ಶಿವರಾತ್ರಿಯಂದು ಶಿವನ ಪಾದ ಸೇರಿದ ಚಿಂಟು

ಕೆಲವು ವಾರಗಳ ಹಿಂದೆ ನಮ್ಮ ನಮ್ಮ ಮನೆಯ ಮುಂದಿನ ಮೋರಿಯಲ್ಲಿ ಅದೆಲ್ಲಿಂದಲೋ ಬಂದ ಹೆಣ್ಣು ನಾಯೊಂದು ಏಳೆಂಟು ಮರಿಗಳನ್ನು ಹಾಕಿ ಮೂರ್ನಾಲ್ಕನ್ನು ಇಲ್ಲಿಯೇ ಬಿಟ್ಟು ಉಳಿದ ನಾಲ್ಕೈದು ಮರಿಗಳನ್ನು ಪಕ್ಕದ ರಸ್ತೆಯ ಮತ್ತೊಂದು ಸುರಕ್ಷಿತ ತಾಣಕ್ಕೆ ಕರೆದುಕೊಂಡು ಹೊಗಿತ್ತು. ಮನೆಯ ಮುಂದಿನ ರಸ್ತೆಯಲ್ಲಿ ಕ್ರಿಕೆಟ್ ಆಡುವ ನನ್ನ ಮಗ ಮೋರಿಯಲ್ಲಿ ಬಿದ್ದ ತನ್ನ ಚೆಂಡನ್ನು ತೆಗೆದುಕೊಳ್ಳಲು ಹೋದಾಗ, ಇನ್ನೂ ಕಣ್ಣನ್ನೇ ತೆರೆಯದಿದ್ದ ಈ ಪುಟ್ಟ ನಾಯಿಮರಿಗಳು ಕುಂಯ್ ಕುಂಯ್ ಎಂದು ಶಬ್ಧ ಮಾಡುತ್ತಿದ್ದನ್ನು ನೋಡಿದ ತಕ್ಷಣ, ಕ್ರಿಕೆಟ್… Read More ಶಿವರಾತ್ರಿಯಂದು ಶಿವನ ಪಾದ ಸೇರಿದ ಚಿಂಟು

ಮದನ ಮತ್ತು ಮಾನಿನಿ

ಸೂರ್ಯವಂಶದ ಕೌಶಿಕ ಮಹಾರಾಜ ವಸಿಷ್ಠ ಮುನಿಗಳ ಆಶ್ರಮದಲ್ಲಿ ಅವಮಾನಿತನಾಗಿ. ಘೋರ ತಪಸ್ಸನ್ನು ಮಾಡಿ ವಿಶ್ವಾಮಿತ್ರ ಎಂಬ ರಾಜರ್ಷಿ ಪಟ್ಟವನ್ನು ಪಡೆಯುತ್ತಾನೆ. ನಂತರ ತನ್ನ ಅನುಯಾಯಿ ತ್ರಿಶಂಕುವನ್ನು ಸ್ವರ್ಗಕ್ಕೆ ಸೇರಿಸಿಕೊಳ್ಳಲು ಒಪ್ಪದ ಇಂದ್ರನ ವಿರುದ್ಧವೇ ಸಿಡಿದೆದ್ದು ತ್ರಿಂಶಂಕು ಸ್ವರ್ಗವನ್ನೇ ಸೃಷ್ಟಿಸಿದ್ದಲ್ಲದೇ, ಇಂದ್ರ ಪಟ್ಟವನ್ನೇ ಪಡೆಯಬೇಕೆಂದು ನಿರ್ಧರಿಸಿದ ವಿಶ್ವಾಮಿತ್ರರು ಘನ ಘೋರ ತಪಸ್ಸನ್ನು ಮಾಡುವುದನ್ನು ಗಮನಿಸಿದ ಇಂದ್ರ, ಭಯಭೀತನಾಗಿ ಪರಮ ಸುಂದರಿಯಾದ ಮೇನಕೆಯನ್ನು ವಿಶ್ವಾಮಿತ್ರರ ತಪ್ಪಸ್ಸನ್ನು ಭಂಗ ಮಾಡಲು ಕಳುಹಿಸಿ ಯಶಸ್ವಿಯಾಗಿದ್ದಲ್ಲದೇ, ಅವರಿಬ್ಬರ ದಾಂಪತ್ಯದ ಫಲವಾಗಿ ಶಕುಂತಲೆಯ ಜನನಕ್ಕೆ ಕಾರಣೀಭೂತವಾಗುತ್ತದೆ.… Read More ಮದನ ಮತ್ತು ಮಾನಿನಿ

ಪೊಗರು ಇಳಿಸಿದ ಪರಿ

ಕಳೆದ ಶುಕ್ರವಾರ ಬಹು ನಿರೀಕ್ಷಿತ ನಂದಕಿಶೋರ್ ನಿರ್ದೇಶಿಸಿದ ಮತ್ತು ಧೃವ ಸರ್ಜಾ ನಟಿಸಿದ ಪೊಗರು ಚಿತ್ರ, ಚಿತ್ರಮಂದಿರದಲ್ಲಿ ರಿಲೀಸ್ ಆದಾಗ ಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಇದೇ ಚಿತ್ರಕ್ಕಾಗಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಸಣ್ಣ ಮತ್ತು ದಪ್ಪ ಮಾಡಿಕೊಂಡಿದ್ದ ಧೃವ ಸರ್ಜಾ ಬಗ್ಗೆ ಎಲ್ಲರೂ ಹಾಡಿ ಹೊಗಳುತ್ತಿದ್ದದ್ದನ್ನು ಓದಿ, ಕೇಳಿ ಎಲ್ಲರೂ ಪುಳಕಿತಗೊಂಡಿದ್ದಂತೂ ಸುಳ್ಳಲ್ಲ. ಆದರೆ ಶುಕ್ರವಾರ ಸಂಜೆ ಆಗುತ್ತಿದ್ದಂತೆಯೇ ಚಿತ್ರದಲ್ಲಿ ಒಂದು ಸಮುದಾಯವನ್ನು ಬಹಳ ಕೀಳಾಗಿ ಚಿತ್ರೀಕರಿಸಲ್ಪಟ್ಟಿದೆ ಎಂಬ… Read More ಪೊಗರು ಇಳಿಸಿದ ಪರಿ

ಬೌದ್ಧಿಕ ದಿವಾಳಿತನ

ಒಂದು ಸಿನಿಮಾದಲ್ಲಿನ ಸನ್ನಿವೇಶಕ್ಕಾಗಿ ಬ್ರಾಹ್ಮಣರು ಇಷ್ಟೊಂದು ಆವೇಶಗೊಳ್ಳುವ ಅವಶ್ಯಕತೆ ಇರಲಿಲ್ಲ. ಸಿನಿಮಾ ಒಂದು ಕಲಾಮಾಧ್ಯಮ. ಅದರಲ್ಲಿನ ಸನ್ನಿವೇಶಕ್ಕೆ ಬ್ರಾಹ್ಮಣರ ಮೇಲೆ ಕಾಲಿಟ್ಟಿದ್ದಕ್ಕೆ ಬ್ರಾಹ್ಮಣರು ಇಷ್ಟೊಂದು ಅಸಹನೆ ತೋರಿಸುವುದು ಬ್ರಾಹ್ಮಣರಲ್ಲಿ ಬೆಳೆಯುತ್ತಿರುವ ಮೂಲಭೂತವಾದವನ್ನು ತೋರಿಸುತ್ತದೆ. ಬ್ರಾಹ್ಮಣರು ತಮ್ಮ ಜಾತಿಗೆ ಅವಮಾನ ಮಾಡಲಾಗಿದೆ ಆ ಪೂಜಾರಿ ಪಾತ್ರಧಾರಿಯ ಹೆಗಲಮೇಲೆ ಕಾಲಿಟ್ಟ ದೃಶ್ಯವನ್ನು ಕತ್ತರಿಸಬೇಕೆಂದು ಪ್ರತಿಭಟನೆ ಮಾಡುತ್ತಾರಂತೆ..😛 ಆದರೆ ಮತ್ತೊಬ್ಬ ಸಹಕಲಾವಿದನ ತಲೆಯಮೇಲೆ ಕಾಲಿಟ್ಟರು ಅದನ್ನು ಕೇಳುವವರು ಯಾರಿಲ್ಲ ಯಾಕೆಂದರೆ ಇಲ್ಲಿ ಮನುಷ್ಯನಿಗಿಂತ ಆತ ಪ್ರತಿನಿಧಿಸುವ ಜಾತಿಗೆ ಹೆಚ್ಚು ಪ್ರಾಮುಖ್ಯತೆ ಇದೆ…🤨… Read More ಬೌದ್ಧಿಕ ದಿವಾಳಿತನ

ಹೇಳೋದು ಶಾಸ್ತ್ರ ತಿನ್ನೋದು ಮಾತ್ರಾ ಬದನೇಕಾಯಿ

ಅವರೊಬ್ಬರು ಹಿರಿಯ ರಾಜಕಾರಣಿಗಳು. ಬಹಳ ವರ್ಷಗಳಿಂದ ಹೋರಾಟದ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಯೆಯನ್ನು ಮೂಡಿಸಿಕೊಂಡಿದ್ದರು. ಮಾತೆತ್ತಿದ್ದರೆ, ನಾನು ಅಂಬೇಡ್ಕರ್ ಅವರ ಅನುಯಾಯಿ, ನನ್ನನ್ನು ಒಂದು ಧರ್ಮಕ್ಕೆ ಮೀಸಲಾಗಿಸ ಬೇಡಿ ನನಗೆ ನನ್ನ ಧರ್ಮ ಗ್ರಂಥಕ್ಕಿಂತಲೂ ಅಂಬೇಡ್ಕರ್ ಅವರ ಸಂವಿಧಾನವೇ ಮುಖ್ಯ ಎಂದು ಓತಪ್ರೋತವಾಗಿ ಮಾತನಾಡುತ್ತಾ, ಜನರುಗಳನ್ನು ಜಾತಿ ಮತ್ತು ಉಪಜಾತಿಗಳ ಮೂಲಕ ಒಡೆಯುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ, ಅಧಿಕಾರದಲ್ಲಿ ಇರಲೀ ಇಲ್ಲದಿರಲೀ ಅತ್ಯುನ್ನತ ಅಧಿಕಾರವನ್ನು ಪಡೆಯುವುದರಲ್ಲಿ ಸಫಲರಾಗಿದ್ದರು. ಇನ್ನು ವಯಕ್ತಿಕವಾಗಿ ಹೇಳಬೇಕೆಂದರೆ, ತಮ್ಮ… Read More ಹೇಳೋದು ಶಾಸ್ತ್ರ ತಿನ್ನೋದು ಮಾತ್ರಾ ಬದನೇಕಾಯಿ

ಸೌರಶಕ್ತಿಯ ಮಿಲಿಟರಿ ಡೇರೆಗಳು

ಬೆಂಗಳೂರಿನಲ್ಲಿನ ಉಷ್ಣಾಂಶ 17 ಕ್ಕಿಂತ ಕಡಿಮೆ ಇಳಿದರೆ ಸಾಕು. ಜನರು ಅಹಹಾ! ಚಳಿ ಚಳಿ ತಾಳೆನು ಈ ಚಳಿಯಾ. ಅಂತ ಚೆಚ್ಚನೆಯ ವಸ್ತ್ರಗಳನ್ನು ಧರಿಸಿ ಬಿಸಿ ಬಿಸಿಯಾದ ಕಾಫೀ, ಟೀ ಹೀರುತ್ತಾ ಮನೆಯಿಂದ ಹೊರಗೇ ಕಾಲು ಇಡುವುದಿಲ್ಲ. ಅದರೆ ಅದೇ, ಹಿಮಚ್ಛಾದಿತ ಪ್ರದೇಶಗಳಲ್ಲಿ ದೇಶದ ಗಡಿಯನ್ನು ಕಾಯುವ ಸೈನಿಕರ ಪಾಡು ನಿಜಕ್ಕೂ ಹೇಳ ತೀರದು. ರಾತ್ರಿಹೊತ್ತಿನಲ್ಲಂತೂ ಹೊರಗಿನ ಕನಿಷ್ಠ ತಾಪಮಾನ ಕೆಲವೊಮ್ಮೆ -20 – 40ರ ವರೆಗೂ ತಲುಪಿರುತ್ತದೆ ಎಂದರೆ ಅಲ್ಲಿನ ಸಮಸ್ಯೆಗಳನ್ನು ಉಹಿಸಿಕೊಳ್ಳಬಹುದು. ನೀರು ಕುದಿಸಿ… Read More ಸೌರಶಕ್ತಿಯ ಮಿಲಿಟರಿ ಡೇರೆಗಳು

ನ್ಯಾಯಮೂರ್ತಿ, ಶ್ರೀ ರಾಮಾ ಜೋಯಿಸ್

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕ್ಕಿಗೂ ಮತ್ತು ಕನ್ನಡ ಸಾರಸ್ವತ ಲೋಕಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಎಂದರೂ ತಪ್ಪಾಗಲಾರದು. ನಾಡಿನ ಹೆಸರಾಂತ ಕವಿ, ಕನ್ನಡಕ್ಕೆ ಮೊತ್ತ ಮೊದಲ ಜ್ಣಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುವೆಂಪು, ಅವರ ಮಗ ಶ್ರೀ ಪೂರ್ಣಚಂದ್ರ ತೇಜಸ್ವೀ, ಕಾಂಬರಿಗಾರ್ತಿ ಶ್ರೀಮತಿ ಎಂ. ಕೆ. ಇಂದಿರಾ, ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿ, ಕೂಡ್ಲು ರಾಮಕೃಷ್ಣ, ರಾಜಕೀಯ ಧುರೀಣರಾದ ಶ್ರೀ ಶಾಂತವೇರಿ ಗೋಪಾಲ ಗೌಡರ ಜೊತೆ ಕರ್ನಾಟಕದ ಘನತೆ ಮತ್ತು ಗೌರವವನ್ನು ದೇಶಾದ್ಯಂತ… Read More ನ್ಯಾಯಮೂರ್ತಿ, ಶ್ರೀ ರಾಮಾ ಜೋಯಿಸ್

ದಲಿತರು ಮತ್ತು ಮತಾಂತರ

ನಮ್ಮ ಅಜ್ಜ ಮೂಲತಃ ಬೆಳ್ಳೂರಿನವರಾದರೂ ಕೋಲಾರದ ಜಿನ್ನದ ಗಣಿಯಲ್ಲಿ ಹಿರಿಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರಿಂದ ನಾನು ಹುಟ್ಟಿದ್ದು ಕೆ.ಜಿ.ಎಫ್ ನಲ್ಲಿಯೇ ಹಾಗಾಗಿ ನಾನು ಚಿನ್ನದ ಹುಡುಗ ಎಂಬ ಹೆಮ್ಮೆಯಿದೆ. ಕೋಲಾರ ಕನ್ನಡನಾಡಿನ ಭಾಗವಾದರೂ ತೆಲುಗಿನವರದ್ದೇ ಪ್ರಾಭಲ್ಯವಾದರೆ, ಕೋಲಾರದಿಂದ ಕೇವಲ 31 ಕಿಮೀ ದೂರದಲ್ಲಿರುವ ಕೋಲಾರದ ಚಿನ್ನದ ಗಣಿ‌ ಪ್ರದೇಶ ಕೆ.ಜಿ.ಎಫ್ ತಮಿಳು ಮಯ. ನಮ್ಮ ಕನ್ನಡಿಗರು ಆಳದ ಚಿನ್ನದ ಗಣಿಗಳಲ್ಲಿ ಇಳಿದು ಕೆಲಸ ಮಾಡಲು‌ ಮನಸ್ಸು ಮಾಡದ ಕಾರಣ ಪಕ್ಕದ ಕೃಷ್ಣಗಿರಿಯಿಂದ ತಮಿಳು ಭಾಷಿಗರು ಇಲ್ಲಿಗೆ ಬಂದು… Read More ದಲಿತರು ಮತ್ತು ಮತಾಂತರ

ತೈಲಬೆಲೆ ಏರಿಕೆ, ಸತ್ಯ-ಮಿಥ್ಯ

ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯವೆಂದರೆ ತೈಲಬೆಲೆಯ ಏರಿಕೆ. ಸದ್ಯದ ಪರಿಸ್ಥಿತಿಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ 85-90ರ ಆಸುಪಾಸಿನಲ್ಲಿದ್ದು ಇನ್ನು ಕೆಲವೇ ವಾರಗಳಲ್ಲಿ ಶತಕದತ್ತ ಧಾಪುಗಾಲು ಹಾಕಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಿರೋಧ ಪಕ್ಷ ಅದರಲ್ಲೂ ಪ್ರಮುಖವಾಗಿ ಕಾಂಗ್ರೇಸ್ ಪಕ್ಷ ಇದೇ ಏನೂ ಅಚ್ಚೇ ದಿನ್? ಎನ್ನುವ ಶೀರ್ಷಿಕೆಯಲ್ಲಿ, ಭಾರತವು ಪೆಟ್ರೋಲ್ / ಡೀಸೆಲ್ / ಎಲ್ಪಿಜಿ ಬೆಲೆಗಳಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ ಎಂದು ಹೇಳುತ್ತಾ ಈ ಕೆಳಕಂಡ ಅಂಕಿ… Read More ತೈಲಬೆಲೆ ಏರಿಕೆ, ಸತ್ಯ-ಮಿಥ್ಯ