ಈಸ ಬೇಕು, ಇದ್ದು ಜಯಿಸಬೇಕು
ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ!! ಎನ್ನುವ ಮಾತುಗಳಿಗೆ ಅನ್ವರ್ಥವಾಗಿ ಬಾಳಿ ಬದುಕಿದ ಧೀಮಂತ ವ್ಯಕ್ತಿಯೊಬ್ಬರ ಪ್ರೇರಣಾದಾಯಿ ಪ್ರಸಂಗ ಇದೋ ನಿಮಗಾಗಿ… Read More ಈಸ ಬೇಕು, ಇದ್ದು ಜಯಿಸಬೇಕು
ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ!! ಎನ್ನುವ ಮಾತುಗಳಿಗೆ ಅನ್ವರ್ಥವಾಗಿ ಬಾಳಿ ಬದುಕಿದ ಧೀಮಂತ ವ್ಯಕ್ತಿಯೊಬ್ಬರ ಪ್ರೇರಣಾದಾಯಿ ಪ್ರಸಂಗ ಇದೋ ನಿಮಗಾಗಿ… Read More ಈಸ ಬೇಕು, ಇದ್ದು ಜಯಿಸಬೇಕು
ಅದೊಂದು ಬೆಳಿಗ್ಗೆ ಶಂಕರ ತನ್ನ ಕಛೇರಿಯಲ್ಲಿ ಸಭೆಯೊಂದರಲ್ಲಿ ತುರ್ತಾಗಿ ಭಾಗವಹಿಸಲೇ ಬೇಕಾಗಿದ್ದ ಕಾರಣ ಮನೆಯಿಂದ ಸ್ವಲ್ಪ ಬೇಗನೇ ಹೊರಟು, ತುಸು ಲಗು ಬಗನೇ ಕಾರ್ ಓಡಿಸುತ್ತಿದ್ದ. ಅವರ ಕಾರಿನ ಸ್ವಲ್ಪ ಮುಂದೆ ಒಬ್ಬ ವಯಸ್ಕರೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಗಾಡಿ ನೆಲಕ್ಕೆ ಜೋರಾಗಿ ಅಪ್ಪಳಿಸಿದ ಶಬ್ಧ ಕೇಳಿದೊಡನೆ ಶಂಕರ ದಢಾರ್ ಎಂದು ಕಾರ್ ನಿಲ್ಲಿಸಿದ. ವೃಧ್ಧರ ಗಾಡಿಯೇನೋ ಸ್ವಲ್ಪ ದೂರದಲ್ಲಿ ರಸ್ತೆಯ ಮೇಲೆ ಬಿದ್ದಿತ್ತು. ಆದರೆ ಗಾಡಿ ಚಾಲನೆ ಮಾಡುತ್ತಿದ್ದ ವಯಸ್ಕರು ಒಂದು ಕ್ಷಣ ಕಾಣಲಿಲ್ಲವಾದರೂ,… Read More ಇಲ್ಲೇ ಸ್ವರ್ಗ ಇಲ್ಲೇ ನರಕ
ಶಂಕರ ಆಗಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ. ಬೇಸಿಗೆಯ ರಜೆಯಲ್ಲಿ ಸುಮ್ಮನೆ ಮನೆಯ ಬಳಿ ಹುಡುಗರೊಂದಿಗೆ ಬಿಸಿಲಿನಲ್ಲಿ ಬೀದಿ ಸುತ್ತುವ ಬದಲು, ಬೇಸಿಗೆ ರಜೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ಅವನ ತಾಯಿ ಅವನನ್ನು ಮಂಗಳೂರಿನ ಸಮೀಪದ ವೇದಶಿಬಿರಕ್ಕೆ ಕಳುಹಿಸಿದರು. ನಾಲ್ಕುವಾರಗಳ ಉಚಿತ ವೇದಶಿಬಿರ. ಬೆಳಿಗ್ಗೆ 4.45ಕ್ಕೇ ಎಲ್ಲರೂ ಎದ್ದು ಕಡ್ಡಾಯವಾಗಿ ತಣ್ಣೀರಿನ ಸ್ನಾನ ಮಾಡಿ 5:30 ಕ್ಕೆಲ್ಲಾ ನಿತ್ಯಪೂಜೆಯಿಂದ ಆರಂಭವಾಗುವ ದಿನಚರಿ ಯೋಗಾಭ್ಯಾಸ, ವೇದಾಧ್ಯಯನ, ಸಂಸ್ಕೃತ ಪಾಠ, ತಿಂಡಿ, ಊಟಗಳ ಜೊತೆ ರಾತ್ರಿ 10 ಘಂಟೆಗೆ ಅನೌಪಚಾರಿಕದೊಂದಿಗೆ ದಿನ ಮುಕ್ತಾಯವಾಗುತ್ತಿತ್ತು. ಆರಂಭದಲ್ಲಿ… Read More ಮಡಿ ಬಟ್ಟೆ
ಶಂಕರ ಮೊನ್ನೆ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತಿದ್ದಾಗಲೇ, ಶಂಕರಾಚಾರ್ಯವಿರಚಿತ ಎಂ.ಎಸ್. ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದ ಭಜಗೋವಿಂದಂ ಭಜಗೋವಿಂದಂ ಶ್ಲೋಕ ಕೇಳುತ್ತಲೇ ಅವನಿಗೆ ತಾನು ಸಣ್ಣನಿದ್ದಾಗ ಅವನ ತಾತ ಆ ಶ್ಲೋಕಗಳನ್ನು ಹೇಳಿಕೊಡುತ್ತಿದ್ದದ್ದು ಮತ್ತು ಅದರ ಜೊತೆ ಹೇಳಿದ ಸುಂದರ ಪ್ರಸಂಗವೊಂದು ನೆನಪಿಗೆ ಬಂತು. ಆಗ ಶಂಕರನಿಗೆ ಏಳೆಂಟು ವರ್ಷಗಳಿರಬಹುದು . ಪರೀಕ್ಷೆ ಮುಗಿದು ಬೇಸಿಗೆ ರಜಾ ಬಂದಿತೆಂದರೆ ತಾತನ ಮನೆಗೆ ಹೋಗುವುದಕ್ಕೆ ಅವನಿಗೆ ಪಂಚ ಪ್ರಾಣ. ಅದೇ ರೀತೀ ಅವನ ತಾತನೂ ಅಷ್ಟೇ.… Read More ಪುನರ್ಜನ್ಮ
ಮೊನ್ನೆ ರಾತ್ರಿ ವಾಯುವಿಹಾರಕ್ಕೆಂದು ಹೋಗುತ್ತಿದ್ದಾಗ ದಾರಿಯಲ್ಲಿ ನನ್ನ ಸ್ನೇಹಿತರೊಬ್ಬರು ಸಿಕ್ಕಿ, ಇದೇನು ಇಷ್ಟು ಹೊತ್ತಿನಲ್ಲಿ ಈ ಕಡೆಯಲ್ಲಿ ಎಂದಾಗ, ಏನೂ ಇಲ್ಲಾ ಸಾರ್, ಇಲ್ಲೇ ಪಕ್ಕದ ರಸ್ತೆಯಲ್ಲಿರುವ ನಮ್ಮ ಸ್ನೇಹಿತರೊಬ್ಬರು ಊರಿಗೆ ಹೋಗಿದ್ದಾರೆ. ಅದಕ್ಕಾಗಿ ಅವರ ಮನೆಯಲ್ಲಿ ರಾತ್ರಿ ಹೊತ್ತು ಮಲಗಲು ಹೇಳಿದ್ದಾರೆ. ಅದಕ್ಕಾಗಿ ಹೋಗುತ್ತಿದ್ದೇನೆ. ಕಾಲ ಸರಿಯಿಲ್ಲ ನೋಡಿ ಎಂದರು. ಅದಕ್ಕೆ ನಾನು ಹೌದು ಸಾರ್ ಎಂದು ಹೂಂ ಗುಟ್ಟಿ ನನ್ನ ವಾಯುವಿಹಾರ ಮುಂದುವರಿಸಿ ಹಾಗೇ ಯೋಚಿಸುತ್ತಿದ್ದಾಗ, ಅರೇ ಹೌದಲ್ಲಾ, ಈ ಪದ್ದತಿ ಈಗ ಅಪರೂಪವಾಗಿದೆಯಲ್ಲಾ … Read More ನೆರೆಹೊರೆ
ಶಂಕರನ ಮನೆಯವರು ಒಟ್ಟು ಕುಟುಂಬದವರು. ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವೇ. ಹಾಗೆಯೇ ಮನೆಗೆ ಬಂದು ಹೋಗುವವರು ತುಸು ಹೆಚ್ಚೇ. ಬಂದವರಿಗೆ ಕಾಫೀ ತಿಂಡಿ, ಊಟೋಪಚಾರ ಮಾಡುವುದು ಅವರ ಮನೆಯಲ್ಲಿ ನಡೆದು ಬಂದ ಸಂಪ್ರದಾಯ. ಹಾಗೆ ಪ್ರತೀ ಬಾರಿ ಕಾಫೀ ಮಾಡಿದಾಗಲೂ ಮಕ್ಕಳೂ ಕಾಫಿ ಕುಡಿಯಲು ಬಯಸುವುದು ಸಹಜ. ಹಾಗಾಗಿ ಸುಮ್ಮನೆ ಬಂದು ಹೋದವರೆಲ್ಲರ ಜೊತೆಯೂ ಕಾಫಿ ಕುಡಿಯುತ್ತಾ ಹೋದರೆ ಮಕ್ಕಳಿಗೆ ಕಾಫಿ ಚಟವಾಗುತ್ತದೆ ಎಂದು ತಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಫೀ ಅಭ್ಯಾಸ ಮಾಡಿಸದೇ ಇದ್ದರೆ ಮಕ್ಕಳ… Read More ಕಾಫೀ ಪುರಾಣ
ನಾವುಗಳು ಎಂತಹದ್ದೇ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಆಂಬ್ಯುಲೆನ್ಸ್ ಶಬ್ಧ ಕೇಳಿದ ತಕ್ಷಣ ಎಲ್ಲರೂ ಅಕ್ಕ ಪಕ್ಕಕ್ಕೆ ಕಷ್ಟ ಪಟ್ಟಾದರೂ ಸರಿದು ಆಂಬ್ಯುಲೆನ್ಸ್ ಹೋಗಲು ಜಾಗ ಮಾಡಿ ಕೊಡುತ್ತೇವೆ. ಅಕಸ್ಮಾತ್ ಯಾರಾದರೂ ಜಾಗ ಮಾಡಿ ಕೊಡಲು ತಡ ಮಾಡಿದಲ್ಲಿ ಅವರ ಮೇಲೆ ಜೋರು ಮಾಡಿಯಾದರೂ ಆಂಬ್ಯುಲೆನ್ಸ್ ಹೋಗಲು ಅನುವು ಮಾಡಿಕೊಡುತ್ತೇವೆ. ಏಕೆಂದೆರೆ, ಆ ಆಂಬ್ಯುಲೆನ್ಸ್ ಗಾಡಿಯಲ್ಲಿ ಯಾವುದೋ ಒಂದು ಜೀವ ಜೀವನ್ಮರಣ ಸ್ಥಿತಿಯಲ್ಲಿರುತ್ತದೆ. ಆ ಜೀವಕ್ಕೆ ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ತಲುಪಿ ಸೂಕ್ತವಾದ ಚಿಕಿತ್ಸೆ ದೊರೆತು ಚೇತರಿಸಿಕೊಳ್ಳಬಹುದೇನೋ ಎನ್ನುವ… Read More ಆಂಬ್ಯುಲೆನ್ಸ್ ಬಂತು ದಾರಿ ಕೊಡಿ
ಜೂನ್ 25, 1983, ಆಗ ನಾನು ಎಂಟನೇ ತರಗತಿಯಲ್ಲಿ ಓದುತ್ತಿದೆ. ಸಾಧಾರಣ ಮಧ್ಯಮ ಕುಟುಂಬದವರಾಗಿದ್ದ ನಮಗೆ ಸ್ವಂತ ಟಿವಿ ಹೊಂದುವುದು ಕಷ್ಟಕರವಾದ ದಿನವದು. ಅಲ್ಲೋ ಇಲ್ಲೋ ಒಬ್ಬೊಬ್ಬರ ಮನೆಯಲ್ಲಿ, ಕೋನಾರ್ಕ್ ಅಥವಾ ಸಾಲಿಡೇರ್ ಅಥವಾ ಡಯೋನೋರಾ ಅಥವಾ ಬಿಪಿಎಲ್ ಕಂಪನಿಗಳ ಕಪ್ಪು ಬಿಳಿಪಿನ ಟಿವಿ ಇರುತ್ತಿದ್ದ ಕಾಲವದು. ಮೂಗಿಗಿಂತ ಮೂಗಿನ ನತ್ತೇ ಭಾರವೆಂಬಂತೆ, ಟಿವಿಗಿಂತ ಆಂಟೆನಾ ಬಾರೀ ದೊಡ್ಡದಾಗಿರುತ್ತಿತ್ತು. ಮನೆಯ ಮೇಲಿನ ಆಂಟೆನಾದ ಗಾತ್ರದಿಂದಲೇ ಮನೆಯವರ ಸಿರಿತನ ಗುರುತಿಸುತ್ತಿದ್ದ ಕಾಲವದು. ಶಾಲೆ ಮುಗಿಸಿ ಮನೆಗೆ ಬಂದ ನನಗೆ… Read More 1983 ಕ್ರಿಕೆಟ್ ವರ್ಲ್ಡಕಪ್, ಭಾರತದ ಯಶೋಗಾಥೆ
ಅದೊಂದು ಶನಿವಾರದ ದಿನ. ಬೆಳಿಗ್ಗೆ ಶಂಕರ ಕಛೇರಿಗೆ ಹೊರಡಲು ಅನುವಾಗಿ ತಿಂಡಿ ತಿನ್ನುತ್ತಿದ್ದ. ಅಡುಗೆ ಮನೆಯೊಳಗೆ ಅವನ ಮಡದಿ ಮಯೂರಿ ಮಗ ಸಮೀರನೊಂದಿಗೆ ಏನೋ ಸಮಾಧಾನ ಮಾಡುತ್ತಿದ್ದಳು ಆದರೆ ಅದನ್ನು ಕೇಳಲು ತಯಾರಿಲ್ಲದ ಮಗ, ಸ್ವಲ್ಪ ಹೆಚ್ಚಾಗಿಯೇ ಕಿರಿಕಿರಿ ಮಾಡುತ್ತಿದ್ದ. ಮೊದ ಮೊದಲು ಅಮ್ಮಾ ಮಗನ ನಡುವಿನ ವಿಷಯಕ್ಕೆ ತಾನೇಕೇ ಹೋಗುವುದು ಎಂದು ಸುಮ್ಮನಿದ್ದರೂ, ಮಡದಿಯು ಪರಿಪರಿಯಾಗಿ ಸಂತೈಸಲು ಪ್ರಯತ್ನಿಸಿದ್ದರೂ ಒಪ್ಪಿಕೊಳ್ಳದೆ ಪಿರಿಪಿರಿ ಮಾಡುತ್ತಿದ್ದ ಮಗನನ್ನು ಕಂಡ ಶಂಕರ, ಏನದು? ಏನಾಗ್ತಾ ಇದೇ? ಎಂದು ತುಸು ಎತ್ತರದ… Read More ಹಸಿವು