ಕಾಲ ಕೆಟ್ಟು ಹೋಯ್ತೇ?

ಅಯ್ಯೋ ಕಾಲ ಕೆಟ್ಟು ಹೋಯ್ತು ರೀ.. ಈಗಿನ ಮಕ್ಕಳು ನಮ್ಮ ರೀತಿ ಇಲ್ಲಾ! ಎಂದು ಪದೇ ಪದೇ ಹೇಳುತ್ತೇವೆ. ಆದರೆ ಕಾಲ ಕೆಟ್ಟು ಹೋಗಿಲ್ಲಾ! ನಮ್ಮ ಮಕ್ಕಳು ಇನ್ನೂ ಸಂಸ್ಕಾರವಂತರಾಗಿಯೇ ಇದ್ದಾರೆ ಎಂದು ಸಾರುವ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇದೋ ನಿಮಗಾಗಿ… Read More ಕಾಲ ಕೆಟ್ಟು ಹೋಯ್ತೇ?

ಗಣಪತಿ ಬಪ್ಪ ಮೋರ್ಯ ಎಂದರೇನು?

ನಾವೆಲ್ಲಾ ಚಿಕ್ಕವರಿದ್ದಾಗ ಮಾಡುತ್ತಿದ್ದ ಗಣೇಶನ ವಿಸರ್ಜನೆಗೂ ಇಂದು ಮಾಡುತ್ತಿರುವ ಗಣೇಶನ ವಿಸರ್ಜನೆಯ ಸಮಯದಲ್ಲಿ ಅಜಗಜಾಂತರ ವೆತ್ಯಾಸವಿದ್ದು, ಗಣೇಶ ಬಂದ ಕಾಯ್ಕಡ್ಬು ತಿಂದ, ಚಿಕ್ಕ ಕೆರೆಲಿ ಬಿದ್ದ ದೊಡ್ಕ ಕೆರೆಯಲ್ಲಿ ಎದ್ದ ಎನ್ನುವ ಘೋಷಣೆಯ ಜಾಗದಲ್ಲಿ ಗಣೇಶ ಬಪ್ಪಾ ಮೋರ್ಯಾ, ಗಣಪತಿ ಬಪ್ಪಾ ಮೋರ್ಯಾ, ಮಂಗಳ ಮೂರ್ತಿ ಮೋರ್ಯಾ ಎಂಬ ಘೋಷಣೆಗಳು ಕೂಗುವಾಗ, ಈ ಮೋರ್ಯ ಎಂದರೆ ಯಾರು ಎಂಬ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.… Read More ಗಣಪತಿ ಬಪ್ಪ ಮೋರ್ಯ ಎಂದರೇನು?

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ

ಚುನಾವಣೆಯ ಸಂಧರ್ಭದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವ ಮನಸ್ಥಿತಿಯ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ಜನರನ್ನು ಒಲಿಸಿಕೊಳ್ಳಲು ಈ ಹಿಂದೆ ಹಣ ಹೆಂಡ ಕೊಡುತ್ತಿದ್ದದ್ದು ಈಗ ಹಳೆಯ ಪದ್ದತಿಯಾಗಿದ್ದು, ಹೀಗೆ ಹೆಂಡ ಹಣ ಮತ್ತು ಗಿಫ್ಟ್ ಕಾರ್ಡ್ ಗಳನ್ನು ಚುನಾವಣೆಯ ಹಿಂದಿನದಂದು ಹಂಚುವುದಷ್ಟೇ ಅಲ್ಲದೇ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ವಿವಿಧ ಗ್ಯಾರಂಟಿಗಳ ಮೂಲಕ ಪ್ರತೀ ತಿಂಗಳೂ ಸಹಾ ಖಟಾ ಖಟ್ ಖಟಾ ಖಟ್ ಎಂದು ದೇಶದ ಎಲ್ಲಾ ಮಹಿಳೆಯರಿಗೂ ನೇರವಾಗಿ ಅವರ ಬ್ಯಾಂಕ್… Read More ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ

ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಶಿಕ್ಷಣ, ಉಡುಗೆ, ತೊಡುಗೆ, ಆಹಾರ ಪದ್ದತಿ, ಆಚಾರ ವಿಚಾರ, ಜೀವನ ಶೈಲಿ ಎಲ್ಲವೂ ಬದಲಾಗಿ ಅವಿಭಕ್ತ ಕುಟುಂಬ ವಿಭಕ್ತಗಳಾಗಿ, ಐಶಾರಾಮ್ಯವಾದ ಜೀವನದ ಹಿಂದೆ ಬಿದ್ದು, ಗಂಡ ಹೆಂಡತಿ ಇಬ್ಬರೂ ಹೊರಗೆ ಸಂಪಾದನೆ ಮಾಡುವಂತಹ ಅನಿವಾರ್ಯ ಪದ್ಧತಿಯನ್ನು ರೂಢಿ ಮಾಡಿಕೊಂಡ ಪರಿಣಾಮದಿಂದಾಗಿ ಆಗಿರುವ ಈ ಹೃದಯವಿದ್ರಾವಕ ಪ್ರಸಂಗಗಳು ನಿಜಕ್ಕೂ ಎಚ್ಚರದ ಗಂಟೆಯಾಗಿದೆ.… Read More ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಅನ್ನದ ಋಣ

ದಾನೆ ದಾನೆ ಪೆ ಲಿಖಾ ಹೈ ಖಾನೆ ವಾಲೇ ಕಾ ನಾಮ್ ಎಂಬ ತುಳಸೀ ದಾಸರ ಮಾತಿನಂತೆ, ಭಗವಂತ ನಮ್ಮ ಹಣೆಯಲ್ಲಿ ಅನ್ನದ ಋಣ ಬರೆಯದೇ ಹೊದಲ್ಲಿ, ಹೇಗೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲಾ ಎಂಬುದಕ್ಕೇ ಜ್ವಲಂತ ಉದಾಹಣೆಯಾಗಿರುವ ಕೆಲವೊಂದು ರೋಚಕ ಪ್ರಸಂಗಗಳು ಇದೋ ನಿಮಗಾಗಿ… Read More ಅನ್ನದ ಋಣ

ಅಭಿಮಾನಿಗಳೇ ದೇವರುಗಳು, ಅಭಿಮಾನವೇ ಪ್ರಶಸ್ತಿ ಪುರಸ್ಕಾರ

ಎಲೆ ಮರೆಕಾಯಿಯಂತೆ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಕೆಲ ಉದಯೋನ್ಮುಖ ಕಲಾವಿದರುಗಳು ಮತ್ತು ಲೇಖಕರುಗಳು ಸಾರಸ್ವತ ಲೋಕದಲ್ಲಿ ತೊಡಗಿಸಿಕೊಂಡಿರುವರನ್ನು ಯಾರಾದರೂ ಗುರುತಿಸಿ, ಅಭಿಮಾನ ಪೂರ್ವಕವಾಗಿ ನಾಲ್ಕು ಮಾತುಗಳನ್ನು ಆಡಿಸಿದರೂ ಸಾಕು ಅವರು ಮಾಡಿದ ಕೆಲಸಕ್ಕೆ ಸಾರ್ಥಕತೆ ದೊರೆಯುತ್ತದೆ ಎನ್ನುವುದಕ್ಕೆ ಕೆಲವು ಜ್ವಲಂತ ಪ್ರಸಂಗಗಳು ಇದೋ ನಿಮಗಾಗಿ… Read More ಅಭಿಮಾನಿಗಳೇ ದೇವರುಗಳು, ಅಭಿಮಾನವೇ ಪ್ರಶಸ್ತಿ ಪುರಸ್ಕಾರ

ಕರ್ಣನೇ ದಾನ ವೀರ ಶೂರ ಏಕೆ?

ದಾನ ಎಂಬ ಪದ ಕೇಳಿದ ತಕ್ಷಣವೇ, ದಾನ ವೀರ ಶೂರ ಕರ್ಣನ ಹೆಸರು ಏಕೆ ಪ್ರಸ್ತಾಪವಾಗುತ್ತದೆ? ಎಂಬ ಬಹುತೇಕರ ಜಿಜ್ಞಾಸೆಗೆ ಭಗವಾನ್ ಶ್ರೀಕೃಷ್ಣನೇ ಈ ಪ್ರಸಂಗದ ಮೂಲಕ ಉತ್ತರ ನೀಡಿರುವುದು ಬಹಳ ಸುಂದರವಾಗಿದೆ ಮತ್ತು ಪ್ರೇರಣಾದಾಯಕವಾಗಿದೆ. … Read More ಕರ್ಣನೇ ದಾನ ವೀರ ಶೂರ ಏಕೆ?

ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಇಂದು ಆಶಾಢಮಾಸದ ಹುಣ್ಣಿಮೆ. ಇದೇ ದಿವಸ ವೇದವ್ಯಾಸರು ಹುಟ್ಟಿದ ದಿನವಾದ್ದರಿಂದ ಸಮಸ್ತ ಹಿಂದೂಗಳು ಈ ದಿನವನ್ನು ಅತ್ಯಂತ ಸಡಗರ ಸಂಭ್ರಗಳಿಂದ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಒಂದಕ್ಷರವಂ ಕಲಿಸಿದಾತನೂ ಗುರುವಿಗೆ ಸಮಾನ ಎಂದು ತಿಳಿದು ತಮಗೆ ಶಿಕ್ಷಣವನ್ನು ಕೊಟ್ಟ ಗುರುಗಳಿಗೆ ಶ್ರದ್ಧಾಭಕ್ತಿಯಿಂದ ನಮಿಸಿದರೆ, ಇನ್ನೂ ಅನೇಕ ಆಸ್ತಿಕರು ತಮ್ಮ ತಮ್ಮ ಗುರುಗಳನ್ನು ಆರಾಧನೆ ಮಾಡುತ್ತಾರೆ. ಈ ಗುರು ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ, ಮಹರ್ಷಿ ವೇದ ವ್ಯಾಸರ ವ್ಯಕ್ತಿ ವ್ಯಕ್ತಿತ್ವ ಮತ್ತು ಅವರ ಸಾಧನೆಗಳನ್ನು ಮೆಲುಕು ಹಾಕುವ ಮೂಲಕ… Read More ವೇದ ವ್ಯಾಸರು ಮತ್ತು ಗುರು ಪೂರ್ಣಿಮೆ

ಹೃದಯ ಶ್ರೀಮಂತಿಕೆ

ದಿನವಿಡೀ ಕಛೇರಿಯಲ್ಲಿ ಕೆಲಸ ಮಾಡಿದ ನಂತರ ಸುಸ್ತಾಗಿ ಸಂಜೆ ಮನೆಗೆ ಹೋಗಬೇಕೆಂದು ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ವಿಪರೀತ ಜನಸಂದಣಿಯಿಂದಾಗಿ ಒಂದೆರಡು ಬಸ್ಸುಗಳು ನಮ್ಮ ನಿಲ್ದಾಣದಲ್ಲಿ ನಿಲ್ಲಿಸದೇ ಹಾಗೇ ಹೊರಟು ಹೋದವು. ಆದಾದ ಕೆಲವು ಸಮಯದ ನಂತರ ಬಂದ ಮೂರನೇ ಬಸ್ಸಿನಲ್ಲಿಯೂ ಸಾಕಷ್ಟು ಜನರಿದ್ದರು. ಅದಾಗಲೇ ಸಾಕಷ್ಟು ಸಮಯವಾಗಿದ್ದರಿಂದ ಮಾತ್ತು ಬಸ್ಸಿಗೆ ಕಾದೂ ಕಾದೂ ಸುಸ್ತಾದ ಪರಿಣಾಮ ವಿಧಿ ಇಲ್ಲದೇ ಹಾಗೂ ಹೀಗೂ ಮಾಡಿಕೊಂಡು ಬಸ್ಸನ್ನೇರಿ ಒಂದು ಕಂಬಕ್ಕೆ ಒರಗಿ ನಿಂತು ಕೊಂಡೆ. ಅಲ್ಲಿಂದ ಸ್ವಲ್ಪ ದೂರ ಪ್ರಯಾಣಿಸುತ್ತಲೇ… Read More ಹೃದಯ ಶ್ರೀಮಂತಿಕೆ