ದುಡುಕಿದರೇ ದತ್ತಾ ವೈ ಎಸ್ ವಿ

ಜಾತ್ಯಾತೀತ ಜನತಾದಳದ ಹಿರಿಯ ನಿಷ್ಟಾವಂತ ನಾಯಕರಾದ ವೈ.ಎಸ್.ವಿ. ದತ್ತಾ ಅವರು, ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿರುವುದು ರಾಜಕೀಯ ಸಂಚಲವನ್ನು ಮೂಡಿಸಿರುವುದಲ್ಲದೇ, ಅವರ ಸುದೀರ್ಘವಾದ ರಾಜಕೀಯ ಜೀವನ ಮತ್ತು ಈ ನಿರ್ಧಾರವು ಮುಂಬರುವ ಚುನಾವಣೆಯ ಫಲಿತಾಂಶಕ್ಕೆ ಹೇಗೆ ದಿಕ್ಸೂಚಿಯಾಗಿದೆಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ದುಡುಕಿದರೇ ದತ್ತಾ ವೈ ಎಸ್ ವಿ

ಸರ್ಕಾರಿ ಸಾರಿಗೆ ಸಿಬ್ಬಂದಿಯ ಉದ್ಧಟತನ

ಜನರ ಅನುಕೂಲಕ್ಕೆಂದೇ ಇರುವ KSRTC ಮತ್ತು BMTC ಸಂಸ್ಥೆಗಳ ನೌಕರರು ಸರ್ಕಾರೀ ಸವಲತ್ತುಗಳು ಬೇಕು ಎಂದು ಬಂದ್ ಮಾಡುವುದು ಗೊತ್ತೇ ವಿನಃ ತಮ್ಮ ಅನ್ನದಾತ ಪ್ರಯಾಣಿಕರಿಗೆ ಉತ್ತಮವಾಗಿ ಸೇವೆ ಸಲ್ಲಿಸಬೇಕು ಎಂಬ ಮನೋಭಾವನೆಯೇ ಬಹುತೇಕ ಸರ್ಕಾರಿ ಸಿಬ್ಬಂಧಿಗಳಿಗೆ ಇಲ್ಲದಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ… Read More ಸರ್ಕಾರಿ ಸಾರಿಗೆ ಸಿಬ್ಬಂದಿಯ ಉದ್ಧಟತನ

ಮಾತೇ ಮುತ್ತು ಮಾತೇ ಮೃತ್ಯು

ಖಳನಟರಾಗಿದ್ದ, ಸತಳ ಸಜ್ಜನರಾದ ಶ್ರೀ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ, ತಂದೆಯ ಹೆಸರನ್ನು ಬಳಸಿಕೊಳ್ಳದೇ, ಚಿತ್ರರಂಗದಲ್ಲಿ ಹಂತ ಹಂತವಾಗಿ ತನ್ನ ಸ್ವಸಾಮರ್ಥ್ಯದಿಂದ ಮತ್ತು ಡಿಬಾಸ್ ಎನ್ನಿಸಿಕೊಳ್ಳುವಷ್ಟರ ಮಟ್ಟಕ್ಕೆ ಬೆಳೆದು ಬಂದಿರುವಂತಹ ದರ್ಶನ್, ಒಲೆ ಕೆಡಿಸಿತು, ತೂತು ಒಲೆ ಕೆಡಿಸಿತು, ಎನ್ನುವಂತೆ ಕೆಲವು ಕ್ಷುಲ್ಲಕ ಅಥವಾ ಅಸಭ್ಯ/ಅಸಹ್ಯ/ಅಶ್ಲೀಲಕರ ಹೇಳಿಕೆಗಳನ್ನು ಪದೇ ಪದೇ ನೀಡುತ್ತಾ ತಾವೂ ಸಹಾ ತೊಂದರೆಗೊಳಗಾಗುವುದಲ್ಲದೇ, ಜನ ಸಾಮಾನ್ಯರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.… Read More ಮಾತೇ ಮುತ್ತು ಮಾತೇ ಮೃತ್ಯು

ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ

ಜೆ.ಎನ್.ಯು ಕಾಂಪಸ್ಸಿನ ಎಡಚರು, ಸ್ವಯಂ ಘೋಷಿತ ಬುದ್ಧಿಜೀವಿಗಳ ಜೊತೆ‌ ಅಹಿಂದ ಮುಖಂಡರುಗಳು ಅವ್ಯಾಹತವಾಗಿ ಬ್ರಾಹ್ಮಣರನ್ನು ದ್ವೇಷಿಸುತ್ತಿರುವ ಹಿಂದಿರುವ‌ ಘನ ಘೋರ ಸತ್ಯಾಸತ್ಯತೆಗಳ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ.… Read More ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ

ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು

ಪುಟ್ಬಾಲ್ ಆಟ ಆಟಗಾರರ ಕಾಲ್ಚಳಕದ ಅನುಗುಣವಾಗಿ ಅತ್ಯಂತ ವೇಗವಾಗಿ ಆಡುವ ಆಟವಾಗಿದ್ದು, ಚಂಡಿನ ಚಲನವಲನದ ಬಗ್ಗೆ ನಿಖರವಾದ ತೀರ್ಪು ನೀಡುವುದು ತುಸು ತ್ರಾಸವಾಗಿರುವುದನ್ನು ಮನಗಂಡ FIFA, ಈ ಬಾರಿಯ ಕತಾರ್ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶೇಷ ತಂತ್ರಜ್ಣಾನ ಅಳವಡಿಸಿರುವ ಅಲ್ ರಿಹ್ಲಾ ಚಂಡುಗಳನ್ನು ಬಳಸುತ್ತಿರುವುದು ವಿಶೇಷವಾಗಿದೆ.

ಹಾಗಾದರೆ ಈ ಅಲ್ ರಿಹ್ಲಾ ಚಂಡುಗಳ ವಿಶೇಷತೆ ಏನು? ಅದನ್ನು ಆವಿಷ್ಕರಿಸಿದವರು ಯಾರು? ಈ ಚಂಡುಗಳು ಪಂದ್ಯಗಳ ಫಲಿತಾಂಶದ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಎಂಬುದರ ಸವಿವರ ಇದೋ ನಿಮಗಾಗಿ… Read More ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು

ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ, ಕೇಳಿದಷ್ಟು ಹಣವನ್ನು ಕೊಟ್ಟ ಪೋಷಕರ ಔದಾರ್ಯತೆ, ಮನೆ ಮತ್ತು ಶಾಲೆಗಳ ಉತ್ತಮ ಸಂಸ್ಕಾರದ ಕೊರತೆ, ಸಿನಿಮಾ, ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ, ಇನ್ನೂ ಮಕ್ಕಳಂತೆ ಆಟವಾಡ ಬೇಕಾದ ವಯಸ್ಸಿನಲ್ಲಿ, ಮಕ್ಕಳನ್ನು ಮಾಡಿಕೊಳ್ಳುವ ಆಟವನ್ನು ಕದ್ದು ಮುಚ್ಚಿ ಆಡುವಷ್ಟ್ರ ಮಟ್ಟಿಗೆ ಬೆಳೆದು ಬಿಟ್ಟಿರುವುದು ದೇಶದ ಹಿತದೃಷ್ಟಿಯಿಂದ ಮಾರಕವೇ ಸರಿ. ನಿಜವಾಗಿಯೂ ಕಾಲ ಕೆಟ್ಟಿಲ್ಲ, ಕೆಟ್ಟಿರುವುದು ನಮ್ಮ ಮನಸ್ಥಿತಿ ಮತ್ತು ಆನುಚರಣೆ ಅಲ್ವೇ?… Read More ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಶಿಕ್ಷೆ ಕೊಡುವುದು ಸಜನೋ ಇಲ್ಲಾ ಮಜಾನೋ?

ಉಮೇಶ್ ರೆಡ್ಡಿಯಂತಹ ವಿಕೃತಕಾಮಿಗೆ ಮರಣೆ ದಂಡನೆ ತಪ್ಪಿಸುವುದು, ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವುದು, ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವವನಿಗೆ ತಮ್ಮ ಕುಟುಂಬದೊಡನೆ ಏಕಾಂತದಲ್ಲಿ ಕಾಲ ಕಳೆಯುಂವಂತಹ ಆದೇಶವನ್ನು ಘನವೆತ್ತ ನ್ಯಾಯಾಲಯಗಳು ಕೊಡುತ್ತವೆ ಎಂದರೆ, ಅಪರಾಧಿಗಳಿಗೆ ಶಿಕ್ಷೆ ಎನ್ನುವುದು ಸಜಾ ಬದಲು ಮಜವಾಗಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವುದಿಲ್ಲವೇ? ಹಾಗಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲೂ ಆಮೂಲಾಗ್ರ ಬದಲಾವಣೆ ಅಗಬೇಕಲ್ಲವೇ?… Read More ಶಿಕ್ಷೆ ಕೊಡುವುದು ಸಜನೋ ಇಲ್ಲಾ ಮಜಾನೋ?

ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ಪ್ರಪಂಚದಾದ್ಯಂತ ಇರುವ 196 ದೇಶಗಳಲ್ಲಿ ಸುಮಾರು 7,117 ಭಾಷೆಗಳಲ್ಲಿ ಮಾತನಾಡುತ್ತಾರೆ. ಭಾರತದಲ್ಲಿ ಸುಮಾರು 700ಕ್ಕೂ ಹೆಚ್ಚು ಭಾಷೆಗಳಿದ್ದು 22 ಅಧಿಕೃತ ಭಾಷೆಗಳಿದ್ದು, 2000ಕ್ಕೂ ಹೆಚ್ಚಿನ ಉಪಭಾಷೆಗಳಿದ್ದು, ವಿಶಾಲವಾದ ಭಾಷಾ ಸಂಪತ್ತನ್ನು ಹೊಂದಿದ್ದರೂ, ಬ್ರಿಟೀಷರ ದಾಸ್ಯದ ಸಂಕೇತವಾಗಿರುವ ಇಂಗ್ಲೀಷ್ ಭಾಷೆಯನ್ನೇ ಇಂದಿಗೂ ಭಾರತೀಯರು ಒಪ್ಪಿಕೊಂಡು ಅಪ್ಪಿಕೊಂಡಿರುವುದು ನಿಜಕ್ಕೂ ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕಾರಕ್ಕೆ ಮಾಡುವ ಅಪಮಾನವೇ ಸರಿ.… Read More ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ಬಿಗ್ ಬಾಸ್ ಮತ್ತು ಹೋರಾಟಗಾರರು

ತಮ್ಮ ಛಾನೆಲ್ಲಿನ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ ಪರಸ್ಪರ ವಿರೋಧಾಭಾಸವಿರುವ ಮತ್ತು ಈ ಮೊದಲೇ ವಯಕ್ತಿಕವಾಗಿ ಶೀತಲ ಸಮರ ಹೊಂದಿರುವ ವ್ಯಕ್ತಿಗಳನ್ನು ಬಿಗ್ ಬಾಸ್ ನ ಒಂದೇ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ, ಅವರಿಬ್ಬರ ಜಗಳವನ್ನು ಮನೋರಂಜನೆ ಎಂದು ತೋರಿಸುವುದು ನಂತರ ಕ್ಷಮೆ ಕೇಳಿಸುವುದು ಒಂದು ರೀತಿಯಾಗಿ ಕಂಡೋರ ಮನೆಯ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವಂತಿದೆ ಎಂದರೂ ತಪ್ಪಾಗದು ಅಲ್ವೇ?… Read More ಬಿಗ್ ಬಾಸ್ ಮತ್ತು ಹೋರಾಟಗಾರರು