ಕಛೇರಿಯ ಮೊದಲ ದಿನದ ಅನುಭವ

ಮಾರ್ಚ್ 11, 2020 ಬುಧವಾರ ಸಂಜೆ ಸುಮಾರು5:30ರ ಸಮಯ ಕಛೇರಿಯ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಂತಹ ಸಮಯ. ನಾವು ನಾಲ್ಕೈದು ಜನ ಒಟ್ಟಿಗೆ ಒಂದೇ ಕಾರಿನಲ್ಲಿ (car pool) ಮಾಡುತ್ತಿದ್ದಾಗ ಮೊಬೈಲಿನಲ್ಲಿ ಈ-ಮೇಲ್ ಬಂದ ಶಬ್ಧ ಕೇಳಿ ಯಾರಪ್ಪಾ ಈಗ ಮೇಲ್ ಕಳುಹಿಹಿರುವವರು? ಎಂದು ಮೋಬೈಲ್ ನೋಡುತ್ತಲೇ ಒಂದು ಕ್ಷಣ ಎದೆ ಝಲ್ ಎಂದಿದ್ದಂತೂ ಸುಳ್ಳಲ್ಲ. ನಮ್ಮ ಕಛೇರಿಯ ಹತ್ತಿರವೇ ಇದ್ದ ಕೆಲವು ಸಹೋದ್ಯೋಗಿಗಳು ವಾಸಿಸುತ್ತಿದ್ದಂತಹ ಅಪಾರ್ಟ್ಮೆಂಟಿನ ಕೆಲವರಿಗೆ ಕೊರೋನಾ ಸೋಂಕು ಧೃಢ ಪಟ್ಟಿರುವ ವಿಷಯ ತಿಳಿದು… Read More ಕಛೇರಿಯ ಮೊದಲ ದಿನದ ಅನುಭವ

ಮದುವೆಯ ಈ ಬಂಧ ಅನುರಾಗದ ಅನುಬಂಧ

ಮದುವೆ ಎನ್ನುವುದು ಕೇವಲ ಗಂಡು ಹೆಣ್ಣಿನ ಒಗ್ಗೂಡಿಸುವಿಕೆಯಲ್ಲದೇ ಅದು ಆ ಎರಡು ಕುಟುಂಬಗಳ ನಡುವೆ ಸಂಬಂಧವನ್ನು ಬೆಸೆಯುವುದಲ್ಲದೇ ಆ ಎರಡೂ ಕುಟುಂಬಗಳ ಮುಂದಿನ ಗುಣ ನಡುವಳಿಕೆಗಳನ್ನು ಮುಂದಿನ ತಲಮಾರಿಗೂ ಮುಂದುವರೆಸಿಕೊಂಡು ಹೋಗುವ ಸುಂದರವಾದ ಸಂದರ್ಭವಾಗಿದೆ. ಮದುವೆ ಎನ್ನುವುದು ಉಚ್ಚರಿಸಲು ಕೇವಲ ಮೂರೇ ಅಕ್ಷರಗಳಾದರೂ ಅದರ ಹಿಂದಿರುವ ಕಷ್ಟವನ್ನು ಅರಿತೇ ಮದುವೇ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬುವ ಗಾದೆಯನ್ನೇ ನಮ್ಮ ಹಿರಿಯರು ಮಾಡಿದ್ದಾರೆ. ಸುಮಾರು ವರ್ಷಗಳ ಹಿಂದೇ ಇದೇ ದಿನ ಎಲ್ಲಾ ಎಡರು ತೊಡರುಗಳನ್ನೂ ಮೀರಿ… Read More ಮದುವೆಯ ಈ ಬಂಧ ಅನುರಾಗದ ಅನುಬಂಧ

ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಅದು ಕ್ರಿ.ಶ, 7ನೇ ಶತಮಾನದಲ್ಲಿ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ದೇಶ ವಿದೇಶಗಳಲ್ಲೆಲ್ಲಾ ಹರಡಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾಗಿದ್ದರೆ, ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿಯಿಂದಾಗಿ ಒಂದು ರೀತಿಯಲ್ಲಿ ಸನಾತನ ಧರ್ಮ ಅಳಿವಿನಂಚಿಗೆ ತಲುಪಿತ್ತು. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು. ಕೇರಳದ ಪೂರ್ಣಾ ನದಿ… Read More ಶ್ರೀ ಶಂಕರ ಭಗವತ್ಪಾದರ ಸಂಕ್ಷಿಪ್ತ ಜೀವನ ಚರಿತ್ರೆ

ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ನಮ್ಮ ಸನಾತನ ಧರ್ಮದಲ್ಲಿ ತಂದೆ, ತಾಯಿ, ಸೂರ್ಯ ಮತ್ತು ಚಂದ್ರರಂತಹ ಪ್ರತ್ಯಕ್ಷ ದೇವರುಗಳ ಹೊರತಾಗಿ ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ ಗುರು ಪರಂಪರೆ. ನಮ್ಮ ಸನಾತನ ಧರ್ಮದ ಮೂಲ ಅಡಗಿರುವುದೇ ಗುರು ಪರಂಪರೆಯಾಗಿದ್ದು ಈ ದೇಶದಲ್ಲಿ ಈಗಾಗಲೇ ಲಕ್ಷಾಂತರ ಗುರುಗಳು ಮತ್ತು ಅವಧೂತರುಗಳು ಬಂದು ಹೋಗಿದ್ದಾರೆ. ಅವಧೂತ ಎಂಬುದು ಸಂಸ್ಕೃತದಿಂದ ಬಂದ ಪದವಾಗಿದ್ದು, ಭಾರತೀಯ ಧರ್ಮಗಳಲ್ಲಿ ಅಹಂಕಾರ-ಪ್ರಜ್ಞೆ, ದ್ವಂದ್ವತೆ ಮತ್ತು ಸಾಮಾನ್ಯ ಲೌಕಿಕ ಕಾಳಜಿಗಳನ್ನು ಮೀರಿದ ಮತ್ತು ಪ್ರಮಾಣಿತ ಸಾಮಾಜಿಕ ಶಿಷ್ಟಾಚಾರವನ್ನು ಪರಿಗಣಿಸದೆ ವರ್ತಿಸುವ ಒಂದು ರೀತಿಯ ಅತೀಂದ್ರಿಯವಾದ… Read More ಬೆಲಗೂರು ಬಿಂಧು ಮಾಧವ ಶರ್ಮ ಅವಧೂತರು

ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ನಾವೆಲ್ಲರೂ ಚಿಕ್ಕವಯಸ್ಸಿನಿಂದಲೂ ಕುಲವಧು ಚಿತ್ರದಲ್ಲಿ, ಪ್ರಬುದ್ಧ ನಟಿ ಲೀಲಾವತಿಯವರ ಅಭಿನಯಿಸಿರುವ ದ. ರಾ. ಬೇಂದ್ರೆಯವರ ಈ ಕವನವನ್ನು ಕೇಳಿಯೇ ದೊಡ್ಡವರಾಗಿದ್ದೇವೆ. ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ | ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. || ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ. || ಈ ಕವನದಲ್ಲಿ ಕವಿಗಳು ಪ್ರತೀ ಫಾಲ್ಗುಣ ಮಾಸದಲ್ಲಿ ಪ್ರಕೃತಿಯಲ್ಲಿ… Read More ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯರೇ ಮೊದಲ ಗುರುಗಳು

ವೀರ ಕುನ್ವರ್ ಸಿಂಗ್

ಬ್ರಿಟೀಷರ ಸೇನೆಯಲ್ಲಿ ಸಾಮಾನ್ಯ ಸೈನಿಕನಾಗಿದ್ದ ಮಂಗಲ್ ಪಾಂಡೆ 1857ರಲ್ಲಿ ಬ್ರಿಟೀಷ್ ಸೈನ್ಯದ ವಿರುದ್ಧವೇ ತಿರುಗಿ ಬಿದ್ದು ನಡೆಸಿದ ಹೋರಾಟವನ್ನು ಬ್ರಿಟೀಷರು ಸಿಪಾಯಿದಂಗೆ ಎಂದು ದಾಖಲಿಸಿದರೆ, ಭಾರತದ ನಿಜವಾದ ಇತಿಹಾಸಕಾರರು ಅದನ್ನು ಪ್ರಥಮ ಸ್ವಾತ್ರಂತ್ರ್ಯ ಸಂಗ್ರಾಮ ಎಂದೇ ಹೆಮ್ಮೆಯಿಂದ ಕರೆಯುತ್ತಾರೆ. ಮಂಗಲ್ ಪಾಂಡೆ ಹತ್ತಿಸಿದ ಸ್ವಾತ್ರಂತ್ರ್ಯದ ಕಿಚ್ಚನ್ನು ಬಿಹಾರ್ ಪ್ರಾಂತ್ಯದಲ್ಲಿ ಪ್ರಜ್ವಲಿಸುವಂತೆ ಮಾಡಿದ ಕೀರ್ತಿ ಪ್ರಸ್ತುತ ಭಾರತದ ಬಿಹಾರದ ಭೋಜ್‌ಪುರ ಜಿಲ್ಲೆಯ ಭಾಗವಾಗಿರುವ ಜಗದೀಸ್‌ಪುರದ ಪರ್ಮಾರ್ ರಜಪೂತರ ಉಜ್ಜೈನಿಯಾ ಕುಲದ ಕುಟುಂಬಕ್ಕೆ ಸೇರಿದ್ದ ವೀರ್ ಕುನ್ವರ್ ಸಿಂಗ್ ಅವರಿಗೆ… Read More ವೀರ ಕುನ್ವರ್ ಸಿಂಗ್

ಕಶ್ಮೀರ್ ಫೈಲ್ಸ್ ಅನುಭವ

ಮಾರ್ಚ್ ೧೧ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಎಂದರೂ ತಪ್ಪಾಗದು. ಏಕೆಂದರೆ ಸಾವಿರಾರು ವರ್ಷಗಳ ಇತಿಹಾಸವನ್ನು ಕರಾರುವಾಕ್ಕಾಗಿ ತಿಳಿದಿರುವ ನಮಗೆ ಕೇವಲ 32 ವರ್ಷಗಳ ಹಿಂದೆ ನಡೆದಿದ್ದ ಕಾಶ್ಮೀರೀ ಪಂಡಿತರ ನರಮೇಧದ ಕುರಿತಾಗಿ ನಿಜವಾದ ಇತಿಹಾಸವನ್ನೇ ತಿಳಿಯದಿದ್ದ ನಮಗೆ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿಯವರ ಕಾಶ್ಮೀರಿ ಫೈಲ್ಸ್ ಚಲನಚಿತ್ರ ಬಿಡುಗಡೆಯಾದ ದಿನ. ಈ ಚಿತ್ರದ ಮೂಲಕ ಆ ನಿರ್ದೇಶಕ ಕಾಶ್ಮೀರದ ಕುರಿತಾದ ನೈಜ ಇತಿಹಾಸನ್ನು ಜಗತ್ತಿಗೇ ತಿಳಿಸಿದ್ದಕ್ಕಾಗಿ ಮೊದಲು ಅಭಿನಂದನೆಗಳನ್ನು ಸಲ್ಲಿಸೋಣ. ಚಿತ್ರ… Read More ಕಶ್ಮೀರ್ ಫೈಲ್ಸ್ ಅನುಭವ

ಅನಂತ ಲಕ್ಷ್ಮಣ ಕಾನ್ಹೇರೆ

ಇತಿಹಾಸ ತಿಳಿಯದ ಕೆಲವು ಅರಿವುಗೇಡಿಗಳು ವೀರ ಸಾವರ್ಕರ್ ಅವರೊಬ್ಬ ಹೇಡಿ ಹಾಗೂ ಬ್ರಿಟಿಷರಿಗೆ ಕ್ಷಮೆ ಅರ್ಜಿ ಬರೆದು ಅವರೊಂದಿಗೆ ಶಾಮೀಲಾರಾಗಿದ್ದರು ಎಂದು ಪದೇ ಪದೇ ಹೇಳುವಾಗ ನಿಜಕ್ಕೂ ಮೈಯ್ಯಲ್ಲಿರುವ ರಕ್ತ ಕುರಿಯುತ್ತದೆ. ನಿಜ ಹೇಳಬೇಕೆಂದರೆ ಸ್ವಾತ್ರಂತ್ರ್ಯ ಹೋರಾಟದ ಸಮಯದಲ್ಲಿ ಬಹುತೇಕ ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಕರಾಗಿದ್ದಲ್ಲದೇ ಅವರ ಹಿಂದೆ ನಿಂತು ಅವರ ಎಲ್ಲಾ ಹೋರಾಟಗಳಿಗೂ ಶಕ್ತಿ ತುಂಬುತಿದ್ದದ್ದೇ ವೀರ ಸಾವರ್ಕರ್. ಅಂತಹ ವೀರ ಸಾವರ್ಕರ ಗರಡಿಯಲ್ಲಿ ತಯಾರಾಗಿ ದೇಶದ ಸ್ವಾತ್ರಂತ್ರ್ಯಕ್ಕಾಗಿ ತಮ್ಮ 18ರ ಪ್ರಾಯದಲ್ಲೇ 19 ಎಪ್ರಿಲ್ 1910 ರಂದು… Read More ಅನಂತ ಲಕ್ಷ್ಮಣ ಕಾನ್ಹೇರೆ

ಬಾಳಗಂಚಿ ಚೋಮನ ಹಬ್ಬ

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ನಮ್ಮೂರು ಬಾಳಗಂಚಿ. ಸದ್ಯಕ್ಕೆ 350-500 ಮನೆಗಳು ಇದ್ದು ಸುಮಾರು ಹಲವರು ಈಗಾಗಲೇ ಕೆಟ್ಟು ಪಟ್ಟಣಕ್ಕೆ ಸೇರು ಎನ್ನುವಂತೆ ದೇಶಾದ್ಯಂತ ವಿವಿಧ ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ಕಾರಣ, ಸದ್ಯಕ್ಕೆ ಎರಡು ಮೂರು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ. ಹೆಸರಿಗಷ್ಟೇ ಚಿಕ್ಕದಾದರೂ ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ. ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು… Read More ಬಾಳಗಂಚಿ ಚೋಮನ ಹಬ್ಬ