ವಿರೋಧ ಪಕ್ಷಗಳು

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹುಮತ ಪಡೆದವರು ಆಡಳಿತ ನಡೆಸುವ ಅಥಿಕಾರ ಪಡೆದರೆ, . ಬಹುಮತ ಪಡೆಯದವರು ವಿರೋಧ ಪಕ್ಷವಾಗುತ್ತಾರೆ.  ದೇಶದ ಹಿತದೃಷ್ಟಿಯಿಂದ ದೇಶದ ಆಗು ಹೋಗುಗಳ ಬಗ್ಗೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ಆಡಳಿತ ಪಕ್ಷದಷ್ಟೇ ಜವಾಬ್ಧಾರಿ ವಿರೋಧಪಕ್ಷಕ್ಕೂ ಇರುತ್ತದೆ. ಹಾಗಾಗಿಯೇ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳನ್ನು ಕಾವಲು ನಾಯಿಗಳಿಗೆ ಹೋಲಿಸಲಾಗುತ್ತದೆ,  ವಿರೋಧ ಪಕ್ಷ ಎಂದ ಮಾತ್ರಕ್ಕೆ ಆಡಳಿತ ಪಕ್ಷ ಮಾಡುವ ಎಲ್ಲಾ ಕೆಲಸಗಳನ್ನೂ ವಿರೋಧಿಸಲೇ ಬೇಕೆಂಬ ನಿಯಮವೇನಿಲ್ಲ. ವಿರೋಧ ಪಕ್ಷವು ರಚನಾತ್ಮಕವಾಗಿ ಕಾರ್ಯನಿಭಾಯಿಸುವ ಮೂಲಕ ಆಡಳಿತ ಪಕ್ಷ ದೇಶವನ್ನು ಸರಿಯಾದ… Read More ವಿರೋಧ ಪಕ್ಷಗಳು

ಪ್ರಯಾಗದ ಬಡೇ ಹನುಮಾನ್ ಜೀ ಮಂದಿರ್

ಪ್ರಯಾಗ ಭಾರತದ ಅತ್ಯಂತ ಪ್ರಾಚೀನ ನಗರದಲ್ಲಿ ಒಂದಾಗಿದೆ. ಉತ್ತರ ಪ್ರದೇಶದ ಬಹುದೊಡ್ಡ ನಗರದಲ್ಲಿ ಇದೂ ಸಹಾ ಒಂದಾಗಿದ್ದು ಪೌರಾಣಿಕವಾಗಿಯೂ ಮತ್ತು ಐತಿಹಾಸಿಕವಾಗಿಯೂ ಪ್ರಸಿದ್ಧ ನಗರವಾಗಿದೆ. ವೇದ ಪುರಾಣಗಳಲ್ಲಿಯೂ ಈ ನಗರದ ಬಗ್ಗೆ ಉಲ್ಲೇಖವಿದ್ದು ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ನಂತರ ಬ್ರಹ್ಮದೇವ ಪ್ರಥಮವಾಗಿ ಇದೇ ನಗರದಲ್ಲಿಯೇ ಯಜ್ಞಮಾಡಿದ ಎಂಬ ಪ್ರತೀತಿ ಇದೆ. ಆದ್ದಾರಿಂದಲೇ ಈ ನಗರಕ್ಕೆ ಪ್ರಯಾಗ ಎಂಬ ಹೆಸರು ಬಂದಿತೆಂದು ನಂಬಲಾಗಿದೆ. ಇದು ಮೂರು ನದಿಗಳು ಸೇರುವ ತ್ರಿವೇಣಿ ಸಂಗಮವೂ ಹೌದು. ಗಂಗ ಯಮುನಾ ಮತ್ತು ವೇದಗಳಲ್ಲಿ… Read More ಪ್ರಯಾಗದ ಬಡೇ ಹನುಮಾನ್ ಜೀ ಮಂದಿರ್

ಶಾಲೆಗಳನ್ನೇ ವಿಶೇಷ ಕೋವಿಡ್ ಅರೈಕೆ ಕೇಂದ್ರಗಳನ್ನಾಗಿಸಿದ ರಾಷ್ಟ್ರೋತ್ಥಾನ ಪರಿಷತ್

ಅದೊಂದು ವಠಾರದಲ್ಲಿ ನಾಲ್ಕು ಜನರಿರುವ ಒಂದು ಸಣ್ಣ ಕುಟುಂಬವೊಂದು ವಾಸವಾಗಿತ್ತು. ಅದೊಮ್ಮೆ ಇದ್ದಕ್ಕಿದ್ದಂತೆಯೇ ಆ ಮನೆಗೆ ದೂರದೂರಿನಿಂದ ಸುಮಾರು ಎಂಟು ಹತ್ತು ನೆಂಟರು ಆಗಮಿಸಿ ಬಿಟ್ಟರು. ಬಂದರವರನ್ನು ನೋಡಿದರೆ ದೂರ ಪ್ರಯಾಣದಿಂದ ಬಹಳ ಹಸಿದಂತೆ ಕಾಣುತ್ತಿದ್ದರು. ಅವರೆಲ್ಲರನ್ನು ಊಟಕ್ಕೆ ಕುಳ್ಳಿರಿಸಬೇಕು.  ಆದರೆ  ಅವರ ಮನೆಯಲ್ಲಿ ಎಲ್ಲರಿಗೂ ಸಾಕಾಗುವಷ್ಟು ಅಡುಗೆ ಇರಲಿಲ್ಲ. ಅಷ್ಟು ಜನರಿಗೆ  ಅಡುಗೆ ಮಾಡಬೇಕೆಂದರೂ ಕನಿಷ್ಟ ಪಕ್ಷ ಒಂದೆರಡು ಗಂಟೆಯಾದರೂ ಬೇಕಿತ್ತು.  ತಿಂಗಳ ಕೊನೆಯಾಗಿದ್ದರಿಂದ ಹೋಟೇಲ್ಲಿನಿಂದಲೂ ತರುವಷ್ಟು ಹಣ ಅವರ ಬಳಿ ಇರಲಿಲ್ಲ. ಕೂಡಲೇ ಮನೆಯಾಕೆ… Read More ಶಾಲೆಗಳನ್ನೇ ವಿಶೇಷ ಕೋವಿಡ್ ಅರೈಕೆ ಕೇಂದ್ರಗಳನ್ನಾಗಿಸಿದ ರಾಷ್ಟ್ರೋತ್ಥಾನ ಪರಿಷತ್

ಶಂಖನಾದ ಅರವಿಂದ್

ಜನರು ತಮ್ಮೆಲ್ಲಾ ದೈನಂದಿನದ ಕಷ್ಟ ಸುಖಃಗಳನ್ನು ಮರೆಯುವುದಕ್ಕಾಗಿ ಮನೋರಂಜನೆಗಾಗಿ ಕೆಲ ಕಾಲ ನಾಟಕ ಮತ್ತು ಚಲನಚಿತ್ರಗಳನ್ನು ನೋಡಿ ಅದರಲ್ಲಿ ಬರುವ ನಾಯಕ ಮತ್ತು ನಾಯಕಿಯರೊಂದಿಗೆ ತಮ್ಮ ಬದುಕನ್ನು ಹೋಲಿಸಿಕೊಂಡು ತಮ್ಮ ಕಷ್ಟಗಳನ್ನು ಮರೆಯುತ್ತಾರೆ. ಇವೆಲ್ಲವೂ ನಾಯಕ ನಾಯಕಿ ಪ್ರಧಾನವಾಗಿದ್ದರೂ ಅವರಿಬ್ಬರ ಕಥೆಯ ಏಕತಾನತೆಯನ್ನು ತಡೆಯುವ ಸಲುವಾಗಿ ನಾಯಕ ಮತ್ತು ನಾಯಕಿಯ ಕಥೆಗೆ ಸಮಾನಾಂತರವಾಗಿ ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡಿರುತ್ತಾರೆ. ಹಾಗಾಗಿ ಅಂದೂ ಇಂದು ಮತ್ತು ಮುಂದೆಯೂ ಹಾಸ್ಯನಟರ ಕಾಲ್ ಶೀಟ್ ಮೊದಲು ಪಡೆದುಕೊಂಡು ನಂತರ ನಾಯಕರನ್ನು ಆರಿಸಿಕೊಳ್ಳುವ ಸಂಪ್ರದಾಯ… Read More ಶಂಖನಾದ ಅರವಿಂದ್

ರತ್ನಗಿರಿ ಅಲ್ಫೊನ್ಸೊ ಮಾವಿನಹಣ್ಣು

ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ ಬೀದರ ಜಿಲ್ಲೆಯ ಸೀಬೆಯ, ಹಣ್ಣು ಬೆಂಗಳೂರಿನ ಸೇಬಿನ ಹಣ್ಣು || ಕೊಳ್ಳಿರಿ ಹಿಗ್ಗನು ಹರಿಸುವವು,ಕಲ್ಲುಸಕ್ಕರೆಯ ಮರೆಸುವವು ಕೊಳ್ಳಿರಿ ಮಧುಗಿರಿ ದಾಳಿಂಬೆ, ಬೆಳವಲ ಬಯಲಿನ ಸಿಹಿಲಿಂಬೆ || ಬೆಳಗಾವಿಯ ಸವಿ ಸಪೋಟ. ದೇವನಹಳ್ಳಿಯ ಚಕ್ಕೋತ ನಾಲಿಗೆ ಬರವನು ಕಳೆಯುವವು, ದೇಹದ ಬಲವನು ಬೆಳೆಸುವವು || ಗಂಜಾಮ್ ಅಂಜೀರ್, ತುಮಕೂರ್ ಹಲಸು, ಧಾರವಾಡದ ಆಪೂಸು, ಮಲೆನಾಡಿನ ಅನಾನಸು ಸವಿಯಿರಿ ಬಗೆಬಗೆ ಹಣ್ಣುಗಳ ಕನ್ನಡ ನಾಡಿನ ಹಣ್ಣುಗಳ || ಸದ್ಯಕ್ಕೆ ಆಡಳಿತಾತ್ಮಕವಾಗಿ ಕೇರಳದ ಭಾಗವಾಗಿದ್ದರೂ… Read More ರತ್ನಗಿರಿ ಅಲ್ಫೊನ್ಸೊ ಮಾವಿನಹಣ್ಣು

ಬಾಳೇ ದಿಂಡು ಕೋಸಂಬರಿ

ಹೇಳಿ ಕೇಳಿ ಇದು ಬೇಸಿಗೆ ಕಾಲ ಬಿಸಿಲು ಬಹಳವಿರುವ ಕಾರಣ ಈ ಸಮಯದಲ್ಲಿ ದೇಶವನ್ನು ತಂಪಾಗಿ ಮತ್ತು ಸಧೃಢವಾಗಿ ಇಟ್ಟುಕೊಳ್ಳಬೇಕಾಗಿದೆ. ಹಾಗಾಗಿ ತೆಂಗಿನ ಮರ ಕಲ್ಪವೃಕ್ಷವಾದರೆ, ಬಾಳೆ ಗಿಡವನ್ನು ಕಾಮಧೇನು ಎಂದರೂ ತಪ್ಪಾಗದು. ತೆಂಗಿನ ಮರದಂತೆಯೇ, ಬಾಳೇಗಿಡದ ಪ್ರತಿಯೊಂದು ಭಾಗವೂ ಹಲವಾರು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಬಾಳೇ ಹೂವು, ಬಾಳೇಕಾಯಿ, ಬಾಳೇಹಣ್ಣು, ಬಾಳೇ ದಿಂಡುಗಳ ಮೂಲಕ ಬಗೆ ಬಗೆಯ ಖಾದ್ಯವನ್ನು ತಯಾರಿಸಬಹುದಾದರೆ, ಬಾಳೇ ಪಟ್ಟೆಯಲ್ಲಿ ನಾರು ತೆಗೆಯುವುದಕ್ಕೆ, ಮತ್ತು ವಸ್ತುಗಳನ್ನು ಪ್ಯಾಕ್ ಮಾಡಲು ಬಳಸ ಬಹುದಾಗಿದೆ. ದಕ್ಷಿಣ… Read More ಬಾಳೇ ದಿಂಡು ಕೋಸಂಬರಿ

ಪಂಚರಾಜ್ಯಗಳ ಪಂಚನಾಮೆ

ಕಳೆದ ಎರಡು ತಿಂಗಳಲ್ಲಿ ಕೊರೋನಾದ ಜೊತೆಗೆ ಜೊತೆಗೆ ದೇಶಾದ್ಯಂತ ಎಲ್ಲರ ಗಮನ ಸೆಳೆಯುತ್ತಿದ್ದ ಪಂಚರಾಜ್ಯ ಚುನಾವಣೆಗೆ ಇಂದು ಅಂತ್ಯ ಕಂಡಿದ್ದು ಹಲವಾರು ಮಿಶ್ರ ಮತ್ತು ಅಚ್ಚರಿ ಫಲಿತಾಂಶಗಳು ಬಂದಿವೆ. ಅಸ್ಸಾಂ, ಕೇರಳ, ಪಶ್ವಿಮಬಂಗಾಳ, ಪುದುಚೆರಿ ಮತ್ತು ತಮಿಳುನಾಡಿನಲ್ಲಿ ವಿಧಾನ ಸಭೆಗೆ ಚುನಾವಣೆಗಳು ನಡೆದರೆ, ಕರ್ನಾಟಕದಲ್ಲಿ ಒಂದು ಲೋಕಸಭೆ ಮತ್ತು ಎರಡು ವಿಧಾನ ಸಭೆಗೆ ಚುನಾವಣೆ ನಡೆದರೆ ದೇಶದ ಅನೇಕ ರಾಜ್ಯಗಳಲ್ಲಿ ಉಪಚುನಾವಣೆಗಳು ನಡೆದಿದ್ದರೂ, ಎಲ್ಲರ ಗಮನ ಈ ಐದು ರಾಜ್ಯಗಳತ್ತವೇ ಹರಿದಿತ್ತು ಚಿತ್ತ. ಕಳೆದ ಲೋಕಸಭೆಯಲ್ಲಿ ಅನಿರೀಕ್ಷಿತವಾಗಿ… Read More ಪಂಚರಾಜ್ಯಗಳ ಪಂಚನಾಮೆ

ಉಲ್ಟೇ ಹನುಮಾನ್ ಮಂದಿರ್

ಭಕ್ತಿ ಅಂದ ತಕ್ಷಣ ನಮ್ಮ ಮನಸ್ಸಿಗೆ ಥಟ್ ಅಂತಾ ನೆನಪಿಗೆ ಬರುವುದೇ ರಾಮನ ಭಕ್ತಾಗ್ರೇಸರ ಅಂಜನೀ ಪುತ್ರ ಪವನಸುತ ಹನುಮಾನ್ ಎಂದರೆ ಅತಿಶಯೋಕ್ತಿಯೇನಲ್ಲ. ಸೀತಾಮಾತೆಯ ಅನ್ವೇಷಣೆಯ ಸಂದರ್ಭದಲ್ಲಿ ಸಮುದ್ರೋಲಂಘನವನ್ನು ಮಾಡಿ ಲಂಕೆಗೆ ಹೋಗಿ ಸೀತಾಮಾತೆಯನ್ನು ಹುಡುಕಿಕೊಂಡ ಬಂದ ಭಜರಂಗಬಲಿ ಇವನು. ಮಹಾನ್ ಪರಾಕ್ರಮಿಯಾದ ಕಾರಣಕ್ಕಾಗಿಯೇ, ಪ್ರಪಂಚಾದ್ಯಂತ ಹನುಮಂತನ ಬೃಹತ್ತಾದ ಪ್ರತಿಮೆಗಳನ್ನು ಎಲ್ಲೆಡೆಯಲ್ಲಿಯೂ ಕಾಣಬಹುದಾಗಿದೆ. ಶಕ್ತಿ, ಭಕ್ತಿ ಮತ್ತು ಬುದ್ಧಿವಂತಿಕೆಯ ಪ್ರತೀಕವೆಂದೇ ಪರಿಗಣಿಸಲ್ಪಟ್ಟ ಆಂಜನೇಯನ ನಿಂತಿರುವ ಇಲ್ಲವೇ ಸಂಜೀವಿನ ಪರ್ವತವನ್ನು ಹೊತ್ತಿರುವ ವಿಗ್ರಹವನ್ನು ಬಹುತೇಕ ಎಲ್ಲಾ ದೇವಾಲಯಗಳಲ್ಲಿಯೂ ಮತ್ತು… Read More ಉಲ್ಟೇ ಹನುಮಾನ್ ಮಂದಿರ್

ಕಲ್ಲಂಗಡಿಹಣ್ಣು ಮತ್ತು ನಮ್ಮ ಜೀವನದ ಮೌಲ್ಯಗಳು

ಹೇಳಿ ಕೇಳಿ ಇದು ಬೇಸಿಗೆ ಕಾಲ. ಬೇಸಿಗೆ ಕಾಲದಲ್ಲಿ ತಣ್ಣಗೆ ಇರುವ ಪದಾರ್ಥಗಳನ್ನು ತಿನ್ನುವ ಮತ್ತು ಕುಡಿಯುವ ಮೂಲಕ ದೇಹವನ್ನು ತಣ್ಣಗೆ ಇಟ್ಟುಕೊಳ್ಳಲು ಬಯಸುತ್ತೇವೆ. ಇದಕ್ಕೆ ಅನುಗುಣವಾಗಿ ನಮ್ಮ ಪ್ರಕೃತಿಯೂ ನಮ್ಮೊಂದಿಗೆ ಇದ್ದು ಬೇಸಿಗೆ ಕಾಲದಲ್ಲಿಯೇ ತಣ್ಣನೆ ಹಣ್ಣುಗಳಾದ ಕಲ್ಲಂಗಡಿ ಮತ್ತು ಕರ್ಬೂಜ (ಸಿದ್ದೋಟೆ ಹಣ್ಣು) ರಸ್ತೆಗಳ ಬದಿಗಳಲ್ಲಿಯೂ ಮತ್ತು ಮಾರುಕಟ್ಟೆಗಳಲ್ಲಿಯೂ ಸಿಗುತ್ತಿತ್ತು. ಉಳ್ಳವರು ಉಂಡೇ ಹಣ್ಣುಗಳನ್ನೇ ಕೊಂಡುಕೊಳ್ಳುತಿದ್ದರೆ, ಕೈಯ್ಯಲ್ಲಿ ಕಾಸಿಲ್ಲದವರು ಕತ್ತರಿಸಿಟ್ಟ ಹಣ್ಣುಗಳನ್ನು ತಿಂದು ತಮ್ಮ ನಾಲಿಗೆಯ ಬರವನ್ನು ಕಳೆದುಕೊಳ್ಳುತ್ತಿದ್ದರು. ಆಗೆಲ್ಲಾ ಬೇಸಿಗೆಯ ಸಮಯದಲ್ಲಿ ನದಿಗಳು… Read More ಕಲ್ಲಂಗಡಿಹಣ್ಣು ಮತ್ತು ನಮ್ಮ ಜೀವನದ ಮೌಲ್ಯಗಳು