಯರಲ್ಲದೇ, ನಮ್ಮ ದೇಶದ ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿಯೂ ಗ್ರಾಮದೇವರ್ತೆಗಳಿದ್ದು ನಮ್ಮ ದೇಶದ ಜನಸಂಖ್ಯೆ ಸುಮಾರು 130-140 ಕೋಟಿಗಳಿದ್ದರೇ ನಾವು ನಂಬುವ ಮತ್ತು ಪರಮ ಭಕ್ತಿಯಿಂದ ಆರಾಧಿಸುವ ದೇವಾನು ದೇವತೆಗಳ ಸಂಖ್ಯೆಯೇ ಸುಮಾರು 33ಕೋಟಿ. ಪ್ರತಿಯೊಂದು ದೇವಾಲಯಕ್ಕೂ ಮತ್ತು ಅಲ್ಲಿಯ ದೇವತೆಗೂ ಒಂದು ಐತಿಹ್ಯವಿದ್ದು ಅಲ್ಲಿಯದೇ ಆದ ಸುಂದರವಾತ ಮತ್ತು ಅಷ್ಟೇ ರೋಚಕವಾದ ಕಥೆ ಇರುತ್ತದೆ. ನಾವಿಂದು… Read More ಮಾಡಾಳು ಸ್ವರ್ಣಗೌರಿ

ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ನಮ್ಮ ಸನಾತನ ಧರ್ಮದಲ್ಲಿ ಹಬ್ಬಗಳನ್ನು ರೂಢಿಗೆ ತಂದಿರುವುದು ದೇವರುಗಳನ್ನು ಭಕ್ತಿಯಿಂದ ಆರಾಧಿಸುವುದರ ಜೊತೆಗೆ, ಇಡೀ ಕುಟುಂಬ, ಬಂಧು-ಮಿತ್ರರು ಮತ್ತು ಇಡೀ ಸಮಾಜವನ್ನು ಒಗ್ಗೂಡಿಸುವುದರ ಜೊತೆಗೆ  ಆರ್ಥಿಕ ಸಧೃಢತೆಯನ್ನು ಕಾಪಾಡುವುದೇ ಆಗಿದೆ. ಒಂದು ಹಬ್ಬದ ಮೂಲಕ,  ಹೂವು, ಹಣ್ಣು, ಆಹಾರಗಳನ್ನು ಬೆಳೆಯುವ ರೈತರಿಗೆ, ಅದನ್ನು ಕೊಂಡು ಮಾರುವ ವ್ಯಾಪಾರಿಗಳಿಗೆ ಆರ್ಥಿಕ ಲಾಭವನ್ನು ತಂದು ಕೊಟ್ಟರೆ, ಇನ್ನು ಹಬ್ಬದ ಸಮಯದಲ್ಲಿ ಊರಿಂದ ಊರಿಗೆ ಹೋಗುವ ಸಲುವಾಗಿ ಸಾರಿಗೆ ವ್ಯವಸ್ಥೆಯವರಿಗೆ, ಬಟ್ಟೆಗಳು, ಉಡುಗೆ ತೊಡುಗೆ, ಚಿನ್ನಾಭರಣದಿಂದ ಹೆಣ್ಣುಮಕ್ಕಳು ಬಳಸುವ ಅಲಂಕಾರಿಕ ವಸ್ತುಗಳಿಗೂ… Read More ಗೌರೀ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ

ನೋಕು ಕೂಲಿ

ಕಳೆದ ಭಾನುವಾರ ಸೆಪ್ಟಂಬರ್ -5 ರಂದು ಎಲ್ಲರೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಸಂಭ್ರದಿಂದ ಆಚರಿಸುತ್ತಿದ್ದರೆ, ದೂರದ ಕೇರಳದ ತಿರುವನಂತಪುರದಲ್ಲಿರುವ ಬಾಹ್ಯಾಕಾಶ ಸಂಶೋಧನಾ ಇಲಾಖೆ (IRRO)ದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ನಲ್ಲಿ (VSSC) ಮಾತ್ರಾ ಅದೊಂದು ಘನಘೋರ ಘಟನೆಯೊಂದು ನಡೆಯುವ ಮೂಲಕ ವಿದ್ಯಾವಂತರ ನಾಡು ಎಂದು ಕರೆಸಿ ಕೊಳ್ಳುವ ಕೇರಳದ ಮರ್ಯಾದೆಯನ್ನು ಮೂರುಕಾಸಿಗೆ ಹಾರಾಜು ಹಾಕಿರುವುದು ನಿಜಕ್ಕೂ ಖಂಡನೀಯವಾಗಿದೆ. ಭಾನುವಾರದ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ತಿರುವನಂತಪುರಂನ ತುಂಬಾದಲ್ಲಿರುವ ಭಾರತೀಯ… Read More ನೋಕು ಕೂಲಿ

ವಿಮಲ ಮಿಸ್

ಅದು ಎಂಭತ್ತರ ದಶಕ ಆರಂಭದ ಕಾಲ ನಾನು ಆಗ ತಾನೇ ನೆಲಮಂಗಲದ ಸರ್ಕಾರೀ ಪ್ರಾಥಮಿಕ ಶಾಲೆಯಿಂದ ಬೆಂಗಳೂರಿನ ಪ್ರತಿಷ್ಠಿತ ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಸ್ಲೇಟು ಬಳಪ ಹಿಡಿದುಕೊಂಡು ಯಾವುದೇ ರೀತಿಯ ಸಮವವಸ್ತ್ರ ಇಲ್ಲದೇ ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡು ನೆಲದ ಮೇಲೆ ಹಾಕಿದ್ದ ಮಣೆಯ ಮೇಲೆ ಪಾಠ ಕಲಿಯುತ್ತಿದ್ದ ನನಗೆ, ಏಕಾ ಏಕಿ ಸ್ಲೇಟು ಬಳಪ ಜಾಗದಲ್ಲಿ ನೋಟ್ ಪುಸ್ತಕ, ಪೆನ್ಸಿಲ್, ಸಮವಸ್ತ್ರದ ಜೊತೆ ಟೈ ಮತ್ತು ಶೂ ಹಾಕಿಕೊಂಡು ಡೆಸ್ಕಿನ ಮೇಲೆ ಕುಳಿತು ಕೊಂಡು… Read More ವಿಮಲ ಮಿಸ್

ಪೇಪರ್.. ಪೇಪರ್…

ಪ್ರತಿ ದಿನವೂ ಬೆಳ್ಳಂ ಬೆಳಗ್ಗೆ ಛಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೇ ತಪ್ಪದೇ ನಮ್ಮೆಲ್ಲರ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಆ ಶ್ರಮ ಜೀವಿಗಳ ರೋಚಕ ಮತ್ತು ಅಷ್ಟೇ ಹೃದಯಸ್ಪರ್ಶಿ ಪ್ರಸಂಗಗಳನ್ನು ಸೆಪ್ಟಂಬರ್-4, ವಿಶ್ವ ಪತ್ರಿಕಾ ವಿತರಕರ ದಿನದಂದು ಮೆಲುಕು ಹಾಕುತ್ತಾ, ಆ ಪತ್ರಿಕಾ ಯೋಧರಿಗೆ ನಮ್ಮೆಲ್ಲರ ಅಭಿನಂದನೆಗಳನ್ನು ಸಲ್ಲಿಸೋಣ ಅಲ್ವೇ?… Read More ಪೇಪರ್.. ಪೇಪರ್…

ಟೀ.. ಚಾಯ್… ಕಾಪೀ.. ಕಾಪೀ…

ರಾಜಮಂಡ್ರಿಯಲ್ಲಿ ನಡೆಯಲ್ಲಿದ್ದ ತಮ್ಮ ಸ್ನೇಹಿತರ ಮಗಳ ಮದುವೆಯಲ್ಲಿ ಭಾಗವಹಿಸಲು ರಾಯರು ತಮ್ಮ ಪತ್ನಿಯ ಜೊತೆ ವಿಶಾಖಪಟ್ಟಣಂನಿಂದ ಜನ್ಮಭೂಮಿ ರೈಲನ್ನು ಬೆಳ್ಳಂಬೆಳಗ್ಗೆ ಹತ್ತುತ್ತಾರೆ. ಬೆಳ್ಳಬೆಳಿಗ್ಗೆ ಎದ್ದಿದ್ದು ಮತ್ತು ಮುಂಜಾನೆಯ ತಂಗಾಳಿಯು ಬೀಸುತಿದ್ದರಿಂದ ಹಾಗೇ ಜೊಂಪು ಹತ್ತಿದ್ದೇ ಗೊತ್ತಾಗದೇ ರೈಲು ಟುನಿ ನಿಲ್ದಾಣದಲ್ಲಿ ಟೀ.. ಚಾಯ್… ಕಾಪೀ.. ಕಾಪೀ… ಎಂದು ಕಾಫೀ ಮಾರಿಕೊಂಡು ಬಂದ ವ್ಯಾಪಾರಿಯ ಶಬ್ಧದಿಂದಾಗಿ ಎಚ್ಚರವಾಗಿ ಎರಡು ಕಪ್ ಕಾಫಿ ಕೊಡಪ್ಪಾ ಎಂದು ಕೇಳಿ ಪಡೆಯುತ್ತಾರೆ. ಒಂದು ಕಪ್ಪನ್ನು ತಮ್ಮ ಮಡದಿಗೆ ಕೊಟ್ಟು ಮತ್ತೊಂದು ಕಪ್ಪಿನ‌ ಕಾಫಿಯ… Read More ಟೀ.. ಚಾಯ್… ಕಾಪೀ.. ಕಾಪೀ…