ಉಮಾ

ಆಗಷ್ಟೇ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿತ್ತು. ಕೆ.ಜಿ.ಎಫ್ ನಲ್ಲಿದ್ದ  ಅಂದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಾಜಾರಾವ್ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಸತವಾಗಿ ಏಳು ಗಂಡು ಮಕ್ಕಳ (ಅರು ಮಕ್ಕಳು ಹುಟ್ಟಿದ ಕೆಲವೇ ತಿಂಗಳುಗಳಲ್ಲಿ ಅಳಿದು ಹೋಗಿದ್ದವು) ನಂತರ ಅವರ  ಮನೆಯಲ್ಲಿ ಮೊತ್ತ ಮೊದಲಬಾರಿಗೆ  ಮಹಾಲಕ್ಷ್ಮಿಯ ಜನನವಾಗಿತ್ತು.  ರಾಯರ ಮನೆ ದೇವರು ಮೇಲುಕೋಟೆ ಯೋಗಾನರಸಿಂಹನಾಗಿದ್ದ ಕಾರಣ,  ಅವರಿಗೆ ತಮ್ಮ ಮಗಳ ಹೆಸರು  ಲಕ್ಷ್ಮಿಯ ಹೆಸರಿಡಬೇಕು ಎಂದಿತ್ತು. ಆದರೆ ಅವರ ಮಡದಿ ವಿಶಾಲಾಕ್ಷಿ ಅವರ ತಾಯಿಯವರು ತಮ್ಮ ಮನೆ ದೇವರು … Read More ಉಮಾ

ಹನುಮ ವರ್ಧಂತಿ

ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಪ್ರಭು ಶ್ರೀರಾಮನ ಪರಮ ಭಕ್ತ, ಅಂಜನಿಯ ಪುತ್ರ ಆಂಜನೇಯನು ಹುಟ್ಟಿದ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಈ ದಿನವನ್ನು ದೇಶಾದ್ಯಂತ ಹನುಮ ಜಯಂತಿ ಎಂದು ಆಚರಿಸುವಾಗ, ಇದೇನಿದು ಹನುಮ ವರ್ಧಂತಿ? ಎಂದು ಯೋಚಿಸುತ್ತಿರುವವರಿಗೆ ಇದೋ ಇಲ್ಲಿದೆ ಉತ್ತರ… Read More ಹನುಮ ವರ್ಧಂತಿ

ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್

ಮೈಸೂರು ಸಂಸ್ಥಾನದ ಯದುವಂಶದ 25ನೆಯ ಮತ್ತು ಕಟ್ಟ ಕಡೆಯ ಮಹಾರಾಜರಾಗಿ ರಾಜಕೀಯ, ಸಾಮಾಜಿಕ, ಸಾಹಿತ್ಯ ಮತ್ತು ಲಲಿತಕಲೆ ಎಲ್ಲದರಲ್ಲೂ ಅಗ್ರಗಣ್ಯರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್

ಶ್ರೀ ಆಲೂರು ವೆಂಕಟರಾಯರು

ವಕೀಲರಾಗಿ, ಸಾಹಿತಿಗಳಾಗಿ, ಪತ್ರಿಕಾ ಸಂಪಾದಕರಾಗಿ, ಪ್ರಕಾಶಕರಾಗಿ, ಅನೇಕ ಸಂಘ ಸಂಸ್ಥೆಗಳ ಸಂಸ್ಕಾಪಕರಾಗಿ, ಸಂಘಟಿಕರಾಗಿ, ಸಂಶೋಧಕರಾಗಿ, ಸ್ವಾತಂತ್ಯ್ರ ಹೋರಾಟಗಾರರಾಗಿ ಒಟ್ಟಿನಲ್ಲಿ *ಆಡು ಮುಟ್ಟದ ಸೊಪ್ಪಿಲ್ಲ ಆಲೂರು ವೆಂಟರಾಯರು* ಮಾಡದ ಕೆಲಸವಿಲ್ಲ ಎಂಬಂತೆ ಕರ್ನಾಟಕದ ಏಕೀಕರಣಕ್ಕೆ ಅಹಿರ್ನಿಶಿಯಾಗಿ ದುಡಿದ ಕನ್ನಡದ ಕುಲಪುರೋಹಿತರ ಜಯಂತಿಯಂದು ಅವರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವೇ ಸರಿ… Read More ಶ್ರೀ ಆಲೂರು ವೆಂಕಟರಾಯರು

ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ, ಸಂತಾನ ವೇಣುಗೋಪಾಲಸ್ವಾಮಿ, ಹೆಮ್ಮರಗಾಲ

ನಂಜನಗೂಡು ಮತ್ತು ಚಾಮರಾಜ ನಗರದ ಮಧ್ಯೆ ಇರುವ ಬದವನವಾಳು ಗ್ರಾಮದಿಂದ ಕೇವಲ 5 ಕಿಮೀ ದೂರದಲ್ಲಿರುವ ಪುರಾಣ ಪ್ರಸಿದ್ಧವಾದ ಹೆಮ್ಮರಗಾಲದ ಸ್ಥಳ ಪುರಾಣ ಮತ್ತು ಅಲ್ಲಿನ ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ವೈಶಿಷ್ಟ್ಯತೆಗಳು ಮತ್ತು ಸ್ವಾಮಿಯ ಪವಾಡಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಶ್ರೀ ಕೌಂಡಿನ್ಯ ಮಹರ್ಷಿ ಕ್ಷೇತ್ರ, ಸಂತಾನ ವೇಣುಗೋಪಾಲಸ್ವಾಮಿ, ಹೆಮ್ಮರಗಾಲ

ನಾನು ಅಪ್ಪನಾದ ಮಧುರ ಕ್ಷಣ

ಭಾರತದಂತಹ ಪುಣ್ಯಭೂಮಿಯಲ್ಲಿ ಹುಟ್ಟುವುದಕ್ಕೇ ಪುಣ್ಯ ಮಾಡಿರ ಬೇಕು. ಇನ್ನು ಕಾಲ ಕ್ರಮೇಣ ದೊಡ್ಡವರಾಗುತ್ತಿದ್ದಂತೆಯೇ, ಅವರೇ ಅಪ್ಪಾ, ಅಮ್ಮಾ ಇಲ್ಲವೇ ತಾತ ಮತ್ತು ಅಜ್ಜಿಯರಾಗಿ ಭಡ್ತಿ ಪಡೆಯುವ ಅನುಭವವಂತೂ ನಿಜಕ್ಕೂ ಅದ್ಭುತ ಮತ್ತು ಅವರ್ಣನೀಯವೇ ಸರಿ.

ಇನ್ನು ನಿಮ್ಮವನೇ ಉಮಾಸುತದಿಂದ ಸೃಷ್ಟಿಕರ್ತ ಉಮಾಸುತ ಎಂಬ ಅಡಿಬರಹ ಬರೆಯಲು ಕಾರಣವೇನು? ಎಂಬೆಲ್ಲಾ ಕುತೂಹಲಕ್ಕೆ ಇಲ್ಲಿದೇ ಉತ್ತರ.… Read More ನಾನು ಅಪ್ಪನಾದ ಮಧುರ ಕ್ಷಣ