ಕನ್ನಡದ ಪ್ರಕಾಶ್ ರೈ ಒಬ್ಬ ನಟನಾಗಿ ಚಲನಚಿತ್ರ ನಿರ್ದೇಶಕನಾಗಿ, ನಿರ್ಮಾಪಕನಾಗಿ, ದೂರದರ್ಶನ ನಿರೂಪಕನಾಗಿ ಜೊತೆಯಲ್ಲಿ ಟೈಂ ಪಾಸ್ ರಾಜಕಾರಣಿಯಾಗಿ, ಕನ್ನಡ ತಮಿಳು, ಇಂಗ್ಲಿಷ್, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಪ್ರಕಾಶ್ ರಾಜ್ ಎಂದೇ ಹೆಸರುವಾಸಿಯಾಗಿದ್ದಾರೆ.
ಕರಾವಳಿ ಮೂಲದ ಹಿಂದೂಗಳಾದ ಶ್ರೀ ಮಂಜುನಾಥ್ ರೈ ಮತ್ತು ರೋಮನ್ ಕ್ಯಾಥೋಲಿಕ್ ಆದ ಸ್ವರ್ಣಲತಾ ಎಂಬ ಕೆಳ ಮಧ್ಯಮ ವರ್ಗದ ದಂಪತಿಗಳಿಗೆ 26 ಮಾರ್ಚ್ 1965 ರಂದು ಬೆಂಗಳೂರಿನಲ್ಲಿ ಪ್ರಕಾಶ್ ಅವರ ಜನನವಾಗುತ್ತದೆ. ತಾಯಿಯವರು ಆಸ್ಪತ್ರೆಯೊಂದರಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಕಾರಣ, ಕೆಲವೊಮ್ಮೆ ಒಂದು ಹೊತ್ತಿನ ಊಟಕ್ಕೂ ತೊಂದರೆ ಇದ್ದರು ಸಹಾ ಆಟ ಪಾಠಗಳಲ್ಲಿ ಚುರುಕಾಗಿದ್ದ ಪ್ರಕಾಶ್ ಬೆಂಗಳೂರಿನ ಪ್ರತಿಷ್ಠಿತ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ನಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅದೇ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್ಗೆ ನಲ್ಲಿ ಕಾಲೇಜು ಸೇರಿಕೊಂಡಾಗ ಅವರಲ್ಲಿದ್ದ ಕಲಾವಿದ ಜಾಗೃತನಾಗಿ ಶಾಲಾ ವಿವಿಧ ಕಾರ್ಯಕ್ರಮಗಳಲ್ಲಿ ಏಕಪಾತ್ರಾಭಿನಯ, ನಾಟಕ ಮುಂತಾದವುಗಳಲ್ಲಿ ಭಾಗಿಯಾಗಿ ತಮ್ಮ ನಟನಾ ಚಾತುರ್ಯವನ್ನು ತೋರಿಸಿದ ನಂತರ ಪ್ರತಿಷ್ಠಿತ ರಂಗಕಲಾವಿದರುಗಳ ಪರಿಚಯವಾಗಿ ಪೂರ್ಣಪ್ರಮಾಣದ ರಂಗಕಲಾವಿದರಾಗಿ ತಮ್ಮ ಬದಕನ್ನು ರೂಪಿಸಿಕೊಳ್ಳುತ್ತಾರೆ.
ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ತಿಂಗಳಿಗೆ ಕೇವಲ 300 ರೂಪಾಯಿಗಳಿಗೆ ನಾಟಕಗಳಲ್ಲಿ ಒಂದರ ಹಿಂದೆ ಒಂದರಂತೆ ನಿರಂತರವಾಗಿ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಾಟಕಗಳನ್ನು ಅಭಿನಯಿಸುವುದಕ್ಕೆ ಮುನ್ನವೇ ಹವ್ಯಾಸಿ ಕಲಾವಿದರಾಗಿ ಸುಮಾರು 2,000ಕ್ಕೂ ಹೆಚ್ಚು ಬೀದಿ ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಿರುತ್ತಾರೆ. 80 ದಶಕದಲ್ಲಿ ಬೆಂಗಳೂರಿನಲ್ಲಿ ದೂರದರ್ಶನದ ಕೇಂದ್ರ ಆರಂಭವಾಗಿ 90ರ ದಶಕದಲ್ಲಿ ಧಾರಾವಾಹಿಗಳು ಪ್ರಸಾರವಾಗಲು ಆರಂಭವಾದಾಗ, ಪ್ರಕಾಶ್ ದೂರದರ್ಶನದ ಬಿಸಿಲು ಕುದುರೆ ಮತ್ತು ಗುಡ್ಡದ ಭೂತ ಧಾರಾವಾಹಿಗಳ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಯವಾದ ನಂತರ, ರಣಧೀರ, ರಾಮಾಚಾರಿ, ನಿಷ್ಕರ್ಷ ಮತ್ತು ಲಾಕಪ್ ಡೆತ್ ಮುಂತಾದ ಕನ್ನಡ ಚಿತ್ರಗಳಲ್ಲಿ ಸನ್ಣ ಪುಟ್ಟ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಾ, ತಮ್ಮ ಅಭಿನಯ ಮತ್ತು ಸಂಭಾಷಣೆಯ ನಿರ್ವಹಣೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಸಂಧರ್ಭದಲ್ಲಿಯೇ ಬಹುಭಾಷಾ ನಟಿ ಗೀತ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರಾದ ಕೆ. ಬಾಲಚಂದರ್ ಅವರಿಗೆ ಪ್ರಕಾಶ್ ಅವರನ್ನು ಪರಿಚಯಿಸುತ್ತಾರೆ.
ಪ್ರಕಾಶ್ ರೈ ಎಂಬ ಹೆಸರು ಒಂದು ಪ್ರದೇಶವನ್ನು ಸೂಚಿಸುವ ಕಾರಣ, ಪ್ರಕಾಶ್ ರಾಜ್ ಎಂದು ಹೆಸರನ್ನು ಬದಲಿಸಿದ ಬಾಲಚಂದರ್ ಅವರು ತಮ್ಮ ಡ್ಯುಯೆಟ್ ಎಂಬ ಚಿತ್ರದಲ್ಲಿ ಅವಕಾಶ ನೀಡಿದ ನಂತರ ಪ್ರಕಾಶ್ ಹಿಂದಿರುಗಿ ನೋಡುವ ಪ್ರಮೇಯವೇ ಬರದೇ, ತಮಿಳು, ತೆಲುಗು ಮಲೆಯಾಳಂ ಹೊತೆಗೆ ಹಿಂದಿ ಚಿತ್ರಗಳಲ್ಲಿ ಖಳನಟನೆ ಮತ್ತು ಪೋಷಕ ನಟನೆ ಮಾಡುವ ಮೂಲಕ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎಂಟು ನಂದಿ ಪ್ರಶಸ್ತಿಗಳು, ಎಂಟು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಾರೆ. ಪ್ರಕಾಶ್ ರೈ ತಮ್ಮ ಮಾತೃಭಾಷೆ ತುಳು ಮತ್ತು ಕನ್ನಡವಲ್ಲದೆ, ಅತೀ ಶೀಘ್ರದಲ್ಲಿಯೇ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಮತ್ತು ಮರಾಠಿ ಭಾಷೆಗಳನ್ನು ಕಲಿತು ನಿರರ್ಗಳವಾಗಿ ತಾವೇ ಡಬ್ ಮಾಡುವುದಲ್ಲದೇ, ಅಯಾಯಾ ಭಾಷೇಗಳಲ್ಲಿ ಕವಿತೆಗಳನ್ನು ರಚಿಸುವ ಮಟ್ಟಿಗೆ ತಮ್ಮ ಜ್ಞಾನವನ್ನು ಬೆಳೆಸಿಕೊಂಡಿರುವುದು ನಿಜಕ್ಕೂ ಅದ್ಭುತವೇ ಸರಿ.
ಇನ್ನು ವಯಕ್ತಿವಾಗಿ ನಟಿ ಲಲಿತಾ ಕುಮಾರಿ ಅವರನ್ನು 1994 ರಲ್ಲಿ ವಿವಾಹವಾಗಿ, ಅವರ ಸುಖದಾಂಪತ್ಯದ ಕುರುಹಾಗಿ ಮೇಘನಾ, ಪೂಜಾ ಎಂಬ ಪುತ್ರಿಯರು ಮತ್ತು ಸಿಧು ಎಂಬ ಮಗ ಜನಿಸುತ್ತಾರೆ. 2004ರಲ್ಲಿ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ಅವಘಡ ನಡೆದು ಮಗ ನಿಧನರಾದ ನಂತರ ಕೆಲ ಕಾಲ ಖಿನ್ನತೆಗೆ ಒಳಗಾಗಿದ್ದ ಪ್ರಕಾಶ್, 2009ರಲ್ಲಿ ತಮ್ಮ ಪತ್ನಿಯೊಂದಿಗೆ ವಿಚ್ಛೇದನ ಪಡೆದ ನಂತರ 24 ಆಗಸ್ಟ್ 2010 ರಂದು ಹಿಂದಿ ಚಲನಚಿತ್ರರಂಗದಲ್ಲಿ ನೃತ್ಯ ಸಂಯೋಜಕಿಯಾಗಿದ್ದ ಪೋನಿ ವರ್ಮಾ ಅವರನ್ನು ವಿವಾಹವಾಗಿ, 2015ರಲ್ಲಿ ವೇದಾಂತ್ ಎಂಬ ಮಗನಿದ್ದಾನೆ.
ಹೀಗೆ ಪ್ರಕಾಶ್ ಜೀವನದಲ್ಲಿ ಮಗನನ್ನು ಕಳೆದುಕೊಂಡು ಮೊದಲನೇ ಮಡದಿಗೆ ವಿಚ್ಚೇದನ ನೀಡಿದ್ದನ್ನು ಬಿಟ್ಟರೇ, ಮಿಕ್ಕ ವಿಷಯದಲ್ಲಿ ಮುಟ್ಟಿದ್ದೆಲ್ಲವೂ ಚಿನ್ನಾ ಎಂಬಂತಾಗಿ, ದೇಶಾದ್ಯಂತ ಹತ್ತಾರು ಕಡೆ ಆಸ್ತಿಗಳನ್ನು ಸಂಪಾದಿಸಿ ಅದರಿಂದ ಬರುವ ಅದಾಯಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟುವಂತಾಗಿರುವುದು ನಿಜಕ್ಕೂ ಹೆಮ್ಮೆ ಪಡುವಂತಹ ಸಂಗತಿ ಎಂದರೂ ತಪ್ಪಾಗದು. ಆದರೆ ಎಲ್ಲಾ ಜಾಣ ತುಸು ಕೋಣ ಎನ್ನುವಂತೆ ಇತ್ತೀಚೆನ ದಿನಗಳಲ್ಲಿ ಇದ್ದಕ್ಕಿದ್ದಂತೆಯೇ ತಮ್ಮೊಳಗಿದ್ದ ಎಡಪಂತೀಯ ಮನೋಭಾವನೆಗಳನ್ನು ಹೊರಹಾಕುವ ಮೂಲಕ ತಮ್ಮ ಮತ್ತೊಂದು ಮುಖದೊಂದಿಗೆ ಕುಖ್ಯಾತಿಯನ್ನು ಗಳಿಸಿತೊಡಗಿದರು.
ಅದರಲ್ಲೂ ವಿಶೇಷವಾಗಿ 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಶ್ರೀ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರವಂತೂ ಅಂಡು ಸುಟ್ಟ ಬೆಕ್ಕಿನಂತೆ ಬುಸುಗುಟ್ಟ ತೊಡಗಿದ ಪ್ರಕಾಶ್ ಮೋದಿಯವರು ಮಾಡಿದ್ದೆಲ್ಲವೂ ತಪ್ಪು ಎಂದು Just Asking ಎಂಬ ಟ್ವಿಟ್ಟರ್ ಅಭಿಯಾನವನ್ನು ಆರಂಭಿಸಿ, 5 ಸೆಪ್ಟೆಂಬರ್ 2017ರ ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಎಡಪಂತೀಯ ಮನೋಭಾವನೆಯ ಗೌರಿ ಲಂಕೇಶ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಂದ ನಂತರ ಏಕಾ ಏಕೀ ನಾನು ಗೌರಿ ಎಂಬ ಮತ್ತೊಂದು ಅಭಿಯಾನವನ್ನು ಆರಂಭಿಸುವ ಮೂಲಕ ಕಂಡ ಕಂಡ ಕಡೆಯಲ್ಲೆಲ್ಲಾ ಬಲಪಂತೀಯರನ್ನು ಜರಿಯುವುದು, ಹಿಂದೂ ಹಬ್ಬಗಳು ಮತ್ತು ಆಚರಣೆಳನ್ನು ಅವಮಾನ ಪಡಿಸುವ ಚಾಳಿಯನ್ನು ಮುಂದುವರೆಸಿದ್ದಲ್ಲದೇ, 2017ರಲ್ಲೇ ಕಾವೇರಿ ನದಿ ಕುರಿತಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ತಾರಕಕ್ಕೆ ಏರಿದ್ದ ಸಮಯದಲ್ಲಿ ಖಾಸಗೀ ಖಾನೆಲ್ಲೊಂದರಲ್ಲಿ ತಮ್ಮ ಸಿನಿಮಾದ ಪ್ರಮೋಷನ್ನಿಗೆಂದು ಬಂದಿದ್ದ ನಟ ಪ್ರಕಾಶ್ ಅವರಿಗೆ ಸಂದರ್ಶನದ ಮಧ್ಯದಲ್ಲಿ ಪ್ರಚಲಿತ ವಿಷಯವಾದ ಕಾವೇರಿ ವಿವಾದದ ಕುರಿತ ಕೇಳಿದ ಪ್ರಶ್ನೆಗೆ ಏಕಾ ಏಕಿ ಕೆಂಡಾಮಂಡಲವಾಗಿ ಯಾರಿಗೆ ಯಾವ ಸಂದರ್ಭದಲ್ಲಿ ಏನು ಕೇಳಬೇಕು ಎಂಬ ಸಾಮನ್ಯ ಪ್ರಜ್ಞೆಯೇ ನಿಮಗಿಲ್ಲ ಎಂದು ಸಂದರ್ಶಕಿಯ ಮೇಲೆ ಹರಿಹಾಯ್ದದ್ದಲ್ಲದೇ, ಮೈಕ್ ಕಿತ್ತೆಸೆದು ಸಂದರ್ಶನದಿಂದ ಹೊರೆಗೆ ಹೋಗುವ ಮೂಲಕ ತಮ್ಮ ಅಪ್ರಬುದ್ಧತೆ ಮತ್ತು ಅಸಹಿಷ್ಣುತೆ ಮೆರೆದಿದ್ದದ್ದು ಬಹಳ ಸುದ್ದಿಯಾಗಿದ್ದಲ್ಲದೇ, ಸಾಮಾಜಿಕ ಜಾಲತಾಣದಲ್ಲೂ ಅನೇಕ ದಿನಗಳ ಕಾಲ ಭಾರಿ ಸುದ್ದಿಯಾಗಿತ್ತು.
2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿ ಆಗಲು ಪ್ರಯತ್ನಿಸಿ ಅದು ಸಾಧ್ಯವಾಗದೇ ಹೋದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಠೇವಣಿಯನ್ನು ಕಳೆದುಕೊಂಡ ಸ್ವಲ್ಪ ದಿನಗಳ ಕಾಲ ಸುಮ್ಮನಿದ್ದ ಪ್ರಕಾಶ್ ಮತ್ತೆ ಕರೋನ ಸಮಯದಲ್ಲಿ ತಮ್ಮ ನಿರಾಶ್ರಿತರಿಗೆ ತಮ್ಮ ಕೈಯ್ಯಲ್ಲಿ ಆದ ಸಹಾಯ ಮಾಡಿದ್ದನ್ನೇ ಮುಂದು ಮಾಡಿಕೊಂಡು ಕೇಂದ್ರ ಸರ್ಕಾರ ಕರೋನ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಅಬ್ಬರಿಸಿ ಬೊಬ್ಬಿರಿದರೂ ಯಾರೂ ಸಹಾ ಅವರ ಮಾತಿಗೆ ಸೊಪ್ಪು ಹಾಕದೇ ಹೋದಾಗ ಸುಮ್ಮನಾಗಬೇಕಾಯಿತು.
ಕರ್ನಾಟಕದ ಹಿರಿಯ ಪತ್ರಕರ್ತರು ಮತ್ತು ಸದ್ಯ ವಿಶ್ವವಾಣಿ ಪತ್ರಿಕೆಯ ಸಂಪಾದಕರಾಗಿರುವ ಸುಮಾರು 80 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶ್ರೀ ವಿಶ್ವೇಶ್ವರ ಭಟ್ ಇದೇ ಜುಲೈ 22, 2023 ಶನಿವಾರದಂದು ತಮ್ಮ ಪುಟ್ಟಣ್ಣಚಟ್ಟಿ ಪುರಭವನದಲ್ಲಿ ತಮ್ಮ ಪುಸ್ತಕ ಬಿಡುಗಡೆಗೆ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಮತ್ತು ಅವರ ಶಿಷ್ಯ ಮತ್ತು ಹಾಲಿ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರನ್ನು ಆಹ್ವಾನಿಸಿದ್ದಾರೆ.
ಅದಕ್ಕೆ ಪ್ರತಿಯಾಗಿ ಒಂದಿಬ್ಬರು ತಮ್ಮ ಪತ್ರಿಕೆಗಳಲ್ಲಿ ನಿಮ್ಮ ವಿರುದ್ದವೇ ಬರೆದವರ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನರು ಹೋಗುವುದು ತರವಲ್ಲಾ ಎಂದು ತಮ್ಮ ಅಕ್ರೋಶ ವ್ಯಕ್ತ ಪಡಿಸಿದರೆ, ಒಂದು ಕಾಲದಲ್ಲಿ ವಿಶ್ವೇಶ್ವರ ಭಟ್ಟರ ಗಳಸ್ಯಕಂಠಸ್ಯರೇ ಆಗಿದ್ದ ಪ್ರಕಾಶ್ ರೈ ಅಂತಹ ಭಟ್ಟರ ಜೊತೆ ವೇದಿಕೆ ಹಂಚಿಕೊಳ್ಳೋದು ನಿಮಗೆ ಶೋಭೆ ತರೋದಿಲ್ಲ ಎಂದು ಸಿದ್ದರಾಮಯ್ಯಗೆ ಟ್ವೀಟ್ ಮಾಡುವ ಮೂಲಕ ಸುಮ್ಮನಿರಲಾದೇ ಮೈ ಪರಚಿಕೊಳ್ಳುವ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ತಮ್ಮೀ ಚಾಳಿಯ ಮುಖಾಂತರ ಕೇವಲ ಕರ್ನಾಟಕ ಅದಲ್ಲೂ ಬೆಂಗಳೂರಿನ ಭಟ್ಟರ ವಂದಿಮಾಗಧರಿಗಷ್ಟೇ ಸೀಮಿತವಾಗಿದ್ದ ಈ ಕಾರ್ಯಕ್ರಮವನ್ನು ಟ್ವಿಟರ್ ನಲ್ಲಿ ಟ್ರೆಂಡ್ ಮಾಡುವ ಮೂಲಕ ಸ್ವಘೋಷಿತ ಟೈಂಪಾಸ್ ರಾಜಕಾರಣಿ ಮತ್ತು ಜಸ್ಟ್ ಆಸ್ಕಿಂಗ್ ಜೀವಿ ಪ್ರಕಾಶ್ ರೈ ಮತ್ತು ಕೆಲವು ನಿರುದ್ಯೋಗಿ ಗಂಜಿ ಗಿರಾಕಿಗಳನ್ನು ಈ ಪುಸ್ತಕ ಬಿದುಗಡೆಯ ವಿಷಯವನ್ನು ದೇಶಾದ್ಯಂತ ಸುದ್ದಿ ಮಾಡಿಸಿದ್ದಾರೆ.
ತಮ್ಮ ಜೊತೆ ಆತ್ಮೀಯರಾಗಿದ್ದೂ ತಮ್ಮಿಂದ ಉಪಕೃತರಾಗಿದ್ದೂ, ಹೀಗೆ ಪ್ರಕಾಶ್ ತಮ್ಮ ವಿರುದ್ದ ಟ್ವೀಟ್ ಮಾಡಿರುವುದನ್ನು ಸಹಿಸಿದ ಭಟ್ಟರು ತಮ್ಮ ಬತ್ತಳಿಕೆಯಲ್ಲಿದ್ದ ಅವರು ಮತ್ತು ಪ್ರಕಾಶ್ ಜೊತೆಯಾಗಿ ವೇದಿಕೆ ಹಂಚಿಕೊಂಡ ಹಳೆಯಫೋಟೋಗಳನ್ನು ಹಾಕಿದ್ದಕ್ಕೆ, ಪ್ರಕಾಶ್ ರೈ ತಮ್ಮ ಅಧಿಕ ಪ್ರಸಂಗತನ ಇಲ್ಲವೇ ಡಬಲ್ ಸ್ಟಾಂಡರ್ಡ್ ಸಮರ್ಥಿಸಿಕೊಳ್ಳಲಾಗದೆ, ಹೌದು ನಿಮ್ಮಲ್ಲಿರೋ ವಿಷ ಅರಿಯದೆ ಅಂದು ವೇದಿಕೆ ಹಂಚಿಕೊಂಡದ್ದಕ್ಕೆ ವಿಷಾದವಾಗುತ್ತಿದೆ ಎಂದು ಹೇಳುವ ಮೂಲಕ ಬೂದಿ ಮುಚ್ಚಿದ ಕೆಂಡವನ್ನು ಕೆದಕಿದ್ದೇ ತಡಾ,
ಭಟ್ಟರ ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣಿಗರು ಪರಮ ನಾಸ್ತಿಕ ಎಂದು ಹೇಳಿಕೊಳ್ಳುವ ಮತ್ತು ಹಿಂದೂ ಧಾರ್ಮಿಕ ಆಚರಣೆಗಳನ್ನು ಅವಹೇಳನ ಮಾಡುವ ಪ್ರಕಾಶ್ ಮೇಲೆ ಮುಗಿಬಿದ್ದು ಆತ, ಸದ್ದಿಲ್ಲದೆ ಕುಟುಂಬದೊಡನೆ ಹಿಂದೂ ದೇವಾಲಯಗಳಲ್ಲಿ ಪೂಜೆ ಮಾಡಿಸಿದ ಪೋಟೋಗಳನ್ನು ಹಾಕುವ ಮೂಲಕ ಪ್ರಕಾಶ್ ರೈ ಇಬ್ಬಂದಿತನ ಇಲ್ಲವೇ ಗೋಸುಂಬೆತನವನ್ನು ಜಗಜ್ಜಾಹೀರಾತು ಮಾಡುತ್ತಿದ್ದಾರೆ.
ಇದಕ್ಕಿಂತಲೂ ಒಂದು ಹೆಜ್ಜೆ ಮುಂದು ಹೋದ ವಿಶ್ವೇಶ್ವರ ಭಟ್ಟರು, ನನ್ನ ಎರಡನೇ ಪತ್ನಿಗೆ ಮಕ್ಕಳಾಗಿಲ್ಲ. ಸರ್ಪದೋಷವಿದೆಯೆಂದು ಪತ್ನಿಗೆ ಯಾರೋ ಹೇಳಿದ್ದಾರೆ. ಕುಕ್ಕೆಗೆ ಹೋಗಿ ಸರ್ಪದೋಷ ನಿವಾರಿಸಿಕೊಳ್ಳಲು ಅವಳು ಬಯಸಿದ್ದಾಳೆ. ನಿಮಗೆ ಅಲ್ಲಿ ಯಾರಾದಾದರೂ ಪರಿಚಯದವರಿದ್ದರೆ ಕುಕ್ಕೆಯಲ್ಲಿ ಸರ್ಪದೋಷ ನಿವಾರಣೆ ಪೂಜೆ ಮಾಡಿಸಲು ಸಹಾಯ ಕೋರಿದ್ದನ್ನು ನೆನಪಿಸಿ, ತಮ್ಮ ಮಂಗಳೂರು ವರದಿಗಾರನ ಸಹಾಯದಿಂದ ಎಲ್ಲ ವ್ಯವಸ್ಥೆ ಮಾಡಿಸಿ, ಪ್ರಕಾಶ್ ರಾಜ್ ಪತ್ನಿ ಕುಕ್ಕೆಗೆ ಬಂದು, ಪೂಜೆ ಸಲ್ಲಿಸಿದ ನಂತರವಷ್ಟೇ ಮಕ್ಕಳಾಗಿದ್ದನ್ನು ತಿಳಿಸಿದ್ದಾರೆ.
ಪ್ರಕಾಶ್ ರಾಜ್ ಗೆ ಮಗುವಾಗಿದ್ದರೆ ಅದಕ್ಕೆ ‘ಕುಕ್ಕೆ ಮಹಾತ್ಮೆ’ಯೇ ಕಾರಣ! ಇದನ್ನು ಅವರು ಅಲ್ಲ ಎಂದು ಹೇಳ್ತಾರಾ? Just Asking! ಇದು ನಮ್ಮ ಎಡಬಿಡಂಗಿಗಳ ಕಥೆ. ಹೊರಗೊಂದು, ಒಳಗೊಂದು. ಹೊರಗೆ ಪ್ರಗತಿಪರ, ವಿಚಾರವಾದ, ಚಿಂತಕನ ಸೋಗು. ಒಳಗೆ ಬರೀ ಮಣ್ಣಂಗಟ್ಟೆ! ಈ ಪ್ರಕಾಶ್ ರಾಜ್ ನಾವೆಲ್ಲ ನಿರ್ಲಕ್ಷಿಸಬೇಕಾದ ಒಬ್ಬ ಶುದ್ಧ ಹಿಪೊಕ್ರೇಟ್. ಡಬಲ್ ಸ್ಟ್ಯಾಂಡರ್ಡ್ ಮನುಷ್ಯ.
(Disclaimer : ಇಂತಹ ಖಾಸಗಿ ವಿಷಯಗಳನ್ನು ನಾನು ಸಾರ್ವಜನಿಕವಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ನನ್ನದೇ ಪತ್ರಿಕೆ, ಅಂಕಣಗಳಿದ್ದರೂ ಅಂಥ ವಿಷಯಗಳನ್ನು ಬರೆದು ಪುಟಗಳನ್ನು ಗಲೀಜು ಮಾಡುವುದಿಲ್ಲ. ಸಮಸ್ಯೆ ಏನಂದ್ರೆ, ಕೆಲವು ವಿಷಯಗಳನ್ನು ಹೇಳದಿದ್ದರೆ, ಕೆಲವರ ಅಸಲಿ ವ್ಯಕ್ತಿತ್ವ ಗೊತ್ತೇ ಆಗುವುದಿಲ್ಲ.)
ಎಂದು ಬರೆದುಕೊಳ್ಳುವ ಮೂಲಕ ಪ್ರಕಾಶ್ ರೈನ ಜನ್ಮ ಜಾಲಾಡಿದ್ದಾರೆ. ಪುಸ್ತಕ ಬಿಡುಗಡೆ ಅನ್ನೋದು ಒಂದು ಖಾಸಗಿ ಸಮಾರಂಭ. ಅದಕ್ಕೆ ಯಾರನ್ನು ಬೇಕಾದರು ಕರೆಯಬಹುದು ಮತ್ತು ಹೋಗಬಹುದು. ಇನ್ನು ಭಟ್ಟರ ಆಹ್ವಾನವನ್ನು ಮನ್ನಿಸಿ ಮುಖ್ಯಮಂತ್ರಿಗಳು ಹೋಗಬಹುದು ಇಲ್ಲವೇ ಹೋಗದೇ ಇರಬಹುದು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಅಲ್ವೇ? ಅಷ್ಟಕ್ಕೂ ವಿಶ್ವೇಶ್ವರ್ ಭಟ್ಟರ ಜೊತೆ ವೇದಿಕೆ ಹಂಚಿಕೊಳ್ಳಬಾರದು ಎನ್ನುವುದಕ್ಕೆ ಯಾವುದಾದರೂ ಬಲವಾದ ಕಾರಣಗಳು ಇರ ಬೇಕು. ಭಟ್ಟರೇನು ಅಪರಾಧಿಯೇ?, ಸಮಾಜಘಾತುಕರೇ? ಇಲ್ಲವೇ ದೇಶದ್ರೋಹಿಯೇ? ಪತ್ರಕರ್ತರು ಸಹಾ ವಿರೋಧ ಪಕ್ಷದಂತೆ ಪ್ರಜಾಪ್ರಭುತ್ವದ ಕಾವಲು ನಾಯಿಗಳಂತೆ ಸದಾಕಾಲವೂ ಎಚ್ಚರದಿಂದಿದ್ದು, ಆಡಳಿತ ಪಕ್ಷದ ತಪ್ಪು ಸರಿಗಳು ಮತ್ತು ಸಮಾಜದ ಓರೆ ಕೋರೆಗಳನ್ನು ಎತ್ತಿ ತೋರಿಸುವುದು ಅವರ ಧರ್ಮ. ಅದೇ ರೀತಿಯಾಗಿ ಸಿದ್ದರಾಮಯ್ಯನವರ ವಿರುದ್ಧವೂ ಎಂದೋ, ಏನೋ ಬರೆದಿರಬಹುದು. ಅದು ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯವಷ್ಟೇ ಆಗಿದ್ದು ವಯಕ್ತಿಯವಾಗಿ ದ್ವೇಷ ಆಗಿರುವುದಿಲ್ಲ. ಇಂತಹ ವಯಕ್ತಿಕ ವಿಷಯಗಳಿಗಲ್ಲಾ ಮುಖ್ಯಮಂತ್ರಿಗಳಿಗೆ ಹಾಗೆ ಮಾಡಬೇಡಿ, ಹೀಗೆ ಮಾಡಬೇಡಿ, ಎಂದು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ತಾಕೀತು ಮಾಡಲು ಪ್ರಕಾಶ್ ರೈಗೆ ಯಾವ ಹಕ್ಕಿದೇ? ಪ್ರತಿಯೊಂದಕ್ಕೂ ಮೂಗು ತೂರಿಸಿಕೊಂಡು Just Asking! ಎಂದು ಕೇಳುವ ಹಕ್ಕನ್ನು ಕೊಟ್ಟವರು ಯಾರು?
ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಎಲ್ಲಿಗೂ ಶಾಶ್ವತ ಶತ್ರುತ್ವ ಎಂಬುದಿಲ್ಲ. ಅಡಳಿತ ಪಕ್ಷ, ವಿರೋಧ ಪಕ್ಷ, ರಾಜಕಾರಣಿಗಳು ಮತ್ತು ಮಾಧ್ಯಮಗಳ ನಡುವಿನ ಸಂಬಂಧ ಸಮಸ್ಯೆ ಆಧಾರಿತವಾಗಿರುತ್ತದೆಯೇ ಹೊರತೂ ಎಂದಿಗೂ ಗಾಢ ಮಿತ್ರತ್ವ ಅಥವಾ ಶಾಶ್ವತ ಶತ್ರುತ್ವ ಇರುವುದಿಲ್ಲ ಎಂಬುದನ್ನು ಅರಿಯದಷ್ಟು ಅಪ್ರಬುದ್ಧತೆ ಇರುವ ಬೌದ್ಧಿಕ ದೀವಾಳಿತನ ಹೊಂದಿರುವ ಪ್ರಕಾಶ್ ರೈ ಇನ್ನಾದರೂ, ಅನಾವಶ್ಯಕವಾಗಿ Just Asking! ಎಂದು ಮೂಗು ತೂರಿಸುವುದನ್ನು ಬಿಟ್ಟಲ್ಲಿ ಅವರಿಗೂ ಉತ್ತಮ ಮತ್ತು ದೇಶದಲ್ಲಿ ಸೌಹಾರ್ಧತೆಯೂ ಮೂಡುವಂತಾಗುತ್ತದೆ.
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
Just asking ” ನೀವ್ಯಾಕೆ ಆ ಮನುಷ್ಯನ ಬಗ್ಗೆ ಬರೆದಿರಿ? 😄😄😄. ಒಂದು ಕಾಲದಲ್ಲಿ ಅವನನ್ನು ಮೆಚ್ಚುತ್ತಿದ್ದ ನಾನು ನಂತರದ ದಿನಗಳಲ್ಲಿ ಅವನ ಉಪದ್ವಾಪಗಳನ್ನು ನೋಡಿ ಬೇಸತ್ತು ಅವನನ್ನು ಸಿನಿಮಾದಲ್ಲಿ ಯಾರಾದರೂ ತದುಕಿದರೂ ಸಂತಸ ಪಡುವ ಹಂತ ತಲುಪಿದ್ದೇನೆ. ಅವನ ವೈಯುಕ್ತಿಕ ಜೀವನ, ಅದೂ ಅದ್ವಾನ. ಲೇಖನ ಚೆನ್ನಾಗಿದೆ.
LikeLiked by 1 person
ನಿಮ್ಮ ಹಾಗೇ ನಾನೂ ಸಹಾ ಇವನ ಸಿನಿಮಾ ನೋಡುವುದನ್ನು ಬಿಟ್ಟಿದ್ದೇನೆ. ಟಿವಿಯಲ್ಲಿ KGF-3 ಬಂದಾಗಲೂ ನಾನು ನೋಡಲಿಲ್ಲ
LikeLike
Forget about prakash Raj…
It seems you have problem with his just asking questions…
The way you asked him questions, same way he is asking to others…
The way you are running right wing propoganda…same way he is running left wing’s…
LikeLike
ನಿಮ್ಮಂತಹ ಎಡಬಿಡಂಗಿಗಳು ಇರುವುದರಿಂದಲೇ ಇಂತಹ ಎಡಚರು ಹೆಚ್ಚಿಕೊಳ್ಳುತ್ತಿರುವುದು ಎಂದು ಹೇಳಲು ಬೇಸರವಾಗುತ್ತಿದೆ. ನಮ್ಮ ಧರ್ಮ ದೇಶದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದಾಗಲೂ ಖಂಡಿಸದೇ ಇರುವಷ್ಟು ಕ್ಷಾತ್ರ ಹೀನರಾಗಿರುವುದರಿಂದಲೇ ದೇಶದಲ್ಲಿ ಕೋಮು ಶಕ್ತಿಗಳು ವಿಜೃಂಭಿಸುತ್ತಿವೆ ಎನ್ನುವುದನ್ನು ಮರೆಯದಿರಿ. ಹಿಂದೂ ಉಳಿದಲ್ಲಿ ಮಾತ್ರವೇ ದೇಶ ಉಳಿದೀತು.
ಧರ್ಮೋ ರಕ್ಷತಿ ರಕ್ಷಿತಃ
ನಿಮ್ಮ ಮನಸ್ಥಿತಿಯನ್ನು ಕಂಡು ನಿಜಕ್ಕೂ ಬೇಸರವಾಗುತ್ತಿದೆ. ನಿಮಗೆ ಶುಭವಾಗಲಿ
LikeLike