ಜಾಂಬವಂತನ ಗುಹೆ, ಪೋರ್ ಬಂದರ್

ತ್ರೇತಾಯುಗದಲ್ಲಿ ನಡೆದ ರಾಮಾಯಣ ಮತ್ತು ದ್ವಾಪರಯುಗದಲ್ಲಿ ನಡೆದ ಮಹಾಭಾರತ ಈ ಕಲಿಯುಗದಲ್ಲಿಯೂ ನಮ್ಮ ಶ್ರದ್ಧೇಯ ಮಹಾಕಾವ್ಯಗಳು . ಭಗವಾನ್ ವಿಷ್ಣುವಿನ ದಶಾವತಾರದ ಅಂಗವಾಗಿ ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಮನುಷ್ಯ ರೂಪದಲ್ಲಿ ಈ ಭೂಮಿಯ ಮೇಲೆ ಅವತಾರವೆತ್ತಿದ್ದ ಪ್ರಭು ಶ್ರೀ ರಾಮ ಮತ್ತು ಶ್ರೀ ಕೃಷ್ಣನನ್ನು ಇಂದಿಗೂ ನಾವು ದೇವರಂತೆ ಪೂಜಿಸುತ್ತೇವೆ. ಆದರೆ ಕೆಲವು ಸ್ವಘೋಷಿತ ಬುದ್ಧಿ ಜೀವಿಗಳು ಮತ್ತು ಹಿಂದೂ ವಿರೋಧಿ ಶಕ್ತಿಗಳು ರಾಮಾಯಣ ಮತ್ತು ಮಹಾಭಾರತ ಎನ್ನುವುದು ನಡೆದೇ ಇಲ್ಲ. ಅದೊಂದು ಕಾಲ್ಪನಿಕ… Read More ಜಾಂಬವಂತನ ಗುಹೆ, ಪೋರ್ ಬಂದರ್

ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ರಾಗಿಗುಡ್ಡ

ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಕೆಲದಿನಗಳ ಹಿಂದೆ ಜಯನಗರದ ಕುರಿತಾಗಿ ತಿಳಿದುಕೊಂಡಿದ್ದೆವು. ಇಂದು ಅದೇ ಜಯನಗರಕ್ಕೇ ಹೊಂದಿಕೊಂಡೇ ಇರುವಂವಹ ಜಗತ್ಪ್ರಸಿದ್ದವಾದ ರಾಗಿಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಇತಿಹಾಸದ ಬಗ್ಗೆ ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಇತಿಹಾಸವನ್ನು ಈ ವೀಡಿಯೂ ಮೂಲಕವೂ ತಿಳಿಯಬಹುದಾಗಿದೆ ಸಾಮಾನ್ಯವಾಗಿ ಪ್ರತಿಯೊಂದು ಹಳ್ಳಿ ಅಥವಾ ಊರಿಗೆ ಹೋದಾಗ ಆ ಊರಿನ ಮುಂಭಾಗದಲ್ಲೇ ಅಂಜನಿ ಪುತ್ರ ಆಂಜನೇಯ… Read More ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ರಾಗಿಗುಡ್ಡ

ಸಿಂಹಾಚಲಂನ ಸಿಂಹಾದ್ರಿ

ಸಿಂಹಾಚಲಂ ಅಥವಾ ಸಿಂಹಾದ್ರಿ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಹೊರವಲಯದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಊರಾಗಿದೆ. ನರಸಿಂಹ ಸ್ವಾಮಿಯ ಪ್ರಸಿದ್ಧ 18 ಕ್ಷೇತ್ರಗಳಲ್ಲಿ ಸಿಂಹಾದ್ರಿಯೂ ಒಂದಾಗಿದೆ. ಈ ದೇವಾಲಯದಲ್ಲಿ ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೇ ಅವತಾರವಾದ ನರಸಿಂಹ ಸ್ವಾಮಿಯ ವಿಶಿಷ್ಟವಾದ ವಿಗ್ರಹವಿದೆ. ಈ ವಿಗ್ರಹದ ದೇಹವು ಸದೃಢವಾದ ಮಾನವ ಶರೀರದಂತಿದ್ದರೆ ತಲೆಯ ಭಾಗವು ಸಿಂಹದ ಮುಖ ಹೊಂದಿದೆ ಬೆಟ್ಟದ ಮೇಲೆ ವರಹಾ ನರಸಿಂಹ ಸ್ವಾಮಿಯ ವಾಸಸ್ಥಾನವೆಂದು ಹೇಳಲಾಗುವ ಪ್ರಸಿದ್ಧ ದೇವಾಲಯವಾಗಿದ್ದು ಪ್ರತೀ ವರ್ಷವೂ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ… Read More ಸಿಂಹಾಚಲಂನ ಸಿಂಹಾದ್ರಿ

ಪ್ರಯಾಗದ ಬಡೇ ಹನುಮಾನ್ ಜೀ ಮಂದಿರ್

ಪ್ರಯಾಗ ಭಾರತದ ಅತ್ಯಂತ ಪ್ರಾಚೀನ ನಗರದಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಬಹುದೊಡ್ಡ ನಗರದಲ್ಲಿ ಇದೂ ಸಹಾ ಒಂದಾಗಿದ್ದು ಪೌರಾಣಿಕವಾಗಿಯೂ ಮತ್ತು ಐತಿಹಾಸಿಕವಾಗಿಯೂ ಪ್ರಸಿದ್ಧ ನಗರವಾಗಿದೆ. ವೇದ ಪುರಾಣಗಳಲ್ಲಿಯೂ ಈ ನಗರದ ಬಗ್ಗೆ ಉಲ್ಲೇಖವಿದ್ದು ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ನಂತರ ಬ್ರಹ್ಮದೇವ ಪ್ರಥಮವಾಗಿ ಇದೇ ನಗರದಲ್ಲಿಯೇ ಯಜ್ಞಮಾಡಿದ ಎಂಬ ಪ್ರತೀತಿ ಇದೆ. ಆದ್ದಾರಿಂದಲೇ ಈ ನಗರಕ್ಕೆ ಪ್ರಯಾಗ ಎಂಬ ಹೆಸರು ಬಂದಿತೆಂದು ನಂಬಲಾಗಿದೆ. ಇದು ಮೂರು ನದಿಗಳು ಸೇರುವ ತ್ರಿವೇಣಿ ಸಂಗಮವೂ ಹೌದು. ಗಂಗ ಯಮುನಾ ಮತ್ತು ವೇದಗಳಲ್ಲಿ… Read More ಪ್ರಯಾಗದ ಬಡೇ ಹನುಮಾನ್ ಜೀ ಮಂದಿರ್

ಉಲ್ಟೇ ಹನುಮಾನ್ ಮಂದಿರ್

ಭಕ್ತಿ ಅಂದ ತಕ್ಷಣ ನಮ್ಮ ಮನಸ್ಸಿಗೆ ಥಟ್ ಅಂತಾ ನೆನಪಿಗೆ ಬರುವುದೇ ರಾಮನ ಭಕ್ತಾಗ್ರೇಸರ ಅಂಜನೀ ಪುತ್ರ ಪವನಸುತ ಹನುಮಾನ್ ಎಂದರೆ ಅತಿಶಯೋಕ್ತಿಯೇನಲ್ಲ. ಸೀತಾಮಾತೆಯ ಅನ್ವೇಷಣೆಯ ಸಂದರ್ಭದಲ್ಲಿ ಸಮುದ್ರೋಲಂಘನವನ್ನು ಮಾಡಿ ಲಂಕೆಗೆ ಹೋಗಿ ಸೀತಾಮಾತೆಯನ್ನು ಹುಡುಕಿಕೊಂಡ ಬಂದ ಭಜರಂಗಬಲಿ ಇವನು. ಮಹಾನ್ ಪರಾಕ್ರಮಿಯಾದ ಕಾರಣಕ್ಕಾಗಿಯೇ, ಪ್ರಪಂಚಾದ್ಯಂತ ಹನುಮಂತನ ಬೃಹತ್ತಾದ ಪ್ರತಿಮೆಗಳನ್ನು ಎಲ್ಲೆಡೆಯಲ್ಲಿಯೂ ಕಾಣಬಹುದಾಗಿದೆ. ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆಯ ಪ್ರತೀಕವೆಂದೇ ಪರಿಗಣಿಸಲ್ಪಟ್ಟ ಆಂಜನೇಯನ ನಿಂತಿರುವ ಇಲ್ಲವೇ ಸಂಜೀವಿನ ಪರ್ವತವನ್ನು ಹೊತ್ತಿರುವ ವಿಗ್ರಹವನ್ನು ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಮತ್ತು… Read More ಉಲ್ಟೇ ಹನುಮಾನ್ ಮಂದಿರ್

ಮೇಲುಕೋಟೆಯ ವೈರಮುಡಿ ಉತ್ಸವ

ಮೇಲುಕೋಟೆ ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕಲೆ, ಸಂಸ್ಕೃತಿ, ಶಿಲ್ಪಕಲೆಯಿಂದ ಕೂಡಿದ ಸುಂದರವಾದ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರ ಕರ್ಮ ಭೂಮಿಯೂ ಆಗಿದೆ. ಬೆಟ್ಟ ಗುಡ್ಡಗಳ ನಡುವೆ ಇರುವ ಈ ಊರಿನಲ್ಲಿ ಸರಿ ಸುಮಾರು 101 ದೇಗುಲಗಳು ಹಾಗೂ 101 ಕಲ್ಯಾಣಿಗಳಿರುವ ಸುಂದರ ಬೀಡಾಗಿದ್ದು ಶ್ರೀ ವೈಷ್ಣವರ ಯಾತ್ರಾ ಸ್ಥಳವಾಗಿಯೂ, ಅನೇಕ ಶ್ರದ್ದೇಯ ಆಸ್ತಿಕ ಬಂಧುಗಳ ಪುಣ್ಯಕ್ಷೇತ್ರವಾಗಿಯೂ ಮತ್ತು ಪ್ರವಾಸಿಗರ ಮತ್ತು ಚಿತ್ರರಂಗದ ನೆಚ್ಚಿನ ಚಿತ್ರೀಕರಣದ ತಾಣವೂ ಆಗಿದೆ.… Read More ಮೇಲುಕೋಟೆಯ ವೈರಮುಡಿ ಉತ್ಸವ

ಇಕ್ಕೇರಿಯ ಅಘೋರೇಶ್ವರ ರಥೋತ್ಸವ

ಇಕ್ಕೇರಿ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು 6 ಕಿಮೀ ದೂರದಲ್ಲಿರುವ ಪಟ್ಟಣವಾಗಿದೆ. 1499-1763ರ ನಡುವೆ ಈ ಪ್ರದೇಶವನ್ನು ಆಳಿದ ಕೆಳದಿಯ ನಾಯಕರ ರಾಜಧಾನಿಯಾಗಿತ್ತು. ಇಲ್ಲಿರುವ ಅಘೋರೇಶ್ವರ ದೇವಸ್ಥಾನ ಬಹಳ ಪ್ರಖ್ಯಾತವಾಗಿದ್ದು, ಇದರ ಕುರಿತಾಗಿ ಅನೇಕ ದಂತ ದಂತಕಥೆಗಳಿವೆ. ಚೌಡೇಗೌಡ ಮತ್ತು ಭಧ್ರೇ ಗೌಡ ಎಂಬ ಇಬ್ಬರು ಸಹೋದರರು ಅದೊಮ್ಮೆ ತಮ್ಮ ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ, ಅವರ ಹಸುವೊಂದು ಅಲ್ಲಿದ್ದ ಹುತ್ತದ ಮೇಲೆ ತಂತಾನೇ ಹಾಲನ್ನು ಸುರಿಸುತ್ತಿದ್ದದ್ದನು ಗಮನಿಸಿ ಆ ಹುತ್ತವನ್ನು ಅಗೆದಾಗ ಅಲ್ಲೊಂದು ಲಿಂಗವನ್ನು ಕಂಡು ಭಕ್ತಿಪೂರ್ವಕವಾಗಿ… Read More ಇಕ್ಕೇರಿಯ ಅಘೋರೇಶ್ವರ ರಥೋತ್ಸವ

ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ

ಮನೆಯಲ್ಲಿ ಕುಳಿತು ತುಂಬಾನೇ ಬೋರ್ ಆಗ್ತಾ ಇದ್ಯಾ? ಎಲ್ಲಾದ್ರೂ ಹತ್ತಿರದಲ್ಲೇ ಸುತ್ತಾಡಿಕೊಂಡು ಬರೋಣಾ ಅನ್ನಿಸ್ತಾ ಇದ್ಯಾ? ಹಾಗಾರೇ ಇನ್ನೇಕೆ ತಡಾ, ಬನ್ನಿ ನನ್ನ ಸಂಗಡ, ಬೆಂಗಳೂರಿನಿಂದ ದೇವನಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋ ದಾರಿಯಲ್ಲಿ ಎಡಗಡೆ ದೊಡ್ಡದಾಗಿ MV Solar ಕಂಪನಿ ಕಾಣಿಸುತ್ತದೆ ಅಲ್ಲಿಂದ ಸರ್ವಿಸ್ ರೋಡ್ ತೆಗೆದುಕೊಂಡರೆ ಸಿಗೋದೇ ವಿದ್ಯಾನಗರ. ಬಲಕ್ಕೆ ತಿರುಗಿ ವೆಂಕಟೇಶ್ವರ ಇಂಜೀನಿಯರಿಂಗ್ ಕಾಲೇಜ್ ದಾಟಿಕೊಂಡು ಸುಮಾರು ಎರಡು ಕಿ.ಮೀ, ದೂರ ಕ್ರಮಿಸಿದರೆ ಎಡಗಡೆಗೆ ಸಿಗುವ ಶ್ರೀಕ್ಷೇತ್ರವೇ, ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ. ಇದು… Read More ಉತ್ತನಹಳ್ಳಿ ಅಕ್ಕಯ್ಯಮ್ಮನ ಬೆಟ್ಟ

ಬಾಳಗಂಚಿ ಊರ ಹಬ್ಬ ಆಚರಿಸುವಿಕೆ

ನಮ್ಮೂರು ಬಾಳಗಂಚಿಯ ಸಮಸ್ತ ಗ್ರಾಮಸ್ಥರಿಗೆ ಸಾಷ್ಟಾಂಗ ಪ್ರಣಾಮಗಳು. ಕಳೆದ ವರ್ಷ ದೊಡ್ಡ ಹಬ್ಬಕ್ಕೆ ಊರಿಗೆ ಬಂದು ಸಂಭ್ರಮಿಸಿ ಹೋದ ನಂತರ, ಊರಿಗೆ ಬರುವ ಅವಕಾಶವೇ ದೊರೆತಿರಲಿಲ್ಲ. ಈ ವರ್ಷ ಯುಗಾದಿಯ ಸಮಯದಲ್ಲಿ ಕೋರೋನಾ ಮಾಹಾಮಾರಿಯ ಸಂಬಂಧಿತವಾಗಿ ಪ್ರಪಂಚಾದ್ಯಂತವೇ ಲಾಕ್ ಡೌನ್ ಇದ್ದ ಕಾರಣ ಊರ ಹಬ್ಬ ಮುಂದೂಡಿದ್ದು ಸ್ವಲ್ಪ ಬೇಸರವೆನಿದರೂ, ಈ ವರ್ಷ ಹಬ್ಬ ನಿಲ್ಲಿಸದೇ ಮುಂದೂಡಿರುವ ವಿಷಯ ತುಸು ನೆಮ್ಮದಿ ತಂದಿದ್ದು, ಕಾಲ ಎಲ್ಲವೂ ಸರಿ ಹೋದ ನಂತರ ಪ್ರತೀ ವರ್ಷದಷ್ಟು ವಿಜೃಂಭಣೆಯಲ್ಲದಿದ್ದರೂ ಸರಳ ಸಂಭ್ರಮವಾಗಿ,… Read More ಬಾಳಗಂಚಿ ಊರ ಹಬ್ಬ ಆಚರಿಸುವಿಕೆ