ವಿವಾಹ ವಾರ್ಷಿಕೋತ್ಸವ

ರೀ ಉಮಾ ಹೇಗಿದ್ದೀರೀ? ಮನೆಯವರೆಲ್ಲಾ ಚೆನ್ನಾಗಿದ್ದಾರಾ? ನೀವು ಬಿಡಿ. ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಜವಾಬ್ದಾರಿಯನ್ನು ಮುಗಿಸಿಕೊಂಡು ನೆಮ್ಮದಿಯಾಗಿ ಮೊಮ್ಮಕ್ಕಳ ಜೊತೆ ಆಟಾವಾಡ್ತಾ ಇದ್ದೀರಿ. ಹೆಣ್ಣು ಮಕ್ಕಳಿಗೇನೋ ಮದುವೆ ಮಾಡಿಬಿಟ್ರಿ ಆದರೆ ಮಗನಿಗೆ ಮದುವೇ ಮಾಡೋದಿಲ್ವಾ? ಅವನಿಗೂ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಬಿಡಿ ಮಗ, ಸೊಸೆ ಜೊತೆ ಸುಂದರವಾಗಿರುತ್ತೆ ನಿಮ್ಮ ಸಂಸಾರ. ಅಯ್ಯೋ ನಮಗೂ ಅದೇ ಅಸೆ ರೀ .ಆದ್ರೆ ಅವನೇ ಇನ್ನೂ ಇಷ್ಟು ಬೇಗ ಬೇಡ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಕೈ ತುಂಬಾ ಸಂಪಾದನೆ… Read More ವಿವಾಹ ವಾರ್ಷಿಕೋತ್ಸವ

ಮನೆ ಮದ್ದು

ವಿದ್ಯಾರಣ್ಯ ಪುರ ಮಂಥನದ ಇಂದಿನ ಕಾರ್ಯಕ್ರಮ ನಿಗಧಿತ ಸಮಯದಂತೆ ಮನೆ ಮದ್ದು ಕಾರ್ಯಕ್ರಮದ ವಕ್ತಾರರಾದ *ಡಾ. ಎ. ಎಸ್ ಚಂದ್ರಶೇಖರ್* ಮತ್ತು ಅಧ್ಯಕ್ಷತೆ ವಹಿಸಿದ್ದ *ಶ್ರೀಮತಿ ಜಿ. ಸ್ವಪ್ನರ* ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಇತ್ತೀಚಿನ ಜೀವನ ಶೈಲಿ ಮತ್ತು ಆಹಾರ ಪದ್ದತಿ(Junkfood), ಕಲಬೆರಕೆ ಅಡುಗೆ ಎಣ್ಣೆ, ಆಹಾರ ಪದಾರ್ಧಗಳಿಂದಾಗಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೋಗದಿಂದ ನರಳುವಂತಾಗಿದೆ. ಇದರ ಸಲುವಾಗಿ ಪ್ರತೀ ಬಾರಿಯೂ… Read More ಮನೆ ಮದ್ದು

ದೀಪಾವಳಿ

ದೀಪಾವಳಿ ಹೇಳಿ ಕೇಳಿ ಬೆಳಕಿನ ಹಬ್ಬ ಇಲ್ಲಿ ಮಡಿ ಹುಡಿ ಆಚಾರ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದರಿಂದ ಮಕ್ಕಳಿಗೂ ದೀಪಾವಳಿ ಎಂದರೆ ಅಚ್ಚು ಮೆಚ್ಚು. ನಮ್ಮ ಮನೆಯಲ್ಲಿಯೂ ನಾವೆಲ್ಲಾ ಸಣ್ಣವರಿದ್ದಾಗ ದೀಪಾವಳಿ ಹಬ್ಬ ಬರುವ ಎರಡು ತಿಂಗಳ ಮುಂಚೆಯೇ ನಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ. ಏಕೆಂದರೆ ಆಗ ನಮ್ಮ ಮನೆಯಲ್ಲಿ ಪಟಾಕಿ ಚೀಟಿಯನ್ನು ನಡೆಸುತ್ತಿದ್ದೆವು. ಪ್ರತೀ ತಿಂಗಳು ಕೆಲ ನಿರ್ಧಿಷ್ಟ ಮೊತ್ತದ ಹಣವನ್ನು ಆರು ತಿಂಗಳು ಕಟ್ಟಿದ ನಂತರ ದೀಪಾವಳಿ ಹಬ್ಬಕ್ಕೆ ಕೆಲ ವಾರಗಳ ಮುಂಚೆ ಕಟ್ಟಿದ… Read More ದೀಪಾವಳಿ

ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳದಿರೋಣ

ಅದೊಂದು ರಾಜ್ಯ. ಅಲ್ಲಿಯ ರಾಜ ಅತ್ಯಂತ ಪ್ರಜಾಸ್ನೇಹಿ. ಆ ರಾಜನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲಾ ಸುಭಿಕ್ಷದಿಂದಿದ್ದರು. ಅದೊಂದು ಹಾಗೇ ತನ್ನ ಮಂತ್ರಿಯೊಂದಿಗೆ ಸಾಧಾರಣವಾಗಿ ಮಾತನಾಡುತ್ತಾ, ನನ್ನ ರಾಜ್ಯದ ಪ್ರಜೆಗಳೆಲ್ಲಾ ನನ್ನ ಆಳ್ವಿಕೆಯಿಂದ ಸುಖಃವಾಗಿದ್ದಾರೆ. ಅವರಿಗೆ ನನ್ನ ಮೇಲೆ ಅಪಾರ ಆಭಿಮಾನವಿದೆ ಮತ್ತು ನನ್ನ ಸಹಾಯಕ್ಕೆ ಬರಲು ಸದಾ ಸಿದ್ಧರಿರುತ್ತಾರೆ ಮತ್ತು ನಾನು ಹೇಳಿದ್ದನ್ನು ಶಿರಸಾ ವಹಿಸಿ ಪಾಲಿಸುತ್ತಾರೆ ಅಲ್ಲವೇ ಎಂದು ಹೇಳಿದನು. ಅದಕ್ಕೊಪ್ಪದ ಮಂತ್ರಿ ರಾಜಾ, ನಿಮ್ಮ ಮೊದಲ ಎರಡು ವಾಕ್ಯಗಳು ನಿಜ. ಅದನ್ನು ನಾನೂ ಒಪ್ಪುತ್ತೇನೆ. ಆದರೆ… Read More ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳದಿರೋಣ

ವಿವೇಕಾನಂದ ಓಟ

ಸೆಪ್ಟೆಂಬರ್ 11, 1893 ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಆರಂಭಿಸಿ ಅತ್ಯಂತ ಚಿಕ್ಕದಾಗಿ, ಚೊಕ್ಕವಾಗಿ ಇಡೀ ವಿಶ್ವಕ್ಕೇ ಭಾರತ ದೇಶ ಮತ್ತು ಹಿಂದೂ ಧರ್ಮದ ಬಗ್ಗೆ ಇದ್ದ ಅಪ ನಂಬಿಕೆಯನ್ನು ಹೋಗಲಾಡಿಸಿ ಜಗತ್ತಿಗೇ ಭಾರತ ದೇಶದ ಮತ್ತು ಹಿಂದೂ ಧರ್ಮದ ಹಿರಿಮೆಯನ್ನು ಎತ್ತಿ ಹಿಡಿದ ಸ್ವಾಮೀ ವಿವೇಕಾನಂದರು ಭಾಷಣ ಮಾಡಿದ 125 ವರ್ಷದ ಅಂಗವಾಗಿ ಯುವ ಬ್ರಿಗೇಡ್ ನೇತೃತ್ವದಲ್ಲಿ, BNMIT ಮತ್ತು ಅಧಮ್ಯ ಚೇತನದ ಸಹಯೋಗದೊಂದಿಗೆ ಇಂದು ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಮೈದಾದನದಲ್ಲಿ… Read More ವಿವೇಕಾನಂದ ಓಟ

ವಿದ್ಯಾರಣ್ಯಪುರದ ಈಚಲುಮರ ಇನ್ನಿಲ್ಲ

ಸಾಧಾರಣವಾಗಿ “ಇನ್ನಿಲ್ಲ” ಅನ್ನುವ ಪದವನ್ನು ಸಮಾಜದ ಯಾರಾದರೂ ಗಣ್ಯವ್ಯಕ್ತಿಗಳು ಸತ್ತಾಗ  ಹೇಳುವುದು ವಾಡಿಕೆ.  ಆದತೆ ನಮ್ಮ ಸಂಸ್ಕೃತಿಯಲ್ಲಿ ಮರಗಳನ್ನೂ ಮನುಷ್ಯರ ರೀತಿಯಿಂದಲೇ ಪ್ರೀತಿಸುವುದರಿಂದ ಈಗ ನಾನು ಹೇಳಲು ಹೊರಟಿರುವುದು  ನಮ್ಮ ವಿದ್ಯಾರಣ್ಯಪುರದ ವಕ್ಷಸ್ಥಳದಲ್ಲಿದ್ದ ಈಚಲು ವೃಕ್ಷದ ಅವಸಾನದ ಗೋಳಿನ ಕಥೆ. ವಿದ್ಯಾರಣ್ಯಪುರದ ಮುಖ್ಯರಸ್ತೆಯಲ್ಲಿ ಹಳೆಯ ಪಳಿಯುಳಿಕೆಯಂತಿದ್ದ, ತನ್ನ ಇರುವಿಕೆಯಂದಲೇ  ಈಚಲುಮರ ಬಸ್ ಸ್ಟಾಪ್ ಎಂದೇ ಹೆಸರಾಗಿದ್ದ ಪುರಾತನ ಈಚಲು ಮರಕ್ಕೆ ಇಂದು ಬೆಳಿಗ್ಗೆ ಹಾಲಿನ ವಾಹನದ ಚಾಲಕನ ಅಜಾಗರೂಕತೆಯಂದಲೋ ಅಥವ ನಿಯಂತ್ರಣ ತಪ್ಪಿಯೋ ಗುದ್ದಿದ ಪರಿಣಾಮವಾಗಿ ಈಚಲು… Read More ವಿದ್ಯಾರಣ್ಯಪುರದ ಈಚಲುಮರ ಇನ್ನಿಲ್ಲ

ಅತ್ತೆ ಮತ್ತು ಸೊಸೆ ಬಂಧ – ಅನುಬಂಧ

ಅದೂ೦ದು ದೊಡ್ಡ ನಗರ ಅಲ್ಲೊಬ್ಬ ಪ್ರಖ್ಯಾತ ವೈದ್ಯರು, ಅವರ ಅಚ್ಚು ಮೆಚ್ಚಿನ ಮಡದಿ, ಮುದ್ದಾದ ಮಗಳೊ೦ದಿಗೆ ಸ್ವರ್ಗಕ್ಕೇ ಕಿಚ್ಚು ಹಚ್ಚಿಸುವ೦ತಹ ಸು೦ದರ ಸ೦ಸಾರ ನಡೆಸುತ್ತಿದ್ದ ಸಮಯದಲ್ಲಿ, ಅಚಾನಕ್ಕಾಗಿ ಬರ ಸಿಡಿಲು ಎರಗಿದ೦ತೆ ವೈದ್ಯರ ಪತ್ನಿ ಆಕಾಲಿಕವಾಗಿ ಮರಣ ಹೊ೦ದಿದಾಗ ದಿಕ್ಕೇ ತೋಚದೇ ವೈದ್ಯರು ಅಧೀರರಾಗುತ್ತಾರೆ. ಪತ್ನಿಯ ವೈದೀಕ ಕಾರ್ಯಗಳೆಲ್ಲವೂ ಮುಗಿದ ನ೦ತರ ಕುಟು೦ಬದವರೆಲ್ಲಾ ಸೇರಿ, ಹೇಗೆ ದೀಪವಿಲ್ಲದೆ ದೇಗುಲ ಬೆಳಗುವುದಿಲ್ಲವೋ, ಹಾಗೆ ಹೆಣ್ಣಿನ ದಿಕ್ಕಿಲ್ಲದೆ ಮನೆಯೂ ಬೆಳಗುವುದಿಲ್ಲ. ಹೇಗೂ ನಿನಗೂ ಚಿಕ್ಕವಯಸ್ಸು, ಮಗಳೂ ಸಣ್ಣವಳಿದ್ದಾಳೆ ಅವಳನ್ನು ನೋಡಿಕೊಳ್ಳುವ… Read More ಅತ್ತೆ ಮತ್ತು ಸೊಸೆ ಬಂಧ – ಅನುಬಂಧ

ಸ್ವಾಮಿ ವಿವೇಕಾನಂದರ ದಿಗ್ವಿಜಯ

ಜನವರಿ 12 ಸ್ವಾಮಿ ವಿವೇಕಾನಂದರ ಜಯಂತಿ. 1893, ಸೆಪ್ಟಂಬರ್ 11ಕ್ಕೆ ಅಮೇರಿಕಾದ ಚಿಕಾಗೋದಲ್ಲಿ ಅವರು ಮಾಡಿದ ದಿಕ್ಸೂಚಿ ಭಾಷಣ. ಈ ಎರಡೂ ಸಂಧರ್ಭಗಳನ್ನು ನೆನಪಿಸಿಕೊಳ್ಳುವ ಸಲುವಾಗಿಯೇ ಸ್ವಾಮಿ ವಿವೇಕಾನಂದರ ದಿಗ್ವಿಜಯ ಎಂಬೀ ಲೇಖನ. ಕ್ರಿ.ಶ. 1893 ಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅಂದರೆ ಕ್ರಿ.ಶ. 1492 ಕ್ಕೆ ಭಾರತಕ್ಕೆ ಬರಲು ಹವಣಿಸಿ ಹಡಗನ್ನೇರಿ ಹೊರಟಿದ್ದ ನಾವಿಕ ಕ್ರಿಸ್ಟೋಫರ್ ಕೋಲಂಬಸ್ ನೌಕೆ ದಿಕ್ಕು ತಪ್ಪಿ ಅಮೇರಿಕಾಕ್ಕೆ ತಲುಪಿ ಅಲ್ಲಿನ ಜನರನ್ನೇ ಅವನು ಭಾರತೀಯರೆಂದು ತಿಳಿದು ಆವರನ್ನೇ… Read More ಸ್ವಾಮಿ ವಿವೇಕಾನಂದರ ದಿಗ್ವಿಜಯ

ಸಂಬಂಧಗಳು

ಅಕ್ಕ-ತಂಗಿ, ಅಣ್ಣ-ತಮ್ಮ, ಭಾವ-ಭಾವಮೈದ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ, ಅತ್ತೆ-ಮಾವ, ನಾದನಿ-ಷಡ್ಕ, ಇಂದು ನಮಗೆಲ್ಲಾ ಈ ಪದಗಳು ಚಿರಪರಿಚಿತ. ನಮ್ಮ‌ ಸಂಬಂಧಿಕರನ್ನು ಈ ಪದಗಳ ಮೂಲಕವೇ ಸಂಭೋದಿಸುವುದು ವಾಡಿಕೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ಪದಗಳಿಗೆ ಬೆಲೆಯೇ ಇಲ್ಲದೆ ಹೋಗಿ ಕೇವಲ ನಿಘಂಟಿನಲ್ಲಿ ಹುದುಗಿ‌ ಹೋಗುತ್ತದೆ ಎಂದರೆ ನಂಬಲು ಸಾಧ್ಯವೇ? ಖಂಡಿತವಾಗಿಯೂ ನಂಬಲೇ ಬೇಕಾಗಿದೆ. ಹಿಂದೆಲ್ಲಾ ಮತ್ತೊವ್ಬರಿಗೆ ನಮ್ಮ ಸಂಬಂಧೀಕರನ್ನು ಪರಿಚಯಿಸಿಕೊಡುವಾಗ ಅವರವರ ಸಂಬಂಧಕ್ಕೆ ಅನುಗುಣವಾಗಿ ಇವರು ನಮ್ಮ ಸೋದರ ಮಾವ ಎಂದಾಗ, ತಾಯಿಯ ತಮ್ಮನೋ ಇಲ್ಲವೇ ಅಣ್ಣನೋ… Read More ಸಂಬಂಧಗಳು