ಬೇಬಿ ಶ್ಯಾಮಿಲಿ

ತೊಂಬತ್ತರ ದಶಕದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪರಿಚಿತವಾಗಿ, ಆಗಿನ ಕಾಲದ ಸ್ಟಾರ್ ನಟ-ನಟಿಯರಿಗೆ ಸಮನಾಗಿ ಬೆಳೆದು ಅವರಷ್ಟೇ ಇಲ್ಲವೇ ಅವರಿಗಿಂತಲೂ ಅಧಿಕ ಸಂಭಾವನೆ ಪಡೆಯುತ್ತಾ, ಆ ಸ್ಟಾರ್ ನಟ-ನಟಿಯರೂ ಈ ಪುಟ್ಟ ಹುಡುಗಿಯ ಕಾಲ್ ಶೀಟಿಗೆ ತಕ್ಕಂತೆ ತಮ್ಮ ಕಾಲ್ ಶೀಟ್ ಅನುಸರಿಸಿಕೊಳ್ಳುವಂತಹ ಸೆಲೆಬ್ರಿಟಿ ಬಾಲ ನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾಳೆ? ಏನು. ಮಾಡುತ್ತಿದ್ದಾಳೆ ಎಂಬ ಕುತೂಹಲಕಾರಿ ಸಂಗತಿ ಇದೋ ನಿಮಗಾಗಿ. ಆಗ ತೊಂಬತ್ತರ ದಶಕ. ನಾನಾಗ ಕಾಲೇಜ್ ವಿದ್ಯಾರ್ಥಿ. ಮಣಿರತ್ನಂ ನಿರ್ದೇಶನ ಮತ್ತು ಇಳೆಯರಾಜ ಅವರ… Read More ಬೇಬಿ ಶ್ಯಾಮಿಲಿ

ಸುಶಾಂತ್ ಸಿಂಗ್ ರಜಪೂತ್

ನೆನ್ನೆ ಇಡೀ ದಿನ ಯಾವುದೇ ದೃಶ್ಯ ಮಾಧ್ಯಮ ಮತ್ತು ಫೇಸ್ ಬುಕ್ ವಾಲ್ ಗಳಲ್ಲಿ, ವಾಟ್ಸ್ಯಾಪ್ ಡಿಪಿಗಳಲ್ಲಿ ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿಪ್ಪಿರುವ ಸುದ್ದಿಯದೇ ಚರ್ಚೆ. ಅವನ ಸಾವಿನ ಪರ-ವಿರೋಧಗಳನ್ನು ತಮ್ಮ ತಮ್ಮ ಶೈಲಿಯಲ್ಲಿ ಸಂತಾಪಸೂಚಿಸುತ್ತಿದ್ದರು. ಅದರಲ್ಲೊಬ್ಬರು, ಕಳೆದ ವಾರ ಕನ್ನಡ ಚಿರಂಜೀವಿ ಸರ್ಜಾ ಈ ವಾರ ಸುಶಾಂತ್ ಮರಣ ಹೀಗೆ ಇಬ್ಬರು ಉದಯೋನ್ಮುಖ ಕಲಾವಿದರುಗಳು ವಿಧಿವಶರಾಗಿರುವುದು ನಿಜಕ್ಕೂ ದುಃಖಕರ ಎಂದು ವ್ಯಕ್ತಪಡಿಸಿದ್ದರು. ಅದನ್ನು ನೋಡಿದ… Read More ಸುಶಾಂತ್ ಸಿಂಗ್ ರಜಪೂತ್

ಚಿರಂಜೀವಿ

ಚಿರಂಜೀವಿ ಎಂದರೆ ಸಾವಿಲ್ಲದವ ಎಂದರ್ಥ. ಆದರೆ ಜಾತಸ್ಯ ಮರಣಂ ಧೃವಂ ಎಂದರೆ ಹುಟ್ಟಿದವರು ಸಾಯಲೇ ಬೇಕೆಂಬುದು ಈ ಜಗದ ನಿಯಮವೂ ಹೌದು. ಹಾಗಾಗಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಅರಿವಿದ್ದರೂ, ಸಾವನ್ನೇ ಜಯಿಸಿ ಚಿರಂಜೀವಿಯಾಗುವ ಹಪಾಹಪಿಯಲ್ಲಿವವರಿಗೇನೂ ಕಡಿಮೆ ಇಲ್ಲ. ಆದರೆ ನಿಷ್ಕಲ್ಮಮಶವಾಗಿ ತಮ್ಮ ಮಗನಿಗೆ ಆ ಭಗವಂತ ದೀರ್ಘಾಯಸ್ಸು ನೀಡಲಿ ಎಂದು ತುಂಬು ಹೃದಯದಿಂದ ಚಿರಂಜೀವಿ ಎಂದು ಹೆಸರಿಸಿದ ಆ ಪೋಷಕರಿಗೂ ಭಗವಂತ ಈ ರೀತಿಯಾಗಿ ಮೋಸ ಮಾಡುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಹೌದು… Read More ಚಿರಂಜೀವಿ

ಕರ್ನಾಟಕ ರತ್ನ ಸಾಹಸಸಿಂಹ ವಿಷ್ಣುವರ್ಧನ್

ಕನ್ನಡ ಚಿತ್ರರಂಗ ಕಂಡ ಆತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ಆದರೆ ಅಷ್ಟೇ ದುರದೃಷ್ಟವಂತ ನಟ ಎಂದೇ ಜನಜನಿತವಾಗಿದ್ದ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ, ಸಾಧನೆ ಮತ್ತು ಅವರು ಅನುಭವಿಸಿದ ನೋವು ನಲಿವುಗಳ ಸಮಗ್ರ ಚಿತ್ರಣ ಇದೋ ನಿಮಗಾಗಿ

ನಿಮ್ಮವನೇ ಉಮಾಸುತ… Read More ಕರ್ನಾಟಕ ರತ್ನ ಸಾಹಸಸಿಂಹ ವಿಷ್ಣುವರ್ಧನ್

ಗುರುದತ್

ನಮ್ಮ ಕರ್ನಾಟಕದ ಪಡುಕೋಣೆ ಎಂಬ ಊರಿನ ಹೆಸರು ಕ್ರೀಡಾಜಗತ್ತಿನಲ್ಲಿ ಮತ್ತು ಚಲನಚಿತ್ರರಂಗದಲ್ಲಿ ಸಾಕಷ್ಟು ಚಿರಪರಿತವಾಗಿದೆ. ತಂದೆ ಪ್ರಕಾಶ್ ಪಡುಕೋಣೆ 1980ರಲ್ಲಿ ಆಲ್ ಇಂಗ್ಲೇಂಡ್ ಬ್ಯಾಂಡ್ಮಿಂಟನ್ ಛಾಂಪಿಯನ್ ಆಗುವ ಮೂಲಕ ಚಿರಪರಿಚಿತರಾದರೆ ಅವರ ಮಗಳು ದೀಪಿಕ ಪಡುಕೋಣೆ ಕಳೆದ ಎಂಟು ಹತ್ತು ವರ್ಷಗಳಿಂದ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿದ್ದಾಳೆ. ಅದರೆ 1940ರಲ್ಲೇ ಪಡುಕೋಣೆ ಹೆಸರನ್ನು ದೇಶಾದ್ಯಂತ ಪಸರಿಸಿದ ಹೆಸರಾಂತ ಚಿತ್ರಕಾರ, ನಟ, ನೃತ್ಯ ಸಂಯೋಜಕ,ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ಅಪ್ಪಟ ಕನ್ನಡಿಗ ಗುರುದತ್ ಶಿವಶಂಕರ್ ಪಡುಕೋಣೆ. ಎಲ್ಲರ ಪ್ರೀತಿಯ ಗುರುದತ್ ಅವರ… Read More ಗುರುದತ್

ಖ್ಯಾತ ಕಾದಂಬರಿಕಾರ ತರಾಸು

ಕನ್ನಡ ಚಿತ್ರರಂಗದ ದಿಗ್ಗಜರುಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಮತ್ತು ಅನಂತ್ ನಾಗ್ ಈ ಎಲ್ಲಾ ನಟರುಗಳ ನಡುವೆ ಒಂದು ಸಾಮ್ಯವಾದ ಅಂಶವಿದೆ ಎಂದರೆ ಅಶ್ವರ್ಯವಾಗುತ್ತದೆಯಲ್ಲವೇ? ಹೌದು ಎಲ್ಲಾ ನಟರುಗಳ ಹೆಮ್ಮೆಯ ಚಿತ್ರಗಳು ಇಲ್ಲವೇ ಅವರ ಮೊದಲ ಚಿತ್ರದ ಕಥೆಗಳು ಒಬ್ಬನೇ ಮಹಾನ್ ಲೇಖಕನ ಕಾದಂಬರಿಯನ್ನು ಆಧರಿದ್ದಾಗಿದೆ. ಹಾಗಾದರೇ ಆ ಮಹಾನ್ ಲೇಖಕರು ಯಾರು ಎಂದರೆ, ಅವರೇ, ನಮ್ಮೆಲ್ಲರ ಹೆಮ್ಮೆಯ ಲೇಖಕ ಶ್ರೀ ತಳುಕು ರಾಮಸ್ವಾಮಯ್ಯ ಸುಬ್ಬರಾಯ. ಎಲ್ಲರೂ ಅವರನ್ನು ಪ್ರೀತಿಯಿಂದ ತರಾಸು ಎಂದೇ ಕರೆಯುತ್ತಿದ್ದರು. 21 ಏಪ್ರಿಲ್… Read More ಖ್ಯಾತ ಕಾದಂಬರಿಕಾರ ತರಾಸು

ರಾಜರ್ಷಿ, ಜಿ. ವಿ. ಅಯ್ಯರ್

ಕನ್ನಡದ ಮೇರು ನಟ ಬಾಲಕೃಷ್ಣ ಅವರ ಜೊತೆ ಜೊತೆಯಲ್ಲಿಯೇ ಗುಬ್ಬಿ ನಾಟಕದ ಕಂಪನಿಯಲ್ಲಿದ್ದು ನಂತರ ರಾಧಾ ರಮಣ ಚಿತ್ರದ ಮೂಲಕವೇ ಒಟ್ಟೊಟ್ಟಿಗೆ ಚಿತ್ರರಂಗ ಪ್ರವೇಶಿಸಿ ಮುಂದೆ ದಿಗ್ಗಜರಾಗಿ ಬೆಳೆದ ಮಹಾನ್ ನಟ, ಚಿತ್ರಸಾಹಿತಿ, ಸಂಭಾಷಣೆಕಾರ, ಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ ಎಲ್ಲದಕ್ಕಿಂತಲೂ ಹೆಚ್ಚಾಗಿ ಜನಾನುರಾಗಿ, ಕನ್ನಡ ಚಿತ್ರರಂಗದ ರಾಜರ್ಷಿ, ಕನ್ನಡ ಚಿತ್ರ ರಂಗದ ಭೀಷ್ಮ ಪಿತಾಮಹ ಎಂದರೂ ತಪ್ಪಾಗಲಾರದ ಶ್ರೀ ಗಣಪತಿ ವೆಂಕಟರಮಣ ಅಯ್ಯರ್ ಅರ್ಥಾತ್ ಜಿ.ವಿ.ಐಯ್ಯರ್ ಅವರ ಸಾಧನೆಗಳನ್ನು ಮೆಲುಕು ಹಾಕೋಣ. 1917ರ ಸೆಪ್ಟೆಂಬರ್ 3ರಂದು ನಂಜನಗೂಡಿನ… Read More ರಾಜರ್ಷಿ, ಜಿ. ವಿ. ಅಯ್ಯರ್

ಕನ್ನಡಾಭಿಮಾನಿ ಬಾಲಕೃಷ್ಣ

ಅಭಿನಯ ಎಲ್ಲರೂ ಮಾಡುವುದಕ್ಕಾಗುವುದಿಲ್ಲ. ಪ್ರತಿಯೊಂದು ಪಾತ್ರದಲ್ಲೂ ಅಭಿನಯಿಸಬೇಕಾದರೆ, ಆ ನಟನಿಗೆ ಆ ಪಾತ್ರದ ಸಂಫೂರ್ಣ ಪರಿಚಯವಿರಬೇಕು. ಆತ ತನ್ನ ಸಹನಟನ ಸರಿ ಸಮಾನಾಗಿ ಸೇರಿಗೆ ಸವ್ವಾ ಸೇರು ಎನ್ನುವಂತೆ ಕೇವಲ ಸಂಭಾಷಣೆಯಲ್ಲದೇ ಆಂಗೀಕವಾಗಿಯೂ ಅಭಿನಯಿಸ ಬೇಕಾಗುತ್ತದೆ. ಹಾಗೆ ಆಭಿನಯಿಸಲು ಪಾತ್ರದಲ್ಲಿ ತನ್ಮಯತೆ ಮತ್ತು ನಿರ್ದೇಶಕರು ಹೇಳಿಕೊಟ್ಟದ್ದನ್ನು ಅರ್ಥೈಸಿಕೊಂಡು ಅವರು ಹೇಳಿದ ರೀತಿಯಲ್ಲಿಯೇ ನಟಿಸಿ ತೋರಿಸ ಬೇಕಾಗುತ್ತದೆ. ಈ ರೀತಿಯಾಗಿ ಮಾಡಲು ಕಣ್ಣು ಕಿವಿ ಮತ್ತು ನಾಲಿಗೆ ಚುರುಕಾಗಿರ ಬೇಕು. ಆದರೆ ಕನ್ನಡ ಚಲನ ಚಿತ್ರ ಕಂಡ ಒಬ್ಬ… Read More ಕನ್ನಡಾಭಿಮಾನಿ ಬಾಲಕೃಷ್ಣ

ಆಟೋ ರಾಜ ಶಂಕರನಾಗ್

ಕನ್ನಡ ಚಿತ್ರರಂಗ ಕಂಡ ಅಪರೂಪದ ಮತ್ತು ಅನುರೂಪದ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಂತಹ ಶ್ರೀ ಶಂಕರ್ ನಾಗ್ ಅವರು ಸುಮಾರು ವರ್ಷಗಳ ಹಿಂದೆಯೇ ನಮ್ಮನ್ನಗಲಿದ್ದರೂ, ಇಂದಿಗೂ ತಮ್ಮ ಚಿತ್ರಗಳು, ಹಾಡು ಮತ್ತು ನೃತ್ಯಗಳ ಮೂಲಕವಲ್ಲದೇ, ಆಟೋಗಳ ಚಾಲಕರ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಮನ ಮಾಡಿದ್ದಾರೆ. 30 ಸೆಪ್ಟೆಂಬರ್ ಅವರ ಸಂಸ್ಮರಣಾ ದಿನದಿಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಿನಿಮಾಗಳ ಹೊರತಾಗಿಯೂ ಅವರ ಸಾಹಸಗಳ ಚಿತ್ರಣ ಇದೋ ನಿಮಗಾಗಿ… Read More ಆಟೋ ರಾಜ ಶಂಕರನಾಗ್