ಕಾರ ಹುಣ್ಣಿಮೆ

ನವರಾತ್ರಿಯಲ್ಲಿ ಆಯುಧಗಳಿಗೆ ಪೂಜೆ ಮಾಡುವಂತೆ, ಜೇಷ್ಠ ಮಾಸದ ಹುಣ್ಣಿಮೆಯಂದು ಉತ್ತರ ಕರ್ನಾಟಕದ ರೈತಾಪಿ ಜನರು ಮಳೆಗಾಲದ ಮುಂಚೆ ಸಡಗರ ಸಂಭ್ರಮಗಳಿಂದ ತಮ್ಮ ದನ ಕರುಗಳೊಂದಿಗೆ ಆಚರಿಸುವ ಕಾರಹುಣ್ಣಿಮೆಯ ಬಗ್ಗೆ ಸವಿರವಾದ ವಿವರಗಳು ಇದೋ ನಿಮಗಾಗಿ… Read More ಕಾರ ಹುಣ್ಣಿಮೆ

ಹನುಮ ವರ್ಧಂತಿ

ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಪ್ರಭು ಶ್ರೀರಾಮನ ಪರಮ ಭಕ್ತ, ಅಂಜನಿಯ ಪುತ್ರ ಆಂಜನೇಯನು ಹುಟ್ಟಿದ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ. ಈ ದಿನವನ್ನು ದೇಶಾದ್ಯಂತ ಹನುಮ ಜಯಂತಿ ಎಂದು ಆಚರಿಸುವಾಗ, ಇದೇನಿದು ಹನುಮ ವರ್ಧಂತಿ? ಎಂದು ಯೋಚಿಸುತ್ತಿರುವವರಿಗೆ ಇದೋ ಇಲ್ಲಿದೆ ಉತ್ತರ… Read More ಹನುಮ ವರ್ಧಂತಿ

ಶ್ರೀರಾಮ ನವಮಿ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್, ಸಾರಿಗೆ ಸ್ಟ್ರೈಕ್, ರೈತರ ಸ್ಟ್ರೈಕ್ ಕೇಳಿದ್ದೀವಿ *ಇದೇನಿದು ಶ್ರೀರಾಮ ನವಮಿ ಸ್ಟ್ರೈಕ್?* ಅಂತಾ ಯೋಚಿಸುವವರಿಗೆ, ಇದುವರೆಗೂ ಕೇಳಿರದ ಶ್ರೀರಾಮ ನವಮಿ ಸ್ಟ್ರೈಕ್ ನ ರೋಚಕ ಅನುಭವ ಇದೋ ನಿಮಗಾಗಿ… Read More ಶ್ರೀರಾಮ ನವಮಿ ಸ್ಟ್ರೈಕ್

ತದಿಗೆ/ಸೌಭಾಗ್ಯ ಗೌರಿ ವ್ರತ

ಸ್ವರ್ಣಗೌರಿ ಗೌರಿ ವ್ರತ ಗೊತ್ತು, ಮಂಗಳ ಗೌರಿ ವ್ರತ ಪೂಜೆ ಗೊತ್ತು. ಅದ್ರೇ ಇದೇನಿದು ತದಿಗೆ ಗೌರಿ ವ್ರತ ಅಥವಾ ಸೌಭಾಗ್ಯ ಗೌರಿವ್ರತ ಅಂತ ಯೋಚನೆ ಮಾಡುತ್ತಿದ್ದೀರಾ? ಚೈತ್ರ ಮಾಸದ ಮೊದಲ ದಿನ ಅಂದರೆ ಪಾಡ್ಯದಂದು ಮೊದಲ ಹಬ್ಬವಾದ ಯುಗಾದಿಯನ್ನು ಆಚರಿಸುತ್ತೆವೆ. ಇನ್ನು ಎರಡನೇ ದಿನ ಬಿದಿಗೆ ವರ್ಷತೊಡಕನ್ನು ಆಚರಿಸುತ್ತೇವೆ ಮತ್ತು ಈ ದಿನ ಚಂದ್ರನ ನೋಡಿದರೆ ಶುಭ ಎಂದು ಪರಿಗಣಿಸಲಾಗುತ್ತದೆ. ಯುಗಾದಿಯಾದ ಮೂರನೇ ದಿನ ತೃತೀಯ ಅಥವಾ ತದಿಗೆಯಂದು ಕೆಲವೆಡೆ ಗೌರಿಯ ವ್ರತವನ್ನು ಮಾಡುವ ಪದ್ದತಿ… Read More ತದಿಗೆ/ಸೌಭಾಗ್ಯ ಗೌರಿ ವ್ರತ

ಗೊರೆ ಹಬ್ಬ (ಸಗಣಿ ಹಬ್ಬ)

ಗೋವಿನ ಸಗಣಿ ಎಂದರೆ ಅಸಹ್ಯ ಪಡುವಂತಹ ಇಂದಿನ ಕಾಲದಲ್ಲೂ, ದೀಪಾವಳಿಯ ಮಾರನೆಯ ದಿನ ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರಾಂತ್ಯದ, ಗುಮ್ಮಟಾಪುರದ ಆಬಾಲವೃದ್ಧರಾದಿಯಾಗಿ ಗಂಡಸರು ಸಾಂಪ್ರದಾಯಿಕ ರೂಪದಲ್ಲಿ ಪರಸ್ಪರ ಸಗಣಿಯನ್ನು ಎರೆಚಾರಿಕೊಂಡು ಪರಸ್ಪರ ಮನಸೋ ಇಚ್ಚೆ ಬಯ್ದಾಡಿಕೊಂಡು ವಿಲಕ್ಷಣ ಎನಿಸಿದರೂ ವಿಶಿಷ್ಟವಾಗಿ ಆಚರಿಸುವ ಗೊರೆ ಹಬ್ಬದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಗೊರೆ ಹಬ್ಬ (ಸಗಣಿ ಹಬ್ಬ)

ಅಂಟಿಗೆ – ಪಂಟಿಗೆ ಹಬ್ಬ

ನಾಡಿನಾದ್ಯಂತ ಸಡಗರ ಸಂಭ್ರಮಗಳಿಂದ ದೀಪಾವಳಿಯನ್ನು ಆಚರಿಸುತ್ತಿದ್ದರೆ, ಕರ್ನಾಟಕದ ಕರಾವಳಿಯ ಕೆಲವು ಮತ್ತು ಮಲೆನಾಡಿನ ಹಲವು ಪ್ರದೇಶದಲ್ಲಿ ಜಾತಿ ಜಾತಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವಂತಹ, ದೀಪದಿಂದ ದೀಪ ಹಚ್ಚೇ ಎನ್ನುವಂತೆ ದೀಪದ ಮೂಲಕ ಎಲ್ಲರನ್ನೂ ಒಗ್ಗೂಡಿಸುವಂತಹ ಸಂಪ್ರದಾಯವೇ ಅಂಟಿಗೆ ಪಿಂಟಿಗೆ. ಈ ಸುಂದರ ಜನಪದ ಕಲೆಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ. … Read More ಅಂಟಿಗೆ – ಪಂಟಿಗೆ ಹಬ್ಬ

ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಿಂದಿರುವ ಅನೇಕ ಪೌರಾಣಿಕ ಹಿನ್ನಲೆಗಳು, ಪಟಾಕಿ ಮತ್ತು ಅದರ ಬಳಕೆಯ ಉಲ್ಲೇಖಗಳು ಹೇರಿದಂತೆ ಅಂದು ಮತ್ತು ಇಂದಿನ ಪಟಾಕಿ ತಯಾರಿಕೆಯ ಹಿಂದಿರುವ ವೆತ್ಯಾಸಗಳ ಕುರಿತಾದ ವೈಚಾರಿಕಪೂರ್ಣ ಲೇಖನ ಇದೋ ನಿಮಗಾಗಿ… Read More ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

ಬೆಳಕಿನ ಹಬ್ಬ ದೀಪಾವಳಿ

ಆಶ್ವಯುಜದ ಮಾಸದ ಕಡೇ ಮೂರು ದಿನಗಳು ಮತ್ತು ಕಾರ್ತೀಕ ಮಾಸದ ಆರಂಭದ ಎರಡು ದಿನಗಳ ಸಡಗರ ಸಂಭ್ರಮ ಮತ್ತು ಅದ್ಧೂರಿಯಿಂದ ಆಚರಿಸಲ್ಪಡುವ ದೀಪಾವಳಿ ಹಬ್ಬದ ಹಿನ್ನಲೆ ಮತು ಆಚರಣೆಯ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಬೆಳಕಿನ ಹಬ್ಬ ದೀಪಾವಳಿ