ಅಂತರಾಷ್ಟ್ರೀಯ ಮಾತೃ ಭಾಷಾ ದಿನ

ಫೆಬ್ರವರಿ 21ನ್ನು ಅಂತರಾಷ್ಟ್ರೀಯ ಮಾತೃ ಭಾಷೆ ದಿನವನ್ನಾಗಿ ಏಕೆ ಆಚರಿಸುತ್ತಾರೆ? ಮಕ್ಕಳಿಗೆ ಮಾತೃ ಭಾಷಾ ಕಲಿಕೆ ಎಷ್ಟು ಅವಶ್ಯಕ?
ಕಲಿಯೋಕೆ ಕೋಟಿ ಭಾಷೆ ಇದ್ದರೂ, ಆಡೋಕೆ ಒಂದೇ ಭಾಷೆ, ಕನ್ನಡ.. ಕನ್ನಡ.. ಅದೂ ಕಸ್ತೂರಿ ಕನ್ನಡವೇ ಏಕಾಗಬೇಕು ಎಂಬೆಲ್ಲದರ ಕುತೂಹಕಾರಿ ಮಾಹಿತಿ ಇದೋ ನಿಮಗಾಗಿ… Read More ಅಂತರಾಷ್ಟ್ರೀಯ ಮಾತೃ ಭಾಷಾ ದಿನ

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ಪತ್ರಕರ್ತರೊಬ್ಬರು ಅಚಾನಕ್ ಆಗಿ ಅಪರೂಪ/ಅನುರೂಪದ ರಾಜಕಾರಣಿಯಾಗಿ, ಹಿರಿಯ ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಅಂತಿಮವಾಗಿ ದೇಶ ಕಂಡ ಶ್ರೇಷ್ಥ ಪ್ರಧಾನ ಮಂತ್ರಿಯಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಅವರು ದೇಶಕ್ಕೆ ನೀಡಿದ ಕೊಡುಗೆಯ ಜೊತೆಗೆ ಅವರ ಕುರಿತಾದ ವಿಶೇಷವಾದ ಮಾಹಿತಿಗಳು ಇದೋ ನಿಮಗಾಗಿ… Read More ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ಲಾಲ್ ಬಹದ್ದೂರ್ ಶಾಸ್ತ್ರಿ

ನಮ್ಮ ದೇಶದಲ್ಲಿ ಅಧಿಕಾರವನ್ನು ಕೆಲವರು ಆಯ್ಕೆ ಮುಖಾಂತರ ದಕ್ಕಿಸಿಕೊಂಡು  ಹತ್ತಾರು ವರ್ಷಗಳ ಕಾಲ ದೇಶವನ್ನು ಆಳಿದರೂ ಹೇಳಿಕೊಳ್ಳುವ ಸಾಧನೆ ಮಾಡದೇ ಹೋಗುತ್ತಾರೆ. ಇನ್ನು ಹಲವರು ಜನರಿಂದ ರಾಜತಾಂತ್ರಿಕವಾಗಿ ಆಯ್ಕೆಯಾಗಿ ಅಧಿಕಾರದಲ್ಲಿ ಕೆಲವೇ ತಿಂಗಳುಗಳ ಕಾಲ ಇದ್ದರೂ ಇಡೀ ದೇಶವೇ ನೂರಾರು ವರ್ಷಗಳ ಕಾಲ ನೆನಪಿಸಿಕೊಳ್ಳುವಂತಹ ಸಾಧನೆಯನ್ನು ಮಾಡಿ ಎಲೆಮರೆ ಕಾಯಿಯಂತೆ ಹೋಗಿಬಿಡುತ್ತಾರೆ. ಇಂದು ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ಗ್ರಿಗಳು ಎರಡನೇ ರೀತಿಯ ವ್ಯಕ್ತಿಯಾಗಿದ್ದಾರೆ. ಲಾಲ್ ಬಹದ್ದೂರ್ ಶಾಸ್ಗ್ರಿಗಳು… Read More ಲಾಲ್ ಬಹದ್ದೂರ್ ಶಾಸ್ತ್ರಿ

ಅಖಂಡ ಭಾರತದ ವಿಭಜನೆ

ಅಖಂಡ ಭಾರತದ ವಿಭಜನೆ ಎಂಬ ಶೀರ್ಷಿಕೆ ಓದಿದ ತಕ್ಷಣವೇ ನಮಗೆ ನೆನಪಾಗೋದೇ 1947ರಲ್ಲಿ ಬ್ರಿಟೀಷರು ಧರ್ಮಾಧಾರಿತವಾಗಿ ಭಾರತ ಮತ್ತು ಪಾಕೀಸ್ಥಾನದ ವಿಭಜನೆ ಮಾಡಿಹೋಗಿದ್ದೇ ನೆನಪಾಗುತ್ತದೆ. ಆದರೆ ನಿಜ ಹೇಳಬೇಕೆಂದರೆ ಬ್ರಿಟಿಷರು ಭಾರತದಿಂದ ಸಂಪೂರ್ಣವಾಗಿ ಕಾಲು ಕೀಳುವ ಮೊದಲು ಕಡೆಯ 61 ವರ್ಷಗಳಲ್ಲಿ 7 ಬಾರಿ ಭಾರತವನ್ನು ವಿಭಜನೆ ಮಾಡಿದ್ದಾರೆ. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಬ್ರಿಟಿಷರು ತಾವು ಆಳುತ್ತಿದ್ದ ಬೇರೆ ಯಾವುದೇ ರಾಷ್ಟ್ರವನ್ನು ವಿಭಜನೆ ಮಾಡದಿದ್ದರೂ, ಭಾರತವನ್ನು ಮಾತ್ರಾ ಇಷ್ಟೊಂದು ಬಾರಿ ವಿಭಜನೆ ಮಾಡುವ ಮುಖಾಂತರ ಭಾರತ ದೇಶ ಏಷ್ಯಾ… Read More ಅಖಂಡ ಭಾರತದ ವಿಭಜನೆ

ಕ್ಯಾ. ವಿಕ್ರಮ್ ಭಾತ್ರ ಎಂಬ ಅಸಲಿ ಹೀರೋ

ಇಪ್ಪತ್ತೊಂದು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ನಿವೃತ್ತ ಶಿಕ್ಷಕರೊಬ್ಬರು 07/07/2000 ದಂದು ರಕ್ಷಣಾ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದು ಅದರಲ್ಲಿ, ರಾಷ್ಟ್ರೀಯ ಭದ್ರತೆಗೆ ಯಾವುದೇ ತೊಂದರೆ ಇಲ್ಲದಿದ್ದಲ್ಲಿ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಪಡೆದ ಸ್ಥಳವನ್ನು ನಾನು ಮತ್ತು ನನ್ನ ಧರ್ಮಪತ್ನಿ ಭೇಟಿ ನೀಡಿ ನಮ್ಮ ಮಗನ ಮೊದಲ ವರ್ಷದ ಪುಣ್ಯತಿಥಿಯನ್ನು ಆಚರಿಸಲು ಅನುಮತಿ ನೀಡಬಹುದೇ? ನಿಮಗೆ ತೊಂದರೆ ಎನಿಸಿದಲ್ಲಿ ನಮ್ಮ ಕೋರಿಕೆಯನ್ನು ಹಿಂಪಡೆಯುತ್ತೇವೆ ಎಂಬುದಾಗಿ ಬರೆದಿದ್ದರು. ಇಂತಹ ಭಾವಾನಾತ್ಮಕ ಪತ್ರವನ್ನು ಓದಿದ… Read More ಕ್ಯಾ. ವಿಕ್ರಮ್ ಭಾತ್ರ ಎಂಬ ಅಸಲಿ ಹೀರೋ

ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್

ಈ ಬಾರಿ ಹುಣ್ಣಿಮೆ ಭಾನುವಾರ ಮತ್ತು ಸೋಮವಾರ ಬಂದಿದ್ದ ಕಾರಣ ಬಹುತೇಕ ಭಾರತೀಯರು ಎರಡೂ ದಿನ ಹೋಳಿ ಹಬ್ಬದ ಆಚರಣೆಯಲ್ಲಿದ್ದ ಕಾರಣವೋ ಅಥವಾ ಇಂಗ್ಲೇಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಷ್ಟ ಪಟ್ಟು ಗೆದ್ದದ್ದರ ಸಂಭ್ರಮದಲ್ಲಿ ಮಾರ್ಚ್​ 29, 2004 ರಂದು ಅಂದರೆ ಸರಿಯಾಗಿ 17 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಸ್ಪೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಪಾಕಿಸ್ತಾನದ ಮುಲ್ತಾನಿನಲ್ಲಿ ಸುಲ್ತಾನನಾಗಿ ಮೆರೆದು ಭಾರತದ ಪರ ಚೊಚ್ಚಲು ತ್ರಿಶತಕವನ್ನು ಬಾರಿಸಿ, ಪಾಕೀಸ್ಥಾನಿಗಳಿಗೆ… Read More ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್

ವಿಶ್ವಕಪ್-ಟಿ20 ರೋಚಕ ಬೋಲ್ ಔಟ್ ಪಂದ್ಯ

ಚೊಚ್ಚಲು ಟಿ20 ವಿಶ್ವಕಪ್ ಪಂದ್ಯಾವಳಿಗಳು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಉಳಿದೆಲ್ಲಾ ತಂಡಗಳಿಗೆ ಹೋಲಿಸಿದಲ್ಲಿ, ಭಾರತಕ್ಕೆ ಅಷ್ಟೇನೂ ಟಿ20 ಪಂದ್ಯಾವಳಿಗಳ ಅನುಭವವಿರಲಿಲ್ಲ. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಸಚಿನ್, ಸೌರವ್, ದ್ರಾವಿಡ್ ಅಂತಹ ಘಟಾನುಘಟಿಗಳಿಲ್ಲದೇ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಯುವಕರ ಪಡೆಯೇ ದಕ್ಷಿಣ ಆಫ್ರಿಕಾಕ್ಕೆ ಹೋಗಿತ್ತು. 2007ರ, Sep 14 ರಂದು ದರ್ಭಾನ್ ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನವನ್ನು ಎದುರಿಸುತ್ತಿತ್ತು. ಕ್ರೀಡಾಂಗಣದಲ್ಲಿ ಭಾರತೀಯರು ಮತ್ತು ಪಾಕೀಸ್ಥಾನೀಯರಿಂದಲೇ ಕಿಕ್ಕಿರಿದು ತುಂಬಿದ್ದ ಕಾರಣ ಅದೊಂದು ಭಾರತ ಮತ್ತು ಪಾಕ್ ಉಪಖಂಡದಲ್ಲಿಯೇ… Read More ವಿಶ್ವಕಪ್-ಟಿ20 ರೋಚಕ ಬೋಲ್ ಔಟ್ ಪಂದ್ಯ

ವಿಜಯ ದಿವಸ್ ಮತ್ತು ಪ್ರಹಾರ ದಿವಸ್

ಡಿಸೆಂಬರ್ 16, 1971 ನಿಜಕ್ಕೂ ನಮ್ಮ ಭಾರತದ ಮೂರೂ ಸೇನೆಗಳಿಗೆ ಅತ್ಯಂತ ಸ್ಮರಣಿಯ ದಿನ. ಇಡೀ ಪ್ರಪಂಚವೇ ನಮ್ಮ ವಿರುದ್ಧವಾಗಿದ್ದರೂ, ಸ್ವತಃ ಅಮೇರಿಕಾ ಹಿಂಬಾಗಿಲಿನಿಂದ ಪಾಕೀಸ್ಥಾನಕ್ಕೆ ಸಹಾಯ ಮಾಡುತ್ತಿದ್ದರೂ, ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳು ನಮ್ಮ ಬಳಿ ಇಲ್ಲದಿದ್ದರೂ ನಮ್ಮ ಭೂ,ವಾಯು ಮತ್ತು ಜಲ ಸೇನೆಗಳು ಜಂಟಿಯಾಗಿ ಛಲದಿಂದ ಪಾಕೀಸ್ಥಾನದ ವಿರುದ್ಧ ಜನರಲ್ ಮಾಣಿಕ್ ಷಾ ಅವರ ನೇತೃತ್ವದಲ್ಲಿ ಹೋರಾಡಿ ಸುಮಾರು 93000ಕ್ಕೂಅಧಿಕ ಪಾಕೀ ಸೈನಿಕರನ್ನು ಸೆರೆಗೈದು ಇಂದಿನ ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿ ಅಂದಿನ ಪೂರ್ವ ಪಾಕೀಸ್ಥಾನದ ಜೆನರಲ್… Read More ವಿಜಯ ದಿವಸ್ ಮತ್ತು ಪ್ರಹಾರ ದಿವಸ್