ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರಾವಣ ಬಹುಳ ಅಷ್ಟಮಿಯಂದು ದೇಶಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಗುವ ಶ್ರೀ ಕೃಷ್ಣಜನ್ಮಾಷ್ಟಮಿ ಹಬ್ಬದ ವೈಶಿಷ್ಠ್ಯಗಳು ಮತ್ತು ಅದರ ಆಚರಣೆಯ ಜೊತೆಗೆ ಶ್ರೀ ಕೃಷ್ಣನ ಜನ್ಮದಿನವನ್ನು ಎರಡು ವಿಭಿನ್ನ ದಿನಗಳಲ್ಲಿ ಏಕೆ ಆಚರಿಸುತ್ತಾರೆ ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೃಷ್ಣ ಜನ್ಮಾಷ್ಟಮಿ

ಭಾಷಾ ಹೇರಿಕೆಯೋ, ಇಲ್ಲಾ ವಿಷಯಾಂತರವೋ

ಇದ್ದಕ್ಕಿದ್ದಂತೆಯೇ ಎರಡ್ಮೂರು ದಿನಗಳಿಂದ ನಮ್ಮ ಖನ್ನಢ ಉಟ್ಟು ಓರಾಟಗಾರರು ಎದ್ದೂ ಬಿದ್ದು ಓಡಾಡ್ತಾ ಅವ್ರೇ ಮತ್ತು ಸ್ಯಾನೇ ಮಾತಾಡ್ತಾ ಅವ್ರೆ!! . ಅರೇ ಯಾಕಪ್ಪಾ!! ಇಷ್ಟು ಬೇಗ ನವೆಂಬರ್ ತಿಂಗಳು ಬಂದು ಬಿಡ್ತಾ?. ಮೊನ್ನೇ ಇನ್ನೂ ಆಗಷ್ಟ್ 15, ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿರೋ ಖುಷೀನೇ ಇನ್ನೂ ತಣ್ಣಗಾಗಿಲ್ಲ. ಆಷ್ಟರೊಳಗೆ ಕರ್ನಾಟಕ ರಾಜ್ಯೋತ್ಸವ ಬಂದು ಬಿಡ್ತಾ ಅಂತಾ ಯೋಚಿಸಿ ಅಲ್ಲೇ ಬಿಳಿ ಪ್ಯಾಂಟ್ ಬಿಳೀ ಶರ್ಟ್ ಹಾಕಿಕೊಂಡು, ಕೊರಳಲ್ಲಿ ನಾಯಿ ಚೈನ್ ತರಹ ಚಿನ್ನದ ಚೈನ್… Read More ಭಾಷಾ ಹೇರಿಕೆಯೋ, ಇಲ್ಲಾ ವಿಷಯಾಂತರವೋ

ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು

ವಿದ್ಯಾರಣ್ಯಪುರ ಮಂಥನದ ಹನ್ನೊಂದನೆಯ ಆವೃತ್ತಿ ನಿಗಧಿಯಾಗಿದ್ದಂತೆ, ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀ ಶ್ರೀಕಂಠ ಬಾಳಗಂಚಿ (ಹವ್ಯಾಸಿ ಬರಹಗಾರರು, https://enantheeri.com) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದೂ ಕರೆಯುತ್ತಾರೆ.’ಸನಾತನ’ಎಂದರೆ ಎಂದೂ ಅಳಿಯದ,ಚಿರಂತನ,ನಿರಂತರವಾದ ಎಂದರ್ಥ. ಹಿಂದೂಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲದಿರುವುದು ವೈಶಿಷ್ಟ್ಯದ ಸಂಗತಿ. ಹಿಂದೂ… Read More ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು

ಶ್ರೀ ರಾಘವೇಂದ್ರ ಸ್ವಾಮಿಗಳು

ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯ ಸಂಧರ್ಭದಲ್ಲಿ ಸ್ವಾಮಿಗಳ ಸಾಧನೆ ಮತ್ತವರ ಪವಾಡಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ರಾಘವೇಂದ್ರ ಸ್ವಾಮಿಗಳು

73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಈ ಬಾರಿಯ ಆಗಶ್ಟ್ 15, 2019 ಒಂದು ರೀತಿಯ ಅಪರೂಪದ ದಿನ. ನಾಡಿಗೆ 73ನೇ  ಸ್ವಾತಂತ್ರ್ಯ ದಿನಾಚರಣೆ, ಕೆಚ್ಚದೆಯ ಸೇನಾನಿ ಸಂಗೊಳ್ಳಿ ರಾಯಣ್ಣನ ಜನ್ಮದಿನದ ಸಡಗರವಾದರೇ  ಇನ್ನು ಮನೆಗಳಲ್ಲಿ ನಾರಿಯರಿಗೆ   ರಕ್ಷಾಬಂಧನದ  ಸಂಭ್ರಮ,  ಬಹುತೇಕ ನರರಿಗೆ ನೂಲುಹುಣ್ಣಿಯ ಆಚರಣೆ.  ಅಂಗಡಿಯಲ್ಲಿ ಒಂದೆಡೆ ನೂರಾರು ತ್ರಿವರ್ಣ ಧ್ವಜದ ಭರಾಟೆಯಾದರೆ ಮತ್ತೊಂದೆಡೆ ಸಾವಿರಾರು ರಾಖಿಗಳ  ಸರಮಾಲೆ ಮತ್ತೊಂದೆಡೆ ಸದ್ದಿಲ್ಲದೆ ಕೆಲವಾರು ಜನಿವಾರಗಳ ಮಾರಾಟ. ಒಟ್ಟಿನಲ್ಲಿ ಎಲ್ಲರಿಗೂ ಕೊಂಡಾಟವೇ ಕೊಂಡಾಟ. ಮೂರ್ನಾಲ್ಕು  ದಿನಗಳಿಂದ  ಆರೋಗ್ಯ ಸರಿಯಿಲ್ಲದೇ  ಗೃಹಬಂಧನದಲ್ಲಿಯೇ ಇದ್ದ ನನಗೆ ಇಂದು… Read More 73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಅನಿಷ್ಟಕೆಲ್ಲಾ ಶನೀಶ್ವರನೇ ಕಾರಣ.

ಕಳೆದ ಎರಡು ವಾರಗಳಿಂದ ನಮ್ಮ ರಾಜ್ಯದ ಬಹುತೇಕ ಪ್ರದೇಶಗಳು ಆಶ್ಲೇಷ ಮಳೆಗೆ ಬಲಿಯಾಗಿ ಮುಳುಗಿ ಹೋಗಿದೆ. ನೆನ್ನೆ ತನಕ ಪ್ರಕೃತಿಯನ್ನು ಎಗ್ಗಿಲ್ಲದೆ ನಾಶ ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ಥಾರ ಮಾಡಿಕೊಂಡು ಸಾವಿರಾರು ಎಕರೆ ತೋಟ ಮಾಡಿ ಕೊಂಡು ಐಶಾರಾಮಿ ಬಂಗಲೆಯಲ್ಲಿ ವಾಸ ಮಾಡಿ ಕೊಂಡು ನೂರಾರು ಕೂಲಿ ಕಾರ್ಮಿಕರಿಗೆ ಮಾಲಿಕರಾಗಿದ್ದವರು ಇಂದು ಎಲ್ಲವನ್ನೂ ಕಳೆದು ಕೊಂಡು ಅದೇ ಕೂಲಿಗಳ ಜೊತೆಯಲ್ಲಿಯೇ ಗಂಜೀ ಕೇಂದ್ರದಲ್ಲಿ ನಿರಾಶ್ರಿತರಾಗಿರುವವರು ಬಹಳ ಮಂದಿ ಇದ್ದಾರೆ. ನಮ್ಮ ರಾಜ್ಯದಂತೆ ನೆರೆ ರಾಜ್ಯವಾದ ಕೇರಳದಲ್ಲೂ ವಿಪರೀತವಾದ… Read More ಅನಿಷ್ಟಕೆಲ್ಲಾ ಶನೀಶ್ವರನೇ ಕಾರಣ.

ಉಪಾಕರ್ಮ

ಉಪಾಕರ್ಮ ಎಂದರೆ ಏನು? ಅದನ್ನು ಯಾರು? ಎಂದು? ಏತಕ್ಕಾಗಿ? ಮತ್ತು ಹೇಗೆ ಆಚರಿಸುತ್ತಾರೆ?

ಋಗ್ ಉಪಾಕರ್ಮ ‌ಮತ್ತು ಯಜುರ್ ಉಪಾಕರ್ಮ ಬೇರೆ ಬೇರೆ ದಿನಗಳಲ್ಲಿ ಏಕೆ ಬರುತ್ತದೆ?

ಒಂದು, ಎರಡು, ಮೂರು, ನಾಲ್ಕು ಮತ್ತೇ ಕೆಲವರು ಐದನೇ ಜನಿವಾರವನ್ನೂ ಧರಿಸುವುದು ಏತಕ್ಕಾಗಿ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಉಪಾಕರ್ಮ

ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಶ್ರೀಕ್ಷೇತ್ರ ಕಮಲಶಿಲೆ

ಕುಂದಾಪುರದಿಂದ ಸುಮಾರು 35 ಕಿ.ಮೀ. ಸಿದ್ದಾಪುರದಿಂದ 6 ಕಿ.ಮೀ, ಕೊಲ್ಲೂರಿನಿಂದ ಸುಮಾರು 40 ಕಿ.ಮೀ. ಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಈ ದೇವಸ್ಥಾನವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ನದಿಗಳ ಸಂಗಮ ಕ್ಷೇತ್ರವಾಗಿದೆ. ಇಲ್ಲಿ ದುರ್ಗಾದೇವಿ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ ಎಂಬ ಪ್ರತೀತಿಯಿದೆ. ದೇವಾಲಯದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ, ಹೊಸಮ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ಹುಲಿದೇವಿ ಮುಂತಾದ ಪರಿವಾರ ದೇವರುಗಳು ನೆಲೆಸಿದ್ದಾರೆ.… Read More ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಶ್ರೀಕ್ಷೇತ್ರ ಕಮಲಶಿಲೆ

ವಿದ್ಯೆ ಮತ್ತು ಸಂಸ್ಕಾರ

ಕಳೆದ ವಾರ ನನ್ನ ಆತ್ಮೀಯ ಗೆಳೆಯರು ಅದರಲ್ಲೂ ವಿಶೇಷವಾಗಿ ಕನ್ನಡ ಪ್ರಾಧ್ಯಾಪಕರು ವಿದ್ಯೆ ಮತ್ತು ಸಂಸ್ಕಾರ ಎರಡೂ ಒಂದು ರೀತಿಯ ಜೋಡಿ ಪದಗಳು ಹೌದಾದರೂ ಇವರೆಡಲ್ಲಿರುವ ವೆತ್ಯಾಸ ಏನಿರಬಹುದು ಎಂದು ವ್ಯಾಟ್ಯಾಪ್ ಮುಖೇನ ಪ್ರಶ್ನಿಸಿದರು. ಅವರು ಕೇಳಿರುವ ಪ್ರಶ್ನೆ ನೋಡಲು ಸುಲಭವಾಗಿದ್ದರೂ ಉತ್ತರಿಸಲು ಸ್ವಲ್ಪ ಕಠಿಣ ಎಂದು ಸ್ವಲ್ಪ ಯೋಚಿಸಿದ ನಂತರ ಅರಿವಾಯಿತಾದರೂ, ಕೂಡಲೇ ಸಂಸ್ಕಾರ ಎನ್ನುವುದು ಜೀವನದ ತಳಹದಿ. ಬಹಳಷ್ಘು ಬಾರಿ ಅದು ನಮ್ಮ ತಂದೆ ತಾಯಿ, ಇಲ್ಲವೇ ಕುಟುಂಬ ಮತ್ತು ನೆರೆಹೊರೆಯವರ ಪ್ರಭಾವ, ಬೆಳೆದು… Read More ವಿದ್ಯೆ ಮತ್ತು ಸಂಸ್ಕಾರ