ಜನರ ದಿಕ್ಕು ತಪ್ಪಿಸುವ ಸಮಯ ಸಾಧಕತೆ

ಇನ್ನು ದಿನೇ ದಿನೇ ಹದಗೆಡುತ್ತಿರುವ ಆರೋಗ್ಯದ ಜೊತೆ, ಜಟಿಲವಾಗುತ್ತಿರುವ ಕುಟುಂಬ ಕಲಹದ ಒತ್ತಡದಲ್ಲಿ ಕುಮಾರಸ್ವಾಮಿಯವರ ಮಾನಸಿಕ ಸ್ಥಿಮಿತ ದಿನೇ ದಿನೇ ಕುಂಠಿತವಾಗುತ್ತಾ, ತಮ್ಮ ತಟ್ಟೆಯಲ್ಲೇ ದೊಡ್ಡ  ಹೆಗ್ಗಣ ಸತ್ತು ಬಿದ್ದು ನಾತ ಬೀರುತ್ತಿದ್ದರೂ,ಮತ್ತೊಬ್ಬರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಎತ್ತಿ ತೋರಿಸುವ ಮೂಲಕ ಹಾಸ್ಯಾಸ್ಪದ ವ್ಯಕ್ತಿ ಆಗ್ತಾ ಇದ್ದಾರೆ ಅಲ್ವೇ?… Read More ಜನರ ದಿಕ್ಕು ತಪ್ಪಿಸುವ ಸಮಯ ಸಾಧಕತೆ

ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ಅರೇ ಇದೇನಿದು ಇಂತಹ ವಿಲಕ್ಷಣ ಮತ್ತು ಹೃದಯವಿದ್ರಾವಕ ಶೀರ್ಷಿಕೆ ಅಂದುಕೊಳ್ತಾ ಇದ್ದೀರಾ? ಖಂಡಿತವಾಗಿಯೂ ಇದು ವಿಲಕ್ಷಣವಾಗಿರದೇ ಇಂದಿನ ಜೀವನದ ಕಠು ಸತ್ಯವಾಗಿದೆ. ಇದೇ ವಾರದಲ್ಲಿ ನಡೆದ ಎರಡು ಕರುಣಾಜನಕ ಕತೆ ಮತ್ತು ವ್ಯಥೆ ಇದೋ ನಿಮಗಾಗಿ. ಶ್ರೀಯುತ ಆಚಾರ್ ಮೂಲತಃ ಬಳ್ಳಾರಿಯ ಹೊಸಪೇಟೆಯವರು. ಸಾಕಷ್ಟು ಸ್ಥಿತಿವಂತರಾಗಿದ್ದು ಕಾರು ಬಾರು ನಡೆಸಿದ್ದವರು. ಗಂಡು ಮಕ್ಕಳಿಬ್ಬರು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ತಮ್ಮ ಬದಕನ್ನರಿಸಿ ರಾಜಧಾನಿ ಬೆಂಗಳೂರಿಗೆ ಬಂದಾಗ ನಮಗೆ ಪರಿಚಯವಾದವರು. ಮಕ್ಕಳು ತಮ್ಮ ಕಛೇರಿಯ ಮೂಲಕ ವಿದೇಶಕ್ಕೆ ಹೋಗಿ ನಂತರದ… Read More ಕಡೇಗಾಲದಲ್ಲಿ ಹೊರುವುದಕ್ಕಾದರೂ ನಾಲ್ಕು ಜನರನ್ನಾದರೂ ಸಂಪಾದಿಸಿ

ಹೇಳೋದು ಶಾಸ್ತ್ರ ತಿನ್ನೋದು ಮಾತ್ರಾ ಬದನೇಕಾಯಿ

ಅವರೊಬ್ಬರು ಹಿರಿಯ ರಾಜಕಾರಣಿಗಳು. ಬಹಳ ವರ್ಷಗಳಿಂದ ಹೋರಾಟದ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಯೆಯನ್ನು ಮೂಡಿಸಿಕೊಂಡಿದ್ದರು. ಮಾತೆತ್ತಿದ್ದರೆ, ನಾನು ಅಂಬೇಡ್ಕರ್ ಅವರ ಅನುಯಾಯಿ, ನನ್ನನ್ನು ಒಂದು ಧರ್ಮಕ್ಕೆ ಮೀಸಲಾಗಿಸ ಬೇಡಿ ನನಗೆ ನನ್ನ ಧರ್ಮ ಗ್ರಂಥಕ್ಕಿಂತಲೂ ಅಂಬೇಡ್ಕರ್ ಅವರ ಸಂವಿಧಾನವೇ ಮುಖ್ಯ ಎಂದು ಓತಪ್ರೋತವಾಗಿ ಮಾತನಾಡುತ್ತಾ, ಜನರುಗಳನ್ನು ಜಾತಿ ಮತ್ತು ಉಪಜಾತಿಗಳ ಮೂಲಕ ಒಡೆಯುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ, ಅಧಿಕಾರದಲ್ಲಿ ಇರಲೀ ಇಲ್ಲದಿರಲೀ ಅತ್ಯುನ್ನತ ಅಧಿಕಾರವನ್ನು ಪಡೆಯುವುದರಲ್ಲಿ ಸಫಲರಾಗಿದ್ದರು. ಇನ್ನು ವಯಕ್ತಿಕವಾಗಿ ಹೇಳಬೇಕೆಂದರೆ, ತಮ್ಮ… Read More ಹೇಳೋದು ಶಾಸ್ತ್ರ ತಿನ್ನೋದು ಮಾತ್ರಾ ಬದನೇಕಾಯಿ

ಪಟಾ ಪಟಾ ಚೆಡ್ಡಿಗೆ ಜಟಾಪಟಿ

ಅಂದು ಶಂಕರನ ಮನೆಯಲ್ಲಿ ಅವರ ತಾತನ ಶ್ರಾದ್ಧಾಕಾರ್ಯವಿತ್ತು. ಅವರ ಮನೆಯಲ್ಲಿ ಶ್ರಾಧ್ಧ ಕಾರ್ಯವೆಂದರೆ ಅದೊಂದು ದೊಡ್ಡವರ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಎಲ್ಲಾ ಸಂಬಂಧೀಕರು ಒಟ್ಟಿಗೆ  ಅಗಲಿದ ಹಿರೀಕರ ನೆನೆಯುವ ನೆಪದಲ್ಲಿ ಒಂದುಗೂಡುವ ಸಮಾರಂಭವಾಗಿತ್ತು.  ಹಿರಿಯರು, ಕಿರಿಯರು, ನೆಂಟರು ಇಷ್ಟರು ಮತ್ತು ಬಹಳ ಆತ್ಮೀಯರೂ ಸೇರಿದಂತೆ ಸುಮಾರು 60-70 ಜನರು ಬರುತ್ತಿದ್ದ ಕಾರಣ  ಹೊತ್ತಿಗೆ ಮುಂಚೆಯೇ ಅಡುಗೆಯವರು ಮನೆಗೆ ಬಂದು  ಬೆಳಗಿನಿಂದಲೇ  ಮಡಿಯಲ್ಲಿ  ಶ್ರಾದ್ಧ ಆಡುಗೆಯ ಸಿದ್ದತೆಯಲ್ಲಿದ್ದರು.  ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಮಡಿಯ ವಾತಾವರಣ. ಚಿಕ್ಕ ಮಕ್ಕಳಿಗಂತೂ ಮನೆಯ… Read More ಪಟಾ ಪಟಾ ಚೆಡ್ಡಿಗೆ ಜಟಾಪಟಿ

ಪುರೋಹಿತರ ಪರದಾಟ

ಬಹಳ ದಿನಗಳ ತರುವಾಯು ಮಕ್ಕಳು ಮನೆಯಲ್ಲಿ ಅಮ್ಮಾ ಮಾಡುವ ರುಚಿ ರುಚಿಯ ಅಡುಗೆಯ ಹೊರತಾಗಿಯೂ ಹೊರಗಡೆ ಊಟ ಮಾಡುವ ಆಸೆ ವ್ಯಕ್ತ ಪಡಿಸಿದ ಕಾರಣ ಕಳೆದ ವಾರಾಂತ್ಯದಲ್ಲಿ ಮಡದಿ, ಮಗಳು ಮತ್ತು ಮಗನೊಂದಿಗೆ ರಾತ್ರಿ ಊಟಕ್ಕೆಂದು ಸ್ವಲ್ಪ ದೂರದ ಹೊಸಾ ಹೋಟೆಲ್ ಒಂದಕ್ಕೆ ಹೋದೆವು. ಭಾನುವಾರವಾದ್ದರಿಂದ ಹೋಟೇಲ್ ಬಹುತೇಕ ಭರ್ತಿಯಾಗಿತ್ತು ಸ್ವಲ್ಪ ಮಬ್ಬಾಗಿಯೂ ಇತ್ತು. ಹಾಗಾಗಿ ಖಾಲಿ ಇರುವ ಜಾಗವನ್ನು ಹುಡುಕುತ್ತಿದ್ದಾಗ, ಒಬ್ಬರನ್ನು ನೋಡಿದ ತಕ್ಷಣ, ಎಲ್ಲೋ ನೋಡಿದ ನೆನಪು ಆದರೆ ಸರಿಯಾಗಿ ಸ್ಮೃತಿಗೆ ಬರುತ್ತಿರಲಿಲ್ಲ. ಅವರೂ… Read More ಪುರೋಹಿತರ ಪರದಾಟ