ಆರೋಗ್ಯವೇ ಭಾಗ್ಯ! FIT INDIA ಅಭಿಯಾನ

ಇಂದಿನ ಕಾಲದಲ್ಲಿ ಲಕ್ಷಾಂತರ ಇಲ್ಲವೇ ಕೋಟ್ಯಾಂತರ ಹಣವನ್ನು ಸಂಪಾದಿಸುವುದು ಬಹಳ ಸುಲಭ ಸಾಧ್ಯವಾಗಿದೆ ಆದರೆ ಆ ರೀತಿಯಾಗಿ ಹಣವನ್ನು ಸಂಪಾದಿಸುವ ಭರದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜೀ ವಹಿಸದೇ ಸಣ್ಣ ವಯಸ್ಸಿನಲ್ಲಿಯೇ ನಾನಾ ರೀತಿಯ ಖಾಯಿಲೆಗಳಿಗೆ ಮತ್ತು ಖಿನ್ನತೆಗಳಿಗೆ ಒಳಗಾಗಿ ತಾವೂ ನರಳುವುದಲ್ಲಿದೇ, ಕುಟುಂಬ, ತಮ್ಮನ್ನು ಅವಲಂಭಿಸಿರುವವರನ್ನು ಮತ್ತು ಇಡೀ ಸಮಾಜವನ್ನೇ ತೊಂದರೆ ಗೀಡುಮಾಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಇತ್ತೀಚೆಗೆ ನಮ್ಮ ದೇಶದ ಇಬ್ಬರು ಮಹಾನ್ ನಾಯಕರುಗಳಾದ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿಯವರ ಸಾವಿನ ಹಿಂದಿನ… Read More ಆರೋಗ್ಯವೇ ಭಾಗ್ಯ! FIT INDIA ಅಭಿಯಾನ

ಸ್ತ್ರೀ ! ಕ್ಷಮಯಾಧರಿತ್ರಿ!!

ಹೆತ್ತವರಿಗೆ ಮಗಳು, ಒಡಹುಟ್ಟಿದವರಿಗೆ ಸಹೋದರಿ, ಸಹಪಾಠಿಗಳಿಗೆ ಗೆಳತಿ, ಮದುವೆಯಾದಾಗ ಒಬ್ಬರ ಮಡದಿ ಮತ್ತೊಬ್ಬರ ಸೊಸೆ‌, ಹೆತ್ತ ಮಕ್ಕಳಿಗೆ ತಾಯಿ, ತನ್ನ ಮಕ್ಕಳಿಗೆ ಮದುವೆಯಾದಾಗ, ಅಳಿಯಂದಿರಿಗೆ ಮತ್ತು ಸೊಸೆಯರಿಗೆ ಅತ್ತೆ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜಿ, ಹೀಗೆ ಬಹುರೂಪಿಯಾದ ಹೆಣ್ಣನ್ನು ಗೌರವಿಸುವುದು ಕೇವಲ ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಗೆ ಮಾತ್ರಾ ಸೀಮಿತವಾಗಿರದೇ, ಪ್ರತೀ ದಿನ, ಪ್ರತೀ ಕ್ಷಣವೂ ಆಕೆಗೆ ಚಿರಋಣಿಗಳಾಗಿರಬೇಕು ಅಲ್ವೇ?… Read More ಸ್ತ್ರೀ ! ಕ್ಷಮಯಾಧರಿತ್ರಿ!!

ಕೃಷ್ಣಪ್ಪ ಗೌತಮ್

ಯಾವುದೇ ಕ್ಷೇತ್ರದಲ್ಲಿ, ಯಾರಾದರೂ ಮಹತ್ತರ ಸಾಧನೆ ಮಾಡಿದಲ್ಲಿ ಅದನ್ನು ಆ ಕೂಡಲೇ ನಾಲ್ಕಾರು ಜನ ಗಮನಿಸಿ ಅವರ ಬಗ್ಗೆ ಸ್ಪೂರ್ತಿದಾಯಕವಾಗಿ ಪ್ರೋತ್ಸಾಹಕರ ಮಾತುಗಳನ್ನು ಆಡಿದಲ್ಲಿ, ಆ ಸಾಧನೆ ಮಾಡಿದವರಿಗೆ ಉತ್ತೇಜನ ದೊರೆತು ಮತ್ತಷ್ಟೂ ಉತ್ತಮವಾದ ಸಾಧನೆ ಮಾಡುವ ಹುಮಸ್ಸು ಮೂಡುತ್ತದೆ. ದುರದೃಷ್ಟವಶಾತ್, ಭಾರತ ಮತ್ತು ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಾವಳಿಗಳೇ ಅತ್ಯಂತ ಮಹತ್ವ ಪಡೆದದ್ದಕ್ಕೋ ಇಲ್ಲವೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಿರ್ಲಕ್ಷದ ಪರಿಣಾಮವಾಗಿಯೋ ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರಿಕೆಟ್… Read More ಕೃಷ್ಣಪ್ಪ ಗೌತಮ್

ನಟ ಭಯಂಕರ ವಜ್ರಮುನಿ

ಅಂದಿನ ಕಾಲದ ಹೆಸರಾಂತ ರಾಜಕಾರಣಿಗಳ ವಂಶದ ಕುಡಿಯಾದರೂ ಆಯ್ಕೆ ಮಾಡಿಕೊಂಡಿದ್ದು ರಂಗಭೂಮಿ. ಗದೆ ಹಿಡಿದು ವೇದಿಕೆಯ ಮೇಲೆ ಬಂದು ತನ್ನ ಕಂಚಿನ ಕಂಠದಿಂದ ಸುಸ್ಪಷ್ಟವಾದ ಭಾಷೆಯಲ್ಲಿ ಸಂಭಾಷಣೆಯನ್ನು ಅಬ್ಬರಿಸುತ್ತಿದ್ದರೆ, ಎದುರಿಗಿರುವವರು ಪತರುಗುಟ್ಟು ಹೋಗುವಂತೆ ಮಾಡುತ್ತಿದ್ದ, ಕನ್ನಡ ಚಿತ್ರರಂಗದ ಶ್ರೇಷ್ಠ ಖಳನಟ ಶ್ರೀ ವಜ್ರಮುನಿ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನಟ ಭಯಂಕರ ವಜ್ರಮುನಿ

ಪುರೋಹಿತರ ಪರದಾಟ

ಬಹಳ ದಿನಗಳ ತರುವಾಯು ಮಕ್ಕಳು ಮನೆಯಲ್ಲಿ ಅಮ್ಮಾ ಮಾಡುವ ರುಚಿ ರುಚಿಯ ಅಡುಗೆಯ ಹೊರತಾಗಿಯೂ ಹೊರಗಡೆ ಊಟ ಮಾಡುವ ಆಸೆ ವ್ಯಕ್ತ ಪಡಿಸಿದ ಕಾರಣ ಕಳೆದ ವಾರಾಂತ್ಯದಲ್ಲಿ ಮಡದಿ, ಮಗಳು ಮತ್ತು ಮಗನೊಂದಿಗೆ ರಾತ್ರಿ ಊಟಕ್ಕೆಂದು ಸ್ವಲ್ಪ ದೂರದ ಹೊಸಾ ಹೋಟೆಲ್ ಒಂದಕ್ಕೆ ಹೋದೆವು. ಭಾನುವಾರವಾದ್ದರಿಂದ ಹೋಟೇಲ್ ಬಹುತೇಕ ಭರ್ತಿಯಾಗಿತ್ತು ಸ್ವಲ್ಪ ಮಬ್ಬಾಗಿಯೂ ಇತ್ತು. ಹಾಗಾಗಿ ಖಾಲಿ ಇರುವ ಜಾಗವನ್ನು ಹುಡುಕುತ್ತಿದ್ದಾಗ, ಒಬ್ಬರನ್ನು ನೋಡಿದ ತಕ್ಷಣ, ಎಲ್ಲೋ ನೋಡಿದ ನೆನಪು ಆದರೆ ಸರಿಯಾಗಿ ಸ್ಮೃತಿಗೆ ಬರುತ್ತಿರಲಿಲ್ಲ. ಅವರೂ… Read More ಪುರೋಹಿತರ ಪರದಾಟ

ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರಾವಣ ಬಹುಳ ಅಷ್ಟಮಿಯಂದು ದೇಶಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಗುವ ಶ್ರೀ ಕೃಷ್ಣಜನ್ಮಾಷ್ಟಮಿ ಹಬ್ಬದ ವೈಶಿಷ್ಠ್ಯಗಳು ಮತ್ತು ಅದರ ಆಚರಣೆಯ ಜೊತೆಗೆ ಶ್ರೀ ಕೃಷ್ಣನ ಜನ್ಮದಿನವನ್ನು ಎರಡು ವಿಭಿನ್ನ ದಿನಗಳಲ್ಲಿ ಏಕೆ ಆಚರಿಸುತ್ತಾರೆ ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೃಷ್ಣ ಜನ್ಮಾಷ್ಟಮಿ

ಭಾಷಾ ಹೇರಿಕೆಯೋ, ಇಲ್ಲಾ ವಿಷಯಾಂತರವೋ

ಇದ್ದಕ್ಕಿದ್ದಂತೆಯೇ ಎರಡ್ಮೂರು ದಿನಗಳಿಂದ ನಮ್ಮ ಖನ್ನಢ ಉಟ್ಟು ಓರಾಟಗಾರರು ಎದ್ದೂ ಬಿದ್ದು ಓಡಾಡ್ತಾ ಅವ್ರೇ ಮತ್ತು ಸ್ಯಾನೇ ಮಾತಾಡ್ತಾ ಅವ್ರೆ!! . ಅರೇ ಯಾಕಪ್ಪಾ!! ಇಷ್ಟು ಬೇಗ ನವೆಂಬರ್ ತಿಂಗಳು ಬಂದು ಬಿಡ್ತಾ?. ಮೊನ್ನೇ ಇನ್ನೂ ಆಗಷ್ಟ್ 15, ದೇಶದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿರೋ ಖುಷೀನೇ ಇನ್ನೂ ತಣ್ಣಗಾಗಿಲ್ಲ. ಆಷ್ಟರೊಳಗೆ ಕರ್ನಾಟಕ ರಾಜ್ಯೋತ್ಸವ ಬಂದು ಬಿಡ್ತಾ ಅಂತಾ ಯೋಚಿಸಿ ಅಲ್ಲೇ ಬಿಳಿ ಪ್ಯಾಂಟ್ ಬಿಳೀ ಶರ್ಟ್ ಹಾಕಿಕೊಂಡು, ಕೊರಳಲ್ಲಿ ನಾಯಿ ಚೈನ್ ತರಹ ಚಿನ್ನದ ಚೈನ್… Read More ಭಾಷಾ ಹೇರಿಕೆಯೋ, ಇಲ್ಲಾ ವಿಷಯಾಂತರವೋ

ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು

ವಿದ್ಯಾರಣ್ಯಪುರ ಮಂಥನದ ಹನ್ನೊಂದನೆಯ ಆವೃತ್ತಿ ನಿಗಧಿಯಾಗಿದ್ದಂತೆ, ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀ ಶ್ರೀಕಂಠ ಬಾಳಗಂಚಿ (ಹವ್ಯಾಸಿ ಬರಹಗಾರರು, https://enantheeri.com) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದೂ ಕರೆಯುತ್ತಾರೆ.’ಸನಾತನ’ಎಂದರೆ ಎಂದೂ ಅಳಿಯದ,ಚಿರಂತನ,ನಿರಂತರವಾದ ಎಂದರ್ಥ. ಹಿಂದೂಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲದಿರುವುದು ವೈಶಿಷ್ಟ್ಯದ ಸಂಗತಿ. ಹಿಂದೂ… Read More ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು

ಶ್ರೀ ರಾಘವೇಂದ್ರ ಸ್ವಾಮಿಗಳು

ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯ ಸಂಧರ್ಭದಲ್ಲಿ ಸ್ವಾಮಿಗಳ ಸಾಧನೆ ಮತ್ತವರ ಪವಾಡಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ರಾಘವೇಂದ್ರ ಸ್ವಾಮಿಗಳು