ಸೌತಡ್ಕ ಶ್ರೀ ಮಹಾಗಣಪತಿ

ಸಾಮಾನ್ಯವಾಗಿ ಒಂದು ಪುರಾತನ ದೇವಸ್ಥಾನ ಎಂದ ತಕ್ಷಣವೇ ನಮ್ಮ ಮನಸ್ಸಿನಲ್ಲಿ ಮೂಡುವುದೇ ವಿಶಾಲವಾದ ಪ್ರದೇಶದಲ್ಲಿ ಎತ್ತರವಾದ ರಾಜಗೋಪುರವನ್ನು ದಾಟಿ ಒಳಗೆ ಹೋಗುತ್ತಿದ್ದಲ್ಲಿ ನೂರಾರು ಸುಂದರವಾಗಿ ನಿಲ್ಲಿಸಿರುವ ಕಲ್ಲುಗಳ ಕಂಬ ಅದರಲ್ಲಿ ಶಿಲ್ಪಿಯ ಕೈ ಚಳಕದಿಂದ ಮೂಡಿರುವ ವಿವಿಧ ಆಕೃತಿಗಳ ಮಧ್ಯದಲ್ಲಿರುವ ಗರ್ಭಗುಡಿ ಇರುವ ದೇವಸ್ಥಾನ. ಇನ್ನು ವಾಸ್ತುಪ್ರಕಾರ ದೇವಸ್ಥಾನವೆಂದರೆ, ಗರ್ಭಾಂಕಣ, ನವರಂಗ, ಮುಖ ಮಂಟಪ, ಪ್ರಾಕಾರ ಮತ್ತು ರಾಜಗೋಪುರಗಳು ಇರಲೇಬೇಕೆಂಬ ನಿಯಮವಿದೆ. ಇಲ್ಲಿನ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದರೂ ಇಂದಿಗೂ ಬಯಲು ಮಂದಿರದಲ್ಲೇ ಇರುವ ಸುಂದರ… Read More ಸೌತಡ್ಕ ಶ್ರೀ ಮಹಾಗಣಪತಿ

ಶಿರಸಿ ಮಾರಿಕಾಂಬಾ

ಕರ್ನಾಟಕದ ಮಲೆನಾಡಿನ ಸಾಂಸ್ಕೃತಿಕ ಹೆಬ್ಬಾಗಿಲು ಎಂದೇ ಖ್ಯಾತವಾಗಿರುವ, ಶಿರಸಿಯ ಶ್ರೀ ಮಾರಿಕಾಂಬೆಯ ದರ್ಶನ ಪಡೆಯುವುದರ ಜೊತೆಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ವೈಭವೋಪೇತವಾಗಿ ನಡೆಯುವ ಮಾರಿ ಜಾತ್ರೆಯ ಸುಂದರ ಅನುಭವ ಮತ್ತು ಅಲ್ಲಿಯ ದೇವಾಲಯದ ಪ್ರಸಿದ್ಧ ಕೋಣ ಮತ್ತು ಆ ಜಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ಶಿರಸಿ ಮಾರಿಕಾಂಬಾ

ನಂಜನಗೂಡು ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ)

ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಪಂಚರಥೋತ್ಸವ ಅರ್ಥಾತ್ ದೊಡ್ಡ ಜಾತ್ರೆಯ ಸಂಭ್ರಮ ಕ್ಷಣಗಳನ್ನು ಕುಳಿತಲ್ಲಿಂದಲೇ ನೋಡಿ ಶ್ರೀ ನಂಜುಂಡೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ.… Read More ನಂಜನಗೂಡು ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ)

ದೇವರಾಯನ ದುರ್ಗ

ಬೆಂಗಳೂರಿನ ಹತ್ತಿರವೇ ಸುಂದರವಾದ ರಮಣೀಯವಾದ ಪ್ರಕೃತಿ ತಾಣವಿರಬೇಕು. ಅದು ಪುಣ್ಯಕ್ಷೇತ್ರವೂ ಆಗಿರಬೇಕು. ಹಿರಿಯರು ಕಿರಿಯರೂ ಎಲ್ಲರೂ ಮೆಚ್ಚುವಂತಿರಬೇಕು ಎನ್ನುವ ಸುಂದರವಾದ ತಾಣಕ್ಕೆ ಅರಸುತ್ತಿದ್ದೀರೆ ಎಂದರೆ ಬೆಂಗಳೂರಿನಿಂದ ಕೇವಲ 72 km ದೂರದಲ್ಲಿರುವ ಸುಮಾರು 1 ಗಂಟೆ 30 ನಿಮಿಷಗಳಲ್ಲಿ ಆರಾಮವಾಗಿ ತಲುಪಬಹುದಾದಂತಹ ಪುರಾಣ ಪ್ರಸಿದ್ಧ ಪಕೃತಿತಾಣವೇ ದೇವರಾಯನ ದುರ್ಗ ಎಂದರೆ ಅತಿಶಯೋಕ್ತಿ ಎನಿಸದು. ದೇವರಾಯನದುರ್ಗವು ತುಮಕೂರು ಜಿಲ್ಲೆಗೆ ಸೇರಿರುವ ಬೆಟ್ಟ ಗುಡ್ಡ, ಅರಣ್ಯಗಳಿಂದ ಆವೃತವಾಗಿರುವ ಹತ್ತು ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಒಂದು ಸುಂದರವಾದ ಗಿರಿಧಾಮವಾಗಿರುವುದಲ್ಲದೇ, ಪ್ರಕೃತಿ ಪ್ರಿಯರಿಗೆ… Read More ದೇವರಾಯನ ದುರ್ಗ

ಕಾಶೀ ಶ್ರೀ ವಿಶ್ವನಾಥ

ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಕಾಶಿ, ವಾರಣಾಸಿ, ಬನಾರಸ್ ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಈ ಶ್ರೀಕ್ಷೇತ್ರ ಹಿಂದೂಗಳ ಆಧ್ಯಾತ್ಮ ಕೇಂದ್ರವಲ್ಲದೇ ಮೋಕ್ಷದ ಹಾದಿಯೂ ಆಗಿದೆ. ಕಾಶಿಗೆ ಹೋಗಿ ಬಂದವರಿಗೆ ಮೋಕ್ಷ ಸಿಗುವುದಲ್ಲದೇ ಕಾಶೀಯಲ್ಲಿ ದೇಹತ್ಯಾಗ ಮಾಡುವರಿಗೆ ಶಾಶ್ವತವಾದ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಗಂಗಾನದಿಯ ತಟದಲ್ಲಿ ೬೪ ಘಾಟ್ ಗಳಿರುವ ಈ ಶ್ರೀಕ್ಷೇತ್ರದಲ್ಲಿ ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯವಿದ್ದು ಶಿವರಾತ್ರಿಯ ಈ ಪವಿತ್ರದಿನದಂದು ಶ್ರೀಕ್ಷೇತ್ರದ ದರ್ಶನವನ್ನು ಪಡೆಯೋಣ ಬನ್ನಿ. ಕಾಶಿಯ… Read More ಕಾಶೀ ಶ್ರೀ ವಿಶ್ವನಾಥ

ವಿದುರಾಶ್ವಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ

ದ್ವಾಪರಯುಗಾಂತ್ಯದಲ್ಲಿ ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆದು ಕೌರವರನ್ನು ಸೆದೆಬಡೆದ ಪಾಂಡವರು ತಮ್ಮ ರಾಜ್ಯವನ್ನು ಮರಳಿ ಪಡೆಯುತ್ತಾರೆ ಎಂಬುದನ್ನು ನಮ್ಮ ಪುರಾಣ ಗ್ರಂಥವಾದ ಮಹಾಭಾರತದಲ್ಲಿ ಓದಿರುತ್ತೇವೆ. ಆದರೆ ಮಹಾಭಾರತ ಎಂಬುದು ನಡದೇ ಇಲ್ಲ. ಅದೊಂದು ಕಟ್ಟು ಕಥೆ ಎನ್ನುವವರಿಗೆ ಉತ್ತರ ನೀಡುವಂತೆಯೇ ವರಸೆಯಲ್ಲಿ ಧೃತರಾಷ್ಟ್ರನ ತಮ್ಮ ಮತ್ತು ಆತನಿಗೆ ಆಪ್ತಸಲಹೆಗಾರ ಮತ್ತು ಮಂತ್ರಿಯಾಗಿದ್ದ ವಿದುರನು ಕೌರವರ ದುಷ್ಟ ಬುದ್ದಿಗೆ ಬೇಸತ್ತು, ಉತ್ತರ ಭಾರತದಿಂದ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಮತ್ತು ಆಂಧ್ರ ಪ್ರದೇಶದ ಗಡಿಯಲ್ಲಿ ಉತ್ತರ… Read More ವಿದುರಾಶ್ವಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ

ಕೈದಾಳ ಶ್ರೀ ಚನ್ನಕೇಶವ

ಹೇಳೀ ಕೇಳಿ ಕರ್ನಾಟಕ ಶಿಲ್ಪಕಲೆಗಳ ತವರೂರಾಗಿದೆ. ಬೇಲೂರು ಹಳೇಬೀಡು ಶ್ರವಣ ಬೆಳಗೋಳ ಹಂಪೆಯಂತ ಪುಣ್ಯಕ್ಷೇತ್ರಗಳಲ್ಲಿ ಶಿಲ್ಪಿಗಳು ಕಲ್ಲಿನಲ್ಲಿ ಅರಳಿಸಿರುವ ಕೆತ್ತನೆಗಳು ಜಗತ್ರ್ಪಸಿದ್ಧವಾದರೆ, ಕರ್ನಾಟಕದ ಸಾವಿರಾರು ಊರುಗಳಲ್ಲಿ ಬೆಳಕಿಗೇ ಬಾರದಂತಹ ವೈಶಿಷ್ಟ್ಯತೆಯುಳ್ಳ ದೇವಾಲಯಗಳ ಸಂಖ್ಯೆ ಅಗಣಿತವಾಗಿದೆ. ನಾವಿದು ತುಮಕೂರಿನಿಂದ ಕೇವಲ 7 ಕಿ.ಮೀ ದೂರದಲ್ಲಿ ಅತ್ಯಂತ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವನ ದೇವಾಲಯವಿರುವ ಕೈದಾಳದ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ. ಕಲ್ಪತರು ನಾಡು ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 6 ಕಿ.ಮೀ ಪ್ರಯಾಣಿಸಿದಲ್ಲಿ ಎಡಗಡೆಗೆ ಇತಿಹಾಸ… Read More ಕೈದಾಳ ಶ್ರೀ ಚನ್ನಕೇಶವ

ಮೃಗವಧೆ

ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಹೆಸರಿನೊಂದಿಗೆ ಇರುವ ಉಪನಾಮಗಳು ಇಲ್ಲವೇ ಅವರ ಊರಿನ ಹೆಸರು ಒಂದೊಂದು ಇತಿಹಾಸವನ್ನು ಹೇಳುತ್ತವೆ. ದುರಾದೃಷ್ಟವಷಾತ್ ನಾವು ಆ ಊರಿನ ಹೆಸರು ಮತ್ತು ಇತಿಹಾಸವನ್ನು ತಿಳಿದುಕೊಳ್ಳದೇ ಅವುಗಳನ್ನು ಬದಲಾಯಿಸಲು ಮುಂದಾಗಿರುವುದು ವಿಪರ್ಯಾಸವೆನಿಸುತ್ತದೆ. ಇತ್ತೀಚೆಗೆ ನನಗೆ ಪರಿಚಿತರಾದ ಗೆಳೆಯರೊಬ್ಬರ ಹೆಸರಿನೊಂದಿಗೆ ಮೃಗವಧೆ ಎಂದಿದ್ದದ್ದನ್ನು ಕೇಳಿದಾಗ ನನ್ನ ಕಿವಿಗಳು ಚುರುಕಾಗಿ ಅವರ ಊರಿನ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗಲೇ ನಮ್ಮ ದೇಶದಲ್ಲಿ ನಡೆದ ಮತ್ತು ಈಗ ಅವುಗಳನ್ನು ಕಥೆಗಳ ರೂಪದಲ್ಲಿ ಓದುತ್ತಿರುವ ರಾಮಾಯಣ ಮತ್ತು ಮಹಾಭಾರತದ ಬಗ್ಗೆ… Read More ಮೃಗವಧೆ

ಶ್ರೀ ಪಲ್ಲಿಕೊಂಡೇಶ್ವರ, ಸುರಟಪಲ್ಲಿ

ನಮ್ಮ ಸನಾತನ ಧರ್ಮದಲ್ಲಿ ನಮಗೆ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತಹ ಅಧ್ಭುತವಾದ ಪುರಾಣ ಪುಣ್ಯ ಗ್ರಂಥಗಳು ಮತ್ತು  ಕಥೆಗಳೇ ಪವಿತ್ರವಾಗಿದ್ದು ಅದರ ಆಧಾರದಲ್ಲಿ ನಮ್ಮ ಜೀವನ ಪದ್ದತಿಯನ್ನು ರೂಡಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಕೆಲವರು ಈ ರೀತಿಯ ಪುರಾಣ ಪುಣ್ಯ ಕಥೆಗಳೆಲ್ಲವೂ  ಕೇವಲ ಕಾಲ್ಪನಿಕ ಕಥೆಯಷ್ಟೇ ಆ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡದೇ ಇಲ್ಲಾ ಎನ್ನುವ ವಿತಂಡ ವಾದವೂ ಇದೆ. ಆದರೆ  ಇಂತಹವರಿಗೆ ಸೂಕ್ತವಾದ ಉತ್ತರವನ್ನು ನೀಡಬಹುದಾದ ಮತ್ತು  ಜಗತ್ತಿನಲ್ಲಿ ಅತಿ ವಿರಳವಾಗಿ ಕಂಡು ಬರುವ… Read More ಶ್ರೀ ಪಲ್ಲಿಕೊಂಡೇಶ್ವರ, ಸುರಟಪಲ್ಲಿ