ತಂಗಲಾನ್ ಎಂಬ ಹಸೀ ಸುಳ್ಳಿನ ಸಿನೆಮಾ

ಭಾರತ ವಿರೋಧಿ ಮನಸ್ಥಿತಿ, ತಮ್ಮ ಸೈದ್ಧಾಂತಿಕ ನಿಲುವು ಮತ್ತು ದುಡ್ಡು ಮತ್ತು ಪ್ರಶಸ್ತಿಯ ತೆವಲಿಗಾಗಿ ಇಲ್ಲ ಸಲ್ಲದ ಸುಳ್ಳು ಇತಿಹಾಸವನ್ನೇ ವೈಭವೀಕರಿಸಿ ಮುಂದಿನ‌‌ ಪೀಳಿಗೆಗೆ ಹಸೀ ಸುಳ್ಳು ಇತಿಹಾಸವನ್ನೇ ತಮ್ಮ ಚಿತ್ರಗಳ ಮೂಲಕ ತೋರಿಸುವವರಿಗೆ ಧಿಕ್ಕಾರವಿರಲಿ. … Read More ತಂಗಲಾನ್ ಎಂಬ ಹಸೀ ಸುಳ್ಳಿನ ಸಿನೆಮಾ

ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

ಬಾಲ್ಯದಲ್ಲಿ ಸಣ್ಣ ಮಕ್ಕಳಿಗೆ ಅವರ ಅಪ್ಪಾ ಹೀರೋ ಎನಿಸಿದರೆ, ನನಗೆ ಮಾತ್ರಾ ನನ್ನ ಸೋದರ ಮಾವ ಚೆಲುವಣ್ಣಾ ಮಾವನೇ ಹೀರೋ. ಮೊನೆ ತಾನೇ ತಮ್ಮ 83ನೇ ವರ್ಷ ಹುಟ್ಟು ಆಚರಿಸಿಕೊಂಡು 2 ದಿನ ಕಳೆಯುತ್ತಿದ್ದಂತೆಯೇ ಗುರುವಾರ, 09.03.2023ರಂದು ನಮ್ಮನ್ನಗಲಿರುವುದು ದಃಖಕರವಾದ ಸಂಗತಿಯಾಗಿದೆ.

ಹುಟ್ಟೂ ಸಾವು ಎರಡರ ಮಧ್ಯೆ ಆ ಮೂರು ದಿನದ ಬಾಳಿನಲ್ಲಿ ಆವರೇಕೆ ನನಗೆ ಹೀರೋ ಎನಿಸಿದ್ದರು? ನನ್ನ ಮತ್ತು ಅವರ ಮಧುರ ಬಾಂಧವ್ಯ ಹೇಗಿತ್ತು? ಎಂಬ ಹೃದಯಸ್ಪರ್ಶಿ ಕಥನ ಇದೋ ನಿಮಗಾಗಿ … Read More ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

ಅನಂತನಾಗ್

ಕೇವಲ ಕನ್ನಡ ಚಿತ್ರವಲ್ಲದೇ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲೀಷ್ ಚಿತ್ರಗಳಲ್ಲಿ ನಟಿಸುವ ಮೂಲಕ ಸಪ್ತ ಭಾಷಾ ನಟರಾಗಿರುವ, ಈ ನಾಡಿನ ಅತ್ಯಂತ ಸುರದ್ರೂಪಿ, ಪ್ರತಿಭಾನ್ವಿತ ಮತ್ತು ಪ್ರಬುದ್ಧ ನಟನಾಗಿರುವ ಅನಂತ್ ನಾಗ್ ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆಗೆ ಅವರ ಅಪರೂಪದ ಸಾಧನೆಗಳನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಅನಂತನಾಗ್

ಕನ್ನಡ ಚಿತ್ರರಂಗ ಅಂದು ಇಂದು

ಕನ್ನಡದ ಮೊದಲ ಟಾಕೀ ಸಿನಿಮಾ ಸತಿ ಸುಲೋಚನದಿಂದ ಹಿಡಿದು ಇಂದಿನ ಕಾಂತಾರ ಮತ್ತು ಹೆಡ್ ಬುಷ್ ವರೆಗೂ ಕನ್ನಡ ಚಿತ್ರರಂಗ ಬೆಳೆದು ಬಂದ ದಾರಿಯ ಜೊತೆ ಅಂದಿನ ನಿರ್ದೇಶಕರು/ನಟರಿಗೂ ಇಂದಿನ ನಿರ್ದೇಶಕರು/ನಟರಿಗೂ ಇರುವ ವ್ಯತ್ಯಾಸದ ಕುರಿತಾದ ಒಂದು ವಸ್ತುನಿಷ್ಠ ವಿಶ್ಲೇಷಣೆ ಇದೋ ನಿಮಗಾಗಿ.… Read More ಕನ್ನಡ ಚಿತ್ರರಂಗ ಅಂದು ಇಂದು

ಮದುವೆಯ ಈ ಬಂಧ ಅನುರಾಗದ ಅನುಬಂಧ

ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಒಗ್ಗೂಡಿಸುವಿಕೆಯಲ್ಲದೇ ಅದು ಆ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ ಆ ಎರಡೂ ಕುಟುಂಬಗಳ ಮುಂದಿನ ಗುಣ ನಡುವಳಿಕೆಗಳನ್ನು ಮುಂದಿನ ತಲಮಾರಿಗೂ ಮುಂದುವರೆಸಿಕೊಂಡು ಹೋಗುವ ಸುಂದರವಾದ ಸಂದರ್ಭವಾಗಿದೆ. ಮದುವೆ ಎನ್ನುವುದು ಉಚ್ಚರಿಸಲು ಕೇವಲ ಮೂರೇ ಅಕ್ಷರಗಳಾದರೂ ಅದರ ಹಿಂದಿರುವ ಕಷ್ಟವನ್ನು ಅರಿತೇ ಮದುವೇ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುವ ಗಾದೆಯನ್ನೇ ನಮ್ಮ ಹಿರಿಯರು ಮಾಡಿದ್ದಾರೆ. ಸುಮಾರು ವರ್ಷಗಳ ಹಿಂದೇ ಇದೇ ದಿನ ಎಲ್ಲಾ ಎಡರು ತೊಡರುಗಳನ್ನೂ ಮೀರಿ… Read More ಮದುವೆಯ ಈ ಬಂಧ ಅನುರಾಗದ ಅನುಬಂಧ

ಅಮ್ಮನ ಮಡಿಲು

ಅಮ್ಮಾ= ಅ+ಮ+ಮ+ಆ. ಅಕ್ಕರೆಯಿಂದ , ಮಮತೆ ಮತ್ತು ಮಮಕಾರದಿಂದ, ಆರೈಕೆ ಮಾಡುವವಳೇ ಅಮ್ಮಾ. ಜಗತ್ತಿನಲ್ಲಿ ಯಾರಿಗೇ ಆಗಲಿ ಅಥವಾ ಯಾವುದಕ್ಕೇ ಆಗಲಿ ಪರ್ಯಾಯ ಸಿಗಬಹುದೇನೋ ಆದರೆ ಅಮ್ಮನಿಗೆ ಮಾತ್ರ ಪರ್ಯಾಯವೇ ಇಲ್ಲಾ. ಆಕೆ ಮಾತ್ರಾ ಅದ್ವಿತೀಯಳು, ಅನುಕರಣಿಯಳು, ಸದಾವಂದಿತಳು. ತಾಯಿ ಇಲ್ಲದೇ ಜಗವಿಲ್ಲಾ. ತಾಯಿ ಇಲ್ಲದೇ ನಾವಿಲ್ಲ. ಜನ್ಮ‌ ಕೊಟ್ಟ ತಾಯಿ ಮತ್ತು ಆಶ್ರಯ ನೀಡುತ್ತಿರುವ ಭೂಮಿ ತಾಯಿಗೆ ಪರ್ಯಾಯವೇ ಇಲ್ಲ‌. ಹಾಗಾಗಿ ಅವರಿಬ್ಬರೂ ಸದಾಕಾಲವೂ ಪೂಜ್ಯರು‌ ವಂದಿತರು ಮತ್ತು ಆದರಣೀಯರೇ ಸರಿ. ಒಂಭತ್ತು ತಿಂಗಳು ತನ್ನ… Read More ಅಮ್ಮನ ಮಡಿಲು

ಕರಿಯ

ಸಾಧಾರಣವಾಗಿ ಬಹುತೇಕರ ಮನೆಗಳಲ್ಲಿ ಬೆಕ್ಕು, ನಾಯಿ, ಬಿಳಿ ಇಲಿ, ಮೊಲ, ಗಿಣಿ, ಪಾರಿವಾಳ ಮುಂತಾದ ಪ್ರಾಣಿ ಪಕ್ಷಿಗಳನ್ನು ಸಾಕು ಪ್ರಾಣಿಗಳಾಗಿ ಬೆಳೆಸುವ ಪರಿಪಾಠವಿದೆ. ಅದರಲ್ಲೂ ಸ್ವಾಮಿ ಭಕ್ತಿಗೆ ಮತ್ತೊಂದು ಹೆಸರೇ ಶ್ವಾನಗಳು ಅದಕ್ಕಾಗಿಯೇ ನಾಯಿಗಳನ್ನು ಉಳಿದೆಲ್ಲಾ ಪ್ರಾಣಿಗಳಿಗಿಂತ ಹೆಚ್ಚಾಗಿಯೇ ಮನೆಗಳಲ್ಲಿ ಸಾಕುತ್ತಾರೆ. ಇತ್ತೀಚೆಗೆ ಅಪಘಾತದಲ್ಲಿ ಮಡಿದ ತನ್ನ ಮಾಲೀಕನ ಶವ ಬಿಟ್ಟು ಕದಲದ ನಾಯಿಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ (https://www.msgp.pl/0goFLOw) ಆಗಿದ್ದನು ನೋಡುತ್ತಿದ್ದಾಗ, ಬಾಲ್ಯದಲ್ಲಿ ನನ್ನ ಅಜ್ಜಿಯ ಮನೆಯ ಸಾಕು ನಾಯಿ ಕರಿಯನ ನೆನಪು… Read More ಕರಿಯ