ಕೀಟ ನಾಶ ಮತ್ತು ಪರಿಸರದ ಹಾನಿ

ಬಹುಶಃ ಒಂದು ಹತ್ತು ವರ್ಷಗಳ ಹಿಂದೆ ಕಾರಿನಲ್ಲಿ ದೂರಪ್ರಯಾಣಿಸುವವರಿಗೆ ತಮ್ಮ ಕಾರಿನ ವಿಂಡ್ ಷೀಲ್ಡ್ ಮೇಲೆ ಧಾಳಿ ಮಾಡುತ್ತಿದ್ದ ಕೀಟಗಳ ದಾಳಿಯನ್ನು ತಡೆಯುವುದೇ ಕಷ್ಟವಾಗುತ್ತಿತ್ತು. ವೇಗವಾಗಿ ಚಾಲನೆಯಾಗುತ್ತಿರುವ ವಾಹನಗಳಿಗೆ ಸಣ್ಣ ಸಣ್ಣ ಕ್ರಿಮಿ ಕೀಟಗಳು ಅಪ್ಪಳಿಸಿ ನಾಶವಾಗುತ್ತಿದ್ದದ್ದಲ್ಲದೇ ವಾಹನದ ಗಾಜಿಗೆ ಗಟ್ಟಿಯಾಗಿ ಕಚ್ಚಿ ಕೊಂಡು ಅವುಗಳನ್ನು ತಡೆಯುವುದಾಗಲೀ, ತೊಳೆಯುವುದಾಗಲೀ ಕಷ್ಟವಾಗುತ್ತಿತ್ತು. ಆದರೆ ಇಂದಿನ ಬಹುತೇಕ ಯುವಕರಿಗೆ ಅಂತಹ ಸಮಸ್ಯೆಯ ಅರಿವೇ ಇಲ್ಲವಾಗಿದ್ದು ಆಹ್ಲಾದಕರವಾಗಿ ದೂರಪ್ರಯಾಣ ಮಾಡುತ್ತಿದ್ದಾರೆ.. ಹಾಗಾದರೇ ಆ ಸಮಸ್ಯೆಗಳು ಹೇಗೆ ಶಾಶ್ವತವಾಗಿ ಪರಿಹಾರವಾದವೇ? ಎಂಬುದರ ಬೆನ್ನತ್ತಿ… Read More ಕೀಟ ನಾಶ ಮತ್ತು ಪರಿಸರದ ಹಾನಿ

ವಿಶ್ವ ತೆಂಗಿನ ದಿನ

ಇವತ್ತು ಬೆಳಿಗ್ಗೆ ವಾಟ್ಸಾಪ್ಪಿನಲ್ಲಿ ಸ್ನೇಹಿತರ ಸಂದೇಶಗಳನ್ನು ಓದುತ್ತಿದ್ದಾಗ ಅತ್ಯುತ್ತಮ ಕಲೆಗಾರ ಮತ್ತು ಕ್ರಿಯಾತ್ಮಕ ಗುಣವುಳ್ಳ ಗೆಳೆಯ ಅಶೋಕ್ ವಿಶ್ವ ತೆಂಗಿನ ದಿನದ ಶುಭಾಶಯಗಳು ಎಂದು ಕಳುಹಿಸಿದಾಗ, ತಕ್ಷಣವೇ, ಅರೇ ಹೀಗೂ ಉಂಟೇ? ಎಂದು ಪ್ರತ್ಯುತ್ತರ ನೀಡಿ ಅದರ ಕುರಿತಂತೆ ಹೆಚ್ಚಿನ ವಿವರಗಳನ್ನು ಗೂಗಲ್ ಮಾಡಿ ನೋಡಿದಾಗ ತಿಳಿದು ಬಂದ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಪ್ರತೀ ವರ್ಷದ ಸೆಪ್ಟೆಂಬರ್ 2ನೇ ದಿನವನ್ನು ಭಾರತ ಸೇರಿದಂತೆ ತೆಂಗಿನಕಾಯಿ ಬೆಳೆಯುವ ಸುಮಾರು 18 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿರುವ ಇಂಡೋನೇಷ್ಯಾದ ಜಕಾರ್ತಾದಲ್ಲಿದಲ್ಲಿ ಮುಖ್ಯ… Read More ವಿಶ್ವ ತೆಂಗಿನ ದಿನ

ಮೋಹಕ ನಟ ನಟಿಯರೋ? ಮಾದಕ ವ್ಯಸನಿಗಳೋ?

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಬೆಂಗಳೂರಿನ ಕಲ್ಯಾಣ್ ನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್ಮೆಂಟ್ನಿಂದ ಆಗಸ್ಟ್ 21 ರಂದು ಮಾಜಿ ಕಿರುತೆರೆ ನಟಿ ಅನಿಕಾ ಡಿ ಮತ್ತು ಅವರ ಇಬ್ಬರು ಸಹಚರರಾದ ಎಂ ಅನೂಪ್ ಮತ್ತು ಆರ್ ರವೀಂದ್ರನ್ ಅವರನ್ನು ಬಂಧಿಸಿ ಅವರಿಂದ 145 ಎಂಡಿಎಂಎ ಮಾತ್ರೆಗಳು ಮತ್ತು 2.2 ಲಕ್ಷ ರೂ.ಗಳ ಹಣವನ್ನು ವಶಪಡಿಸಿಕೊಂಡಿದ್ದಲ್ಲದೇ ಅವರ ಮಾಹಿತಿಯ ಮೇಲೆ ಇತರೇ ಹಲವಾರು ಕಡೆ ಧಾಳಿ ನಡೆಸಿ. 96 ಎಂಡಿಎಂಎ ಮತ್ತು 180 ಎಲ್ಎಸ್ಡಿ ಬ್ಲಾಟ್ಗಳನ್ನು ಮುಟ್ಟುಗೋಲು… Read More ಮೋಹಕ ನಟ ನಟಿಯರೋ? ಮಾದಕ ವ್ಯಸನಿಗಳೋ?

ಹರಳೋ ಮರಳೋ?

ಅರೇ ಇದೇನಿದೂ ಅರವತ್ತಕ್ಕೆ ಅರಳೋ ಮರಳೋ ಎನ್ನುವುದನ್ನು ಕೇಳೀದ್ದೇವೆ. ಆದನ್ನು ತಪ್ಪಾಗಿ ಹರಳೋ ಮರಳೋ ಎನ್ನುವ ಶೀರ್ಷಿಕೆ ಕೊಟ್ಟಿದ್ದೀನಿ ಅಂತ ಯೋಚನೆ ಮಾಡ್ತಾ ಇದ್ದೀರಾ? ನಾನು ಆ ರೀತಿಯ ಶೀರ್ಷಿಕೆ ಕೊಡಲು ಇರುವ ಕಾರಣ ಏನು ಅಂತ ತಿಳಿದ್ರೇ, ಖಂಡಿತವಾಗಿಯೂ ಬೆಚ್ಚಿ ಬೀಳ್ತೀರಿ. ಕಳೆದ ಎರಡು ಮೂರು ದಿನಗಳಿಂದ ವಾಟ್ಸಾಪ್ ವಿವಿದ ಗುಂಪಪುಗಳಲ್ಲಿ ಗಾಜಿನ ಸೋಡಾ ಬಾಟಲಿನಿಂದ ಪಚ್ಚೆ ಹರಳನ್ನು ಮಾಡುವ ವಿಡೀಯೋ ಹರಿದಾಡುತ್ತಿದೆ. ಯಾವುದೋ ಹಸಿರು ಬಣ್ಣದ ಬಾಟಲ್ಲನ್ನು ಸುತ್ತಿಗೆಯಿಂದ ಹೊಡೆದು, ಒಡೆದು ಅದರ ತಳ… Read More ಹರಳೋ ಮರಳೋ?

ಮಾತೃ-ಧರ್ಮ

ತಲಕಾವೇರಿಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ತಿಂಗಳ ಆರಂಭದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತವುಂಟಾಗಿ, ತಲಕಾವೇರಿಯ ಪ್ರಧಾನ ಅರ್ಚಕರಾದ ಶ್ರೀ ನಾರಾಯಣಾಚಾರ್  ಅವರ ಧರ್ಮ ಪತ್ನಿ ಮತ್ತು ಅವರ ಸಹೋದರ ಮತ್ತು ಅವರ ನೆರೆಹೊರೆಯವರು  ಆ.5ರಂದು  ಭೂಕುಸಿತದಲ್ಲಿ ‌ ಮೃತಪಟ್ಟ ವಿಷಯ ಎಲ್ಲರಿಗೂ ತಿಳಿದ ವಿಷಯವಾಗಿದ್ದು ಆ ಕುರಿತಂತೆ ಲೇಖನವನ್ನೂ ಬರೆದಿದ್ದೆ. ಪೋಷಕರ ಮತ್ತು ಸಂಬಂಧೀಕರ ಅಕಾಲಿಕ ಮರಣದ ಸುದ್ದಿ ಕೇಳಿ ದೂರದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿನಲ್ಲಿ ಇದ್ದ ನಾರಾಯಣಾಚಾರ್ ಅವರ ಪುತ್ರಿಯರಾದ ಶಾರದಾ ಅಚಾರ್ ಮತ್ತು ನಮಿತಾ… Read More ಮಾತೃ-ಧರ್ಮ

ಕೋತ್ಮೀರೀ ಕವಿರಾಜ

ಕೆಲ ವರ್ಷಗಳ ಹಿಂದೆ ಶೇಷಾದ್ರೀಪುರಂ ಮಲ್ಲಿಗೆ ಆಸ್ಪತ್ರೆಯ ಬಳಿ ಕನ್ನಡ ಚಿತ್ರರಂಗದಲ್ಲಿ ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ ಕವಿರಾಜ್ ಮತ್ತು ತಿಭುವನ್ ಮಾಸ್ತರ್ ಇಬ್ಬರೂ ನಮ್ಮ ಮುಂದೆ ನಡೆದುಕೊಂಡು ಬರುತ್ತಿದ್ದರು. ಅರೇ, ಇವರನ್ನು ಎಲ್ಲೋ ನೋಡಿದ ಹಾಗಿದೆಯಲ್ಲಾ ಎಂದು ಒಂದು ಕ್ಷಣ ಯೋಚಿಸುತ್ತಿದ್ದಂತೆಯೇ, ಅವರಿಬ್ಬರೂ ನಮ್ಮ ಮುಂದೆಯೇ ಬಂದಾಗ ಪರಿಚಯಸ್ಥರ ಹಾಗೆ ಒಂದು ನಗೆ ಚೆಲ್ಲಿದೆ. ಅದಕ್ಕೆ ಪ್ರತ್ಯುತ್ತರವಾಗಿ ಅವರೂ ಸಹಾ ನಕ್ಕಾಗಲೇ ಅವರು ಕವಿರಾಜ್ ಎಂದು ನೆನಪಿಗೆ ಬಂದು, ನಮಸ್ಕಾರ. ಹೇಗಿದ್ದೀರೀ? ಎಂದಾಗಾ, ಅವರಿಬ್ಬರೂ ತಕ್ಷಣವೇ ನಿಂತು… Read More ಕೋತ್ಮೀರೀ ಕವಿರಾಜ

ಪೈಲೆಟ್ ದೀಪಕ್ ಸಾಠೆ

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರ ಪ್ರಾರಂಭಿಸಿದ ವಂದೇ ಭಾರತ್ ವಿಮಾನ ಕಾರ್ಯಾಚರಣೆಯ ಭಾಗವಾಗಿ ಅರಬ್ ರಾಷ್ಟ್ರದಿಂದ ಪ್ರಯಾಣಿಕರನ್ನು ಭಾರತಕ್ಕೆ ಕರೆತರುತ್ತಿದ್ದ ಸಂದರ್ಭದಲ್ಲಿ ಮೊನ್ನೆ ಶುಕ್ರವಾರ, 7.8.2010 ರಂದು ಕೋಯಿಕ್ಕೋಡ್ ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ಪೈಲೆಟ್, ತಮ್ಮ ಪ್ರಾಣವನ್ನು ತೆತ್ತು ಭಾರೀ ಪ್ರಾಣಹಾನಿಯನ್ನು ತಪ್ಪಿಸಿದ ವೀರ ಸೇನಾನಿ. Once a Soldier Always a Soldier ಎನ್ನುವ ಮಾತಿನಂತೆ ಒಬ್ಬ ಸೈನಿಕನು ತನ್ನ… Read More ಪೈಲೆಟ್ ದೀಪಕ್ ಸಾಠೆ

ಪ್ರಕೃತಿ ವಿಕೋಪ

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ನಿರ್ಮಿಸಲು ನೆರವೇರಿದ ಶಿಲಾನ್ಯಾಸದಲ್ಲಿ ದೇಶದ ಎಲ್ಲಾ ಭಾಗಗಳ ನದಿಗಳ ನೀರು ಮತ್ತು ಪುಣ್ಯಕ್ಷೇತ್ರಗಳ ಮೃತ್ತಿಕೆಯನ್ನು ಬಳೆಸಲಾಗಿತ್ತು. ಅಂತಹ ಪುಣ್ಯಕಾರ್ಯಕ್ಕೆ ಕನ್ನಡಿಗರ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಿಂದಲೂ ಜುಲೈ 23ರಂದು ಕಾವೇರಿ ತೀರ್ಥ ಹಾಗೂ ಮೃತ್ತಿಯನ್ನು ಕಳುಹಿಸಿ, ಮನೆಯಿಂದಲೇ ರಾಮಮಂದಿರದ ಶಿಲಾನ್ಯಸ ನೋಡಿ ಸಂಭ್ರಮಿಸಿದ್ದ ತಲಕಾವೇರಿಯ ಪ್ರಧಾನ ಅರ್ಚಕರಾದ ಟಿ.ಎಸ್. ನಾರಾಯಣಾಚಾರ್ ಸೇರಿದಂತೆ ಅವರ ಹಿರಿಯ ಸೋದರ, ಪತ್ನಿ ಹಾಗೂ ಇಬ್ಬರು ಸಹಾಯಕ ಅರ್ಚಕರು ಮತ್ತು ಅವರ… Read More ಪ್ರಕೃತಿ ವಿಕೋಪ

ಶ್ರೀ ರಾಮ ಜನ್ಮಭೂಮಿ ನಡೆದು ಬಂದ ಹಾದಿ

ನಮ್ಮ ದೇಶದ ಯಾವುದೇ ಪ್ರದೇಶಕ್ಕೆ ಹೋಗಿ ಯಾರನ್ನಾದರೂ ನಿಮ್ಮ ಹೆಸರೇನು? ನಿಮ್ಮ ತಂದೆಯ ಹೆಸರೇನು? ನಿಮ್ಮ ತಾತನ ಹೆಸರೇನು? ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಮುತ್ತಾತನ ಹೆಸರೇನು? ಎಂದು ಕೇಳ ಬಹುದು ಅದಕ್ಕಿಂತ ಹೆಚ್ಚಿನದ್ದೇನೂ ಅವರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅದೇ ರಾಮನ ಬಗ್ಗೆ ಕೇಳಿ ಆತ ಥಟ್ ಅಂತಾ,‌ ಪ್ರಭು ಶ್ರೀ ರಾಮಾ, ವಿಷ್ಣುವಿನ ದಶಾವತಾರದಲ್ಲಿ ಏಳನೇ ಅವತಾರ. ದಶರಥನಿಗೆ ಮೂರು ಜನ ಆಧಿಕೃತವಾದ ರಾಣಿಯರಿದ್ದರೂ ಮಕ್ಕಳಾಗದಿದ್ದಾಗ ಪುತ್ರಕಾಮೇಷ್ಟಿ ಯಾಗದ ಫಲವಾಗಿ ಜನಿಸಿದ ನಾಲ್ಕು… Read More ಶ್ರೀ ರಾಮ ಜನ್ಮಭೂಮಿ ನಡೆದು ಬಂದ ಹಾದಿ