ಕಿತ್ತೂರು ರಾಣಿ ಚೆನ್ನಮ್ಮ

ಪ್ರಪಂಚದ ಬಹುತೇಕ ರಾಷ್ಟ್ರಗಳನ್ನು ತಮ್ಮ ವಸಾಹತುಗಳನ್ನಾಗಿಸಿಕೊಂಡು ಸೂರ್ಯ ಮುಳುಗದ ನಾಡು ಎಂದು ಬೀಗುತ್ತಿದ್ದ ಬ್ರಿಟೀಷರಿಗೆ ಆರಂಭಿಕ ಸೋಲಿನ ರುಚಿಯನ್ನುಣಿಸಿದ *ಕನ್ನಡದ ದಿಟ್ಟ ವೀರಾಗ್ರಣಿ ಕಿತ್ತೂರು ರಾಣಿ ಚನ್ನಮ್ಮಳ ಜಯಂತಿ* ಯಂದು ಆಕೆಯ ಯಶೋಗಾಥೆ ಇದೋ ನಿಮಗಾಗಿ… Read More ಕಿತ್ತೂರು ರಾಣಿ ಚೆನ್ನಮ್ಮ

ಆವತಿ ತಿಮ್ಮರಾಯಸ್ವಾಮಿ ಬೆಟ್ಟ

ನಮ್ಮ ಸನಾತ ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿ ಮತ್ತು ಆಚರಣೆಗಳು ನಮಗೆ ದೈವತ್ವದತ್ತ ಕೊಂಡೊಯ್ಯುತ್ತದೆ, ಅಂಥಾ ಪವಿತ್ರ ಆಚರಣೆಗಳಲ್ಲಿ ಧನುರ್ಮಾಸವೂ ಒಂದಾಗಿದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಸ್ಥಳಾಂತರಗೊಳ್ಳುವ ಅವಧಿಯನ್ನು ಧನುರ್ ಮಾಸ ಎಂದು ಕರೆಯಲಾಗುತ್ತದೆ. ಈ ಮಾಸವನ್ನು ಶೂನ್ಯ ಮಾಸ ಎಂದೂ ಸಹ ಕರೆಯಲಾಗುತ್ತದೆ. ಈ ಮಾಸದಲ್ಲಿ ಒಂದೇ ಒಂದು ದಿನ ಭಗವಾನ್ ವಿಷ್ಣುವನ್ನು ಪೂಜಿಸಿದರೂ ಅದು ಸಾವಿರಾರು ವರ್ಷಗಳ ಕಾಲ ಪೂಜಿಸಿದಂತೆ ಎಂಬ ನಂಬಿಕೆ ಇದೆ. ಇನ್ನು ನಮ್ಮ ತಿರುಪತಿ ತಿಮ್ಮಪ್ಪ ಬಹುಶಃ… Read More ಆವತಿ ತಿಮ್ಮರಾಯಸ್ವಾಮಿ ಬೆಟ್ಟ

ಶೃಂಗೇರಿ ದಸರಾ

ನವರಾತ್ರಿ ನಮ್ಮ ರಾಷ್ಟ್ರೀಯ ಹಬ್ಬವಾಗಿದ್ದು ಇದನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ನಮ್ಮ ರಾಜ್ಯವಾದ ಕರ್ನಾಟಕದಲ್ಲಂತೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ ಈ ರೀತಿಯ ದಸರಾ ಆಚರಣೆಗೆ ಮೂಲ ಪ್ರೇರಣೆ ಶೃಂಗೇರಿಯ ಶಾರದಾ ಪೀಠ ಎನ್ನುವ ಕುತೂಹಲಕಾರಿ ಸಂಗತಿ ಬಹುತೇಕರಿಗೆ ತಿಳಿದೇ ಇಲ್ಲವಾಗಿರುವುದು ವಿಪರ್ಯಾಸವೇ ಸರಿ. ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಡೆಯುವ ವೈಭವೋಪೇತ ದಸರಾ ದರ್ಬಾರ್ ಆಚರಣೆಯ ಕುರಿತಾಗಿ ತಿಳಿಯೋಣ ಬನ್ನಿ. 1336 ರಲ್ಲಿ ಉತ್ತರಭಾರತದವನ್ನು… Read More ಶೃಂಗೇರಿ ದಸರಾ

ತಾರತಮ್ಯ

ಅಕ್ಟೋಬರ್ 2, ದೇಶದ ಇಬ್ಬರು ಮಹಾನ್ ನಾಯಕರ ಜಯಂತಿ. ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರೇ ಆದರೂ, ಒಬ್ಬರು ಚರಕ ಹಿಡಿದು ದೇಶವನ್ನು ವಿಭಜಿಸಿ ಶತ್ರುರಾಷ್ಟ್ರದ ಸೃಷ್ಟಿಗೆ ಕಾರಣೀಭೂತರಾದರೇ ಅದೇ ಮತ್ತೊಬ್ಬರು ಹಾಗೆ ಸೃಷ್ಟಿಯಾದ ಶತ್ರುರಾಷ್ಟ್ರ ನಮ್ಮ ದೇಶದ ಮೇಲೆ ಕಾಲು ಕೆರೆದುಕೊಂಡು ಧಾಳಿ ನಡೆಸಿದಾಗ ತಮ್ಮ ದಿಟ್ಟ ನಿರ್ಧಾರಗಳಿಂದ ನರಕ ಸದೃಶವನ್ನು ತೋರಿಸಿದವರು. ಅದರೆ ಅದೇಕೋ ಏನೋ ಅಕ್ಟೋಬರ್ 2ರಂದು ಅದಾವುದೋ ಪೂರ್ವಾಗ್ರಹ ಪೀಡಿತರಾಗಿ ಮೊದಲನೆಯವರನ್ನೇ ಎತ್ತಿ ಮೆರೆದಾಡುತ್ತಾ ಎರಡನೆಯವರನ್ನು ನಗಣ್ಯರೀತಿಯಲ್ಲಿ ಕಡೆಗಾಣಿಸುವುದು ಈ ದೇಶದ ಪ್ರಾಮಾಣಿಕ ದೇಶ… Read More ತಾರತಮ್ಯ

ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

ಭಾರತ ಎಂದರೆ ಹಾವಾಡಿಗರ ದೇಶ, ಹಿಂದೂಗಳು ಎಂದರೆ ಮೂಢ ನಂಬಿಕೆಯ ಜನರು ಎಂದು ಇಡೀ ಜಗತ್ತೇ ಮೂದಲಿಸುತ್ತಿದ್ದಾಗ ವಿಶ್ವ ಧರ್ಮಗಳ ಸಂಸತ್ತು 11 ಸೆಪ್ಟೆಂಬರ್ 1893 ರಂದು ಚಿಕಾಗೋದಲ್ಲಿ ಐತಿಹಾಸಿಕ ದಿಕ್ಸೂಚಿ ಭಾಷಣವನ್ನು ಮಾಡಿ ಜಗತ್ತೇ ಭಾರತ ಮತ್ತು ಹಿಂದೂ ಧರ್ಮದತ್ತ ಬೆಚ್ಚಿ ಬೀಳುವಂತೆ ಮಾಡುವ ಮುನ್ನಾ ದೇಶಾದ್ಯಂತ ಪರಿವಾಜ್ರಕರಾಗಿ ಪರ್ಯಟನೆ ಮಾಡುತ್ತಿದ್ದಂತಹ ಸಮಯದಲ್ಲಿ, 24 ಡಿಸೆಂಬರ್ 1892 ರಂದು ಸ್ವಾಮೀ ವಿವೇಕಾನಂದರು ಕನ್ಯಾಕುಮಾರಿಯನ್ನು ತಲುಪಿದ್ದರು. ಸಮುದ್ರದ ದಂಡೆಯಲ್ಲೇ ಇರುವ ದೇವಿಯ ದರ್ಶನ ಪಡೆದು ಹಿಂದೂಮಹಾಸಾಗರ, ಅರಬ್ಬೀ… Read More ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ

ಅಖಂಡ ಭಾರತದ ವಿಭಜನೆ

ಅಖಂಡ ಭಾರತದ ವಿಭಜನೆ ಎಂಬ ಶೀರ್ಷಿಕೆ ಓದಿದ ತಕ್ಷಣವೇ ನಮಗೆ ನೆನಪಾಗೋದೇ 1947ರಲ್ಲಿ ಬ್ರಿಟೀಷರು ಧರ್ಮಾಧಾರಿತವಾಗಿ ಭಾರತ ಮತ್ತು ಪಾಕೀಸ್ಥಾನದ ವಿಭಜನೆ ಮಾಡಿಹೋಗಿದ್ದೇ ನೆನಪಾಗುತ್ತದೆ. ಆದರೆ ನಿಜ ಹೇಳಬೇಕೆಂದರೆ ಬ್ರಿಟಿಷರು ಭಾರತದಿಂದ ಸಂಪೂರ್ಣವಾಗಿ ಕಾಲು ಕೀಳುವ ಮೊದಲು ಕಡೆಯ 61 ವರ್ಷಗಳಲ್ಲಿ 7 ಬಾರಿ ಭಾರತವನ್ನು ವಿಭಜನೆ ಮಾಡಿದ್ದಾರೆ. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಬ್ರಿಟಿಷರು ತಾವು ಆಳುತ್ತಿದ್ದ ಬೇರೆ ಯಾವುದೇ ರಾಷ್ಟ್ರವನ್ನು ವಿಭಜನೆ ಮಾಡದಿದ್ದರೂ, ಭಾರತವನ್ನು ಮಾತ್ರಾ ಇಷ್ಟೊಂದು ಬಾರಿ ವಿಭಜನೆ ಮಾಡುವ ಮುಖಾಂತರ ಭಾರತ ದೇಶ ಏಷ್ಯಾ… Read More ಅಖಂಡ ಭಾರತದ ವಿಭಜನೆ

ಜೂನ್ 25, 1975 ಲೋಕತಂತ್ರ ಕರಾಳ ದಿನ

1975-77ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ್ದ ತುರ್ತುಪರಿಸ್ಥಿತಿಯಲ್ಲಿ ಅದರ ಪರವಾಗಿ ಇಲ್ಲವೇ ಅದರ ವಿರುದ್ಧ ಯಾವುದೇ ರೀತಿಯಲ್ಲಿ ಭಾಗವಹಿಸಿದ್ದರೂ, ಶಿಕ್ಷೆಗೆ ಒಳಗಾಗಬಹುದು ಎಂಬುದನ್ನು ಅರಿತಿದ್ದರೂ, ಅದೆಲ್ಲವನ್ನೂ ಲೆಖ್ಖಿಸದೇ ದೇಶದ ಏಕತೆಗಾಗಿ ಮತ್ತು ಸರ್ವಾಧಿಕಾರಿ ಧೋರಣೆಯ ವಿರುದ್ಧವಾಗಿ ನಮ್ಮ ಕೈಲಾದ ಮಟ್ಟಿಗೆ ನಮ್ಮ ಕುಟುಂಬ ಪಾಲ್ಕೊಂಡಿದ್ದ ರೋಚಕತೆ ಇದೋ ನಿಮಗಾಗಿ… Read More ಜೂನ್ 25, 1975 ಲೋಕತಂತ್ರ ಕರಾಳ ದಿನ

ಹಾರುವ ಸಿಖ್, ಮಿಲ್ಕಾ ಸಿಂಗ್

ಅದು 1960ರ ಸಮಯ ರೋಮ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಲಿದೆ. ಎಂದಿನಂತೆ ಭಾರತದಿಂದಲೂ ಕೆಲ ಆಟಗಾರರು ಹೋದಾ ಪುಟ್ಟಾ ಬಂದಾ ಪುಟ್ಟಾ ಎನ್ನುವಂತೆ ಬರಿಗೈಯಲ್ಲಿ ವಾವಾಸಾಗುತ್ತಿದ್ದ ದಿನಗಳಾದರೂ ಈ ಒಲಿಂಪಿಕ್ಸ್ ಭಾರತೀಯರ ಪಾಲಿಗೆ ಅತ್ಯಂತ ವಿಶೇಷವಾಗಿತ್ತು. ಭಾರತದ ಪರ 31ರ ತರುಣ ಅಥ್ಲೆಟಿಕ್ಸ್ ನಲ್ಲಿ ಏನಾದರೂ ಸಾಧಿಸಬಹುದು ಎಂಬ ನಿರೀಕ್ಷೆ ಇತ್ತು. ಏಕೆಂದರೆ 1956ರಲ್ಲಿ ನಡೆದ ಮೆಲ್ಬೊರ್ನ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲಬಾರಿಗೆ ಭಾಗವಹಿಸಿದ್ದ ಇದೇ ಓಟಗಾರ, ಸಾಕಷ್ಟು ಅನುಭವವಿಲ್ಲದ ಕಾರಣ ಅಷ್ಟೆನೂ ಸಾಧನೆ ಮಾಡಲಾಗದಿದ್ದರೂ, ಆ ಕ್ರೀಡಾಕೂಟದಿಂದ ಕಲಿತು,… Read More ಹಾರುವ ಸಿಖ್, ಮಿಲ್ಕಾ ಸಿಂಗ್

ಲಕ್ಷದ್ವೀಪ

ಕಳೆದ ವಾರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಲಕ್ಷದ್ವೀಪ ಪ್ರವಾಸದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಪ್ರಪಂಚಾದ್ಯಂತ ಪ್ರವಾಸೀತಾಣಗಳು ಅಲ್ಲೋಲಗೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.

ಲಕ್ಷದ್ವೀಪದ ಕುರಿತಾದ ಪ್ರಧಾನಿಗಳ ಪ್ರೇಮ ಕೇವಲ ನೆನ್ನೆಯ ಮೊನ್ನೆಯದ್ದಾಗಿರದೇ, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಈ ಕುರಿತಾಗಿ ತಮ್ಮ ದೂರದೃಷ್ಟಿತನದಿಂದ ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ, ಲಕ್ಷದ್ವೀಪದ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಲಕ್ಷದ್ವೀಪ