ಊನಕೋಟಿ

ನಮ್ಮ ಸನಾತನ ಧರ್ಮದಲ್ಲಿ ಅನೇಕ ಪುರಾಣ ಪುಣ್ಯಕಥೆಗಳಿದ್ದು ಅವೆಲ್ಲವೂ ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ನಡೆದದ್ದು ಎಂದು ನಂಬಿದರೆ, ಇನ್ನೂ ಅನೇಕರು ಅದು ಕೇವಲ ಕಾಲ್ಪನಿಕ ಕಟ್ಟು ಕಥೆ ಎಂದು ವಾದ ಮಾಡುವವರೂ ಇದ್ದಾರೆ. ಹಾಗೆ ವಾದ ಮಾಡುವವರಿಗೆ ಉತ್ತರಿಸುವಂತೆ ಆ ಪುರಾಣ ಕಥೆಗಳಲ್ಲಿ ಉಲ್ಲೇಖವಿರುವ ಬಹುತೇಕ ನದಿಗಳು, ನಗರಗಳು ಭಾರತಾದ್ಯಂತ ಹರಡಿಕೊಂಡಿದ್ದು ಈ ಪುರಾಣ ಕಥೆಗಳಿಗೆ ಪೂರಕವಾಗಿದೆ. ಪುರಾಣ ಕಥೆಯಲ್ಲಿ ಬರುವ ಇಂತಹದ್ದೇ ಒಂದು ದಂತಕತೆಗೆ ಜ್ವಲಂತ ಉದಾಹರಣೆಯಾಗಿ ತ್ರಿಪುರದ ಕಾಡುಗಳಲ್ಲಿ ಗೋಚರವಾಗಿರುವ, ಕಾಲ ಭೈರವನ… Read More ಊನಕೋಟಿ

ಕಿನ್ನರ್ ಕೈಲಾಸ್ ಯಾತ್ರೆ

ನಮ್ಮ ಸನಾತನ ಧರ್ಮದಲ್ಲಿ ಶಿವನ ವಾಸಸ್ಥಾನಗಳು ಎಂದು ಹೇಳುವ ಐದು ಪವಿತ್ರ ಕ್ಷೇತ್ರಗಳಿವೆ. ಅವುಗಳೆಂದರೆ, ಕೈಲಾಸ ಮಾನಸ ಸರೋವರ್, ಆದಿ ಕೈಲಾಸ್, ಕಿನ್ನರ್ ಕೈಲಾಸ್, ಶ್ರೀಖಂಡ್ ಮಹಾದೇವ್ ಕೈಲಾಸ್ ಮತ್ತು ಮಣಿಮಹೇಶ್ ಕೈಲಾಸ್. ಪ್ರತಿಯೊಬ್ಬ ಹಿಂದೂವಿಗೂ ಈ ಕ್ಷೇತ್ರಗಳಿಗೆ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಈ ಶ್ರೀಕ್ಷೇತ್ರಗಳಿಗೆ ಹೋಗಿ ಶಿವನ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ನಾವಿಂದು ಅಂತಹ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ದುರ್ಗಮವಾದ ಆದರೆ ಅತ್ಯಂತ ರೋಚಕವಾದ ಕಿನ್ನರ್ ಕೈಲಾಸ್ ನೋಡಿ ಕೊಂಡು ಬರೋಣ ಬನ್ನಿ. ಕಿನ್ನರ್ ಕೈಲಾಸ… Read More ಕಿನ್ನರ್ ಕೈಲಾಸ್ ಯಾತ್ರೆ

ಜಟೋಲಿ ಶಿವ ಮಂದಿರ

ನಮ್ಮ ಭಾರತ ದೇಶ ದೇವಾಲಯಗಳ ಬೀಡು. ಪೂರ್ವದ ಅಟಕ್ ನಿಂದ ಪಶ್ಚಿಮದ ಕಟಕ್ ವರೆಗೂ ಮತ್ತು ದಕ್ಷಿಣದ ಕನ್ಯಾಕುಮಾರಿಯಿಂದ ಹಿಡಿದು ಉತ್ತರದ ಕಾಶ್ಮೀರದ ವರೆಗೂ ಎಲ್ಲೇ ಯಾವುದೇ ಹಳ್ಳಿಗಳಿಗೆ ಭೇಟಿ ನೀಡಿದರೂ ಅಲ್ಲೊಂದು ದೇವಾಲಯಗಳನ್ನು ಕಾಣಬಹುದಾಗಿದೆ. ಬಹುತೇಕ ದೇಲಯಗಳು ಸಹಸ್ರಾರು ವರ್ಷಗಳಿಂದಲೂ ಅಲ್ಲಿದ್ದು ಅನೇಕ ವೈಶಿಷ್ಟ್ಯತೆ ಮತ್ತು ನಿಗೂಢತೆಗಳಿಂದ ಕೂಡಿರುತ್ತದೆ ಇಂದೂ ಸಹಾ ಅಂತಹದೇ ಐತಿಹ್ಯವಿರುವ ನಿಗೂಢವೆಂದೇ ಪರಿಗಣಿಸಲಾದ ಶಿವನ ದೇವಾಲಯದ ದರ್ಶನ ಮಾಡುವುದರ ಜೊತೆಗೆ ಆ ದೇವಾಲಯದ ಐತಿಹ್ಯ, ಅಲ್ಲಿನ ಸ್ಥಳ ಪುರಾಣ ಮತ್ತು ವಿಶೇಷತೆಗಳನ್ನು… Read More ಜಟೋಲಿ ಶಿವ ಮಂದಿರ

ತದಿಗೆ/ಸೌಭಾಗ್ಯ ಗೌರಿ ವ್ರತ

ಸ್ವರ್ಣಗೌರಿ ಗೌರಿ ವ್ರತ ಗೊತ್ತು, ಮಂಗಳ ಗೌರಿ ವ್ರತ ಪೂಜೆ ಗೊತ್ತು. ಅದ್ರೇ ಇದೇನಿದು ತದಿಗೆ ಗೌರಿ ವ್ರತ ಅಥವಾ ಸೌಭಾಗ್ಯ ಗೌರಿವ್ರತ ಅಂತ ಯೋಚನೆ ಮಾಡುತ್ತಿದ್ದೀರಾ? ಚೈತ್ರ ಮಾಸದ ಮೊದಲ ದಿನ ಅಂದರೆ ಪಾಡ್ಯದಂದು ಮೊದಲ ಹಬ್ಬವಾದ ಯುಗಾದಿಯನ್ನು ಆಚರಿಸುತ್ತೆವೆ. ಇನ್ನು ಎರಡನೇ ದಿನ ಬಿದಿಗೆ ವರ್ಷತೊಡಕನ್ನು ಆಚರಿಸುತ್ತೇವೆ ಮತ್ತು ಈ ದಿನ ಚಂದ್ರನ ನೋಡಿದರೆ ಶುಭ ಎಂದು ಪರಿಗಣಿಸಲಾಗುತ್ತದೆ. ಯುಗಾದಿಯಾದ ಮೂರನೇ ದಿನ ತೃತೀಯ ಅಥವಾ ತದಿಗೆಯಂದು ಕೆಲವೆಡೆ ಗೌರಿಯ ವ್ರತವನ್ನು ಮಾಡುವ ಪದ್ದತಿ… Read More ತದಿಗೆ/ಸೌಭಾಗ್ಯ ಗೌರಿ ವ್ರತ

ಮಣಿಕರಣ್ ಸಿಖ್ಖರ ಮತ್ತು ಉಳಿದ ಹಿಂದೂಗಳ ಧಾರ್ಮಿಕ ಕೇಂದ್ರ

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ವಿಶಿಷ್ಟವಾದ ದೇಶ. ಇಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್, ಜೈನ, ಪಾರಸೀ ಹೀಗೆ ಸರ್ವಧರ್ಮಗಳ ಭಾವೈಕ್ಯತೆಗಳ ಸಂಗಮವಾಗಿದೆ. ದೇಶಾದ್ಯಂತ ಈ ಧರ್ಮಗಳ ನಾನಾ ಧಾರ್ಮಿಕ ಕ್ಷೇತ್ರಗಳಿದ್ದು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಅಲ್ಲಿಗೆ ಹೋಗಿ ತಮ್ಮ ಭವರೋಗಗಳನ್ನು ಕಳೆದುಕೊಳ್ಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಒಂದೇ ಪುಣ್ಯಕ್ಷೇತ್ರ ಹಲವು ಧರ್ಮಗಳಿಗೆ ಶ್ರದ್ಧಾಕೇಂದ್ರವಾಗಿದ್ದು ಎರಡೂ ಪಂಗಡದವರು ಅಲ್ಲಿಗೆ ಹೋಗುತ್ತಾರೆ. ನಾನಿಂದು ಸಿಖ್ಖರಿಗೂ ಮತ್ತು ಉಳಿದ ಹಿಂದೂಗಳಿಗೆ ಪವಿತ್ರವಾದಂತಹ ಮಣಿಕರಣ್ ಬಗ್ಗೆ ತಿಳಿದುಕೊಳ್ಳೋಣ. ಸಿಖ್ಖರ ಮತ್ತು ಉಳಿದ ಹಿಂದೂಗಳ ಪವಿತ್ರ… Read More ಮಣಿಕರಣ್ ಸಿಖ್ಖರ ಮತ್ತು ಉಳಿದ ಹಿಂದೂಗಳ ಧಾರ್ಮಿಕ ಕೇಂದ್ರ