ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

ನಮ್ಮಂತಹ ಮಧ್ಯಮ ವರ್ಗದವರಿಗೆ ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಅದೇನೋ ಖುಷಿ. ದೂರ ದೂರದ ಪ್ರದೇಶಗಳಿಗೆ ಕೆಲವೇ ಗಂಟೆಗಳಲ್ಲಿ ಹೋಗುಬಹುದು ಎಂಬ ಸಂಭ್ರಮ. ಅದರೆ ನಾವೂ ನೀವು ಎಣಿಸಿದಂತೆ ವಿಮಾನಯಾನ ಅಷ್ಟು ಸುಲಭದಲ್ಲವಾಗಿದ್ದು, ವಿಮಾನ ಯಾನದ ಸಮಯದಲ್ಲಿ ಹೃದಯವೇ ಬಾಯಿಗೆ ಬಂದಂತೆ ಆಗಿ ಅಂದು ನಾನು ಅನುಭವಿಸಿದ ರೋಚಕತೆಗಳು ಇದೋ ನಿಮಗಾಗಿ. ವರ್ಷಗಳ ಹಿಂದೆ ಕಛೇರಿಯ ಕೆಲಸದ ನಿಮಿತ್ತ ಜಪಾನ್ ದೇಶದ ಟೋಕೀಯೋ ನಮ್ಮ ಮತ್ತೊಂದು ಶಾಖೆಗೆ ಹೋಗುವ ಸಂದರ್ಭ ಒದಗಿ ಬಂದಿತ್ತು. ಅದು ನನ್ನ ಮೊತ್ತ ಮೊದಲ… Read More ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮತ್ತು ವೈಶಿಷ್ಟ್ಯಗಳು

ತಮ್ಮ ಸುಮಂಗಲಿತನವು ಸುದೀರ್ಘವಾಗಿರಲಿ ಎಂಬ ಆಶಯದಿಂದ ಆಚರಿಸಲಾಗುವ ವರಮಹಾಲಕ್ಶ್ಮಿ ಹಬ್ಬದಲ್ಲಿ ಇಂದು ಭಕ್ತಿಗಿಂತ, ಆಡಂಬರವೇ ಹೆಚ್ಚಾಗಿ ದೇವರ ಪೂಜೆಗಿಂತ ತಮ್ಮ ಸಿರಿ ಸಂಪತ್ತುಗಳನ್ನು ಪ್ರದರ್ಶಿಸುವ ಹಬ್ಬವಾಗುತ್ತಿರುವ ಹಿನ್ನಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮತ್ತು ವೈಶಿಷ್ಟ್ಯಗಳ ವಿವರಗಳು ಇದೋ ನಿಮಗಾಗಿ… Read More ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮತ್ತು ವೈಶಿಷ್ಟ್ಯಗಳು

ಸೋತು ಗೆದ್ದವರು ಸುಷ್ಮಾ ಸ್ವರಾಜ್

1999ರ ಲೋಕಸಭಾ ಚುನಾವಣೆ. ಕಾಂಗ್ರೇಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ತಮ್ಮ ಸ್ವಂತ ಬಲದಿಂದ ಆಡಳಿತದ ಚುಕ್ಕಾಣಿ ಹಿಡಿಯಲು ಜಿದ್ದಾ ಜಿದ್ದಿನಿಂದ ಹೋರಾಟಕ್ಕೆ ನಿಂತಿದ್ದವು. ದಕ್ಷಿಣ ಭಾರತದಲ್ಲಿ ಕಾಂಗ್ರೇಸ್ಸಿಗರ ಬಲ ಹೆಚ್ಚಿಸಲೆಂದೇ ಅಂದಿನ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರು ಉತ್ತರಪ್ರದೇಶದ ಅಮೆಥಿಯ ಜೊತೆಗೆ ಕರ್ನಾಟಕದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ, ಎಲ್ಲರಿಗೂ ಸೋನಿಯಾ ಗಾಂಧಿಯ ವಿರುದ್ಧ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಯಾರಿರಬಹುದೆಂಬ ಕುತೂಹಲ. ಜನರ ನಿರೀಕ್ಷೆಗೂ ಸಿಲುಕದಂತ ತುಸು ಕಡಿಮೆ ಎತ್ತರದ, ಸದಾ ಬಣ್ಣ… Read More ಸೋತು ಗೆದ್ದವರು ಸುಷ್ಮಾ ಸ್ವರಾಜ್

ನಾಗರ ಪಂಚಮಿ

ಗ್ರೀಷ್ಮ ಋತುವಿನ ಜೇಷ್ಠ ಮತ್ತು ಆಷಾಡ ಮಾಸಗಳಲ್ಲಿ ಬಿದ್ದ ಅಲ್ಪ ಸ್ವಲ್ಪ ಮಳೆಯಲ್ಲಿ ಕೃಷಿಯ ಬಿತ್ತನೆ ಕಾರ್ಯ ಮುಗಿಸಿ ಬಳಲಿ, ವರ್ಷ ಋತುವಿನಲ್ಲಿ ಒಳ್ಳೆಯ ಮಳೆಯಾಗಿ ಉತ್ತಮ ಬೆಳೆಯಲ್ಲಿರುವಾಗಲೇ ಬರುವ ಮಾಸವೇ ಶ್ರಾವಣ ಮತ್ತು ಭಾದ್ರಪತ . ಶ್ರಾವಣ ಮತ್ತು ಭಾದ್ರಪತ ಮಾಸಗಳೆಂದರೆ ಹಬ್ಬಗಳ ಮಾಸಗಳು ಎಂದರೆ ತಪ್ಪಾಗಲಾರದು. ಸಾಲು ಸಾಲುಗಳ ಹಬ್ಬಗಳಲ್ಲಿ ಎರಡನೆಯ (ಆಷಾಡದ ಕಡೆಯ ದಿನ ಭೀಮನಮಾವಾಸ್ಯೆ) ಹಬ್ಬವೇ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ವಿಶೇಷ ಭಯ, ಭಕ್ತಿ ಮತ್ತು ಮಡಿಯಿಂದ… Read More ನಾಗರ ಪಂಚಮಿ

ಶ್ರಾವಣ ಶನಿವಾರ ಪಡಿ ಬೇಡುವುದು

ಶ್ರಾವಣ ಮಾಸದ ಶನಿವಾರಗಳಂದು, ಶ್ರೀನಿವಾಸಾಯ ಮಂಗಳಂ, ರಂಗನಾಥಾಯ ಮಂಗಳಂ, ಶ್ರೀ ವೆಂಕಟೇಶಾಯ ಮಂಗಳಂ ಇಲ್ಲವೇ ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ ಎಂದು ಭಗವಂತನ ಹೆಸರಿನಲ್ಲಿ ಪಡಿ ಬೇಡುವುದು ಎಂದರೇನು? ಶ್ರಾವಣ ಮಾಸದಲ್ಲಿಯೇ ಈ ರೀತಿ ಪಡಿಯನ್ನು ಬೇಡುವುದರ ಹಿನ್ನಲೆ ಏನು? ಪಡಿ ಬೇಡಿದ್ದನ್ನು ಏನು ಮಾಡುತ್ತಾರೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಶ್ರಾವಣ ಶನಿವಾರ ಪಡಿ ಬೇಡುವುದು

ಜಾಫರ್ ಷರೀಫ್

ಜಾಫರ್ ಷರೀಫ್, 70-90ರ ದಶಕದಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಪ್ರಭಾವೀ ಹೆಸರು. ಮೂಲತಃ ಚಿತ್ರದುರ್ಗದ ಕಡೆಯವರಾದ ಷರೀಫರು, ನಿಜಲಿಂಗಪ್ಪನವರ ಸಹಾಯಕರಾಗಿ ಸಂಸ್ಥಾ ಕಾಂಗ್ರೇಸ್ ಮತ್ತು ಇಂದಿರಾ ಕಾಂಗ್ರೇಸ್ ಎಂದು ಇಬ್ಭಾಗವಾದಾಗ, ಇಂದಿರಾ ಕಿಚನ್ ಕ್ಯಾಬಿನೆಟ್ ಭಾಗವಾಗಿ ರಾಜಕಾರಣದ ಉತ್ತುಂಗದ ಸ್ಥಿತಿ ತಲುಪಿದ್ದವರು. ನರಸಿಂಹರಾಯರ ಆಳ್ವಿಕೆಯಲ್ಲಿ ಕೇಂದ್ರದ ರೈಲ್ವೇ ಸಚಿವರಾಗಿದ್ದ ಶ್ರೀಯುತರು ಒಂದು ಕಾಲಕ್ಕೆ ತಮ್ಮ ಪ್ರಭಾವೀ ವ್ಯಕ್ತಿತ್ವದಿಂದಾಗಿ ರಾಜ್ಯದಲ್ಲಿಯೇ ಮುಖ್ಯಮಂತ್ರಿ ‌ಸ್ಥಾನದ ಮೇಲೂ ಕಣ್ಣಿಟ್ಟಿದ್ದದ್ದು ಅದು ಅವರಿಗೆ ಮರೀಚಿಕೆಯಾಗಿಯೇ ಉಳಿದು ಹೋದದ್ದು ವಿಪರ್ಯಾಸವೇ ಸರಿ.… Read More ಜಾಫರ್ ಷರೀಫ್

ಭೀಮನ ಅಮಾವಾಸ್ಯೆ

ಪತಿಯ ಶ್ರೇಯೋಭಿವೃದ್ಧಿ ಮತ್ತು ತನ್ನ ಸುಮಂಗಲೀತನ ದೀರ್ಘವಾಗಿರಲೀ ಎಂದು ಪತ್ನಿಯು ಗಂಡನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ ಎಂದು ಎಲ್ಲರೂ ತಿಳಿದಿರುವಾಗ, ಭೀಮನಿಗೂ ಈ ಹಬ್ಬಕ್ಕೂ ಎಲ್ಲಿಯ ಸಂಬಂಧ? ಭೀಮನ ಅಮಾವಾಸ್ಯೆ ಹಬ್ಬದ ವೈಶಿಷ್ಟ್ಯತೆಗಳು ಮತ್ತು ಆದರ ಆಚರಣೆಗಳು ಇದೋ ನಿಮಗಾಗಿ… Read More ಭೀಮನ ಅಮಾವಾಸ್ಯೆ

ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್

ಕಳೆದ ಎರಡು ದಿನಗಳಿಂದಲೂ ರಾಜ್ಯದಲ್ಲಿ ಒಂದು ರೀತಿಯ ಸೂತಕದ ಛಾಯೆ. ಕರ್ನಾಟಕದ ಕಾಫಿಯ ಕಂಪನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದ , ಹತ್ತು ರೂಪಾಯಿಗೆ ಬಿಸಿ ಬಿಸಿ ಕಾಫಿ ಕುಡಿಯಲು ಹಿಂದು ಮುಂದು ನೋಡುತ್ತಿದ್ದ ಭಾರತೀಯರಿಗೆ ಅದೇ ಕಾಫಿಯನ್ನು ತಣ್ಣಗೆ ಮಾಡಿ ನೂರಾರು ರೂಪಾಯಿಗಳಿಗೆ ಕುಡಿಸುವ ಚಟವನ್ನು ಹತ್ತಿಸಿದ್ದ , ತನ್ಮೂಲಕವೇ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಉದ್ಯಮಿಯ ನಾಪತ್ತೆಯ ವಿಷಯ ಎಲ್ಲರ ಮನಸ್ಸಿನಲ್ಲಿ ದುಗುಡ ತುಂಬಿತ್ತು. ಇಡೀ ಜಿಲ್ಲಾಡಳಿತವೇ ಸಜ್ಜಾಗಿ ನಾನಾ ರೀತಿಯಲ್ಲಿ ಅವರನ್ನು ಹುಡುಕುವ ಪ್ರಯತ್ನ… Read More ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್

ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ

ವಿದ್ಯಾರಣ್ಯಪುರ ಮಂಥನದ ಹತ್ತನೇ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ವಿಶ್ವನಾಥ್ ಶ್ರಿಕಂಠಯ್ಯ (ಜಲ ಸಂರಕ್ಷರು ಮತ್ತು ಮಳೆ ನೀರು ಕೊಯ್ಲು ತಜ್ಞರು) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಮ್ಮ ದೇಶದ ಸಂಸ್ಕೃತಿ ಮತ್ತು ಇತಿಹಾಸ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಸಿಂಧೂ ನದಿ… Read More ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ