ಗುಜರಾತಿ ಥೇಪ್ಲ

ಪ್ರತೀ ದಿನ ಬೆಳಿಗ್ಗೆ ಅದೇ ರೊಟ್ಟಿ, ಚಪಾತಿನಾ? ಎಂದು ಕೇಳುವ ಮಕ್ಕಳಿಗೆ ಯಾವ ತಿಂಡಿ ಮಾಡೋದಪ್ಪಾ ಎಂಬ ಜಿಜ್ಞಾಸೆ ಬಹುತೇಕ ಹೆಣ್ಣುಮಕ್ಕಳಿಗೆ ಕಾಡುವುದು ಸಹಜವಾಗಿದೆ. ಅಂತಹವರಿಗಾಗಿಯೇ ಆಕರ್ಷಣೀಯವಾದ, ಅಷ್ಟೇ ಪರಿಮಳಯುಕ್ತವಾದ, ಪೌಷ್ಥಿಕವಾದ, ರುಚಿಯಾದ ಮನೆಯವರೆಲ್ಲರೂ ಇನ್ನೂ ಬೇಕು ಮತ್ತಷ್ಟು ಬೇಕು ಎಂದು ಕೇಳಿ ಕೇಳಿ ತಿನ್ನುವಂತಹ ಗುಜರಾತಿ ಥೇಪ್ಲ ಮಾಡುವ ವಿಧಾನವನ್ನು ನಮ್ಮ ನಳಪಾಕದಲ್ಲಿ ತಿಳಿದುಕೊಳ್ಳೋಣ. ಥೇಪ್ಲ ತಯಾರಿಸಲು ಬೇಕಾಗುವ ಪದಾರ್ಥಗಳು ಗೋಧಿ ಹಿಟ್ಟು – 2 ಬಟ್ಟಲು ಕಡಲೇ ಹಿಟ್ಟು – 1/4 ಬಟ್ಟಲು ಅಚ್ಚ… Read More ಗುಜರಾತಿ ಥೇಪ್ಲ

ತಾಜಾ ಆಹಾರ

ಮೊನ್ನೆ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದ ಸ್ನೇಹಿತರ ಕುಟುಂಬವೊಂದನ್ನು ಎಲ್ಲಾದರೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗೋಣ ಎಂದು ಯೋಚಿಸಿ ಅವರಿಗೆ ಕರೆ ಮಾಡಿ, ಬಹಳ ವರ್ಷಗಳಿಂದ ಅಲ್ಲೇ ನೆಲೆಸಿರುವ ಕಾರಣ ನಮ್ಮ ಆಹಾರ ಪದ್ದತಿ ಅವರಿಗೆ ಹಿಡಿಸದೇ ಇರಬಹುದು ಎಂದು ಭಾವಿಸಿ, ಏನ್ ಪಾ ದೋಸ್ತಾ? ಊಟಕ್ಕೆ ಎಲ್ಲಿಗೆ ಹೋಗೋಣು? ಇಲ್ಲೇ ಹತ್ತಿರದಲ್ಲೇ ಪಿಜ್ಜಾ ಬರ್ಗರ್ ಎಲ್ಲಾ ಸಿಕ್ತೈತೀ. ಅಲ್ಲಿಗೇ ಹೋಗೋಣು ಎಂದೆ. ಕೂಡಲೇ, ಏಕಾಏಕಿ ನನ್ನ ಗೆಳೆಯ ಸಿಟ್ಟಾಗಿ  ಯಾಕಪ್ಪಾ ದೋಸ್ತಾ? ನಾವ್ ಆರಾಮ್ ಆಗಿ ಇರೋದ್… Read More ತಾಜಾ ಆಹಾರ

ಎಲ್ಲರಂತಲ್ಲ ನನ್ನ ಮಕ್ಕಳು

ಅರೇ! ಇದೇನಿದು ಈ ರೀತಿಯ ಶೀರ್ಷಿಕೆ? ನಿಮ್ಮ ಮಕ್ಕಳು ಅದೇನು ಅಷ್ಟು ದೊಡ್ಡ ಸಾಧಕರೇ? ಎಂದು ಕೇಳಿದರೆ, ನಾನು ಯಾವುದೇ ಮುಚ್ಚುಮರೆ ಇಲ್ಲದೇ ಹೇಳುತ್ತೇನೆ. ಇಲ್ಲಾ ನನ್ನ ಮಕ್ಕಳು ಸರಾಸರಿಯವರು ಮತ್ತು ನಾನು ಸರಾಸರಿ ಮಕ್ಕಳ ತಂದೆ. ನನ್ನ ಮಕ್ಕಳು ಶಾಲೆಯ ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವಲ್ಲಿ ಸರಾಸರಿ. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಓಹೋ!! ಎಂದು ಹೇಳಿಕೊಳ್ಳುವಂತಿಲ್ಲದ ಸರಾಸರಿಯವರು. ಹಾಗಾದರೆ ಆವರ ವಿಶೇಷತೆಗಳೇನು? ಎಂದು ಕೇಳಿದರೆ ಸದ್ಯಕ್ಕೆ ಸಮಾಜದ ದೃಷ್ಟಿಯಲ್ಲಿ ಮತ್ತು ಶೈಕ್ಷಣಿಕವಾಗಿ ಅವರು ಅಂತಹದ್ದೇನನ್ನೂ ಸಾಧಿಸಿಲ್ಲ… Read More ಎಲ್ಲರಂತಲ್ಲ ನನ್ನ ಮಕ್ಕಳು

ಲಂಚದಲ್ಲೂ ಡಿಜಟಲೀಕರಣ

ಮೊನ್ನೆ ಇನ್ನೂ, ಮಂಗಳೂರು ಟ್ರಾಫಿಕ್ ಪೋಲಿಸರ ಬಗ್ಗೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಇದಕ್ಕೆ ಪೂರಕವಾದ ಬೆಂಗಳೂರಿನ ಯಲಹಂಕದ ಬಳಿಯ ಮತ್ತೊಂದು ಪ್ರಸಂಗಕ್ಕೆ ನೆನ್ನೆ ನಾನೇ ಸಾಕ್ಷಿಯಾಗಬೇಕಾಗಿದ್ದು ನಿಜಕ್ಕೂ ಅಸಹ್ಯಕರ ಎನಿಸಿತು. ಹಾಗಾಗಿ ಮಂಗಳೂರಿನ ಪ್ರಕರಣವನ್ನು ಯಥಾವತ್ ಹಾಗೆಯೇ ಪ್ರಕಟಿಸಿ ನಂತರ ನನಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ಮಂಗಳೂರಿನ ಪ್ರಕರಣ ಇಂದು ಸ್ಟೇಟ್ ಬ್ಯಾಂಕ್ ನಲ್ಲಿ ನಾವು ರಾಂಗ್ ಸೈಡಲ್ಲಿ (one way) ಕಾರು ಚಲಾಯಿಸಿದ್ದಕ್ಕೆ ಈ ಪೋಲಿಸ್ ಅಡ್ಡಗಟ್ಟಿ ಫೈನ್ ಕಟ್ಟಲು ಹೇಳಿದ್ರು, ರಶೀದಿ ಬೇಕಾ? ಬೆಡ್ವಾ?… Read More ಲಂಚದಲ್ಲೂ ಡಿಜಟಲೀಕರಣ

ನಂಬಿಕೆ ಮತ್ತು ಆತ್ಮವಿಶ್ವಾಸ

ಅದೊಮ್ಮೆ ಭಿಕ್ಷುಕನೊಬ್ಬ ರೈಲಿನಲ್ಲಿ ಹಾಗೆಯೇ ಭಿಕ್ಷೆ ಬೇಡುತ್ತಿರುವಾಗ ಸೂಟು ಬೂಟುಗಳನ್ನು ಧರಿಸಿದ್ದ ಒಬ್ಬ ಗಣ್ಯವ್ಯಕ್ತಿಯನ್ನು ನೋಡಿ ಈ ವ್ಯಕ್ತಿ ಬಹಳ ಶ್ರೀಮಂತನಾಗಿರಬೇಕು. ಅವನ ಬಳಿ ಬಿಕ್ಷೆ ಬೇಡಿದಲ್ಲಿ ಆತ ಖಂಡಿತವಾಗಿಯೂ ತುಂಬಾ ಹಣವನ್ನು ಕೊಡುತ್ತಾನೆ ಎಂದು ಭಾವಿಸಿ ಆ ವ್ಯಕ್ತಿಯ ಬಳಿ ಹೋಗಿ ಭಿಕ್ಷೆಯನ್ನು ಕೇಳಿದನು. ಆ ವ್ಯಕ್ತಿ ಭಿಕ್ಷುಕನನ್ನು ಒಮ್ಮೆ ಮೇಲಿಂದ ಕೆಳಗಿನವರೆಗೂ ನೋಡಿ, ನೀವು ಹೀಗೆ ಯಾವಾಗಲೂ ಜನರಿಂದ ಭಿಕ್ಷೆ ಕೇಳುತ್ತಲೇ ಇರುತ್ತೀರಿ. ಆದರೆ ನೀವು ಯಾರಿಗಾದರೂ ಏನನ್ನಾದರೂ ಒಮ್ಮೆ ನೀಡಿದ್ದೀರಾ? ಎಂದು ಕೇಳಿದರು.… Read More ನಂಬಿಕೆ ಮತ್ತು ಆತ್ಮವಿಶ್ವಾಸ

ಪಿತೃಪಕ್ಷ

ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆಯವರೆಗೂ ದೇಶಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಪಿತೃ ಪಕ್ಷದ ಔಚಿತ್ಯ, ಆಚರಣೆಗಳು ಮತ್ತು ಜನರ ನಂಬಿಕೆಗಳ ಕುರಿತಾದ ಲೇಖನ ಇದೋ ನಿಮಗಾಗಿ… Read More ಪಿತೃಪಕ್ಷ

ಡ್ರಾಪ್ ಕೊಟ್ಟವನಿಗೇ ಧರ್ಮದೇಟು

ನೆನ್ನೆ ರಾತ್ರಿಯಿಂದ ಹಿಂದೂ ವ್ಯಕ್ತಿಯೊಬ್ಬರು ಬುರ್ಕ ಧರಿಸಿದ ಮಹಿಳೆಯೊಬ್ಬರಿಗೆ ತನ್ನ ಬೈಕಿನಲ್ಲಿ ಡ್ರಾಪ್​ ಕೊಟ್ಟಿದ್ದಕ್ಕಾಗಿ ಕೆಲವು ಮತಾಂಧರ ಗುಂಪು ಧಾಳಿ ನಡೆಸಿ ಹಿಂದು ಯುವಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ಬಳಿಯ ಡೈರಿ ಸರ್ಕಲ್​ನಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಶುಕ್ರವಾರ ರಾತ್ರಿ ಆ ವ್ಯಕ್ತಿ ಮತ್ತು ಮಹಿಳೆ ಇಬ್ಬರೂ ಒಂದೇ ಬ್ಯಾಂಕಿನಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಸಹೋದ್ಯೋಗಿಯಾಗಿದ್ದು ಅದಾಗಲೇ ಸಮಯವಾಗಿದ್ದ ಕಾರಣ, ಇಬ್ಬರ ಮನೆಯೂ ಒಂದೇ… Read More ಡ್ರಾಪ್ ಕೊಟ್ಟವನಿಗೇ ಧರ್ಮದೇಟು

ನಿರೀಕ್ಷೆ

ನಮಗೆಲ್ಲರಿಗೂ ತಿಳಿದಿರುವಂತೆ ಮಹಾಭಾರತದಲ್ಲಿ ಉತ್ತಮ ಗುರು ಶಿಷ್ಯರು ಅಥವಾ ಪರಮಾಪ್ತ ಸ್ನೇಹಿತರು ಯಾರು? ಎಂದು ಕೇಳಿದರೆ ಎಲ್ಲರೂ ಥಟ್ ಅಂತಾ ಹೇಳುವುದು ಕೃಷ್ಣಾ ಮತ್ತು ಅರ್ಜುನ ಜೋಡಿಯನ್ನೇ. ಅದೇ ರೀತಿ ದಾನ ಶೂರ ಯಾರು? ಎಂದು ಕೇಳಿದ ತಕ್ಷಣ ಕರ್ಣನ ಹೆಸರೇ ಕಣ್ಣ ಮುಂದೆ ಬರುತ್ತದೆ. ಅದೊಮ್ಮೆ ಕೃಷ್ಣ ಮತ್ತು ಅರ್ಜುನ ಅರ್ಜುನರಿಬ್ಬರು  ಹೀಗೇ ಲೋಕಾಭಿರಾಮವಾಗಿ ಮಾತನಾಡುತ್ತಾ,ಕರ್ಣನನ್ನೇಕೆ ಅಪ್ರತಿಮ ದಾನಿಯೆಂದು ಏಕೆ ಪರಿಗಣಿಸಬೇಕು?  ನಮ್ಮ ಪಾಂಡವರಲ್ಲಿ ಅಂತಹವರಿಲ್ಲವೇ? ಎಂದು ಪರೋಕ್ಷವಾಗಿ ತನ್ನನ್ನೇಕೆ ಪರಿಗಣಿಸುತ್ತಿಲ್ಲ ಎಂದು ಕೇಳುತ್ತಾನೆ. ಅರ್ಜುನ… Read More ನಿರೀಕ್ಷೆ

ಕಲ್ಯಾಣ (ಹೈದರಾಬಾದ್) ಕರ್ನಾಟಕ ವಿಮೋಚನಾ ದಿನಾಚರಣೆ

ಇಡೀ ದೇಶಕ್ಕೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಾದರೆ, ಹೈದರಾಬಾದ್ ಕರ್ನಾಟಕದವರು ಮಾತ್ರಾ ಸೆಪ್ಟೆಂಬರ್ 17ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸೋದು ಏಕೇ? ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಹಿಂದಿರುವ ಆಪರೇಶನ್ ಪೋಲೋ ಕಾರ್ಯಚರಣೆಯ ಹೃದಯವಿದ್ರಾವಕ ರೋಚಕತೆ ಇದೋ ನಿಮಗಾಗಿ… Read More ಕಲ್ಯಾಣ (ಹೈದರಾಬಾದ್) ಕರ್ನಾಟಕ ವಿಮೋಚನಾ ದಿನಾಚರಣೆ