ಕೂರ್ಮಗಢ ಶ್ರೀ ನರಸಿಂಹ ಸ್ವಾಮಿ

ಹಿರಣ್ಯಕಷಿಪುವಿನ ಮಗ ಮಗ ಪ್ರಹ್ಲಾದ ಭಗವಾನ್ ವಿಷ್ಣು ಸರ್ವಾಂತರ್ಯಾಮಿ. ಆತ ಎಲ್ಲೆಡೆಯಲ್ಲಿಯೂ ಇದ್ದಾನೆ ಎನ್ನುತ್ತಾನೆ. ಆಗ ಕೋಪಗೊಂಡ ಹರಿಯ ವೈರಿ ಹಿರಣ್ಯಕಶಿಪು ಆ ನಿನ್ನ ಹರಿ ಇಲ್ಲಿರುವನೇ? ಅಲ್ಲಿರುವನೇ, ಆಕಾಶದಲ್ಲಿ ಇರುವನೇ, ಭೂಮಿಯಲ್ಲಿ ಇರುವನೇ ನೀರಿನಲ್ಲಿ ಇರುವನೇ? ಎಂದು ಕೇಳಿದಾಗ ಹೌದು ತಂದೆ ಆ ಹರಿ ಎಲ್ಲೆಲ್ಲೂ ಇದ್ದಾನೆ ಎಂದಾಗ ಸಿಟ್ಟಿನಲ್ಲಿ ತನ್ನ ಅರಮನೆಯ ಕಂಬವನ್ನು ತೋರಿಸಿ ಇಲ್ಲಿರುವನೇ ನಿನ್ನ ಹರಿ ಎಂದು ಆ ಕಂಭಕ್ಕೆ ಹೊಡೆದಾಗ ಆ ಕಂಬದಿಂದ ಹರಿ ನರಸಿಂಹಾವತಾರದಲ್ಲಿ ಬಂದು ಹಿರಣ್ಯಕಶಿಪುವನ್ನು ಸಾಯಿಸಿದ… Read More ಕೂರ್ಮಗಢ ಶ್ರೀ ನರಸಿಂಹ ಸ್ವಾಮಿ

ಮಾಘ ಸ್ನಾನ, ಮಾಘ ಹುಣ್ಣಿಮೆ, ಭಾರತ ಹುಣ್ಣಿಮೆ

ಎಲ್ಲಾ ಮಾಸಗಳಲ್ಲಿಯೂ ಕಾರ್ತಿಕ ಮಾಸ ಸರ್ವಶ್ರೇಷ್ಠ ಎಂದರೆ, ಆದಕ್ಕಿಂತಲೂ ಲಕ್ಷಪಟ್ಟು ಶ್ರೇಷ್ಠವಾದದ್ದು ಮಾಘ ಮಾಸ ಮತ್ತು ಮಾಘ ಮಾಸದ ಸ್ನಾನ ಎಂದು ಹೇಳಲಾಗುತ್ತದೆ. ಹಾಗಾಗಿ ನಾವಿಂದು ಅಂತಹ ಪವಿತ್ರ ಮಾಘ ಸ್ನಾನ ಮತ್ತು ಮಾಘ ಹುಣ್ಣಿಮೆಯನ್ನು ಭಾರತ ಹುಣ್ಣಿಮೆ ಎಂದೇಕೆ ಕರೆಯುತ್ತಾರೆ? ಎಂಬೆಲ್ಲಾ ಮಾಹಿತಿಗಳು ಇದೋ ನಿಮಗಾಗಿ… Read More ಮಾಘ ಸ್ನಾನ, ಮಾಘ ಹುಣ್ಣಿಮೆ, ಭಾರತ ಹುಣ್ಣಿಮೆ

ಬದಾಮಿ ಬನಶಂಕರಿಯ ಬನದ ಹುಣ್ಣಿಮೆ

ಬಾಗಲಕೋಟೆ ಜಿಲ್ಲೆಯಲ್ಲಿ ಪಾರ್ವತೀ ದೇವಿಯ ಅಪರಾವತಾರವಾಗಿ ಸಿಂಹವಾಹಿನಿಯಾಗಿ, ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಎಂಬ ಹತ್ತಾರು ಹೆಸರುಗಳಿಂದ ಕರೆಯಿಸಿಕೊಳ್ಳುವ ಬದಾಮಿಯ ಬನಶಂಕರಿಯಲ್ಲಿ ನಡೆಯುವ ಬನದ ಹುಣ್ಣಿಮೆ ಜಾತ್ರೋತ್ಸವ, ಬನಶಂಕರಿ ಸ್ಥಳ ಮಹಾತ್ಮೆ ಮತ್ತು ದೇವಿಯ ಐತಿಹ್ಯದ ಕುರಿತಾದ ಸವಿವರಗಳು ಇದೋ ನಿಮಗಾಗಿ… Read More ಬದಾಮಿ ಬನಶಂಕರಿಯ ಬನದ ಹುಣ್ಣಿಮೆ

ಮಾಗಡಿ ಶ್ರೀ ರಂಗನಾಥಸ್ವಾಮಿ

ಈ ಧನುರ್ಮಾಸದ ಸಮಯದಲ್ಲಿ ಭಗವಾನ್ ವಿಷ್ಣುವಿನನ್ನು ಒಮ್ಮೆ ದರ್ಶನ ಮಾಡಿದಲ್ಲಿ ಸಾವಿರ ವರ್ಷಗಳ ದರ್ಶನದ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಾವಿಂದು ಬೆಂಗಳೂರಿನಿಂದ ಸುಮಾರು 50-55 ಕಿಮೀ ದೂರದಲ್ಲಿರುವ ಕೆಂಪೇಗೌಡರ ಊರಾದ ಮಾಗಡಿಯಲ್ಲಿರುವ ಚೋಳರ ಕಾಲದ ಪ್ರಸಿದ್ಧ ದೇವಾಲಯವಾದ ತಿರುಮಲೈ ಶ್ರೀ ರಂಗನಾಥಸ್ವಾಮಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ. ಮಾಂಡವ್ಯ ಋಷಿಗಳಿಂದ ಸ್ಥಾಪಿತವಾದ ಈ ಕ್ಷೇತ್ರ ಮಾಂಡವ್ಯ ಕ್ಷೇತ್ರ ಎಂದು ಹೆಸರಾಗಿದೆ. ಆರಂಭದಲ್ಲಿ ಮಾಂಡವ್ಯಕುಟಿ ಎಂದಿಂದ್ದು ನಂತರ ಜನರ ಆಡು ಮಾತಿನಲ್ಲಿ ಅಪಭ್ರಂಷವಾಗಿ ಮಾಕುಟಿ,… Read More ಮಾಗಡಿ ಶ್ರೀ ರಂಗನಾಥಸ್ವಾಮಿ

ಮೋಕ್ಷರಂಗ, ರಂಗಸ್ಥಳ

ಧನುರ್ಮಾಸದ ಸಮಯದಲ್ಲಿ ಒಂದೇ ದಿನ ಶ್ರೀರಂಗ ಪಟ್ಟಣದ ಆದಿರಂಗ, ಶಿಂಷಾದ ಮಧ್ಯರಂಗ ಮತ್ತು ತಮಿಳುನಾಡಿನ ಶ್ರೀರಂಗನ ಅಂತ್ಯರಂಗ ಈ ಮೂರು ರಂಗನಾಥನ ದರ್ಶನ ಮಾಡಿದಲ್ಲಿ ಬಹಳ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಅದರೆ ಈ ಮೂರು ರಂಗನಾಥನ ದರ್ಶನದ ಮಾಡಿದ ನಂತರ ಮೋಕ್ಷ ಪಡೆಯುವುದಕ್ಕಾಗಿ ನಾಲ್ಕನೇ ರಂಗನಾಥನ ದರ್ಶನ ಮಾಡಬೇಕು ಎನ್ನುವ ವಿಷಯ ಬಹುತೇಕರಿಗೆ ತಿಳಿದೇ ಇಲ್ಲ.  ಬನ್ನಿ ನಾವಿಂದು ಚಿಕ್ಕಬಳ್ಳಾಪುರದ ಸಮೀಪವೇ ಇರುವ ರಂಗಸ್ಥಳದ ಮೋಕ್ಷರಂಗನಾಥನ ದರ್ಶನವನ್ನು ಕುಳಿತಲ್ಲಿಂದಲೇ  ಮಾಡಿಕೊಳ್ಳುವ ಮೂಲಕ ರಂಗನಾಥ ಸ್ವಾಮಿಯ… Read More ಮೋಕ್ಷರಂಗ, ರಂಗಸ್ಥಳ

ಕುಕ್ಕೇ ಸುಬ್ರಹ್ಮಣ್ಯದ ಚಂಪಾ ಷಷ್ಠಿ

ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಪಾರ್ವತೀ ಪರಮೇಶ್ವರರ ದ್ವಿತೀಯ ಪುತ್ರ ಷಣ್ಮುಖನನನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಗುವ ಶ್ರೀ ಸುಬ್ರಹ್ಮಣ್ಯ ಷಷ್ಠಿ ಅಥವಾ ಚಂಪಾ ಷಷ್ಠಿಯ ರಥೋತ್ಸವದ ಹಿನ್ನಲೆ ಮತ್ತು ಅದರ ವೈಭವದ ಸಂಭ್ರಮ ಸಡಗರಗಳನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ.… Read More ಕುಕ್ಕೇ ಸುಬ್ರಹ್ಮಣ್ಯದ ಚಂಪಾ ಷಷ್ಠಿ

ಧರ್ಮಸ್ಥಳದ ಲಕ್ಷದೀಪೋತ್ಸವ

ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಕೇವಲ ನದಿಗಳಿಗಷ್ಟೇ ಅಲ್ಲದೇ, ದೇವಾಲಯಗಳಿಗೂ ಪ್ರಸಿದ್ಧವಾಗಿದೆ. ಅಲ್ಲಿ ಹರಿಯುವ ಪ್ರತೀ ನದಿ ಹಳ್ಳ ಕೊಳ್ಳಗಳ ತಟದಲ್ಲಿ ಪ್ರತಿ ಹತ್ತಿಪ್ಪತ್ತು ಕಿಮೀ ದೂರದಲ್ಲಿ ಒಂದೊಂದು ಒಂದೊಂದು ದೇವಸ್ಥಾನಗಳಿದ್ದು, ಅವುಗಳಲ್ಲಿ ಜೀವನದಿ ನೇತ್ರಾವತಿಯ ತಟದಲ್ಲಿರುವ ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಸಕಲ ಹಿಂದೂಗಳ ಧಾರ್ಮಿಕ ಕ್ಷೇತ್ರವೇ ಪುರಾಣ ಪ್ರಸಿದ್ಧ ಧರ್ಮಸ್ಥಳವಾಗಿದೆ. ಹೆಸರಿಗೆ ಅನ್ವರ್ಥದಂತೆ ಅದು ಶಾಂತಿ ಮತ್ತು ಧರ್ಮದ ಬೀಡಾಗಿದ್ದು ಧರ್ಮಸ್ಥಳದ ಮಂಜುನಾಥನ ಸ್ವಾಮಿಗೆ ಇಡೀ ದೇಶಾದ್ಯಂತ ಭಕ್ತಾದಿಗಳು ಇದ್ದು ಬಹಳ ನಂಬಿಕೆಗೆ ಹೆಸರುವಾಸಿಯಾಗಿದೆ.… Read More ಧರ್ಮಸ್ಥಳದ ಲಕ್ಷದೀಪೋತ್ಸವ

ಬಸವನಗುಡಿ ಕಡಲೇಕಾಯಿ ಪರಿಷೆ

ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಶ್ರಾವಣ ಮಾಸ ಮತ್ತು ಆಶ್ವಯುಜ ಮಾಸದ ಸಾಲು ಸಾಲು ಹಬ್ಬಗಳು ಮುಗಿದು ಇನ್ನೇನು ಮಾಗಿಯ ಚಳಿ ನಮ್ಮೆಲ್ಲರನ್ನು ಅಪ್ಪುವುದಕ್ಕೆ ಶುರುವಾಗುತ್ತಿದ್ದಂತೆಯೇ ಬರುವುದೇ ಕಾರ್ತೀಕ ಮಾಸ. ಶೈವಾರಾಧಕರಿಗೆ ಪ್ರತೀ ಕಾರ್ತೀಕ ಸೋಮವಾರವೂ ಅತ್ಯಂತ ಪುಣ್ಯಕರವಾದ ದಿನ. ಬಹುತೇಕರು ಕಾರ್ತೀಕ ಸೋಮವಾರ ಶ್ರಧ್ಥೆಯಿಂದ… Read More ಬಸವನಗುಡಿ ಕಡಲೇಕಾಯಿ ಪರಿಷೆ

ದಕ್ಷಿಣ ಕಾಶೀ ಅಂತರ ಗಂಗೆ

ಇಂದು ಈ ವರ್ಷದ  ಮೊದಲ ಕಾರ್ತೀಕ ಸೋಮವಾರ.  ಕಾರ್ತೀಕ ಸೋಮವಾರದಂದು ಶಿವನ ದರ್ಶನ ಮಾಡಿದರೆ ಅದರಲ್ಲೂ ಕಾಶೀ ವಿಶ್ವೇಶ್ವರನ ದರ್ಶನ ಮಾಡಿದಲ್ಲಿ ಹೆಚ್ಚಿನ ಪುಣ್ಯ ಲಭಿಸುತ್ತದೆ  ಎನ್ನುವುದು ಶ್ರದ್ಧಾವಂತ ಹಿಂದೂಗಳ ನಂಬಿಕೆಯಾಗಿದೆ.  ದೂರದ ಕಾಶೀಗೆ ಹೋಗಿ ಗಂಗೆಯಲ್ಲಿ ಮಿಂದು ಕಾಶೀ ವಿಶ್ವೇಶ್ವರನ ದರ್ಶನದ ಭಾಗ್ಯ ಪಡೆಯಲು ಸಾಧ್ಯವಿಲ್ಲದವರು, ಇಲ್ಲೇ ಬೆಂಗಳೂರಿಗೆ ಹತ್ತಿರವಿರುವ ದಕ್ಷಿಣ ಕಾಶಿ ಪುಣ್ಯಕ್ಷೇತ್ರಕ್ಕೆ ಹೋಗಿ ಅಲ್ಲಿರುವ ಅಂತರಗಂಗೆಯಲ್ಲಿ  ಮಿಂದು ಕುಳಿತಲ್ಲಿಂದಲೇ ಕಾಶೀ ವಿಶ್ವೇಶ್ವರನ ದರ್ಶನ ಪಡೆಯೋಣ ಬನ್ನಿ ನಮಗೆಲ್ಲರಿಗೂ ತಿಳಿದಿರುವಂತೆ ಕೋಲಾರ  ಚಿನ್ನದ ಬೀಡು.… Read More ದಕ್ಷಿಣ ಕಾಶೀ ಅಂತರ ಗಂಗೆ