ಕೆಲಸ

ಶಂಕರ ಮತ್ತು  ಹರಿ ಇಬ್ಬರೂ ಪ್ರಾಣ ಸ್ನೇಹಿತರು. ಒಂದು ರೀತಿಯ ಚೆಡ್ಡಿ ದೋಸ್ತು ಕುಚಿಕು ಗೆಳೆಯರು. ಇಬ್ಬರೂ ಒಂದೇ ಶಾಲೆ .  ಹರಿ ತಂದೆ ಮತ್ತು ಶಂಕರನ ತಂದೆ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಆವರಿಬ್ಬರ ಮನೆ ಒಂದೇ ಕಡೆ ಇದ್ದುದ್ದರಿಂದ ಅವರಿಬ್ಬರ ಒಡನಾಟ ಹೆಚ್ಚಾಗಿಯೇ ಇತ್ತು.   ಹರಿಯ ತಾತ ಮತ್ತು ಚಿಕ್ಕಪ್ಪ ಅಡುಗೆ  ವೃತ್ತಿಯಲ್ಲಿದ್ದು ಅವರ ಮನೆಯಲ್ಲಿ ಏನಾದಾರೂ ವಿಶೇಷ ಆಡುಗೆ ಮಾಡಿದ್ದಲ್ಲಿ ಅದರಲ್ಲಿ ಶಂಕರನಿಗೆ ಒಂದು ಪಾಲು ಇದ್ದೇ  ಇರುತ್ತಿತ್ತು ಅಂತಹ ಗೆಳೆತನ ಅವರಿಬ್ಬರದ್ದು.… Read More ಕೆಲಸ

ಆಹಾರದ ಸದ್ಬಳಕೆ

ನಮ್ಮಲ್ಲಿ ಹಬ್ಬ ಮತ್ತು ಶುಭ ಮಹೂರ್ತದ ಸಾಲು ಬಂದಿತೆಂದರೆ ಎಲ್ಲರಿಗೂ ಸುಗ್ಗಿಯೋ ಸುಗ್ಗಿ. ತರಕಾರಿ, ಹೂವು ಹಣ್ಣು ವ್ಯಾಪಾರಿಗಳಿಗೆ, ದಿನಸಿ, ಬಟ್ಟೆ ವ್ಯಾಪಾರಿಗಳಿಗೆ, ಎಲ್ಲರೀತಿಯ ಛತ್ರದವರಿಗೆ, ಬಾಣಸಿಗರಿಗೆ, ಪುರೋಹಿತರಿಗೆ ಪುರುಸೊತ್ತೇ ಇರುವುದಿಲ್ಲ. ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಮಹೂರ್ತದ ಜೊತೆಗೆ ಛತ್ರ, ಅಡುಗೆಯವರ ಮತ್ತು ಪುರೋಹಿತರ ಸಮಯವನ್ನೂ ನೋಡಿಕೊಂಡೇ ಮದುವೆ ಮುಂಜಿಗಳನ್ನು ನಿರ್ಧರಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಈ ಶುಭ ಸಂದರ್ಭಗಳಲ್ಲಿ, ಎರಡು ಮೂರು, ಗೃಹಪ್ರವೇಶಗಳು, ಒಂದೆರೆಡು ನಿಶ್ಚಿತಾರ್ಥ, ಒಂದೆರಡು ಮದುವೆ ಮತ್ತು ಹುಟ್ಟಿದ ಹಬ್ಬಕ್ಕೆ ಹೋಗಲೇ ಬೇಕಾದ ಪರಿಸ್ಥಿತಿ.… Read More ಆಹಾರದ ಸದ್ಬಳಕೆ

ಅಲ್ಲಾಭಕ್ಷ್ ರೀ ಸರಾ!!

ಶಂಕರ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಯಲ್ಲಿ ‌ಮ್ಯಾನೇಜರ್‌ ಆಗಿ ಕೆಲಸ‌ ಮಾಡುತ್ತಿದ್ದ. ಅದೊಂದು ದಿನ ಅವನ ಸಹೋದ್ಯೋಗಿ ವೀರೇಶ್ ತನ್ನ ಮದುವೆಗೆ ಕಛೇರಿಯಲ್ಲಿ ಎಲ್ಲರ ಸಮ್ಮುಖದಲ್ಲಿಯೂ ಆಹ್ವಾನಿಸಿದ್ದಲ್ಲದೆ, ಖುದ್ದಾಗಿ ‌ಮನೆಗೂ ಬಂದೂ ಕುಟುಂಬ ಸಮೇತರಾಗಿ ‌ಬಾಗಲಕೋಟೆಯ‌ ಸಮೀಪದ ಗುಳೇದಗುಡ್ಡದಲ್ಲಿ ನಡೆಯುವ ತನ್ನ ವಿವಾಹಕ್ಕೆ ಬರಲು ಆಹ್ವಾನಿಸಿದ. ಮದುವೆಗೆ ಒಂದೆರಡು‌‌ ದಿನ ಮುಂಚಿತವಾಗಿ ಬಂದರೆ ‌ಸುತ್ತ ಮುತ್ತಲಿನ, ಕೂಡಲ ಸಂಗಮ, ಐಹೊಳೆ, ಬಾದಾಮಿ,ಬನಶಂಕರಿ, ಪಟ್ಟದಕಲ್ಲು ಮಹಾಕೂಟ ಹೀಗೆ ಹತ್ತು ಹಲವಾರು ಪ್ರೇಕ್ಷಣೀಯ ‌ಸ್ಥಳಗಳನ್ನೂ ನೋಡಬಹುದು ಎಂದು‌ ತಿಳಿಸಿದ. ಹೇಗೂ ಕೆಲವೇ… Read More ಅಲ್ಲಾಭಕ್ಷ್ ರೀ ಸರಾ!!

ಈಸ ಬೇಕು, ಇದ್ದು ಜಯಿಸಬೇಕು

ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ!! ಎನ್ನುವ ಮಾತುಗಳಿಗೆ ಅನ್ವರ್ಥವಾಗಿ ಬಾಳಿ ಬದುಕಿದ ಧೀಮಂತ ವ್ಯಕ್ತಿಯೊಬ್ಬರ ಪ್ರೇರಣಾದಾಯಿ ಪ್ರಸಂಗ ಇದೋ ನಿಮಗಾಗಿ… Read More ಈಸ ಬೇಕು, ಇದ್ದು ಜಯಿಸಬೇಕು

ಇಲ್ಲೇ ಸ್ವರ್ಗ ಇಲ್ಲೇ ನರಕ

ಅದೊಂದು  ಬೆಳಿಗ್ಗೆ ಶಂಕರ ತನ್ನ ಕಛೇರಿಯಲ್ಲಿ  ಸಭೆಯೊಂದರಲ್ಲಿ ತುರ್ತಾಗಿ ಭಾಗವಹಿಸಲೇ ಬೇಕಾಗಿದ್ದ ಕಾರಣ ಮನೆಯಿಂದ  ಸ್ವಲ್ಪ ಬೇಗನೇ ಹೊರಟು, ತುಸು ಲಗು ಬಗನೇ ಕಾರ್ ಓಡಿಸುತ್ತಿದ್ದ.  ಅವರ ಕಾರಿನ ಸ್ವಲ್ಪ ಮುಂದೆ ಒಬ್ಬ ವಯಸ್ಕರೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆಯೇ  ಗಾಡಿ ನೆಲಕ್ಕೆ  ಜೋರಾಗಿ ಅಪ್ಪಳಿಸಿದ ಶಬ್ಧ ಕೇಳಿದೊಡನೆ ಶಂಕರ ದಢಾರ್ ಎಂದು ಕಾರ್ ನಿಲ್ಲಿಸಿದ. ವೃಧ್ಧರ  ಗಾಡಿಯೇನೋ ಸ್ವಲ್ಪ ದೂರದಲ್ಲಿ ರಸ್ತೆಯ ಮೇಲೆ ಬಿದ್ದಿತ್ತು. ಆದರೆ ಗಾಡಿ ಚಾಲನೆ ಮಾಡುತ್ತಿದ್ದ ವಯಸ್ಕರು ಒಂದು ಕ್ಷಣ ಕಾಣಲಿಲ್ಲವಾದರೂ,… Read More ಇಲ್ಲೇ ಸ್ವರ್ಗ ಇಲ್ಲೇ ನರಕ

ಮಡಿ ಬಟ್ಟೆ

ಶಂಕರ ಆಗಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ.  ಬೇಸಿಗೆಯ ರಜೆಯಲ್ಲಿ  ಸುಮ್ಮನೆ ಮನೆಯ ಬಳಿ ಹುಡುಗರೊಂದಿಗೆ ಬಿಸಿಲಿನಲ್ಲಿ ಬೀದಿ ಸುತ್ತುವ ಬದಲು, ಬೇಸಿಗೆ ರಜೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ಅವನ ತಾಯಿ ಅವನನ್ನು ಮಂಗಳೂರಿನ ಸಮೀಪದ ವೇದಶಿಬಿರಕ್ಕೆ ಕಳುಹಿಸಿದರು. ನಾಲ್ಕುವಾರಗಳ ಉಚಿತ ವೇದಶಿಬಿರ.  ಬೆಳಿಗ್ಗೆ  4.45ಕ್ಕೇ ಎಲ್ಲರೂ ಎದ್ದು ಕಡ್ಡಾಯವಾಗಿ ತಣ್ಣೀರಿನ ಸ್ನಾನ ಮಾಡಿ 5:30 ಕ್ಕೆಲ್ಲಾ ನಿತ್ಯಪೂಜೆಯಿಂದ ಆರಂಭವಾಗುವ ದಿನಚರಿ ಯೋಗಾಭ್ಯಾಸ, ವೇದಾಧ್ಯಯನ, ಸಂಸ್ಕೃತ ಪಾಠ, ತಿಂಡಿ, ಊಟಗಳ ಜೊತೆ ರಾತ್ರಿ  10 ಘಂಟೆಗೆ ಅನೌಪಚಾರಿಕದೊಂದಿಗೆ ದಿನ ಮುಕ್ತಾಯವಾಗುತ್ತಿತ್ತು. ಆರಂಭದಲ್ಲಿ… Read More ಮಡಿ ಬಟ್ಟೆ

ಪುನರ್ಜನ್ಮ

ಶಂಕರ ಮೊನ್ನೆ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತಿದ್ದಾಗಲೇ,  ಶಂಕರಾಚಾರ್ಯವಿರಚಿತ ಎಂ.ಎಸ್. ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದ ಭಜಗೋವಿಂದಂ ಭಜಗೋವಿಂದಂ ಶ್ಲೋಕ ಕೇಳುತ್ತಲೇ ಅವನಿಗೆ ತಾನು ಸಣ್ಣನಿದ್ದಾಗ ಅವನ ತಾತ ಆ ಶ್ಲೋಕಗಳನ್ನು ಹೇಳಿಕೊಡುತ್ತಿದ್ದದ್ದು  ಮತ್ತು ಅದರ ಜೊತೆ ಹೇಳಿದ ಸುಂದರ ಪ್ರಸಂಗವೊಂದು ನೆನಪಿಗೆ ಬಂತು.  ಆಗ  ಶಂಕರನಿಗೆ ಏಳೆಂಟು ವರ್ಷಗಳಿರಬಹುದು . ಪರೀಕ್ಷೆ ಮುಗಿದು ಬೇಸಿಗೆ ರಜಾ ಬಂದಿತೆಂದರೆ ತಾತನ ಮನೆಗೆ ಹೋಗುವುದಕ್ಕೆ ಅವನಿಗೆ ಪಂಚ ಪ್ರಾಣ. ಅದೇ ರೀತೀ ಅವನ ತಾತನೂ ಅಷ್ಟೇ.… Read More ಪುನರ್ಜನ್ಮ

ನೆರೆಹೊರೆ

ಮೊನ್ನೆ ರಾತ್ರಿ ವಾಯುವಿಹಾರಕ್ಕೆಂದು ಹೋಗುತ್ತಿದ್ದಾಗ  ದಾರಿಯಲ್ಲಿ ನನ್ನ ಸ್ನೇಹಿತರೊಬ್ಬರು ಸಿಕ್ಕಿ, ಇದೇನು ಇಷ್ಟು ಹೊತ್ತಿನಲ್ಲಿ ಈ ಕಡೆಯಲ್ಲಿ ಎಂದಾಗ, ಏನೂ ಇಲ್ಲಾ ಸಾರ್, ಇಲ್ಲೇ ಪಕ್ಕದ ರಸ್ತೆಯಲ್ಲಿರುವ ನಮ್ಮ ಸ್ನೇಹಿತರೊಬ್ಬರು ಊರಿಗೆ ಹೋಗಿದ್ದಾರೆ. ಅದಕ್ಕಾಗಿ ಅವರ ಮನೆಯಲ್ಲಿ ರಾತ್ರಿ ಹೊತ್ತು ಮಲಗಲು ಹೇಳಿದ್ದಾರೆ. ಅದಕ್ಕಾಗಿ  ಹೋಗುತ್ತಿದ್ದೇನೆ.  ಕಾಲ ಸರಿಯಿಲ್ಲ ನೋಡಿ ಎಂದರು. ಅದಕ್ಕೆ ನಾನು ಹೌದು ಸಾರ್ ಎಂದು ಹೂಂ ಗುಟ್ಟಿ ನನ್ನ ವಾಯುವಿಹಾರ ಮುಂದುವರಿಸಿ ಹಾಗೇ ಯೋಚಿಸುತ್ತಿದ್ದಾಗ, ಅರೇ ಹೌದಲ್ಲಾ, ಈ ಪದ್ದತಿ ಈಗ ಅಪರೂಪವಾಗಿದೆಯಲ್ಲಾ … Read More ನೆರೆಹೊರೆ

ಕಾಫೀ ಪುರಾಣ

ಶಂಕರನ ಮನೆಯವರು ಒಟ್ಟು ಕುಟುಂಬದವರು.  ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವೇ. ಹಾಗೆಯೇ ಮನೆಗೆ ಬಂದು  ಹೋಗುವವರು ತುಸು ಹೆಚ್ಚೇ.  ಬಂದವರಿಗೆ ಕಾಫೀ ತಿಂಡಿ, ಊಟೋಪಚಾರ ಮಾಡುವುದು ಅವರ ಮನೆಯಲ್ಲಿ  ನಡೆದು ಬಂದ ಸಂಪ್ರದಾಯ. ಹಾಗೆ ಪ್ರತೀ ಬಾರಿ ಕಾಫೀ ಮಾಡಿದಾಗಲೂ ಮಕ್ಕಳೂ ಕಾಫಿ ಕುಡಿಯಲು ಬಯಸುವುದು ಸಹಜ.  ಹಾಗಾಗಿ ಸುಮ್ಮನೆ ಬಂದು ಹೋದವರೆಲ್ಲರ ಜೊತೆಯೂ ಕಾಫಿ ಕುಡಿಯುತ್ತಾ ಹೋದರೆ ಮಕ್ಕಳಿಗೆ ಕಾಫಿ ಚಟವಾಗುತ್ತದೆ ಎಂದು ತಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಫೀ ಅಭ್ಯಾಸ ಮಾಡಿಸದೇ ಇದ್ದರೆ ಮಕ್ಕಳ… Read More ಕಾಫೀ ಪುರಾಣ