ವಿಶ್ವ ಅಂಚೆ ದಿನ

ಪ್ರತೀ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನಾಗಿ ಏಕೆ ಆಚರಿಸುತ್ತಾರೆ? ಅಂಚೇ ಚೀಟಿಗಳನ್ನು ಎಂದು ಮತ್ತು ಏಕೆ ಆರಂಭಿಸಲಾಯಿತು? ಭಾರತದಲ್ಲಿ ಯಾರು ಮತ್ತು ಎಂದು ಅಂಚೆ ವ್ಯವಸ್ಥೆಯನ್ನು ಜಾರಿಗೆ ತಂದರು ಎನ್ನುವುದರ ಜೊತೆಗೆ ನನ್ನ ವಯಕ್ತಿಕ ಜೀವನದಲ್ಲಿ ಅಂಚೆ ಕಛೇರಿಯ ಮಹತ್ವದ ಕುರಿತಾದ ರೋಚಕತೆ ಇದೋ ನಿಮಗಾಗಿ
Read More ವಿಶ್ವ ಅಂಚೆ ದಿನ

ಅಮ್ಮ, ಅಣ್ಣ, ತಂಗಿ ಮತ್ತು ಅಳಿಯನ ಅಪಸವ್ಯಗಳು

ರಾಜರ ಆಡಳಿತ ಮುಗಿದು ಪ್ರಜಾಪ್ರಭುತ್ವ ಬಂದಿದ್ದರೂ, ಮುತ್ತಾತ, ಅಜ್ಜಿ, ಅಪ್ಪಾ ಈ ದೇಶದ ಪ್ರಧಾನಿಗಳಾಗಿದ್ದರಿಂದ, ಪ್ರಧಾನಿ ಪಟ್ಟಕ್ಕೆ ನಾವೇ ವಾರಸುದಾರರು ಎನ್ನುತ್ತಾ ಮೇಲಿಂದ ಮೇಲೆ ವಿವಾದಗಳನ್ನು ಹುಟ್ಟು ಹಾಕಿ ದೇಶದಲ್ಲಿ ಅಭಧ್ರತೆಯನ್ನುಂಟು ಮಾಡುತ್ತಿರುವ ರಾಹುಲ್ ಮತ್ತು ಪ್ರಿಯಾಂಕಳ ಅಸಲಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಮ್ಮ, ಅಣ್ಣ, ತಂಗಿ ಮತ್ತು ಅಳಿಯನ ಅಪಸವ್ಯಗಳು

ಕೌದಿ (ದಟ್ಟ)

ನಮ್ಮ ಸುತ್ತಮುತ್ತಲಿನ ಸರ್ವೇಸಾಧಾರಣ ವಸ್ತುವೂ ಸಹಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೇಗೆ ನಮ್ಮ ಜೀವನದ ಶೈಲಿಯನ್ನು ಹೇಗೆ ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಈ ಕೌದಿಯೇ ಸಾಕ್ಷಿ. ಈ ಕೌದಿ ಅಥವಾ ದಟ್ಟ ಎಂದರೆ ಏನು? ಅದು ಯಾರ ಬದುಕಿನಲ್ಲಿ ಹೇಗೆ? ಯಾವ ರೀತಿಯ ಬದಲಾವಣೇಯನ್ನು ತಂದಿತು ಎನ್ನುವ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಕೌದಿ (ದಟ್ಟ)

ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಶಿಕ್ಷಣ, ಉಡುಗೆ, ತೊಡುಗೆ, ಆಹಾರ ಪದ್ದತಿ, ಆಚಾರ ವಿಚಾರ, ಜೀವನ ಶೈಲಿ ಎಲ್ಲವೂ ಬದಲಾಗಿ ಅವಿಭಕ್ತ ಕುಟುಂಬ ವಿಭಕ್ತಗಳಾಗಿ, ಐಶಾರಾಮ್ಯವಾದ ಜೀವನದ ಹಿಂದೆ ಬಿದ್ದು, ಗಂಡ ಹೆಂಡತಿ ಇಬ್ಬರೂ ಹೊರಗೆ ಸಂಪಾದನೆ ಮಾಡುವಂತಹ ಅನಿವಾರ್ಯ ಪದ್ಧತಿಯನ್ನು ರೂಢಿ ಮಾಡಿಕೊಂಡ ಪರಿಣಾಮದಿಂದಾಗಿ ಆಗಿರುವ ಈ ಹೃದಯವಿದ್ರಾವಕ ಪ್ರಸಂಗಗಳು ನಿಜಕ್ಕೂ ಎಚ್ಚರದ ಗಂಟೆಯಾಗಿದೆ.… Read More ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ನಾವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕುಲವಧು ಚಿತ್ರದಲ್ಲಿ, ಪ್ರಬುದ್ಧ ನಟಿ ಲೀಲಾವತಿಯವರ ಅಭಿನಯಿಸಿರುವ ದ. ರಾ. ಬೇಂದ್ರೆಯವರ ಈ ಕವನವನ್ನು ಕೇಳಿಯೇ ದೊಡ್ಡವರಾಗಿದ್ದೇವೆ. ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ | ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. || ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ. || ಈ ಕವನದಲ್ಲಿ ಕವಿಗಳು ಪ್ರತೀ ಫಾಲ್ಗುಣ ಮಾಸದಲ್ಲಿ ಪ್ರಕೃತಿಯಲ್ಲಿ… Read More ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ಮನೆಯಲ್ಲಿರುವ ಹಿರಿಯರು

ಅದೊಂದು ಗಂಡ, ಹೆಂಡತಿ, ಅಜ್ಜಿ ಮತ್ತು ಮೊಮ್ಮಗಳು ಇದ್ದ ಸುಂದರವಾದ ಸಂಸಾರ. ಅದೊಮ್ಮೆ ಮನೆಯವರೆಲ್ಲರೂ ವಾರಂತ್ಯದಲ್ಲಿ ಮಾಲ್ ಗೆ ಹೋಗಲು ನಿರ್ಧರಿಸಿ, ಅಮ್ಮಾ ನಾವೆಲ್ಲರೂ ಮಾಲ್ ಗೆ ಹೋಗುತ್ತಿದ್ದೇವೆ ಎಂದಾಗ, ಆ ವಯಸ್ಸಾದ ತಾಯಿ. ಸರಿ ಮಗನೇ ನೀವೆಲ್ಲರೂ ಹೋಗಿ ಬನ್ನಿ. ನನಗೆ ಕಾಲು ನೋವು ಇರುವ ಕಾರಣ ಅಲ್ಲೆಲ್ಲಾ ಅಲೆದಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅಜ್ಜಿಯ ಮಾತನ್ನು ಕೇಳಿ ನೊಂದು ಕೊಂಡ ಮೊಮ್ಮಗಳು, ಇಲ್ಲಾ ಅಜ್ಜೀ ನೀವು ಖಂಡಿತವಾಗಿಯೂ ಬರಲೇ ಬೇಕು. ನೀವು ಬಾರದೇ ಹೋದಲ್ಲಿ… Read More ಮನೆಯಲ್ಲಿರುವ ಹಿರಿಯರು

ನಾವೆಲ್ಲರೂ ಒಂದೇ..

ಕೆಲ ವರ್ಷಗಳ ಹಿಂದೆ ನಮ್ಮ ಅಜ್ಜಿಯವರು ಇನ್ನೂ ಬದುಕಿದ್ದರು. ಅದಾಗಲೇ ಅವರಿಗೆ 90+ ವರ್ಷಗಳಷ್ಟು ವಯಸ್ಸಾಗಿತ್ತು. ಸುಮಾರು 80+ ವರ್ಷಗಳ ಕಾಲ ಬಹಳ ಸ್ವಾಭಿಮಾನಿಯಾಗಿ ತನ್ನೆಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತಾ ನಮ್ಮೂರಿನಲ್ಲಿಯೇ ಇದ್ದವರನ್ನು ವಯೋಸಹಜ ಕಾರಣಗಳಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೆವು. ಮೂರು ಗಂಡು ಮಕ್ಕಳು ಇಬ್ಬರು ಹೆಣ್ಣುಮಕ್ಕಳ ಹೆಮ್ಮೆಯ ತಾಯಿ. ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದರೆ ಮೈಸೂರಿನಲ್ಲಿ ಒಬ್ಬ ಮಗ ಮತ್ತು ಶಿವಮೊಗ್ಗದಲ್ಲಿ ಮತ್ತೊಬ್ಬ ಮಗಳಿದ್ದ ಕಾರಣ, ಅಂತಹ ಇಳೀ ವಯಸ್ಸಿನಲ್ಲಿಯೂ ಸ್ವತಃ ಅವರೇ… Read More ನಾವೆಲ್ಲರೂ ಒಂದೇ..

ವರ್ಕ್ ಫ್ರಂ ಹೋಮ್

ಶಂಕರ ದೂರದ  ಹಾಸನದ ಜಿಲ್ಲೆಯ ಸಣ್ಣದೊಂದು ಗ್ರಾಮದಲ್ಲಿ ಹುಟ್ಟಿ ಅಲ್ಲಿಯೇ ತನ್ನ ವಿದ್ಯಾಭ್ಯಾಸವನ್ನೆಲ್ಲವನ್ನೂ ಮುಗಿಸಿದವ. ಇದ್ದ ಸಣ್ಣ ಸಾಗುವಳಿ ಅವರ ಜೀವನಕ್ಕೆ ಸಾಲುತ್ತಿರಲಿಲ್ಲವಾದ್ದರಿಂದ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು  ಅರಂಭದಲ್ಲಿ  ಅವರಿವರ ಕೈಕಾಲು ಹಿಡಿದು ಸಣ್ಣ ಕಂಪನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡು ನಂತರ ತನ್ನ ಸ್ವಸಾಮರ್ಥ್ಯದಿಂದ ಬೇಗನೇ ಮೇಲೆ ಬಂದು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಐದಂಕಿಯ ಸಂಬಳ ಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಾನೆ. ಬದುಕಿನಲ್ಲಿ ಎಷ್ಟೇ ಮೇಲಕ್ಕೆ ಏರಿದ್ದರೂ  ತನ್ನ ಹುಟ್ಟೂರು ತಂದೆ ತಾಯಿ, ತಾತಾ ಅಜ್ಜಿಯರನ್ನು ಮರೆಯದ ಶಂಕರ… Read More ವರ್ಕ್ ಫ್ರಂ ಹೋಮ್

ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ

ಸಾಮ್ಯಾನ್ಯವಾಗಿ ನಮ್ಮ ಹಿಂದಿನ ಕಾಲದವರು ಈಗಿನಷ್ಟು ಆರ್ಥಿಕವಾಗಿ ಸಧೃಡರಿಲ್ಲದಿದ್ದರೂ, ಸರಿಯಾಗಿ ಎರಡು ಹೊತ್ತು ಊಟ ಮಾಡಲು ಇರುತ್ತಿರದಿದ್ದರೂ, ಯಾವುದೇ ರೋಗ ರುಜಿನಗಳಿಲ್ಲದೇ ಆರಾಮವಾಗಿ 80-90 ವರ್ಷಗಳು ಜೀವಿಸುತ್ತಿದ್ದರು. ಅದೆಷ್ಟೋ ಜನ ಶತಾಯುಷಿಗಳಾಗಿಯೂ ಜೀವಿಸಿದ್ದರು. ಅವರ ನೆನಪಿನ ಶಕ್ತಿಯಂತೂ ಕೇಳುವುದೇ ಬೇಡ. ಹಾಗಾಗಿಯೇ ಸುಲಭವಾಗಿ ಐದಾರು ತಲೆಮಾರುಗಳನ್ನು ಸುಲಭವಾಗಿ ನೋಡಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಮಾಯವಾಗಿದೆ. 20-30 ವರ್ಷಕ್ಕೇ ಕೂದಲೆಲ್ಲಾ ಬೆಳ್ಳಾಗಾಗಿ ಅದೆಷ್ಟೋ ಮಂದಿಗಳಿಗೆ ಕೂದಲೆಲ್ಲ ಉದುರಿ ಹೋಗಿ, ಹತ್ತಾರು ರೀತಿಯ ಖಾಯಿಲೆಗಳಿಗೆ ತುತ್ತಾಗಿ ಊಟಕ್ಕಿಂತಲೂ ಹೆಚ್ಚಾಗಿ… Read More ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ