ದೇಶದಲ್ಲಿ ಎಲ್ಲೇ ಉಗ್ರರ ದಾಳಿಗಳಾಗಿ ಆ ಭಯೋತ್ಪಾದನಾ ಚಟುವಟಿಕೆಯ ಹಿಂದೆ ಮುಸ್ಲಿಂ ಮತಾಂದರು ಇದ್ದಾರೆ ಅಂತಾ ಗೊತ್ತಾಗ್ತಾ ಇದ್ದಂತೆಯೇ, ನಮ್ಮ ದೇಶದಲ್ಲಿನ ಸ್ವಘೋಷಿತ ಬುದ್ದಿ ಜೀವಿಗಳು, ಎಡಬಿಡಂಗಿ ಜಾತ್ಯಾತೀತರು, ಎಡಚರರು ಮತ್ತು ಅವರನ್ನು ಸಮರ್ಥನೆ ಮಾಡುವ ಮಾಧ್ಯಮವರು ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮದಲ್ಲಿಯೂ ಗಂಟಲು ಹರಿಯುವಂತೆ ಭಯೋತ್ಪಾದನೆಗೆ ಧರ್ಮ ಇಲ್ಲಾ.. ಯಾರೋ ಒಂದಿಬ್ಬರು ಮಾಡುವ ಕುಕೃತ್ಯಕ್ಕೆ ಇಡೀ ಧರ್ಮವನ್ನೇ ದೂಷಿಸಲಾಗದು ಎಂದು ಉದ್ದುದ್ದಾ ಭಾಷಣ ಬಿಗಿತಾರೆ. ಆದರೆ ಪ್ರತೀ ಬಾರಿ ಭಾರತದಲ್ಲಿ ಆಗುವ ಕೋಮು ಸಂಘರ್ಷದ ಹಿಂದೆ ಅವರೇ ಇರ್ತಾರೆ. ಕಾಶ್ಮೀರದ ಪೆಹಲ್ಗಾಂನಲ್ಲಿ ಕಲ್ಮಾ ಹೇಳು ಎನ್ನುತ್ತಲೇ, ಪ್ಯಾಂಟ್ ಬಿಚ್ಚಿ ಧರ್ಮ ನೋಡಿ ತಮ್ಮ ಮನೆಯವರ ಮುಂದೇ ಅಮಾಯಕರನ್ನು ಹತ್ಯೆ ಮಾಡಿದ ಘಟನೆ ಆಗಿ ಸರಿಯಾಗಿ ಒಂದು ವರ್ಷ ಆಗುವಷ್ಟರಲ್ಲೇ, ಝೈಬ್ ಝುಬೇರ್ ಅನ್ಸಾರಿ ಎಂಬಾತ ಮುಂಬೈಲ್ಲಿ ಇಬ್ಬರು ಅಮಾಯಕ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕಲ್ಮಾ ಪಠಿಸಲು ಸೂಚಿಸಿ, ಅವರಿಗೆ ಬಾರದೇ ಇದ್ದದ್ದಕ್ಕಾಗಿ ಅವರಿಗೆ ಹರಿತವಾದ ಚಾಕುವಿನಿಂದ ಇರಿದು ಪರಾರಿಯಾದ ಘಟನೆ 2026ರ ಏಪ್ರಿಲ್ 28ರಂದು ಬೆಳಗಿನ ಜಾವ ಸಂಭವಿಸಿದೆ.
ಇಸ್ಲಾಂನಲ್ಲಿ ಕಲ್ಮಾ (ಅಥವಾ ಕಲಿಮಾ) ಎಂಬುದು ಅರೇಬಿಕ್ ಪದಗುಚ್ಛವಾಗಿದ್ದು, ಇದು ಇಸ್ಲಾಂ ಮೂಲಭೂತ ನಂಬಿಕೆಯ ಘೋಷಣೆಯಾಗಿ ಕಾರ್ಯನಿರ್ವಹಿಸುತ್ತದೆ. ಇಸ್ಲಾಂನಲ್ಲಿ ಆರು ಮೂಲಭೂತ ನಂಬಿಕೆಗಳನ್ನು ಒಳಗೊಂಡ ಪ್ರಾಥಮಿಕ ಕಲ್ಮಾಗಳು ಇದ್ದು ಅವು ಅಲ್ಲಾಹನ ಏಕತೆ, ಮುಹಮ್ಮದ್ (ಸ) ರ ಪ್ರವಾದಿತ್ವ, ಮತ್ತು ಪಶ್ಚಾತ್ತಾಪ, ಹೊಗಳಿಕೆ ಮತ್ತು ಅಪನಂಬಿಕೆಯನ್ನು ತಿರಸ್ಕರಿಸುವ ವಿಷಯಗಳಾಗಿವೆ. ಸರಳವಾಗಿ ಹೇಳಬೇಕೆಂದರೆ, ಕಲ್ಮಾ ಹೇಳುವ ಮೂಲಕ ತನ್ನ ಮುಸ್ಲಿಂ ಅಸ್ಮಿತೆಯನ್ನು ತೋರಿಸಿಕೊಳ್ಳುವ ವಿಧಾನವಾಗಿದೆ. ಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮಕ್ಕೆ ಸೇರುವಾಗ ಮೊದಲು ಈ ಕಲ್ಮಾವನ್ನು ಪಠಿಸಿ, ಅದರ ಮೇಲೆ ದೃಢವಾದ ನಂಬಿಕೆಯನ್ನು ಹೊಂದಬೇಕಾಗುತ್ತದೆ.
ಮುಂಬೈನ ಮುಂಬೈನ ಮೀರಾ ರೋಡಲ್ಲಿ ಇರುವ ವೋಕಾರ್ಡ್ ಆಸ್ಪತ್ರೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕಟ್ಟಡದ ಕಾಮಗಾರಿ ವಸ್ತುಗಳು, ಸಲಕರಣೆಗಳನ್ನು ನೋಡಿಕೊಳ್ಳುವ ಸಲುವಾಗಿ ಕಾವಲುಗಾರರನ್ನು ನಿಯೋಜಿಸಲಾಗಿದ್ದು, ಆ ಸ್ಥಳದಲ್ಲಿ ರಾಜ್‌ಕುಮಾರ್ ಮಿಶ್ರಾ ಹಾಗೂ ಸುಬ್ರತೋ ಸೆನ್ ಇಬ್ಬರು ಕಾವಲುಗಾರರು ರಾತ್ರಿಯ ಪಾಳಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಬೆಳಗಿನ ಜಾವ ಸರಿ ಸುಮಾರು 4 ಘಂಟೆಯ ಸಮಯದಲ್ಲಿ ಆ ಸ್ಥಳಕ್ಕೆ ಬಂದ ಸುಮಾರು 31ರ ವಯಸ್ಸಿನ ಝೈಬ್ ಝುಬೇರ್ ಅನ್ಸಾರಿ ಎಂಬಾತ, ಅಲ್ಲಿನ ಸಮೀಪದಲ್ಲಿರುವ ಮಸೀದಿಯ ವಿಳಾಸ ಕೇಳಿದ್ದಾನೆ. ಅಷ್ಟು ಹೊತ್ತಿನಲ್ಲಿ ವಿಳಾಸ ಕೇಳಿಕೊಂಡ ವ್ಯಕ್ತಿಯ ಪೂರ್ವಾಪರ ಅರಿವಿಲ್ಲದಿದ್ದ ರಾಜ್‌ಕುಮಾರ್ ಮಿಶ್ರಾ ತನಗೆ ಗೊತ್ತಿದ್ದನ್ನು ಹೇಳುತ್ತಿರುವಾಗಲೇ, ಮಧ್ಯೆ ಬಾಯಿ ಹಾಕಿರುವ ಅನ್ಸಾರಿ, ನೀನು ಹಿಂದುನಾ ಎಂದು ಕೇಳಿದ್ದಾನೆ. ಅದಕ್ಕೆ ಆತ ಹೌದು ನಾನು ಹಿಂದು ಎಂದು ಹೇಳುತ್ತಿದ್ದಂತೆಯೇ ತನ್ನ ಕಿಸೆಯಲ್ಲಿಟ್ಟುಕೊಂಡಿದ್ದ ಚಾಕುವನ್ನು ತೆಗೆದು ಕಲ್ಮಾ ಹೇಳು ಎಂದು ಆಗ್ರಹಿಸಿದ್ದಲ್ಲದೇ, ಹಿಂದೂ ಮುಂದೂ ನೋಡದೇ ಏಕಾ ಏಕಿ ರಾಜ್ ಕುಮಾರ್ ಮಿಶ್ರಾನಿಗೆ ತನ್ನ ಚಾಕುವಿನಿಂದ ಇರಿದಿದ್ದಾನೆ. ಅಚಾನಕ್ಕಾಗಿ ನಡೆದ ಈ ರೀತಿಯ ಧಾಳಿಯಿಂದ ಹಲ್ಲೆಗೊಳಗಾದ ರಾಜ್ ಕುಮಾರ್ ಮಿಶ್ರಾ ನೋವಿನಿಂದ ಜೋರಾಗಿ ಕಿರುಚಿ ಕೊಂಡಿದ್ದನ್ನು ಕೇಳಿ ಅತನ ಸಹಾಯಕ್ಕೆ ಬಂದ ಮತ್ತೊಬ್ಬ ಕಾವಲುಗಾರ ಸುಬ್ರೊತೋ ಸೇನ್ ಮೇಲೂ ಸಹಾ ಅನ್ಸಾರಿ ಚಾಕುವಿನಿಂದ ಗಂಭೀರವಾದ ಹಲ್ಲೆ ನಡೆಸಿ, ಅವರಿಬ್ಬರೂ ರಕ್ತಸಿಕ್ತರಾಗಿ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಅನ್ಸಾರಿ ಅಲ್ಲಿಂದ ಪರಾರಿ ಆಗಿದ್ದಾನೆ.
ಅಷ್ಟು ಹೊತ್ತಿನ ಸಮಯದಲ್ಲಿ ನೋವಿನಿಂದ ನರಳುತ್ತಿದ್ದ ಆ ಇಬ್ಬರೂ ತಮ್ಮ ಸಹಾಯಕ್ಕಾಗಿ ಕೂಗಿಕೊಂಡರೂ ಯಾರೂ ಅಲ್ಲಿಲ್ಲದಿದ್ದ ಕಾರಣ, ಅವರ ಕೂಗಾಟ, ಚೀರಾಟ ಎಲ್ಲವೂ ವ್ಯರ್ಥವಾಗಿ ತೀವ್ರತರನಾದ ಗಾಯ ಮತ್ತು ರಕ್ತಸ್ರಾವದಿಂದ ನಿತ್ರಾಣಗೊಂಡ ಅವರಿಬ್ಬರೂ ಸ್ಥಳದಲ್ಲೆ ಕಸಿದು ಬಿದ್ದಿದ್ದಾರೆ. ಸ್ವಲ್ಪ ಸಮಯದ ನಂತರ ಇದೇ ದಾರಿಯಲ್ಲಿ ಬಂದ ಕೆಲವು ಸ್ಥಳೀಯರು ರಕ್ತಕಾರಿಕೊಂಡು ಬಿದ್ದಿದ್ದ ಅವರಿಬ್ಬರನ್ನು ನೋಡಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ. ಆರೋಪಿಯ ಹುಡುಕಾಟ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿ ಝುಬೈರ್ ಅನ್ಸಾರಿಯನ್ನು ಬಂಧಿಸುವ ಮೂಲಕ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಮುಸಲ್ಮಾನ ವ್ಯಕ್ತಿಗಳಿಂದ ಈ ರೀತಿಯಾದ ಅಹಿತಕರ ಘಟನೆಗಳು ಅಗುತ್ತಿದ್ದಂತೆಯೇ ಅವರ ಸಮರ್ಥನೆ ಬರಲು ನೂರಾರು ಪಟ್ಟ ಭಧ್ರ ಹಿತಾಸಕ್ತಿಗಳು ಈ ದೇಶದಲ್ಲಿ ತುದಿಗಾಲಿನ ಮೇಲೆ ನಿಂತಿದ್ದು, ಅವರೆಲ್ಲರೂ ಹೇಳುವುದು ಒಂದೋ ಆತ ಅನಕ್ಷರಸ್ಥ. ಕೊಳಗೇರಿಯಲ್ಲಿ ಬೆಳೆದ ಆತನಿಗೆ ಸೂಕ್ತ ಶಿಕ್ಷಣ ಇಲ್ಲದೇ ಇರುವ ಕಾರಣ, ಈ ರೀತಿಯಾದ ಕೃತ್ಯ ನಡೆಸಿದ್ದು, ಅದಕ್ಕೆ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುವುದು ತಪ್ಪು. ಅಕಸ್ಮಾತ್ ಅರೋಪಿಯೇನಾದರೂ ಸ್ವಲ್ಪ ಸುಶಿಕ್ಷಿತನಾಗಿ ಕಂಡು ಬಂದ ಕೂಡಲೇ ಇವರ ವರಸೆ ಬದಲಾಗಿ ಆತ ಮಾನಸಿಕ ಅಸ್ವಸ್ಥನಾಗಿದ್ದು ತಿಳಿಯದೇ ಈ ರೀತಿಯ ಕೃತ್ಯವನ್ನು ಎಸಗಿರುವ ಕಾರಣ ಇಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಗುರಿ ಮಾಡುವುದು ತಪ್ಪು ಎನ್ನುತ್ತಾರೆ. ಇವೆರಡೂ ಇಲ್ಲದೇ ಹೋದಲ್ಲಿ ವಯಕ್ತಿಕ ದ್ವೇಷ ಅಥವಾ ಆಸ್ತಿಯ ವಿಚಾರಕ್ಕಾಗಿ ನಡೆದ ಘಟನೆಗೆ ಕೋಮು ಬಣ್ಣ ಕಟ್ಟುವುದು ತಪ್ಪು ಎಂದು ವಾದಿಸುತ್ತಾರೆ.
ಪೋಲೀಸರು ಅನ್ಸಾರಿಯನ್ನು ಬಂಧಿಸಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕಂದು ಬಂದ ವಿಚಾರ ನಿಜಕ್ಕೂ ಎಲ್ಲರನ್ನೂ ದಂಗು ಬಡಿಸುತ್ತದೆ. ಆ ಇಬ್ಬರು ಕಾವಲುಗಾರರು ಮತ್ತು ಅನ್ಸಾರಿ ಅವರಿಬ್ಬರ ನಡುವೆ ಧ್ವೇಷ ಬಿಡಿ, ಪರಸ್ಪರ ಸಣ್ಣದೊಂದು ಪರಿಚಯವೂ ಇರಲಿಲ್ಲ. ನಿಜ ಹೇಳಬೇಕೆಂದರೆ ತನ್ನ ಕುಕೃತ್ಯಕ್ಕೆ ಆ ಕಾವಲುಗಾರರೇ ನೇರವಾದ ಗುರಿ ಆಗಿರಲಿಲ್ಲ. ಮತಾಂಧತೆಯ ಅಮಲಿನಲ್ಲಿ ತೇಲಾಡುತ್ತಿರುವ ಆತನಿಗೆ ಹತ್ಯೆ ಮಾಡಲು ಒಬ್ಬ ಹಿಂದೂ ಬೇಕಿತ್ತು, ದುರಾದೃಷ್ಟವಶಾತ್ ಅವನ ಕಣ್ಣಿಗೆ ಈ ಇಬ್ಬರು ಅಮಾಯಕ ಕಾವಲುಗಾರರು ಬಲಿಪಶುವಾಗಿದ್ದಾರೆ. ಆತನ ಮಾನಸಿಕ ಪರಿಸ್ಥಿತಿಯನ್ನು ಗಮನಿಸಿದಲ್ಲಿ ಅ ಸಮಯದಲ್ಲಿ ಅತನಿಗೆ ಕಾವಲುಗಾರರದಲ್ಲದೇ ಬೇರೆ ಯಾರೇ ಸಿಕ್ಕಿದ್ದರೂ ಅತನ ಕೃತ್ಯ ಅದೇ ಆಗಿರುತ್ತಿತ್ತು. ಏಕೆಂದರೆ ಆತನ ವಿಕೃತ ಮನಸ್ಸು ಹಿಂದೂ ಒಬ್ಬನ ಬಲಿಗಾಗಿ ಹಾತೊರೆಯುತ್ತಿತ್ತು.
ಹಾಗೆ ನೋಡಿದರೆ, ಝೈಬ್ ಜುಬೇರ್ ಅನ್ಸಾರಿ ಯಾರೋ ಒಬ್ಬ ಅನಕ್ಷರಸ್ಥ ಪುಡಿ ರೌಡಿಯೋ ಅಥವಾ ಮುಂಬೈನ ಯಾವುದೋ ಕೊಳಗೇರಿಯಲ್ಲಿ ಬೆಳೆದ ವ್ಯಕ್ತಿಯಲ್ಲ. ಅವನು ಅಮೆರಿಕಾದಲ್ಲಿ ಕೆಮೆಸ್ಟ್ರೀಯಲ್ಲಿ ಮಾಸ್ಟರ್ಸ್ ಪದವಿ ಪಡೆದು ಕೆಲ ವರ್ಷಗಳ ಕಲ ಅಲ್ಲೇ ಒಳ್ಳೆಯ ಕಂಪನಿಗಳಲ್ಲಿ ಉದ್ಯೋಗ ಮಾಡಿ ಕೈತುಂಬಾ ಸಂಪಾದಿಸಿಕೊಂಡು ಐಶಾರಾಮ್ಯದಿಂದ ಜೀವನ ನಡೆಸುತ್ತಿದ್ದವನಿಗೆ ಇದ್ದಕ್ಕಿದ್ದಂತೆಯೇ ಮತಾಂಧತೆಯ ನಶೆ ಹತ್ತಿದೆ. ಅಮೇರಿಕಾದಲ್ಲಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಬಂದ ಆತ ಮುಸಲ್ಮಾನರ ಉಗ್ರ ಸಂಘಟನೆಯಾದ ISISಗೆ ಕುರಿತಾಗಿ ಬಹಳ ಸಂಶೋಧನೆ ನಡೆಸಿ ಅದಕ್ಕೆ ಸೇರಿಕೊಳ್ಳುವ ಹಪಾಹಪಿಯಲ್ಲಿ ಈ ರೀತಿಯ ಕೃತ್ಯವನ್ನು ಎಸಗಿದಂತಿದೆ
ಈ ಘಟನೆಯಾದ ಸ್ವಲ್ಪ ಹೊತ್ತಿನಕ್ಕೇ ಪೋಲೀಸರಿಗೆ ಸಿಕ್ಕಿಕೊಂಡಾಗ, ಈತನ ಮನೆಯನ್ನು ಶೋಧ ಮಾಡಲು ಮುಂದಾದ ಪೋಲಿಸರಿಗೆ ಆತನ ಕೋಣೆಯ ತುಂಬಾ ISISಗೆ ಸಂಬಂಧಿತ ವಿಚಾರಗಳು ಅಲ್ಲಿ ಸಿಕ್ಕಿವೆ. ಉಗ್ರನಾಗುವುದು ಹೇಗೇ, ಆ ಉಗ್ರ ಸಂಘಟನೆಗೆ ಸೇರಿಕೊಳ್ಳುವುದು ಹೇಗೇ? ಅಲ್ಲಿ ಸೇರಿಕೊಳ್ಳುವ ಮುನ್ನಾ ಯಾವ ರೀತಿಯ ಪೂರ್ವ ತಯಾರಿ ನಡೆಸಬೇಕು ಎಂಬೆಲ್ಲಾ ಕುರಿತಾದ ರಾಶಿ ರಾಶಿ ವಿವರಗಳು ಅಲ್ಲಿ ಸಿಕ್ಕಿರುವುದನ್ನು ನೋಡಿದಲ್ಲಿ. ಆತನ ಮತಾಂಧತೆ ಮನಸ್ಥಿತಿಯ ಅರಿವಾಗುತ್ತದೆ.
ಈ ಹಿಂದೆ ಸಿಕ್ಕಿಹಾಕಿ ಕೊಳ್ಳುತ್ತಿದ್ದ ಬಹುತೇಕ ಉಗ್ರರು ಅಮಾಯಕರಾಗಿದ್ದು, ಮನೆಯ ಆರ್ಥಿಕ ಪರಿಸ್ಥಿತಿಯ ದುರ್ಲಾಬ ಪಡೆದು, ಅವರು ಸತ್ತ ನಂತರ ಆವರ ಕುಟುಂಬವನ್ನು ಕಾಪಾಡುತ್ತೇವೆ ಎಂದೋ ಇಲ್ಲವೇ, ಅವರು ಸತ್ತ ನಂತರ ಸ್ವರ್ಗದಲ್ಲಿ ೭೨ ಕನ್ಯೆಯರು ಸಿಗುತ್ತಾರೆ ಎಂಬ ಆಸೆ ತೋರಿಸಿ ಅವರ ಮನಸ್ಸನ್ನು ಮರಳು ಮಾಡಿ ಅವರಿಗೆ ಶಸ್ತ್ರಾಸ್ತ್ರಗಳ ಬಳಕೆಯ ತರಭೇತಿ ನೀಡಿ ಅತ್ಮಾಹುತಿ ಬಾಂಬರ್ ಗಳಂತೆ ಗಡಿ ಭಾಗಗಳಿಂದ ಭಾರತದೊಳಗೆ ನುಗ್ಗಿಸಿ ಸ್ಥಳೀಯ ಮತಾಂಧ ಮುಸ್ಲಿಮರ ಸಹಾಯದಿಂದ ಕುಕೃತ್ಯಗಳನ್ನು ನಡೆಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗಿದ್ದು, ಒಳ್ಳೆಯ ವಿದ್ಯಾಭ್ಯಾಸ ಪಡೆದ ಮುಸ್ಲಿಂದ ಡಾಕ್ಟರ್ ಇಂಜೀನಿಯರ್, ವಿಜ್ಞಾನಿಗಳೇ ಹೆಣ್ಣು ಮತ್ತು ಗಂಡು ಎಂಬ ಬೇಧವಿಲ್ಲದೇ, ತೀವ್ರವಾದ ಮತಾಂಧತೆಗೆ ಒಳಗಾಗಿ ಗುಟ್ಟಾಗಿ ವಿವಿಧ ಸಂಘಟನೆಗಳನ್ನು ಕಟ್ಟಿಕೊಂಡು ಅವುಗಳ ಮೂಲಕ ಸದ್ದಿಲ್ಲದೇ ಹಿಂದೂಸ್ಥಾನದಲ್ಲಿರುವ ಹಿಂದೂಗಳನ್ನು ಒಂದೋ ಮತಾಂತರ ಮಾಡಬೇಕು. ಮತಾಂತರಕ್ಕೆ ಒಪ್ಪಿಕೊಳ್ಳದೇ ಹೋದಲ್ಲಿ ಸದ್ದಿಲ್ಲದೇ ಮುಗಿಸುವ ಹುನ್ನಾರದಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಭಯಾನಕವಾದ ಸಂಗತಿಯಾಗಿದೆ.
ಈ ರೀತಿಯಾದ ಕುಕೃತ್ಯದಲ್ಲಿ ತೊಡಗಿಕೊಂಡಿರುವುದು ಕೇವಲ ಬೆರಳೆಣಿಕೆಯ ಸಂಖ್ಯೆಯ ಜನರಿದ್ದು ಅವರಿಗಾಗಿ ಆತಂಕ ಪಟ್ಟುಕೊಳ್ಳ ಬೇಕಾಗಿಲ್ಲಾ ಎಂದು ಹೇಳುವವರರನ್ನು ಗಮನಿಸಿದಾಗ, ಅವರಿನ್ನೂ ಇತಿಹಾಸದಲ್ಲಿ ನಡೆದ ಘಟನೆಯಿಂದ ಬುದ್ದಿ ಕಲಿಯದೇ ಇರುವುದನ್ನು ಕಂಡು ಬೇಸರವಾಗುತ್ತದೆ. 1193 ರ ಸುಮಾರಿಗೆ ಭಕ್ತಿಯಾರ್ ಖಿಲ್ಜಿ ನೇತೃತ್ವದ ಬೆರಳೆಣಿಕೆಯಷ್ಟು ಟರ್ಕಿಶ್ ಪಡೆಗಳು ನಳಂದ ವಿಶ್ವವಿದ್ಯಾಲಯಕ್ಕೆ ನುಗ್ಗಿ ಅಲ್ಲಿ ವಿದ್ಯೆಯನ್ನು ಕಲಿಯುತ್ತಿದ್ದ ಸಾವಿರಾರು ಅಮಾಯಕ ವಿದ್ಯಾರ್ಥಿಗಳನ್ನು ಹತ್ಯೆ ಮಾಡಿದ್ದಲ್ಲದೇ. ಲಕ್ಷಾಂತರ ತಾಳೆಗರಿಯ ಹಸ್ತ ಪ್ರತಿಗಳು, ವಿವಿಧ ಪುರಾಣ ಗ್ರಂಥಗಳಿಂದ ತುಂಬಿ ಹೋಗಿದ್ದ ಅಲ್ಲಿನ ಗ್ರಂಥಾಲಯಕ್ಕೆ ಹಚ್ಚಿದ ಬೆಂಕಿ ಸುಮಾರು ಮೂರು ತಿಂಗಳುಗಳ ಕಲ ಉರಿಯಿತು ಎಂದರೆ ಯಾವ ಪ್ರಮಾಣದಲ್ಲಿ ಹಾನಿಯಾಗಿತ್ತು ಎಂಬುದನ್ನು ಕಲ್ಪಿಸಿಕೊಳ್ಳಬಹುದಾಗಿದೆ.
ದಾವೂದು ಇಬ್ರಾಹಿಂ ಬೆಂಬಲಿತ ಅಬು ಸಲೇಂ ಅಬ್ದುಲ್ ಖಯೂಮ್ ಅನ್ಸಾರಿಯ ನೇತೃತ್ವದಲ್ಲಿ 12 March 1993ರಲ್ಲಿ ಮುಂಬೈನ 12 ಕಡೆ ನಡೆದ ಸರಣಿ ಬಾಂಬ್ ಸ್ಲೋಟದಲ್ಲಿ ಸರಿಸುಮಾರು 257 ಅಮಾಯಕರು ಬಲಿಯಾಗಿ ಹೋದರು, ಅದೇ ರೀತಿ 26/11 ಎಂದು ಕರೆಯಲ್ಪಡುವ 2008ರ ಮುಂಬೈ ದಾಳಿಯಲ್ಲಿ ಸ್ಥಳೀಯ ಮುಸ್ಲಿಂಮ್ಮರ ಸಹಾಯದಿಂದ ಜಲಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಿದ ಬೆರಳೆಣಿಕೆಯ ಲಷ್ಕರ್-ಎ-ತೈಬಾ ಭಯೋತ್ಪಾದಕರು ಸುಮಾರು ನಾಲ್ಕು ದಿನಗಳ ಕಾಲ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣ, ಲಿಯೋಪೋಲ್ಡ್ ಕೆಫೆ ಮತ್ತು ನಾರಿಮನ್ ಹೌಸ್, ತಾಜ್ ಮಹಲ್ ಪ್ಯಾಲೇಸ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಮುಂತಾದ ಕಡೆ ಧಾಳಿ ನಡೆಸಿ 26 ವಿದೇಶಿಯರು ಮತ್ತು 20 ಭದ್ರತಾ ಪಡೆಯ ಸಿಬ್ಬಂಧಿಗಳು ಸೇರಿದಂತೆ ಸುಮಾರು 166 ರಿಂದ 175 ಅಮಾಯಕರು ಬಲಿಯಾದರೆ, 300ಕ್ಕೂ ಹೆಚ್ಚಿನವರು ಗಂಭೀರವಾಗಿ ಗಾಯಗೊಂಡರು. ಕಳೆದ ವರ್ಷ 2025ರಲ್ಲಿ ಕಾಶ್ಮೀರದ ಪೆಹಲ್ಗಾಂನಲ್ಲಿ ಪ್ರವಾಸದಲ್ಲಿದ್ದ ಅಮಾಯಕ ಹಿಂದೂಗಳ ಮೇಲೆ ಧರ್ಮ ಕೇಳಿ, ಕಲ್ಮಾ ಹೇಳಿಸಿ ಪ್ಯಾಂಟ್ ಬಿಚ್ಚಿಸಿ 26 ಅಮಾಯಕ ಗಂಡಸರನ್ನು ತಮ್ಮ ಮನೆಯವರ ಕಣ್ಣ ಮುಂದೆಯೇ ಕೊಂದು ಹಾಕಿದ್ದ ಉಗ್ರರ ಸಂಖ್ಯೆಯೂ ಬೆರಳೆಣಿಯಷ್ಟೇ ಇತ್ತು.
ಇಂತಹ ವಿಛಿದ್ರಕಾರಿ ಸಂಘಟನೆಗಳನ್ನು ನಿಗ್ರಹಿಸಲು ಸರ್ಕಾರಗಳು ಎಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿದ್ದಂತೆಯೇ ಭಾರತದಲ್ಲಿ ಮಾನವೀಯ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಅಸಹಿಷ್ಣುತೆ ತಾಂಡವವಾಡುತ್ತಿದ್ದು ಇಲ್ಲಿ ಅಲ್ಪ ಸಂಖ್ಯಾತ ಮುಸಲ್ಮಾನರ ಮೇಲೆ ನಿರಂತವಾಗಿ ದಬ್ಬಾಳಿಕೆ ನಡಸಲಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲು ವಿಶ್ವಾದ್ಯಂತ ಸಾವಿರಾರು ಮಾಧ್ಯಮಗಳು ಸಿದ್ದವಾಗಿರುತ್ತವೆ. ಯಾವುದೇ ಕೋಮು ಸಂಘರ್ಷವಾಗಲೀ ಅಲ್ಲಿ ಮುಸ್ಲಿಂ ಯುವಕರು ಎಂತಹ ಕುಕೃತ್ಯದಲ್ಲಿ ಭಾಗಿಗಳಾಗಿದ್ದರೂ ಅವರನ್ನು ಸಮರ್ಥನೆ ಮಾಡಿಕೊಳ್ಳಲು ಕೇವಲ ಜಮೀರ್ ಅಹ್ಮದ್ ನಂತಹ ಮುಸ್ಲಿಂ ನಾಯಕರಷ್ಟೇ ಅಲ್ಲದೇ, ಸಿದ್ದರಾಮಯ್ಯ, ಡಿಕೆಶಿ ನಂತರ ಹಿಂದೂ ರಾಜಕಾರಣಿಗಳೇ ಅವರ ಬೆನ್ನ ಹಿಂದೆ ನಿಲ್ಲುವುದಲ್ಲದೇ, ತನಿಖೆಗೂ ಮನ್ನವೇ ಅವರೆಲ್ಲರೂ ನಮ್ಮ ಬ್ರದರ್ಸ್ ಅವರೆಲ್ಲರೂ ಅಮಾಯಕರು ಎಂದು ಗೃಹಸಚಿವ ಪರಮೇಶ್ವರ್ ಅದಿಯಾಗಿ ಅವರಿಗೆ ಕ್ಲೀನ್ ಚಿಟ್ ಕೊಟ್ಟು ಅವರ ಸಂಪೂಣ ಬೆಂಬಲಕ್ಕೆ ನೀಡುತ್ತಾರೆ. ಇನ್ನು ಚುನಾವಣೆಗೆ ನಿಲ್ಲುವ ಮುಸ್ಲಿಂ ಸಂಘಟನೆಗಳ ಅಭ್ಯರ್ಥಿಗಳಿಗೆ ಸದ್ದಿಲ್ಲದೇ ಕೋಟಿ ಕೋಟಿ ಹಣವನ್ನು ಕೊಟ್ಟಿದ್ದನ್ನೂ ಇತ್ತೀಚಿನ ದಾವಣಗೆರೆ ಉಪಚುನಾವಣೆಯಲ್ಲಿ ನೋಡಿದ್ದೆವೆ. ಇದಕ್ಕಿಂತಲೂ ಆಘಾತಕಾರಿ ವಿಚಾರವೆಂದರೆ, ಪೋಲೀಸ್ ಇಲಾಖೆಯೂ ಸೇರಿದಂತೆ ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿ ಸದ್ದಿಲ್ಲದೇ ಮುಸ್ಲಿಮ್ ಅಧಿಕಾರಿಗಳಲ್ಲಿ ಹಾಕುವ ಮೂಲಕ ಇಂತಹ ಘಟನೆಗಳಿಗೆ ಪರೋಕ್ಷ ಬೆಂಬಲ ನೀಡುವುದೂ ಸಹಾ ಈಗ ಗುಟ್ಟಾಗಿಯೇನು ಉಳಿದಿಲ್ಲ.
ಕಾಂಗ್ರೇಸ್ ಪಕ್ಷ ತನ್ನ ಅಲ್ಪಸಂಖ್ಯಾತ ಘಟಕದ ಪದಾದಿಕಾರಿಗಳನ್ನು ಬರ್ಖಾಸ್ತ್ ಮಾಡಿದ್ದಕ್ಕೇ ರಾಜ್ಯದ ಅಷ್ಟೂ ಉಲೇಮಾಗಳೂ ಒಂದಾಗಿ ಓಡಿ ಬಂದು ಪ್ರೆಸ್ ಮೀಟ್ ಮಾಡುವುದಲ್ಲದೇ, ಅರಮನೆ ಮೈದಾನದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ನಿಂತು ತಮ್ಮ ನೆರವಿನಿಂದಲೇ ಈ ಸರ್ಕಾರ ಬಂದಿದ್ದು, ತಮಗೆ ರಕ್ಷಣೆ ಕೊಡದೇ ಹೋದಲ್ಲಿ ಪರಿಸ್ಥಿತಿ ನೆಟ್ಟಗಿರುವುದಿಲ್ಲಾ ಎಂಬ ಧಮ್ಕಿ ನೀಡಿದರೆ, ಇನ್ನು ಮಾಧ್ಯಮಗಳಲ್ಲಿ ಕುಳಿತು ಅಬ್ದುಲ್ ರಜಾಕ್ ನಂತಹ ಬಾಯಿ ಬಡುಕ ಮುಖ್ಯಮಂತ್ರಿ ಉಪಮುಖಮಂತ್ರಿಗಳನ್ನೇ ವಾಚಾಮಗೋಚರವಾಗಿ ತರಾಟಿಗೆ ತೆಗೆದುಕೊಳ್ಳುತ್ತಾನೆ ಎಂದರೆ, ಅಂದು ಅಲ್ಪಸಂಖ್ಯಾತರ ಓಟಿನಾಸೆಗಾಗಿ ಅವರು ಮಾಡಿದ್ದ ಎಲ್ಲಾ ತಪ್ಪುಗಳನ್ನೂ ಮರೆಮಾಚಿ ಆಶ್ರಯ ನೀಡಿದ್ದಕ್ಕಾಗಿ ಇಂದು ಇಡೀ ರಾಜ್ಯ ಮತ್ತು ದೇಶವೇ ಅನುಭವಿಸಬೇಕಾಗಿದೆ. 80ರ ದಶಕದಲ್ಲಿ ಪಂಜಾಬ್ ನಲ್ಲಿಯೂ ಇಂದಿರಾಗಾಂಧಿಯೇ ಸಾಕಿ ಬೆಳಿಸಿದ ಬಿಂದ್ರವ್ ವಾಲೆಯಂತಹ ಉಗ್ರನ ಸಂಘಟನೆಗಳಿಂದಲೇ ಇಂದಿರಾಗಾಂಧಿ ಹತ್ಯೆಯಾಗಿತ್ತು. ತಮಿಳುನಾಡಿನ ಕಾಂಗ್ರೇಸ್ ಬೆಂಬಲಿತ ಡಿ.ಎಂ.ಕೆಯ ಆಶ್ರಯದಲ್ಲೇ ಬೇಳೆದ ಶ್ರೀಲಂಕಾದ ಎಲ್.ಟಿ.ಟಿ.ಇ. ಉಗ್ರ ಸಂಘಟನೆ ರಾಜೀವ್ ಗಾಂಧಿಯನ್ನು ಬಲಿ ತೆಗೆದುಕೊಂಡ ಇತಿಹಾಸ ಕಣ್ಣ ಮುಂದೆಯೇ ಇದ್ದರೂ, ತಮ್ಮ ಇಡೀ ಕುಟುಂಬವೇ ರಜಾಕರ ಧಾಳಿಯಿಂದ ತಮ್ಮ ಕಣ್ಣ ಮುಂದೆಯೇ ನಾಶವಾಗಿದ್ದರೂ, ಸಂಘ ಪರಿವಾರವನ್ನು ವಿಷಸರ್ಪಕ್ಕೆ ಹೋಲಿಸಿ, ನಮಾಜ್ ಮಾಡುವುದನ್ನು ಬಿಟ್ಟು ಅವರನ್ನು ಕೊಚ್ಚಿ ಹಾಕಿ ಎಂದು ಸಾರ್ವಜನಿಕವಾಗಿ ಮುಸಲ್ಮಾನರಿಗೆ ಕರೆ ನೀಡುವ ಖರ್ಗೆಯಂತಹವರ ಅರ್ಭಟಕ್ಕೆ ಮಟ್ಟ ಹಾಕದೇ ಹೋದಲ್ಲಿ, ಇನ್ನು ಕೆಲವೇ ವರ್ಷಗಳಲ್ಲಿ ಶೀರ್ಷಿಕೆಯಲ್ಲಿ ಹೇಳಿದಂತೆ ಹಿಂದೂ ಯುವಕರುಗಳು ಸುನ್ನತ್ ಅಥವಾ ಖಿತಾನ್ ಮಾಡಿಸಿಕೊಂಡು, ಹಿಂದೂ ಹೆಣ್ಣುಮಕ್ಕಳು ಹಿಜಾಬ್ ಧರಿಸಿಕೊಂಡು, ಎಲ್ಲರೂ ಕಲ್ಮಾ ಪಠಿಸುಲೇ ಬೇಕಾದಂತಹ ಸಂಧರ್ಭ ಬಂದರೂ ಅಚ್ಚರಿ ಪಡಬೇಕಿಲ್ಲ. ಹಾಗಾಗಿಯೇ ಯೋಗಿ ಅವರು ಹೇಳಿದಂತೆ ಬಟಂಗೇ ತೋ ಕಟೇಂಗೇ, ಏಕ್ ರಹೇತೋ ಸೇಫ್ ಹೈ ಅರ್ಥಾತ್ ಹಿಂದೂಗಳು ಒಗ್ಗಟ್ಟಾಗದೇ ಹೋದಲ್ಲಿ ಪ್ರಂಚದಲ್ಲಿ ಹಿಂದುಗಳಿಗಾಗಿ ಇರುವ ಏಕೈಕ ಹಿಂದೂಸ್ಥಾನವೂ 2047ರಷ್ಟರಲ್ಲಿ ಘಜ್ವಾ-ಎ-ಹಿಂದ್ ಅಥವಾ ಗಜ್ವಾ-ಎ-ಹಿಂದ್ ಎಂದ್ ಎನ್ನುವ ಧಾಳಿಗೆ ಬಲಿಯಾಗಿ ಹಿಂದೂಸ್ಥಾನವೇ ಮುಸ್ಲಿಂ ರಾಷ್ಟವಾಗುವುದನ್ನು ತಡಯಲಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ