ಬಲರಾಮ ಜಯಂತಿ

ದ್ವಾಪರ ಯುಗದ ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಕಥೆಯಾದರೂ ಇಡೀ ಮಹಾಭಾರತದಲ್ಲಿ ಶ್ರೀಕೃಷ್ಣನು ಅತ್ಯಂತ್ಯ ಪ್ರಮುಖ ಪಾತ್ರವನ್ನು ವಹಿಸಿರುತ್ತಾನೆ. ಒಂದು ರೀತಿ ಅತನೇ ಸೂತ್ರಧಾರಿಯಾಗಿ ಉಳಿದವರೆಲ್ಲರೂ ಆತ ಆಡಿಸಿಸಂತೆ ಆಡುವ ಪಾತ್ರಧಾರಿಗಳಂತೆ ಕಾಣುತ್ತಾರೆ ಎಂದರೂ ತಪ್ಪಾಗದು. ಮಹಾವಿಷ್ಣುವಿನ ದಶಾವತಾರದಲ್ಲಿ ಕೃಷ್ಣನದ್ದು 8ನೇ ಅವತಾರವಾದರೆ, ಅವರನ ಅಣ್ಣನಾಗಿ ಸದಾಕಾಲವೂ ಬೆಂಗಾವಲಾಗಿ ಬಲರಾಮನು ಇದ್ದೇ ಇರುತ್ತಾನೆ. ದೇವಕಿಯ ಅಣ್ಣ ಮತ್ತು ದುಷ್ಟ ರಾಜನಾದ ಕಂಸನಿಗೆ ಆತನ ತಂಗಿ ದೇವಕಿಯ ಎಂಟನೇ ಸಂತಾನನಿಂದಲೇ ಅಂತ್ಯವಾಗುವನೆಂಬ ಅಶರೀರವಾಣಿಯ ಮಾತನ್ನು ಕೇಳಿದ ನಂತರ ಆತ… Read More ಬಲರಾಮ ಜಯಂತಿ

ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಪ್ರಬೋಧಿನಿ ಏಕಾದಶಿಯಿಂದ ಕಾರ್ತಿಕ ಪೌರ್ಣಿಮೆಯವರೆಗೂ ಮಹಾರಾಷ್ಟ್ರದ ಪಂಡರಾಪುರದಲ್ಲಿ ಐದು ದಿನಗಳ ಕಾಲ ನಡೆಯುವ ದ್ರುಕ್ಮಿಣೀ ಮತ್ತು ಪಾಂಡುರಂಗನ ಯಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ಲಕ್ಷಾಂತರ ಯಾತ್ರಾರ್ತಿಗಳ ವಾರಕರಿ ಸೇವೆಯ ಸಮಗ್ರ ಚಿತ್ರಣ ಇದೋ ನಿಮಗಾಗಿ … Read More ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಗೀತಾ ಜಯಂತಿ

ಅದು ದ್ವಾಪರಯುಗ. ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಭಗವಾನ್ ವಿಷ್ಣುವು ಶ್ರೀ ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಅವತರಿಸುತ್ತಾನೆ. ಆತನ ಬಂಧುಗಳೇ ಆಗಿದ್ದ ಪಾಂಡವರನ್ನು ಅವರ ದೊಡ್ಡಪ್ಪನ ಮಗನೇ ಆಗಿದ್ದ ಧುರ್ಯೋಧನ ತನ್ನ ಮಾವ ಶಕುನಿಯ ಕುತ್ರಂತ್ರದಿಂದ ಪಗಡೆಯ ಆಟದಲ್ಲಿ ಸೋಲಿಸಿ ಅವರ ರಾಜ್ಯವನ್ನು ಕಿತ್ತುಕೊಂಡು  12 ವರ್ಷಗಳ ಕಾಲ ವನವಾಸ ಮತ್ತು 1 ವರ್ಷಗಳ ಕಾಲ ಅಜ್ಞಾನವಾಸವನ್ನು ಯಶಸ್ವಿಯಾಗಿ ಪೂರೈಸಿದ ನಂತರವೇ ರಾಜ್ಯವನ್ನು ಹಿಂದಿರುಗಿಸುವುದಾಗಿ ವಾಗ್ಧಾನ ಮಾಡಿರುತ್ತಾನೆ. ಒಪ್ಪಂದಂತೆ ವನವಾಸ ಮತ್ತು  ಅಜ್ಞಾತವಾಸವನ್ನು ಯಶಸ್ವಿಯಾಗಿ… Read More ಗೀತಾ ಜಯಂತಿ

ದಕ್ಷಿಣ ಕಾಶೀ ಅಂತರ ಗಂಗೆ

ಇಂದು ಈ ವರ್ಷದ  ಮೊದಲ ಕಾರ್ತೀಕ ಸೋಮವಾರ.  ಕಾರ್ತೀಕ ಸೋಮವಾರದಂದು ಶಿವನ ದರ್ಶನ ಮಾಡಿದರೆ ಅದರಲ್ಲೂ ಕಾಶೀ ವಿಶ್ವೇಶ್ವರನ ದರ್ಶನ ಮಾಡಿದಲ್ಲಿ ಹೆಚ್ಚಿನ ಪುಣ್ಯ ಲಭಿಸುತ್ತದೆ  ಎನ್ನುವುದು ಶ್ರದ್ಧಾವಂತ ಹಿಂದೂಗಳ ನಂಬಿಕೆಯಾಗಿದೆ.  ದೂರದ ಕಾಶೀಗೆ ಹೋಗಿ ಗಂಗೆಯಲ್ಲಿ ಮಿಂದು ಕಾಶೀ ವಿಶ್ವೇಶ್ವರನ ದರ್ಶನದ ಭಾಗ್ಯ ಪಡೆಯಲು ಸಾಧ್ಯವಿಲ್ಲದವರು, ಇಲ್ಲೇ ಬೆಂಗಳೂರಿಗೆ ಹತ್ತಿರವಿರುವ ದಕ್ಷಿಣ ಕಾಶಿ ಪುಣ್ಯಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಅಂತರಗಂಗೆಯಲ್ಲಿ  ಮಿಂದು ಕುಳಿತಲ್ಲಿಂದಲೇ ಕಾಶೀ ವಿಶ್ವೇಶ್ವರನ ದರ್ಶನ ಪಡೆಯೋಣ ಬನ್ನಿ ನಮಗೆಲ್ಲರಿಗೂ ತಿಳಿದಿರುವಂತೆ ಕೋಲಾರ  ಚಿನ್ನದ ಬೀಡು.… Read More ದಕ್ಷಿಣ ಕಾಶೀ ಅಂತರ ಗಂಗೆ

ಜಾಂಬವಂತನ ಗುಹೆ, ಪೋರ್ ಬಂದರ್

ತ್ರೇತಾಯುಗದಲ್ಲಿ ನಡೆದ ರಾಮಾಯಣ ಮತ್ತು ದ್ವಾಪರಯುಗದಲ್ಲಿ ನಡೆದ ಮಹಾಭಾರತ ಈ ಕಲಿಯುಗದಲ್ಲಿಯೂ ನಮ್ಮ ಶ್ರದ್ಧೇಯ ಮಹಾಕಾವ್ಯಗಳು . ಭಗವಾನ್ ವಿಷ್ಣುವಿನ ದಶಾವತಾರದ ಅಂಗವಾಗಿ ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಮನುಷ್ಯ ರೂಪದಲ್ಲಿ ಈ ಭೂಮಿಯ ಮೇಲೆ ಅವತಾರವೆತ್ತಿದ್ದ ಪ್ರಭು ಶ್ರೀ ರಾಮ ಮತ್ತು ಶ್ರೀ ಕೃಷ್ಣನನ್ನು ಇಂದಿಗೂ ನಾವು ದೇವರಂತೆ ಪೂಜಿಸುತ್ತೇವೆ. ಆದರೆ ಕೆಲವು ಸ್ವಘೋಷಿತ ಬುದ್ಧಿ ಜೀವಿಗಳು ಮತ್ತು ಹಿಂದೂ ವಿರೋಧಿ ಶಕ್ತಿಗಳು ರಾಮಾಯಣ ಮತ್ತು ಮಹಾಭಾರತ ಎನ್ನುವುದು ನಡೆದೇ ಇಲ್ಲ. ಅದೊಂದು ಕಾಲ್ಪನಿಕ… Read More ಜಾಂಬವಂತನ ಗುಹೆ, ಪೋರ್ ಬಂದರ್

ಹಿತಚಿಂತಕರು ಮತ್ತು ಹಿತಶತ್ರುಗಳು

ಮನುಷ್ಯ ಸಂಘ ಜೀವಿ ಮತ್ತು ಭಾವುಕ ಜೀವಿಯೂ ಹೌದು. ಹಾಗಾಗಿ ಆತ ಕಾಲ ಕಾಲಕ್ಕೆ ತನ್ನ ಮನಸ್ಸಿನಲ್ಲಾಗುವ ತುಮುಲಗಳನ್ನು ಮತ್ತು ಭಾವನೆಗಳನ್ನು ಮತ್ತೊಬ್ಬರ ಹತ್ತಿರ ಹಂಚಿಕೊಳ್ಳುವ ಮೂಲಕ ನಿರಾಳನಾಗುತ್ತಾನೆ. ಹಾಗಾಗಿಯೇ ಮನುಷ್ಯರು ಸದಾಕಾಲವೂ ಉತ್ತಮ ಗುರುಗಳು, ಸ್ನೇಹಿತರು ಮತ್ತು ಸಂಗಾತಿಯ ಅನ್ವೇಷಣೆಯಲ್ಲಿದ್ದು, ಒಮ್ಮೆ ತಮ್ಮ ಅಭಿರುಚಿಗೆ ತಕ್ಕಂತಹವರು ಸಿಕ್ಕ ಕೂಡಲೇ ತಮ್ಮ ಜೀವನದ ಗುಟ್ಟು ರಟ್ಟುಗಳನ್ನೆಲ್ಲಾ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವುದಕ್ಕೆ ಪ್ರಮುಖ ಕಾರಣ ತಮ್ಮ ಗೆಳೆಯ ಈ ಎಲ್ಲಾ ಗೌಪ್ಯತೆಯನ್ನು ಕಾಪಾಡುತ್ತಾನೆ ಮತ್ತು… Read More ಹಿತಚಿಂತಕರು ಮತ್ತು ಹಿತಶತ್ರುಗಳು

ಶ್ರೀ ಕೃಷ್ಣನ ತಂಗಿ ಯೋಗಮಾಯ

ಉಗ್ರಸೇನ ಎಂಬ ಪರೋಪಕಾರಿ ರಾಜನು ಮಥುರಾ ರಾಜ್ಯವನ್ನು ಆಳುತ್ತಿರಲು ಅತನ ಮಗನಾದ ಕಂಸನೇ ತನ್ನ ತಂದೆಯಿಂದ ಸಿಂಹಾಸನವನ್ನು ಕಸಿದುಕೊಂಡಿದ್ದಲ್ಲದೇ ಪ್ರಜಾಪೀಡಿತನಾಗಿದ್ದ. ಈತನ ದಬ್ಬಾಳಿಕೆಯನ್ನು ಹೇಗಾದರೂ ಪರಿಹಸಲೇ ಬೇಕೆಂದು ಜನ ಭಗವಂತನಲ್ಲಿ ಮೊರೆ ಹೋದಾಗ ಈತನನ್ನು ಸಂಹರಿಸಲು ಸಾಕ್ಷಾತ್ ವಿಷ್ಣು, ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಜನ್ಮ ತಳೆಯುವುದಾಗಿ ಭರವಸೆ ಕೊಟ್ಟಿದ್ದಲ್ಲದೇ, ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿಯೇ ಮಹಾ ವಿಷ್ಣು ಕೃಷ್ಣನಾಗಿ ಭೂಮಿಗೆ ಬರುವ ಮೊದಲು ವಿಷ್ಣುವಿನ ಆಸನವಾದ ಆದಿಶೇಷನು ವಾಸುದೇವ ಮತ್ತು ರೋಹಿಣಿ ದಂಪತಿಗಳಿಗೆ ಬಲರಾಮನ… Read More ಶ್ರೀ ಕೃಷ್ಣನ ತಂಗಿ ಯೋಗಮಾಯ

ಗೆಳೆತನ (Friendship)

ನಮ್ಮೆಲ್ಲರ ನಿತ್ಯ ಜೀವನದಲ್ಲಿ ಗೆಳೆತನ (friendship) ಎಂಬುದು ಬಹಳ ಮುಖ್ಯ ಪಾತ್ರವಹಿಸುತ್ತದೆ. ಗೆಳೆತನ ಸರಿಯಾಗಿದ್ದಲ್ಲಿ ಎಲ್ಲವೂ ಸುಖಃಮಯವಾಗಿರುತ್ತದೆ. ಅಕಸ್ಮಾತ್ ಗೆಳೆತನದಲ್ಲಿ ಒಂದು ಚೂರು ವೆತ್ಯಾಸವಾದರೂ ಅದು ಘನ ಘೋರ ಪರಿಣಾಮವನ್ನು ಬೀರುತ್ತದೆ. ಮೇಲೆ ತೋರಿಸಿರುವ ಚಿತ್ರವನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೇ, ಹುಡುಗಿಯೊಬ್ಬಳು ಅಪಾಯಕ್ಕೆ ಸಿಲುಕಿದ್ದಾಳೆ. ಅವಳನ್ನು ರಕ್ಷಿಸಲು ಒಬ್ಬ ಹುಡುಗ ಪ್ರಯತ್ನಿಸುತ್ತಿದ್ದಾನೆ. ತಾನು ಕೈಹಿಡಿದು ಮೇಲೆ ಎತ್ತುತ್ತಿರುವ ಹುಡುಗಿಗೆ ಹಾವು ಕಚ್ಚುತ್ತಿದೆ ಎಂದು ಆ ಹುಡುಗನಿಗೆ ತಿಳಿದಿಲ್ಲ. ಅದೇ ರೀತಿ ತನ್ನನ್ನು ರಕ್ಷಿಸುತ್ತಿರುವ ಹುಡುಗನ ಬೆನ್ನ ಮೇಲೆ ದೊಡ್ಡದಾದ… Read More ಗೆಳೆತನ (Friendship)