ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು

ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ನವೆಂಬರ್ ತಿಂಗಳಾದ್ಯಂತ ಕನ್ನಡ ನಾಡಿನ ಅವಿಖ್ಯಾತ ಕಲಿಗಳನ್ನು ಪರಿಚಯಿಸುವ ಕನ್ನಡದ ಕಲಿಗಳು ಮಾಲಿಕೆಯಲ್ಲಿ, ಮೈಸೂರು ಸಂಸ್ಥಾನದ ರಾಜಪುರೋಹಿತರು, ಆಸ್ಥಾನ ಕವಿಗಳೂ ಆಗಿದ್ದಲ್ಲದೇ, ತಮ್ಮ ಸರಸ ಕವಿತೆಗಳು, ಹತ್ತಾರು ಅನುವಾದ ಕೃತಿಗಳಲ್ಲದೇ, ತಮ್ಮದೇ ಸ್ವಂತ ಕೃತಿಗಳಿಂದ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ ಪುಣ್ಯಪುರುಷರಾಗಿರುವ ಶ್ರೀ ಬಸವಪ್ಪ ಶಾಸ್ತ್ರಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು

ಭಾರ್ಗವಿ ನಾರಾಯಣ್

ಕಳೆದ ವಾರವಿನ್ನೂ (ಫೆಬ್ರವರಿ 4) ಅವರ 84ನೇ ವರ್ಷದ ಹುಟ್ಟುಹಬ್ಬಕ್ಕೆ ಭಗವಂತನ ಅನುಗ್ರಹದಿಂದ ಆಯುರಾರೋಗ್ಯ ದೊರೆತು ನಮ್ಮಂತಹವರಿಗೆ ಮಾರ್ಗದರ್ಶಕಿಯಾಗಿರಿ ಎಂದು ಹಾರೈಸಿದ್ದ ಭಾರ್ಗವಿ ನಾರಾಯಣ್ ನೆನ್ನೆ ಸಂಜೆ ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳಿದ ತಕ್ಷಣ ಥೂ.. ಜನಾ ಯಾಕೆ ಹೀಗೆ ಸುಳ್ಳು ಸುದ್ದಿ ಹರಡಿಸುತ್ತಾರಪ್ಪಾ ಎಂದು ಬೈಯ್ದಾಡುತ್ತಲೇ, ಸಾಮಾಜಿಕ ಜಾಲತಾಣದಲ್ಲಿ ನೋಡಿದಾಗ ಸುದ್ದಿ ಸುಳ್ಳಾಗಿರದೇ ಹೋದದ್ದು ನಿಜಕ್ಕೂ ಬೇಸರವನ್ನು ಮೂಡಿಸಿತು. ಭಾರ್ಗವಿಯವರು ಬೆಂಗಳೂರಿನ ಬಸವನಗುಡಿ ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿ ದಂಪತಿಗಳಿಗೆ 1938ರ ಫೆಬ್ರವರಿ 4ನೇ ತಾರೀಖಿನಂದು… Read More ಭಾರ್ಗವಿ ನಾರಾಯಣ್

ಆಟೋ ರಾಜ ಶಂಕರನಾಗ್

ಕನ್ನಡ ಚಿತ್ರರಂಗ ಕಂಡ ಅಪರೂಪದ ಮತ್ತು ಅನುರೂಪದ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಂತಹ ಶ್ರೀ ಶಂಕರ್ ನಾಗ್ ಅವರು ಸುಮಾರು ವರ್ಷಗಳ ಹಿಂದೆಯೇ ನಮ್ಮನ್ನಗಲಿದ್ದರೂ, ಇಂದಿಗೂ ತಮ್ಮ ಚಿತ್ರಗಳು, ಹಾಡು ಮತ್ತು ನೃತ್ಯಗಳ ಮೂಲಕವಲ್ಲದೇ, ಆಟೋಗಳ ಚಾಲಕರ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಮನ ಮಾಡಿದ್ದಾರೆ. 30 ಸೆಪ್ಟೆಂಬರ್ ಅವರ ಸಂಸ್ಮರಣಾ ದಿನದಿಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಿನಿಮಾಗಳ ಹೊರತಾಗಿಯೂ ಅವರ ಸಾಹಸಗಳ ಚಿತ್ರಣ ಇದೋ ನಿಮಗಾಗಿ… Read More ಆಟೋ ರಾಜ ಶಂಕರನಾಗ್

ನಾಟಕಗಳಿಗೇ ಮಾಸ್ಟರ್, ಮಾಸ್ಟರ್ ಹಿರಣ್ಣಯ್ಯ

ಅದು 1973-74ನೇ ಇಸ್ವಿಯಿರಬಹುದು. ವಾಟಾಳ್ ನಾಗರಾಜರ ಕನ್ನಡ ಹೋರಾಟದ ಉಚ್ಛ್ರಾಯ ಸ್ಥಿತಿ. ರಾಜಾಜೀನಗರದ ಬಳಿ ಅವರು ಏರ್ಪಡಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಮಾ.ಹಿರಣ್ಣಯ್ಯನವರ ನಾಟಕ ಪ್ರದರ್ಶನಕ್ಕೆ ಕರೆದುಕೊಂಡು ಹೋದ ನಮ್ಮ ತಂದೆಯವರು ಮೊತ್ತ ಮೊದಲಬಾರಿಗೆ ನನಗೆ ಶ್ರೀ ಮಾ.ಹಿರಣ್ಣಯ್ಯನವರ ಪರಿಚಯ ಮಾಡಿಸಿಕೊಟ್ಟರು. ಆನಂತರ ಪ್ರತೀ ವರ್ಷವೂ ನಮ್ಮ ಬಿಇಎಲ್ ಲಲಿತಕಲಾ ಅಕಾಡೆಮಿಯವರು ನಡೆಸುತ್ತಿದ್ದ ಬೇಸಿಗೆ ಮೇಳದಲ್ಲಿ ಹಿರಣ್ಣಯ್ಯನವರ ಒಂದಲ್ಲಾ ಒಂದು ನಾಟಕದ ಪ್ರದರ್ಶನ ಕಡ್ಡಾಯವಾಗಿದ್ದು, ಅವರ ನಾಟಕಗಳನ್ನು ನೋಡಿ ಬೆಳೆದೆ ಎಂದರೆ ತಪ್ಪಾಗಲಾರದು. ಇನ್ನು ಎಂಬತ್ತರ ದಶಕದಲ್ಲಿ ಟೇಪ್… Read More ನಾಟಕಗಳಿಗೇ ಮಾಸ್ಟರ್, ಮಾಸ್ಟರ್ ಹಿರಣ್ಣಯ್ಯ