ಭರವಸೆ

ಅದು ಮಾಗಿಯ ಕಾಲ. ವಾತಾವರಣವೆಲ್ಲಾ ಬಹಳ ತಣ್ಣಗಿದ್ದು, ಕೈ ಕಾಲು ಹೆಪ್ಪುಗಟ್ಟುವಷ್ಟರ ಮಟ್ಟಿಗಿನ ಚಳಿ ಇತ್ತು. ಆ ಊರಿನ ಸಾಹುಕಾರರೊಬ್ಬರು ಇನ್ನೇನೂ ತನ್ನ ಭವ್ಯವಾದ ಬಂಗಲೆಯನ್ನು ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಚಳಿಯಿಂದ ತಮ್ಮ ಮನೆಯ ಹೊರಗೆ ಅಂತಹ ಮೈಕೊರೆಯುವ ಛಳಿಯಲ್ಲೂ ಮೈಮೇಲೆ ಸರಿಯಾದ ಬಟ್ಟೆಗಳಿಲ್ಲದ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಗಮನಿಸಿದರು. ಕೂಡಲೇ ತನ್ನ ಕಾರಿನಿಂದ ಇಳಿದ ಅವರು ಏನಪ್ಪಾ ನಿನಗೆ ಛಳಿಯಾಗುತ್ತಿಲ್ಲವೇ? ಇದೇಕೇ ಹೀಗೆ ಹೊದಿಕೆ ಇಲ್ಲದೇ ಇರುವೇ? ಎಂದು ಕೇಳಿದರು. ಸ್ವಾಮೀ ನಾನು ಬಡವ ಹಾಗಾಗಿ ನನ್ನ… Read More ಭರವಸೆ

ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಈ ವರ್ಷದದ ಆರಂಭದಲ್ಲಿ ಪ್ರಪಂಚಾದ್ಯಂತ ಧುತ್ತೆಂದು ಕಾಣಿಸಿಕೊಂಡ ಕರೋನ ಮಹಾಮಾರಿಯನ್ನು ತಡೆಗಟ್ಟಲು ಮೊದಲ ಮೂರ್ನಾಲ್ಕು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದ ನಂತರ ಪರಿಸ್ಥಿತಿ ತಹಬಂದಿಗೆ ಬಾರದ್ದದರೂ, ಆರ್ಥಿಕವಾಗಿ ಎಲ್ಲರನ್ನೂ ಹೈರಾಣು ಮಾಡಿದ ಫಲವಾಗಿ ಸರ್ಕಾರವೂ ಕೆಲವೊಂದು ಕಠಿಣ ನಿರ್ಣಯಗಳನ್ನು ತೆಗೆದುಕೊಂಡು ಜನ ಸಾಮಾನ್ಯರು ಸಾಮಾನ್ಯ ಸ್ಥಿತಿಗೆ ಬರುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಹಾಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡುವುದು,‌ನಮ್ಮ ಸುತ್ತ ಮುತ್ತಲಿನ ಸ್ವಚ್ಚತೆ ಕಾಪಾಡುವುದು ಮತ್ತು ಸಾರ್ವಜನಿಕವಾಗಿ ಒಬ್ಬರು ಗೊಬ್ಬರು ಅಂತರವನ್ನು ಕಾಪಾಡಿಕೊಳ್ಳುವುದು ಎಂದಿತ್ತು. ಸರ್ಕಾರ… Read More ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಡಾ. ಪ್ರಭಾಕರ್ ಭಟ್ ಕಲ್ಲಡ್ಕ

ಅವರು ಓದಿದ್ದು ಎಂ.ಬಿ.ಬಿ.ಎಸ್. ಅವರು ಮದುವೆಯಾದದ್ಫೂ ವೈದ್ಯರನ್ನೇ. ಇಬ್ಬರೂ ಯಾವುದೋ ಸರ್ಕಾರೀ ಸೇವೆ ಮಾಡಿಕೊಂಡು ತಿಂಗಳಂತ್ಯದಲ್ಲಿ ಕೈತುಂಬಾ ಸಂಬಳ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತು. ಇಲ್ಲವೇ ಗಂಡ ಹೆಂಡತಿ ಇಬ್ಬರೂ ಸೇರಿ ಒಂದು ಸುಸಜ್ಜಿತವಾದ ನರ್ಸಿಂಗ್ ಹೋಮ್ ಕಟ್ಟಿಸಿ ಲಕ್ಷ ಲಕ್ಷ ರೂಪಾಯಿಗಳನ್ನು ಸಂಪಾದಿಸಿಕೊಂಡು ಹಾಯಾಗಿ ಇರಬಹುದಿತ್ತು. ಅವರು ರಾಜಕಾರಣಕ್ಕೆ ಬಂದಿದ್ದರೆ ಇಷ್ಟು ಹೂತ್ತಿಗೆ ಶಾಸಕ ಇಲ್ಲವೇ ಸಂಸದರಾಗಿ ರಾಜ್ಯ ಸರ್ಕಾರವೋ ಇಲ್ಲವೇ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗ ಬಹುದಿತ್ತು. ಅವರು ಬಯಸಿದ್ದರೆ ಮುಖ್ಯಮಂತ್ರಿಗಳೂ ಆಗಬಹುದಿತ್ತು. ಆದರೆ ಆವರೆಂದೂ… Read More ಡಾ. ಪ್ರಭಾಕರ್ ಭಟ್ ಕಲ್ಲಡ್ಕ

ಸದಾನಂದ ವಿಶ್ವನಾಥ್

ಅದು ಎಂಭತ್ತರ ದಶಕ. ಕರ್ನಾಟಕ ಮತ್ತು ಭಾರತ ಕ್ರಿಕೆಟ್ ತಂಡದಲ್ಲಿ ಕನ್ನಡಿಗ ವಿಕೆಟ್ ಕೀಪರ್ ಸೈಯ್ಯದ್ ಕಿರ್ಮಾನಿಯವರ ಪ್ರಾಭಲ್ಯ ಮೆರೆಯುತ್ತಿರುತ್ತದೆ. ರಾಷ್ಟ್ರೀಯ ತಂಡ ಖಾಯಂ ವಿಕೆಟ್ ಕೀಪರ್ ಆಗಿದ್ದಲ್ಲದೇ, ಸಮಯ ಸಿಕ್ಕಾಗಲೆಲ್ಲಾ ರಾಜ್ಯ ತಂಡಕ್ಕೆ ತಮ್ಮ ಸೇವೆ ಸಲ್ಲಿಸುತ್ತಿರುತ್ತಾರೆ. ಅವರ ನಂತರ ರಾಜ್ಯತಂಡಕ್ಕೆ ಇನ್ನೇನು ನಂದನ್ ಎನ್ನುವ ಮತ್ತೊಬ್ಬ ಪ್ರತಿಭಾನ್ವಿತ ವಿಕೆಟ್ ಕೀಪರ್ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದೇ ಎಲ್ಲರೂ ಭಾವಿಸಿರುವಾಗಲೇ, ಧುತ್ ಎಂದು ಸ್ಥಳೀಯ ಲೀಗ್ ಕ್ರಿಕೆಟ್ಟಿನಲ್ಲಿ ಟನ್ ಗಟ್ಟಲೆ ರನ್ ಹೊಳೆ ಹರಿಸಿದ ಒಬ್ಬ… Read More ಸದಾನಂದ ವಿಶ್ವನಾಥ್

ಜೀವವಿದ್ದಲ್ಲಿ ಮಾತ್ರವೇ ಜೀವನ

ಕಳೆದ ಒಂದು ವಾರದಲ್ಲಿ, ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜ್ಯಸಭಾಸದಸ್ಯರು, ನಾಲ್ಕು ಬಾರಿ ಸಾಂಸದರಾಗಿ ಕೇಂದ್ರದಲ್ಲಿ ಮಂತ್ರಿಗಳಾಗಿದ್ದವರು ಮತ್ತು ಹಿರಿಯ ಶಾಸಕರಲ್ಲದೇ. ಹೆಸರಾಂತ ಗಾಯಕರರಾದ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡಿದ್ದೇವೆ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಚಿಂತಾಜನಕವಾಗಿದೆ. ಇವರೆಲ್ಲರೀ ಪರಿಸ್ಥಿತಿಯ ಹಿಂದೆ ಮಹಾಮಾರಿ ಕೂರೋನಾ ಕೈವಾಡವಿರುವುದು ಸ್ಪಷ್ಟವಾಗಿದೆ. ಸಚಿವರು, ಶಾಸಕರು, ಸಮಾಜದ ಗಣ್ಯವ್ಯಕ್ತಿಗಳಿಗೇ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲವೆಂದರೆ, ಇನ್ನು ಸಾಮಾನ್ಯ ಜನಗಳ ಪಾಡೇನು? ಸರ್ಕಾರ ಮತ್ತು ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ವಹಿಸಿದ್ದರೂ, ಸಮಾಜದಲ್ಲಿ ದಿನೇ… Read More ಜೀವವಿದ್ದಲ್ಲಿ ಮಾತ್ರವೇ ಜೀವನ

ದಿಢೀರ್ ಪಾಲಾಕ್ ದೋಸೆ

ಸಾಮಾನ್ಯವಾಗಿ ದೋಸೆ ಮಾಡಬೇಕು ಅಂದ್ರೇ, ಹಿಂದಿನ ದಿನ ದೋಸೆ ಹಿಟ್ಟನ್ನು ರುಬ್ಬಿಟ್ಟುಕೊಂಡು ಮಾರನೇ ದಿನ ದೋಸೆ ಮಾಡುವುದು ಸಹಜ ಪ್ರಕ್ರಿಯೆ. ಆದರೆ ನಾವಿಂದು ದಿಢೀರ್ ಆಗಿ ಆರೋಗ್ಯಕರವಾದ ಪಾಲಾಕ್ ದೋಸೆ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತೋರಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಪಾಲಾಕ್ ದೋಸೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ಪಾಲಾಕ್ ಸೊಪ್ಪು – 1 ಕಟ್ಟು ಪುದಿನಾ ಸೊಪ್ಪು – 1/2 ಕಟ್ಟು ಶುಂಠಿ – 1/4 ಇಂಚು ಹಸಿರು ಮೆಣಸಿನಕಾಯಿ -5-6… Read More ದಿಢೀರ್ ಪಾಲಾಕ್ ದೋಸೆ

ಉಸರೀಕಾಯಿ (ಸುಂಡಕಾಯಿ) ವತ್ತ ಕೊಳಂಬು 

ತಮಿಳುನಾಡಿನ ಯಾವುದೇ ಸಮಾರಂಭಗಳಿಗೆ ಹೋದಲ್ಲಿ ಅಥವಾ ಹೋಟೆಲ್ಗಳಲ್ಲಿ ಉಣಬಡಿಸುವ ಸಾಂಪ್ರದಾಯಿಕ ಅಡುಗೆಯಾದ ಉಸುರೀಕಾಯಿ (ಸುಂಡಕಾಯಿ) ವತ್ತ ಕೊಳಂಬು ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ವತ್ತ ಕೊಳಂಬು ಮಾಡಲು ಅವಶ್ಯವಾಗಿರುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ಕಡಲೇಬೇಳೆ – 2 ಚಮಚ ಉದ್ದಿನಬೇಳೆ- 2 ಚಮಚ ದನಿಯ- 1 ಚಮಚ ಮೆಂತ್ಯ- 1 ಚಮಚ ಮೆಣಸು- 1 ಚಮಚ ಜೀರಿಗೆ- 1 ಚಮಚ ಒಣಮೆಣಸಿನಕಾಯಿ – 5-6… Read More ಉಸರೀಕಾಯಿ (ಸುಂಡಕಾಯಿ) ವತ್ತ ಕೊಳಂಬು 

ಗೀಜಗದ ಗೂಡು

ಗೀಜಗ ಪಕ್ಷಿಗಳಲೆಲ್ಲಾ ಅತ್ಯಂತ ಬುದ್ದಿವಂತ ಪಕ್ಷಿ. ನೋಡಲು ಬಣ್ಣದ ಗುಬ್ಬಚ್ಚಿ ತರಹ ಗುಬ್ಬಚ್ಚಿ ಜಾತಿಗೇ ಸೇರುವ ಪಕ್ಷಿಯಾದರೂ ಗೀಜಗದ ಹಕ್ಕಿ ಪ್ರಾಕೃತಿಕ ವಾಸ್ತುಶಿಲ್ಪಿ ಅದರ ನೇಯ್ಗೆಯ ಕೌಶಲ್ಯವನ್ನು ಮನುಷ್ಯರೂ ಕಲಿತುಕೊಳ್ಳಬೇಕು. ಅದಲ್ಲದೇ ಅದು ತನ್ನ ಗೂಡನ್ನು ಕಟ್ಟಿ ಕೊಳ್ಳುವ ರೀತಿ ಮತ್ತು ಜಾಗ ನಿಜಕ್ಕೂಆಶ್ಚರ್ಯಕರ. ಸಾಮಾನ್ಯವಾಗಿ ಎತ್ತರದ ಮರದ ತುತ್ತ ತುದಿಯಲ್ಲೋ ಅಥವಾ ನೀರಿನ ಸೆಲೆಯ ಮೇಲಿರುವ ಗಿಡಗಳಲ್ಲಿ ಕಟ್ಟುವ ಮೂಲಕ ಯಾರೂ ತನ್ನ ಗೂಡನ್ನು ನಾಶ ಮಾಡದಂತೆ ತಡೆಯುವುದರಲ್ಲಿ ಎಚ್ಚರಿಕೆ ವಹಿಸುತ್ತದೆ. ಕೇವಲ ಹಸಿ ಮತ್ತು… Read More ಗೀಜಗದ ಗೂಡು

ತರಕಾರಿ ಕೂಟು

ಮನೆಯಲ್ಲಿ ನಾಲ್ಕಾರು ತರಕಾರಿಗಳು ಸ್ವಲ್ಪ ಸ್ವಲ್ಪವೇ ಉಳಿದು ಹೋಗಿರುತ್ತದೆ ಅದನ್ನು ಸುಮ್ಮನೇ ಬಿಸಾಡಲು ಮನಸ್ಸು ಬರೋದಿಲ್ಲ ಆಗ ಉಳಿದಿರುವ ನಾಲ್ಕಾರು ತರಕಾರಿಯನ್ನೇ ಬಳಸಿಕೊಂಡು ಸಾಂಪ್ರದಾಯಿಕವಾಗಿ ತಯಾರಿಸಬಹುದಾದ ಕೂಟು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಸುಮಾರು 4-6 ಜನರಿಗೆ ಸಾಕಾಗುವಷ್ಟು ಕೂಟು ತಯಾರಿಸಲು ಬೇಕಾಗುವ ಸಾಮಗ್ರಿಗಳು ಕಡಲೇ ಬೇಳೆ – 1 ಬಟ್ಟಲು ಕಡಲೇಕಾಯಿ ಬೀಜ – 1 ಬಟ್ಟಲು ಉದ್ದಿನ ಬೇಳೆ – 2 ಚಮಚ ಮೆಣಸು – 1/2 ಚಮಚ ಜೀರಿಗೆ – 1/2… Read More ತರಕಾರಿ ಕೂಟು