ಹಲಾಲ್

ಹಿಂದೂಗಳ ಹೊಸಾ ವರ್ಷ ಯುಗಾದಿ ಹಬ್ಬ ಎಂದ ತಕ್ಷಣ ಯುಗಾದಿ ಹಬ್ಬಕ್ಕೆ ಶುಭಹಾರೈಸುತ್ತಾ ಹಾಸ್ಯಕ್ಕಾಗಿ ಕೆಲವರು ಇವತ್ತು ಬೇಳೆ🥘 ನಾಳೆ ಮೂಳೆ 🐐🐓 ಇವತ್ತು ಎಣ್ಣಿ ನೀರು ನಾಳೆ ಎಣ್ಣೆಗೆ ನೀರು🍸🥃 ಎನ್ನುವ ಸಂದೇಶ ಕಳುಹಿಸುವುದನ್ನು ಗಮನಿಸಿರಬಹುದು. . ಹೌದು ನಿಜ. ಯುಗಾದಿ ಹಬ್ಬದ ದಿನ ಒಬ್ಬಟ್ಟಿನ ಊಟ ಮಾಡಿದರೆ, ಯುಗಾದಿಯ ಮಾರನೆಯ ದಿನ ಮಾಂಸಾಹಾರವನ್ನು ಸೇವಿಸುವ ಬಹುತೇಕ ಹಿಂದೂಗಳು ಬಾಡೂಟವನ್ನು ಸೇವಿಸುವುದು ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವಂತಹ ರೂಢಿ. ಯುಗಾದಿಯ ಮಾರನೆಯ ದಿನ ವರ್ಷತೊಡಕಿನಿಂದ ಮಾಡುವ… Read More ಹಲಾಲ್

ಎಳ್ಳಿನ ಹಾಲು

ಹೇಳಿ ಕೇಳಿ ಇದು ಬೇಸಿಗೆ ಸಮಯ. ಹತ್ತಾರು ಸಲ ಬಾಯಾರಿಕೆಯಾಗುತ್ತಿರುತ್ತದೆ. ಇಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಣ್ಣದ ಅನಾರೋಗ್ಯಕರವಾದ ಪೇಯಗಳನ್ನು ಕುಡಿಯುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರಿಬಹುದಾದ ಆರೋಗ್ಯಕರವಾದ ಸಸ್ಯಜನಿತ ಎಳ್ಳಿನ ಹಾಲನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 2-3 ಜನರು ಸವಿಯಬಹುದಾದಷ್ಟು ಎಳ್ಳಿನ ಹಾಲು ತಯಾರಿಸಲು ಬೇಕಾಗುವ ಸಾಮಗ್ರಿಗಳು ಬಿಳಿ ನೈಲಾನ್ ಎಳ್ಳು – 100 ಗ್ರಾಂಬೆಲ್ಲ- 100 ಗ್ರಾಂಹಾಲು – 1/2 ಲೀಟರ್ಏಲಕ್ಕಿ – 3 ರಿಂದ 4… Read More ಎಳ್ಳಿನ ಹಾಲು

ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ

ಮನೆಯಲ್ಲಿ ಮೊಸರು ಹೆಚ್ಚಿಗೆ ಉಳಿದು ಬಿಟ್ಟಲ್ಲಿ ಅಥವಾ ಮನೆಗೆ ಇದ್ದಕ್ಕಿದ್ದಂತೆಯೇ ಯಾರಾದ್ರೂ ಸಂಬಂಧೀಕರು ಬಂದು ಬಿಟ್ಟಲ್ಲಿ ಅಷ್ಟು ಹೊತ್ತಿನಲ್ಲಿ ಹುಳಿ, ಸಾರು ಮುಂತಾದವುಗಳನ್ನು ಮಾಡಲು ಪುರುಸೊತ್ತು ಇಲ್ಲದಿದ್ದಲ್ಲಿ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಎಳೆಯ ಸೌತೇಕಾಯಿ – 1 ತೆಂಗಿನತುರಿ – 1… Read More ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ

ಸೌತೇಕಾಯಿ ಹಸೀ ಗೊಜ್ಜು

ದೋಸೆ, ಚಪಾತಿ ಅನ್ನದ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಗೊಜ್ಜುಗಳನ್ನು ಮಾಡುವುದು ಸಹಜ. ಈ ಎಲ್ಲಾ ಗೊಜ್ಜುಗಳನ್ನು ಮಾಡಲು ಬಹಳಷ್ಟು ಸಮಯ ಬೇಕಾಗುತ್ತದೆ. ಅದಕ್ಕಾಗಿಯೇ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ಈ ಬೇಸಿಗೆಯಲ್ಲಿ ತಣ್ಣಗೆ ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಗೊಜ್ಜು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು ಎಳೆಯ ಸೌತೇಕಾಯಿ – 1 ತೆಂಗಿನತುರಿ… Read More ಸೌತೇಕಾಯಿ ಹಸೀ ಗೊಜ್ಜು

ಯುನೈಟೆಡ್ ಇಂಡಿಯಾ ಥಾಲಿ, ಅರ್ಡರ್ 2.1, ದೆಹಲಿ

ನಮ್ಮ ದೇಶ ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವಂತಹ ರಾಷ್ಟ್ರ, ಸದ್ಯಕ್ಕೆ ನಮ್ಮ ದೇಶ 28 ರಾಜ್ಯ ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಅಧಿಕೃತವಾಗಿ 15 ಭಾಷೆಗಳು ಎಂದು ಘೋಷಿಸಲ್ಪಟ್ಟಿದ್ದರೂ ಸಾವಿರಾರು ಭಾಷೆ ಮತ್ತು ಉಪಭಾಷಿಗರನ್ನು ನಮ್ಮ ದೇಶದಲ್ಲಿ ಕಾಣಬಹುದಾಗಿದೆ. ಹಾಗಾಗಿ ಇದು ಒಂದು ದೇಶ ಎನ್ನುವುದಕ್ಕಿಂತಲೂ ಒಂದು ಉಪಖಂಡ ಎಂದರೂ ಉತ್ರ್ಪೇಕ್ಷೇಯೇನಲ್ಲ. ಇಷ್ಟೊಂದು ಭಾಷೆಗಳು ಇರುವ ಈ ದೇಶದಲ್ಲಿ ಆದಕ್ಕೆ ಅನುಗುಣವಾಗಿ ಸಂಪ್ರದಾಯ, ಸಂಸ್ಕೃತಿ, ಆಹಾರ ಪದ್ದತಿ ಮತ್ತು ಜೀವನ ಶೈಲಿಯು ವಿಭಿನ್ನವಾಗಿದೆ. ಹಾಗಾಗಿಯೇ ಬಹುತೇಕ… Read More ಯುನೈಟೆಡ್ ಇಂಡಿಯಾ ಥಾಲಿ, ಅರ್ಡರ್ 2.1, ದೆಹಲಿ

ರವೇ ಪಾಯಸ

ನಮ್ಮೆಲ್ಲರಿಗೂ ತಿಳಿದಿರುವಂತೆ ತಂದೆ ತಾಯಿಯರನ್ನು ಹೊರತು ಪಡಿಸಿ ಕಣ್ಣಿಗೆ ಕಾಣುವ ದೇವರುಗಳೆಂದರೆ ಸೂರ್ಯ ಮತ್ತು ಚಂದ್ರ. ಇವತ್ತು ರಥಸಪ್ತಮಿ ಅರ್ಥಾತ್ ಸೂರ್ಯನ ಹುಟ್ಟು ಹಬ್ಬ ಎಂದರೂ ತಪ್ಪಾಗಲಾರದು. ಹಾಗಾಗಿ ಸೂರ್ಯನ ಪ್ರಿಯವಾದ ನೈವೇದ್ಯವಾದ ರವೇ ಪಾಯಸ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಸುಮಾರು 4-5 ಜನರು ಸವಿಯಬಹುದಾದಷ್ಟು ರವೇ ಪಾಯಸ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ಸಣ್ಣ ರವೆ – 1 ಬಟ್ಟಲು ಗಸಗಸೆ – 1 ಚಮಚ ಬೆಲ್ಲದ ಪುಡಿ – 3… Read More ರವೇ ಪಾಯಸ

ಮೂಲಂಗಿ ಚೆಟ್ನಿ

ಚೆಟ್ನಿ ಅಂದ ತಕ್ಷಣ ನಮಗೆ ಥಟ್ ಅಂತಾ ನೆನಪಾಗೋದೇ ಕಾಯಿ ಚೆಟ್ನಿ, ಹುರಿಗಡಲೆ ಇಲ್ಲವೇ ಕಡಲೇಕಾಯಿ ಬೀಜ ಚಟ್ನಿ. ಅಪರೂಪಕ್ಕೆ ಈರುಳ್ಳಿ ಚೆಟ್ನಿ ಇಲ್ಲವೇ ಟೋಮ್ಯಾಟೋ ಚಟ್ನಿ ಸಹಾ ಮಾಡುತ್ತಾರೆ. ಎಲ್ಲೆಡೆಯಲ್ಲಿಯೂ ಬಹಳ ಸುಲಭವಾಗಿ ಸಿಗುವ ಮತ್ತು ಅರೋಗ್ಯಕರವಾಗಿರುವ ಮೂಲಂಗಿ ಚಟ್ನಿಯನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮೂಲಂಗಿ ಚೆಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ದೊಡ್ಡ ಗಾತ್ರದ ಮೂಲಂಗಿ- 1 ಒಣ ಮೆಣಸಿನಕಾಯಿ- 2-3 ಕೊತ್ತಂಬರಿ… Read More ಮೂಲಂಗಿ ಚೆಟ್ನಿ

ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಬೆಂಗಳೂರಿನ ಎಂ.ಜಿ. ರಸ್ತೆಯ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ಅಪ್ಪಟ ದಕ್ಷಿಣ ಭಾರತೀಯ ಆಹಾರಗಳ ಜೊತೆಗೆ ರುಚಿಕರವಾದ ಊಟವನ್ನು ಜನಸಾಮಾನ್ಯರಿಗೂ ಕೈ ಗೆಟುಕುವ ಬೆಲೆಯಲ್ಲಿ ಉಣಬಡಿಸುತ್ತಿದ್ದಂತಹ ಗತ ವೈಭವದ ಬೃಂದಾವನ್ ಹೋಟೆಲ್ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಕೈ ತುತ್ತು

ಕೈ ತುತ್ತು ಎನ್ನುವ ಪದ ಕೇಳಿದ ತಕ್ಷಣ ಥಟ್ ಅಂತಾ ನಮಗೇ ಗೊತ್ತಿಲ್ಲದ ಹಾಗೆ ಹಂಸಲೇಖ ಮತ್ತು ಪ್ರಭಾಕರ್ ಅವರ ಜೋಡಿ ನೀಡಿದ ಅತ್ಯುತ್ತಮ ಹಾಡುಗಳಲ್ಲಿ ಒಂದಾದ ಕೈ ತುತ್ತು ಕೊಟ್ಟೋಳು ಐ ಲವ್ ಯೂ ಎಂದಳೋ ಮೈ ಮದರ್ ಇಂಡಿಯಾ ಎನ್ನುವ ಹಾಡನ್ನು ನಮ್ಮ ಮನಸ್ಸಿನ ಮುಂದೆ ಬಂದು ಆ ಹಾಡನು ಗುನುಗಲು ಆರಂಭಿಸುತ್ತೇವೆ. ಆದರೆ ನಿಜವಾಗಿಯೂ ಅಮ್ಮನ ಇಲ್ಲವೇ ಅಜ್ಜಿಯ ಕೈ ತುತ್ತಿನ ರುಚಿಯನ್ನು ಬಲ್ಲವರೇ ಬಲ್ಲ ಅದರ ಸವಿಯನ್ನು. ಹಾಗಾಗಿ ಅಂತಹ ಅಪರೂಪದ… Read More ಕೈ ತುತ್ತು