ಬಿಟಿಎಸ್ ಫುಟ್ ಬೋರ್ಡ್ ಅನುಭವ

ಎಂಭತ್ತರ ದಶಕ ಹದಿಹರೆಯದ ವಯಸ್ಸು. ಆಗ ತಾನೆ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಸೇರಿಕೊಂಡಿದ್ದೆ. ಕಾಲೇಜಿಗೆ ಶಾಲೆಯ ತರಹ ಒಂದು ಮಣಭಾರದ ಪುಸ್ತಕಗಳನ್ನು ಹೊತ್ತುಕೊಂಡು ಹೊಗಬೇಕಿರಲಿಲ್ಲ. ಕೇವಲ ನಾಲ್ಕಾರು ಪುಸ್ತಕಗಳನ್ನು ಒಂದು ಚೆಂದನೆಯ ಚೀಲದಲ್ಲಿ ಹಾಕಿಕೊಂಡು ಬಣ್ಣ ಬಣ್ಣದ ಪ್ಯಾಂಟ್ ಶರ್ಟು ಹಾಕಿಕೊಂಡು ಕಾಲೇಜಿಗೆ ಹೋಗುವುದೆಂದರೆ ಎನೋ ಒಂದು ತರಹ ಹಿತಾನುಭವ. ನಾವು ಇದ್ದಿದ್ದು ಬಿಇಎಲ್ ಬಳಿ ಕಾಲೇಜ್ ಇದ್ದದ್ದು ಆರ್. ಟಿ ನಗರ. ನಮ್ಮ ಕಡೆಯಿಂದ ನೇರ ಬಸ್ ಸಂಪರ್ಕ ಇಲ್ಲದಿದ್ದ ಕಾರಣ ಕನಿಷ್ಠ ಪಕ್ಷ ಎರಡು… Read More ಬಿಟಿಎಸ್ ಫುಟ್ ಬೋರ್ಡ್ ಅನುಭವ

ಕವಲೇ ದುರ್ಗ

ಶಿವಮೊಗ್ಗ ಹೇಳಿ ಕೇಳಿ ಮಲೆನಾಡಿನ ಪ್ರದೇಶ ವರ್ಷದ 365 ದಿನಗಳು ಹಚ್ಚ ಹಸಿರಾಗಿರುವಂತಹ ಸುಂದರ ಪ್ರಕೃತಿಯ ತಾಣ. ಶಿವಮೊಗ್ಗದಿಂದ ಸುಮಾರು 80 ಕಿಮೀ ಮತ್ತು ತೀರ್ಥಹಳ್ಳಿಯಿ೦ದ ಸುಮಾರು 18 ಕಿ.ಮಿ ದೂರದಲ್ಲಿರುವ ಸುಂದರ ಪ್ರಕೃತಿ ತಾಣ ಮತ್ತು ಐತಿಹಾಸಿಕ ಪ್ರದೇಶವೇ ಕವಲೇ ದುರ್ಗ. ತೀರ್ಥಹಳ್ಳಿಯಿಂದ ಆಗುಂಬೆಯತ್ತ ಹೋಗುವ ಹಾದಿಯಲ್ಲಿ ಸುಮಾರು ಆರು ಕಿ.ಮೀ ದಲ್ಲಿ ಸಿಗುವ ಬಿಳ್ ಕೊಪ್ಪ ಎನ್ನುವ ಸ್ಥಳದಿಂದ ಬಲಕ್ಕೆ ತಿರುಗಿ ಸುಮಾರು 10 ಕಿ.ಮೀ ಕಚ್ಚಾ ರಸ್ತೆಯಲ್ಲಿ ಕ್ರಮಿಸಿದರೆ ಕವಲೇ ದುರ್ಗದ ಬುಡವನ್ನು… Read More ಕವಲೇ ದುರ್ಗ

ಮಾತೃ ಸ್ವರೂಪೀ ಅಪ್ಪಾ

ಅದೊಂದು ಐಶಾರಾಮೀ ಅಂತರಾಷ್ಟ್ರೀಯ ಶಾಲೆಯ ಉದ್ಯಾನವನದಲ್ಲಿ  ಗಂಗಣ್ಣ ಗಿಡಗಳಿಗೆ ನೀರನ್ನು ಹಾಕಿ ಪೋಷಿಸುತ್ತಿದ್ದರು. ಸಂಜೆ ಬಿಸಿಲು ತೀವ್ರವಾಗಿ ಅತನನ್ನು ಬಸವಳಿಸುತ್ತಿತ್ತಾದರೂ ಅದನ್ನು ಲೆಕ್ಕಿಸದೆ ತನ್ನ ಕರ್ತವ್ಯದಲ್ಲಿ ನಿರತನಾಗಿದ್ದ ಮಾಲಿ ಗಂಗಣ್ಣನ ಅವರ ಬಳಿ ಬಂದ ಸಹೋದ್ಯೋಗಿಯೊಬ್ಬರು, ಪ್ರಿನ್ಸಿಪಾಲ್ ಮೇಡಂ ನಿಮ್ಮನ್ನು ಕರೆಯುತ್ತಿದ್ದಾರೆ. ಈ ಕೂಡಲೇ ಅವರನ್ನು ಭೇಟಿಯಾಗಬೇಕೆಂತೇ ಎಂದು ಹೇಳಿದರು. ಅರೇ! ಏನಪ್ಪಾ ಆಯ್ತು? ಪ್ರಿನ್ಸಿಪಾಲ್ ಮೇಡಂ ಕರೆಯುವಷ್ಟು ತಪ್ಪನ್ನು ನಾನೇನು ಮಾಡಿದೆ? ಎಂದು ಯೋಚಿಸುತ್ತಲೇ, ಭಯ ಭಯದಿಂದ ಬೆವರು ಸುರಿಯುತ್ತಿದ್ದ ಮುಖ ಮತ್ತು ಕೈಕಾಲುಗಳನ್ನು ತೊಳೆದುಕೊಂಡು… Read More ಮಾತೃ ಸ್ವರೂಪೀ ಅಪ್ಪಾ

ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ರಾಗಿಗುಡ್ಡ

ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಕೆಲದಿನಗಳ ಹಿಂದೆ ಜಯನಗರದ ಕುರಿತಾಗಿ ತಿಳಿದುಕೊಂಡಿದ್ದೆವು. ಇಂದು ಅದೇ ಜಯನಗರಕ್ಕೇ ಹೊಂದಿಕೊಂಡೇ ಇರುವಂವಹ ಜಗತ್ಪ್ರಸಿದ್ದವಾದ ರಾಗಿಗುಡ್ಡದ ಆಂಜನೇಯಸ್ವಾಮಿ ದೇವಾಲಯದ ಇತಿಹಾಸದ ಬಗ್ಗೆ ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.  ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಇತಿಹಾಸವನ್ನು ಈ ವೀಡಿಯೂ ಮೂಲಕವೂ ತಿಳಿಯಬಹುದಾಗಿದೆ ಸಾಮಾನ್ಯವಾಗಿ ಪ್ರತಿಯೊಂದು ಹಳ್ಳಿ ಅಥವಾ ಊರಿಗೆ ಹೋದಾಗ ಆ ಊರಿನ ಮುಂಭಾಗದಲ್ಲೇ ಅಂಜನಿ ಪುತ್ರ ಆಂಜನೇಯ… Read More ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ರಾಗಿಗುಡ್ಡ

ಬಾಲ್ಯದ ಬಯಾಸ್ಕೋಪ್

ಬೇಸಿಗೆಯಲ್ಲಿ ಪರೀಕ್ಷೆ ಮುಗಿದು ಫಲಿತಾಂಶ ಬಂದಿದ್ದೇ ತಡಾ ಗಂಟು ಮೂಟೆ ಕಟ್ಟಿಕೊಂಡು ತಾತನ ಮನೆಗೆ ಹೋಗುವುದು ನಮ್ಮ ಮನೆಯ ವಾಡಿಕೆ. ನಮ್ಮೂರಿಗೆ ಹೋಗಲು ಪ್ರಮುಖ ಆಕರ್ಷಣೆಯೆಂದರೆ ಅದೇ ಸಮಯದಲ್ಲಿ ಎರಡು ವಾರಗಳ ಕಾಲ ನಡೆಯುತ್ತಿದ್ದ ಊರ ಹಬ್ಬ, ಜಾತ್ರೆ, ದೇವಸ್ಥಾನದ ಮುಂದಿದ್ದ ಕಲ್ಯಾಣಿ, ಅಜ್ಜಿ ಮಾಡಿಕೊಡುತ್ತಿದ್ದ ಕೆಂಡ ರೊಟ್ಟಿ ಗಟ್ಟಿ ಚಟ್ನಿ ಮತ್ತು ಬೆಣ್ಣೆ, ತಾತನ ತೊಡೆ ಮೇಲೆ ಕುಳಿತುಕೊಂಡು ಕೇಳುತ್ತಿದ್ದ ಕಥೆಗಳಲ್ಲದೇ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಸಿನಿಮಾ ಪ್ರೊಜೆಕ್ಷನ್. ನಮ್ಮೂರು ಬಾಳಗಂಚಿ ಸುಮಾರು ಮುನ್ನೂರರಿಂದ ನಾಲ್ಕು… Read More ಬಾಲ್ಯದ ಬಯಾಸ್ಕೋಪ್

ಸಿಂಹಾಚಲಂನ ಸಿಂಹಾದ್ರಿ

ಸಿಂಹಾಚಲಂ ಅಥವಾ ಸಿಂಹಾದ್ರಿ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಹೊರವಲಯದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಊರಾಗಿದೆ. ನರಸಿಂಹ ಸ್ವಾಮಿಯ ಪ್ರಸಿದ್ಧ 18 ಕ್ಷೇತ್ರಗಳಲ್ಲಿ ಸಿಂಹಾದ್ರಿಯೂ ಒಂದಾಗಿದೆ. ಈ ದೇವಾಲಯದಲ್ಲಿ ವಿಷ್ಣುವಿನ ದಶಾವತಾರದಲ್ಲಿ ನಾಲ್ಕನೇ ಅವತಾರವಾದ ನರಸಿಂಹ ಸ್ವಾಮಿಯ ವಿಶಿಷ್ಟವಾದ ವಿಗ್ರಹವಿದೆ. ಈ ವಿಗ್ರಹದ ದೇಹವು ಸದೃಢವಾದ ಮಾನವ ಶರೀರದಂತಿದ್ದರೆ ತಲೆಯ ಭಾಗವು ಸಿಂಹದ ಮುಖ ಹೊಂದಿದೆ ಬೆಟ್ಟದ ಮೇಲೆ ವರಹಾ ನರಸಿಂಹ ಸ್ವಾಮಿಯ ವಾಸಸ್ಥಾನವೆಂದು ಹೇಳಲಾಗುವ ಪ್ರಸಿದ್ಧ ದೇವಾಲಯವಾಗಿದ್ದು ಪ್ರತೀ ವರ್ಷವೂ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ… Read More ಸಿಂಹಾಚಲಂನ ಸಿಂಹಾದ್ರಿ

ಭಾಷಾ ಭೂಷಣ

ಇತ್ತೀಚೆಗೆ ಟಿವಿಯಲ್ಲಿ ಪೌರಾಣಿಕ ಚಿತ್ರವೊಂದು ಪ್ರಸಾರವಾಗುತ್ತಿತ್ತು. ಪೌರಾಣಿಕ ಚಿತ್ರ ಎಂಬ ಕುತೂಹಲದಿಂದ ನೋಡಲು ಕುಳಿತುಕೊಂಡು ಕೊಂಡ ಅರ್ಧಗಂಟೆಗಳಲ್ಲಿಯೇ ಮನಸ್ಸಿಗೆ ನೋವಾಗಿ ನೋಡಲು ಅಸಹನೀಯವಾಯಿತು. ಅಕಾರ ಮತ್ತು ಹಕಾರದ ನಡುವಿನ ವ್ಯತ್ಯಾಸ ಅರಿಯದ, ಅವರ ಸಂಭಾಷಣೆಗೂ ಅವರ ಆಂಗಿಕ ಅಭಿನಯಕ್ಕೂ ಸಂಬಂಧವೇ ಇರದ, ಕನ್ನಡ ಭಾಷೆಯ ಮೇಲೆ ಸ್ವಲ್ಪವೂ ಹಿಡಿತವಿರದ ಅಪಾತ್ರರನ್ನೆಲ್ಲಾ ಪೌರಾಣಿಕ ಪಾತ್ರದಲ್ಲಿ ನೋಡುತ್ತಿದ್ದಾಗ, ಕನ್ನಡ ಕಸ್ತೂರಿ ಎನ್ನುವಂತಹ ಸೊಗಡಿರುವ ಭಾಷೆಯನ್ನು ಇಷ್ಟು ಕೆಟ್ಟದಾಗಿ ಕೊಲೆ ಮಾಡುತ್ತಿದ್ದಾರಲ್ಲಾ? ಎಂದೆನಿಸಿ ಕೂಡಲೇ ಅಭಿನಯ ಮತ್ತು ಭಾಷ ಶುದ್ಧತೆಯಲ್ಲಿ ಪರಿಪಕ್ವವಾಗಿದ್ದ… Read More ಭಾಷಾ ಭೂಷಣ

ಅಜ್ಜಿ ಮನೆಯಲ್ಲಿ ಬೇಸಿಗೆಯ ರಜಾ ಮಜ

ಪರೀಕ್ಷೆ ಮುಗಿದು, ಫಲಿತಾಂಶ ಬಂದು ಬೇಸಿಗೆ ರಜೆ ಬಂದಿತೆಂದರೆ ನಮಗೆ ಖುಷಿಯೋ ಖುಷಿ. ಪರೀಕ್ಷೆ ಮುಗಿದ ತಕ್ಷಣ ಒಂದೋ ಅಮ್ಮನ ಅಮ್ಮ ಅಜ್ಜಿ ಮನೆಗೆ ಹೋಗಬೇಕು ಇಲ್ಲವೇ ತಂದೆಯ ತಂದೆ ತಾತನ ಮನೆಗೆ ಹೋಗಬೇಕು. ಸಾಧಾರಣವಾಗಿ ನಮ್ಮ ಯುಗಾದಿ ಆದ ಹದಿನೈದು ದಿನಕ್ಕೇ ನಮ್ಮ ಊರಿನಲ್ಲಿ ನಮ್ಮೂರ ಜಾತ್ರೆ ಬಹಳ ಅದ್ದೂರಿಯಿಂದ ಜರುಗುತ್ತಿದ್ದ ಕಾರಣ, ಆ ಜಾತ್ರೆಯನ್ನು ಮುಗಿಸಿಕೊಂಡು ಬಂದ ಕೂಡಲೇ ಅಜ್ಜಿ ಮನೆಗೆ ಹೋಗಲು ಸಿದ್ದವಾಗುತ್ತಿದ್ದೆವು. ತಾತನ ಊರಿಗೆ ಹೋಗಲು ದೇವಸ್ಥಾನದ ಮುಂದಿನ ಕಲ್ಯಾಣಿಯಲ್ಲಿ ಈಜಾಡುವುದು,… Read More ಅಜ್ಜಿ ಮನೆಯಲ್ಲಿ ಬೇಸಿಗೆಯ ರಜಾ ಮಜ

ರಂಗಕರ್ಮಿ ಆರ್. ಎಸ್. ರಾಜಾರಾಂ

ನೋಡಿದಾಕ್ಷಣ ಅರೇ ಇವರು ಯಾರೋ ನಮ್ಮ ತಾತನ ತರಹಾನೇ ಇದ್ದಾರಲ್ಲಾ! ಎನ್ನುವಷ್ಟು ಅಪ್ಯಾಯಮಾನತೆ,‌ ಇಳೀ ವಯಸ್ಸಿನಲ್ಲಿಯೂ ತುಂಟತನ ತೋರುವ ತಾತ, ಹೀಗೆ ತಮ್ಮ ಸಹಜ ಅಭಿನಯದ‌ ಮೂಲಕ ರಂಗಭೂಮಿ, ಹಿರಿತೆರೆ, ಕಿರಿತೆರೆಯಲ್ಲಿ ಸುಮಾರು ಆರು ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ರಂಗಕರ್ಮಿ ರಾಜಾರಾಂ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ರಂಗಕರ್ಮಿ ಆರ್. ಎಸ್. ರಾಜಾರಾಂ