ಜಿ. ಕೆ. ವೆಂಕಟೇಶ್

ಹೈದರಾಬಾದಿನಲ್ಲಿ ಹುಟ್ಟಿ, ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು, ಗಾಯಕ, ಸಂಗೀತ ನಿರ್ದೇಶಕ, ನಟ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಥಮಗಳಿಗೆ ಕಾರಣೀಭೂತರಾಗಿದ್ದ, ದಕ್ಷಿಣ ಭಾರತದ ಅಷ್ಟೂ ಚಿತ್ರರಂಗದಲ್ಲಿ ಕನ್ನಡದ ಸಂಗೀತ ನಿರ್ದೇಶಕರು ಎಂದೇ ಪ್ರಖ್ಯಾತರಾಗಿದ್ದ ಶ್ರೀ ಜಿ.ಕೆ. ವೆಂಕಟೇಶ್ ಅವರ ಸಾಧನೆಗಳ ಇಣುಕು ನೋಟವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಜಿ. ಕೆ. ವೆಂಕಟೇಶ್

ಶಿಕ್ಷೆ ಕೊಡುವುದು ಸಜನೋ ಇಲ್ಲಾ ಮಜಾನೋ?

ಉಮೇಶ್ ರೆಡ್ಡಿಯಂತಹ ವಿಕೃತಕಾಮಿಗೆ ಮರಣೆ ದಂಡನೆ ತಪ್ಪಿಸುವುದು, ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವುದು, ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವವನಿಗೆ ತಮ್ಮ ಕುಟುಂಬದೊಡನೆ ಏಕಾಂತದಲ್ಲಿ ಕಾಲ ಕಳೆಯುಂವಂತಹ ಆದೇಶವನ್ನು ಘನವೆತ್ತ ನ್ಯಾಯಾಲಯಗಳು ಕೊಡುತ್ತವೆ ಎಂದರೆ, ಅಪರಾಧಿಗಳಿಗೆ ಶಿಕ್ಷೆ ಎನ್ನುವುದು ಸಜಾ ಬದಲು ಮಜವಾಗಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವುದಿಲ್ಲವೇ? ಹಾಗಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲೂ ಆಮೂಲಾಗ್ರ ಬದಲಾವಣೆ ಅಗಬೇಕಲ್ಲವೇ?… Read More ಶಿಕ್ಷೆ ಕೊಡುವುದು ಸಜನೋ ಇಲ್ಲಾ ಮಜಾನೋ?

ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ಪ್ರಪಂಚದಾದ್ಯಂತ ಇರುವ 196 ದೇಶಗಳಲ್ಲಿ ಸುಮಾರು 7,117 ಭಾಷೆಗಳಲ್ಲಿ ಮಾತನಾಡುತ್ತಾರೆ. ಭಾರತದಲ್ಲಿ ಸುಮಾರು 700ಕ್ಕೂ ಹೆಚ್ಚು ಭಾಷೆಗಳಿದ್ದು 22 ಅಧಿಕೃತ ಭಾಷೆಗಳಿದ್ದು, 2000ಕ್ಕೂ ಹೆಚ್ಚಿನ ಉಪಭಾಷೆಗಳಿದ್ದು, ವಿಶಾಲವಾದ ಭಾಷಾ ಸಂಪತ್ತನ್ನು ಹೊಂದಿದ್ದರೂ, ಬ್ರಿಟೀಷರ ದಾಸ್ಯದ ಸಂಕೇತವಾಗಿರುವ ಇಂಗ್ಲೀಷ್ ಭಾಷೆಯನ್ನೇ ಇಂದಿಗೂ ಭಾರತೀಯರು ಒಪ್ಪಿಕೊಂಡು ಅಪ್ಪಿಕೊಂಡಿರುವುದು ನಿಜಕ್ಕೂ ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕಾರಕ್ಕೆ ಮಾಡುವ ಅಪಮಾನವೇ ಸರಿ.… Read More ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ಕಾಂತಾರ ಒಂದು ದಂತಕಥೆ

ಮಾನವ ಹಾಗೂ ಪರಿಸರದ ನಡುವಿನ ಸಂಘರ್ಷ, ಜಮೀನ್ದಾರರ ಕಾಡು ಒತ್ತುವರಿ, ಅರಣ್ಯಾಧಿಕಾರಿಗಳ ಕಿರಿಕಿರಿಯ ಜೊತೆಗೆ ಕರಾವಳಿಯ ಸಂಸ್ಕೃತಿ, ಕಂಬಳದ ಸೊಬಗು, ಭೂತಕೋಲದ ಬಗ್ಗೆ ಅಲ್ಲಿಯ ಜನರ ನಂಬಿಕೆಯನ್ನು ಅಧ್ಭುತವಾಗಿ ತೆರೆ ಮೇಲೆ ತರಲಾಗಿರುವ ಕಾಂತಾರ ಚಿತ್ರದ ವಸ್ತುನಿಷ್ಠ ವಿಮರ್ಶೆ ಇದೋ ನಿಮಗಾಗಿ.… Read More ಕಾಂತಾರ ಒಂದು ದಂತಕಥೆ

ಅನಾಥ ಶವಗಳ ತ್ರಿವಿಕ್ರಮ ಮಹದೇವ್

ಪುರಾಣ ಕಾಲದಲ್ಲಿ ವಿಶ್ವಾಮಿತ್ರರ ಸಾಲವನ್ನು ತೀರಿಸುವ ಸಲುವಾಗಿ ರಾಜಾ ಸತ್ಯಹರಿಶ್ಚಂದ್ರ ಸ್ಮಶಾನದಲ್ಲಿ ಕಳೇಬರಗಳನ್ನು ಸುಡುವಂತಹ ಕಾಯಕದಲ್ಲಿ ತೊಡಗಿದ್ದರೆ, ಈ ಕಲಿಯುಗದಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಅವರಣದಲ್ಲಿ ಅನಾಥಶವಗಳಿಗೆ ಅಂತ್ಯಕ್ರಿಯೆ ಮಾಡುತ್ತಾ ನಿರ್ಸ್ವಾರ್ಧ ಸೇವೆಯನ್ನು ಸಲ್ಲಿಸುತ್ತಿದ್ದ ಇದುವರೆಗೂ ಸುಮಾರು ಒಂದರಿಂದ ಒಂದೂವರೆ ಲಕ್ಷ ಅನಾಥ ಶವಗಳ ಅಂತ್ಯಸಂಸ್ಕಾರಗಳನ್ನು ಮಾಡುವ ಮೂಲಕ ಅನಾಥ ಶವಗಳ ತ್ರಿವಿಕ್ರಮ ಎಂದೇ ಖ್ಯಾತಿ ಪಡೆದಿದ್ದ ಎಂ ಮಹದೇವ್ ಜುಲೈ 14 2022 ರಂದು ನಿಧನರಾಗಿದ್ದಾರೆ ಎಂಬ ವಿಷಯ ತಡವಾಗಿ ತಿಳಿದು ಬಂದಿರುವುದು ನಿಜಕ್ಕೂ… Read More ಅನಾಥ ಶವಗಳ ತ್ರಿವಿಕ್ರಮ ಮಹದೇವ್

ಕಶ್ಮೀರ್ ಫೈಲ್ಸ್ ಅನುಭವ

ಮಾರ್ಚ್ ೧೧ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಎಂದರೂ ತಪ್ಪಾಗದು. ಏಕೆಂದರೆ ಸಾವಿರಾರು ವರ್ಷಗಳ ಇತಿಹಾಸವನ್ನು ಕರಾರುವಾಕ್ಕಾಗಿ ತಿಳಿದಿರುವ ನಮಗೆ ಕೇವಲ ೩೨ ವರ್ಷಗಳ ಹಿಂದೆ ನಡೆದಿದ್ದ ಕಾಶ್ಮೀರೀ ಪಂಡಿತರ ನರಮೇಧದ ಕುರಿತಾಗಿ ನಿಜವಾದ ಇತಿಹಾಸವನ್ನೇ ತಿಳಿಯದಿದ್ದ ನಮಗೆ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿಯವರ ಕಾಶ್ಮೀರಿ ಫೈಲ್ಸ್ ಚಲನಚಿತ್ರ ಬಿಡುಗಡೆಯಾದ ದಿನ. ಈ ಚಿತ್ರದ ಮೂಲಕ ಆ ನಿರ್ದೇಶಕ ಕಾಶ್ಮೀರದ ಕುರಿತಾದ ನೈಜ ಇತಿಹಾಸನ್ನು ಜಗತ್ತಿಗೇ ತಿಳಿಸಿದ್ದಕ್ಕಾಗಿ ಮೊದಲು ಅಭಿನಂದನೆಗಳನ್ನು ಸಲ್ಲಿಸೋಣ. ಚಿತ್ರ… Read More ಕಶ್ಮೀರ್ ಫೈಲ್ಸ್ ಅನುಭವ

ಉಕ್ರೇನಿನ ನೈಜ ಮುಖ

ಕಾಲು ಕೆರೆದುಕೊಂಡು ರಷ್ಯಾದ ವಿರುದ್ಧ ಯುದ್ದ ಮಾಡಲು ಹೋಗಿ ತಪರಾಕಿ ಹಾಕಿಸಿಕೊಳ್ಳುತ್ತಿರುವ ಉಕ್ರೇನಿನ ನೆರೆ ರಾಷ್ಟ್ರಗಳಿಂದ ಉಕ್ರೇನಿನಲ್ಲಿ ಸಿಲಿಕಿಕೊಂಡಿರುವ ಭಾರತೀಯರು ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಆಪರೇಷನ್ ಗಂಗಾ ಮೂಲಕ ಭಾರತಕ್ಕೆ ಕರೆತರುವ ಪ್ರಯಾಸದಲ್ಲಿದ್ದರೆ, ಕಮ್ಯೂನಿಷ್ಟ್ ಮನಸ್ಥಿತಿಯ ಬಹುತೇಕ ಮಾಧ್ಯಮಗಳು ಹುಡುಕಿ ಹುಡುಕೀ ಭಾರತ ಸರ್ಕಾರದ ಉಚಿತ ವಿಮಾನದಲ್ಲೇ ಬಂದು ಅದೇ ಭಾರತ ಸರ್ಕಾರ ವಿರುದ್ಧ ಮಾತನಾಡುವವರ ಸಂದರ್ಶನವನ್ನು ಪ್ರಸರಿಸಿ ಪರೋಕ್ಷವಾಗಿ ಆಪರೇಷನ್ ಗಂಗಾ ಎನ್ನುವುದು ವಿಫಲ ಪ್ರಯತ್ನ… Read More ಉಕ್ರೇನಿನ ನೈಜ ಮುಖ

ಹೆಣ್ಣೊಂದು ಕಲಿತರೆ ಸಮಾಜವೇ ಉದ್ದಾರವಾದಂತೆ

ವಿದ್ಯೆ, ವಿವೇಕಕಿಂತಲೂ, ಧರ್ಮವೇ ಹೆಚ್ಚು ಎಂದು ದೇಶ ಮತ್ತು ಧರ್ಮದ ನಡುವಿನ ಅಂತರ ತಿಳಿಯದ 6 ಹೆಣ್ಣು ಮಕ್ಕಳಿಂದಾಗಿ ಇಡೀ ರಾಜ್ಯಕ್ಕೇ ಕೆಟ್ಟ ಹೆಸರು ತರುತ್ತಿರುವ ಈ ಸಂಧರ್ಭದಲ್ಲಿ 9 ದಶಕಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿಯೂ ತನ್ನ ವಿವೇಕ ಕಳೆದುಕೊಳ್ಳದೇ ವಿದ್ಯೆ ಕಲಿತು ಇಡೀ ಸಮಾಜವನ್ನೇ ಬದಲಾಯಿಸಿದಂತಹ  ಸಾಮಾಜಿಕ ಜಾಲತಾಣದಲ್ಲಿ ಓದಿದ್ದ ಹೃದಯಸ್ಪರ್ಶಿ ಕಥೆಯೊಂದರ ಭಾವಾನುವಾದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅದು 1943, ಹುಬ್ಬಳ್ಳಿಯ ಮೂಲದ 22 ವರ್ಷದ ಯುವ ವೈದ್ಯರಾಗಿದ್ದ ಡಾ. ಆರ್. ಎಚ್. ಕುಲಕರ್ಣಿಯವರು ಮಹಾರಾಷ್ಟ್ರ-ಕರ್ನಾಟಕ… Read More ಹೆಣ್ಣೊಂದು ಕಲಿತರೆ ಸಮಾಜವೇ ಉದ್ದಾರವಾದಂತೆ

ಗೀತಾ ಜಯಂತಿ

ಅದು ದ್ವಾಪರಯುಗ. ದುಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಭಗವಾನ್ ವಿಷ್ಣುವು ಶ್ರೀ ಕೃಷ್ಣನ ಅವತಾರದಲ್ಲಿ ಈ ಭೂಲೋಕದಲ್ಲಿ ಅವತರಿಸುತ್ತಾನೆ. ಆತನ ಬಂಧುಗಳೇ ಆಗಿದ್ದ ಪಾಂಡವರನ್ನು ಅವರ ದೊಡ್ಡಪ್ಪನ ಮಗನೇ ಆಗಿದ್ದ ಧುರ್ಯೋಧನ ತನ್ನ ಮಾವ ಶಕುನಿಯ ಕುತ್ರಂತ್ರದಿಂದ ಪಗಡೆಯ ಆಟದಲ್ಲಿ ಸೋಲಿಸಿ ಅವರ ರಾಜ್ಯವನ್ನು ಕಿತ್ತುಕೊಂಡು  12 ವರ್ಷಗಳ ಕಾಲ ವನವಾಸ ಮತ್ತು 1 ವರ್ಷಗಳ ಕಾಲ ಅಜ್ಞಾನವಾಸವನ್ನು ಯಶಸ್ವಿಯಾಗಿ ಪೂರೈಸಿದ ನಂತರವೇ ರಾಜ್ಯವನ್ನು ಹಿಂದಿರುಗಿಸುವುದಾಗಿ ವಾಗ್ಧಾನ ಮಾಡಿರುತ್ತಾನೆ. ಒಪ್ಪಂದಂತೆ ವನವಾಸ ಮತ್ತು  ಅಜ್ಞಾತವಾಸವನ್ನು ಯಶಸ್ವಿಯಾಗಿ… Read More ಗೀತಾ ಜಯಂತಿ