ವಿಕ್ರಮ ವಾರಪತ್ರಿಕೆಯಲ್ಲಿ ರಾಜಶೇಖರ್ (ರಾಜಾ) ಸ್ಮರಣೆ

ನನ್ನನ್ನು ವಯಕ್ತಿಕವಾಗಿ ಬಾಲ್ಯದಿಂದಲೂ ಬಲ್ಲ ಮತ್ತು ನನ್ನ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಾ ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದ ಶ್ರೀ ರಾಜಶೇಖರ್ ಅರ್ಥಾತ್ ಲಂಬೂರಾಜ, ಬೋರ್ವೆಲ್ ರಾಜಾ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅಕಾಲಿಕವಾಗಿ ನಮ್ಮೆನ್ನೆಲ್ಲಾ ಅಗಲಿದಾಗ ಅವರ ಕುರಿತಂತೆ ಆಧುನಿಕ ಭಗೀರಥ ರಾಜಶೇಖರ್ (ರಾಜ) https://enantheeri.com/2020/10/28/borewell_raja/ಎಂಬ ಲೇಖನವನ್ನು ಬರೆದಿದ್ದೆ. ಆ ಲೇಖನ ಒಂದು ರೀತಿಯ ವೈರಲ್ ಆಗಿ ಸಾವಿರಾರು ಜನರು ಓದಿದ್ದಲ್ಲದೇ ಖುದ್ದಾಗಿ ನನಗೆ ಕರೆ ಮಾಡಿ ರಾಜನ ಅಕಾಲಿಕ ಮರಣಕ್ಕೆ ದುಖಃವನ್ನು ವ್ಯಕ್ತಪಡಿಸಿ, ರಾಜನ ವ್ಯಕ್ತಿತ್ವದ ಕುರಿತಾಗಿ ಬರೆದ… Read More ವಿಕ್ರಮ ವಾರಪತ್ರಿಕೆಯಲ್ಲಿ ರಾಜಶೇಖರ್ (ರಾಜಾ) ಸ್ಮರಣೆ

ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?

ಕುಡಿಯಲು ನೀರು ಕೇಳಿದರೆ, ನೀರಿನ ಜೊತೆ ಬೆಲ್ಲವನ್ನೂ ಕೊಡುವಷ್ಟು ವಿಶಾಲ ಹೃದಯವವರು ಕನ್ನಡಿಗರು ಎಂಬ ಮಾತಿಗೆ ಅನ್ವಯವಾಗುವಂತಹ ರೋಚಕವಾದ ಪ್ರಸಂಗ ಇದೋ ನಿಮಗಾಗಿ… Read More ಇನ್ನೂ ಸ್ವಲ್ಪ ಕುಡಿಯೋದಿಕ್ಕೆ ನೀರು ಕೊಡ್ತೀರಾ?

2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ

ಭಾರತ ತಂಡದ ಆಟಗಾರರು ಸುಮಾರು ಆರೆಂಟು ತಿಂಗಳುಗಳ ಕಾಲ ಕರೋನಾ ಪ್ರಭಾವದಿಂದಾಗಿ ಯಾವುದೇ ಕ್ರಿಕೆಟ್ ಆಟವಾಡದೇ, ಎಲ್ಲರೂ ನೇರವಾಗಿ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ಮೂಲಕ ಮೈ ಕೈ ಸಡಿಲಗೊಳಿಸಿದರು. ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಕ್ಕೆ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಪ್ರಯಾಣಿಸಿ, ೧೪ ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಸಿಡ್ನಿಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ 66 ರನ್ ಗಳ ಹೀನಾಯ ಸೋಲನ್ನು ಕಂಡಾಗ, ಭಾರತದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಇನ್ನೂ ಎರಡು ಪಂಡ್ಯಗಳು ಇದೆಯಲ್ಲಾ!… Read More 2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ

ಇತರರಿಗೆ ಗಾಡಿ ಕೊಡುವ ಮುನ್ನಾ ಜೋಕೆ

ಸುರೇಶ್ ಮಧ್ಯಮ ವರ್ಗದ ಉತ್ಸಾಹೀ ತರುಣ. ಬಹಳ ಕಷ್ಟ ಪಟ್ಟು ಓದಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನೂ ಪಡೆದು ಪೀಣ್ಯಾದ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಮನೆಯಿಂದ ಕಛೇರಿಗೆ ಹೋಗಿ ಬರಲು ಒಂದು ಮುದ್ದಾದ ಬೈಕ್ ಒಂದನ್ನು ಕಂತಿನಲ್ಲಿ ಖರೀದಿಸಿ ಬಹಳ ಜತನದಿಂದ ಬೈಕನ್ನು ನೋಡಿಕೊಳ್ಳುತ್ತಿದ್ದ. ಅದೊಂದು ದಿನ ಬೆಳ್ಳಂಬೆಳಿಗ್ಗೆ ಕಛೇರಿ ತಲುಪಲು ಇನ್ನೇನು ಸ್ವಲ್ಪ ದೂರವಿದೆ ಎನ್ನುವಷ್ಟರಲ್ಲಿ ಆತನ ಬೈಕ್ ಪಂಚರ್ ಆಗಿತ್ತು. ಸುತ್ತ ಮುತ್ತಲೆಲ್ಲಾ ಕಣ್ಣಾಡಿಸಿದರೂ ಎಲ್ಲೂ ಪಂಚರ್ ಹಾಕುವ ಅಂಗಡಿ ಕಾಣಿಸದಿದ್ದ… Read More ಇತರರಿಗೆ ಗಾಡಿ ಕೊಡುವ ಮುನ್ನಾ ಜೋಕೆ

ವಂಶವಾಹಿ ಸಂಸ್ಕಾರ (ಜೀನ್ಸ್)

ಮನೆಯಲ್ಲಿರುವ ಚಿಕ್ಕ ಮಕ್ಕಳು ಮನೆಯಲ್ಲಿರುವ ಅಜ್ಜಿ ತಾತ, ಅಪ್ಪಾ ಅಮ್ಮಾ ಅಣ್ಣ ಅಕ್ಕಾ ಅವರನ್ನು ನೋಡಿಯೇ ಕಲಿತುಕೊಳ್ಳುತ್ತಾರೆ. ಹಾಗಾಗಿಯೇ ಚಿಕ್ಕ ಮಕ್ಕಳ ಮುಂದೆ ಸದಾ ಕಾಲವೂ ಸಾಧ್ಯವಾದಷ್ಟೂ ಒಳ್ಳೆಯ ಸಂಸ್ಕಾರವಂತರಾಗಿಯೇ ವ್ಯವಹರಿಸುವುದನ್ನು ಎಲ್ಲೆಡೆಯಲ್ಲಿಯೂ ನೋಡಬಹುದಾಗಿದೆ. ಚಿಕ್ಕ ಮಕ್ಕಳೂ ತಮಗೇ ಅರಿವಿಲ್ಲದಂತೆಯೇ ಮನೆಯಲ್ಲಿರುವ ದೊಡ್ಡವರ ಸ್ವಭಾವವನ್ನು ಯಥವತ್ತಾಗಿ ಅಳವಡಿಸಿಕೊಂಡಿರುತ್ತಾರೆ. ಅಂತಹದೇ ಒಂದು ಸುಂದರ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ. ಹೇಳಿ ಕೇಳಿ ನಮ್ಮದು ಸಂಪ್ರದಾಯಸ್ಥ ಕುಟುಂಬ. ಕಲೆ, ಸಂಗೀತ ಮತ್ತು ಸಾಹಿತ್ಯ ಎನ್ನುವುದು ನಮ್ಮ ಕುಟುಂಬದಲ್ಲಿ ಹಾಸು ಹೊಕ್ಕಾಗಿದೆ.… Read More ವಂಶವಾಹಿ ಸಂಸ್ಕಾರ (ಜೀನ್ಸ್)

ಅವರೇಕಾಳು ಉಪ್ಪಿಟ್ಟು

ಹೇಳೀ ಕೇಳಿ ಇದು ಮಾಗಿಯ ಕಾಲ. ಬೆಳ್ಳಂಬೆಳಿಗ್ಗೆ ಮಂಜಿನ ವಾತಾವರಣವಿದ್ದು ಚೆನ್ನಾಗಿ ಇಬ್ಬನಿ ಬೀಳುತ್ತಿರುತ್ತದೆ. ಅಂತಹ ಇಬ್ಬನಿಯನ್ನೇ ಹೀರಿಕೊಂಡು ಚೆನ್ನಾಗಿ ಬೆಳೆದ ಘಮ್ಮನೆಯ ಸೊಗಡಿನ ಮಣಿ ಮಣಿ ಅವರೇಕಾಳು ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ. ಅಂತಹ ಅವರೇಕಾಳಿನ ಘಮ್ಮತ್ತಾದ ಉಪ್ಪಿಟ್ಟು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಅವರೇಕಾಳು ಉಪ್ಪಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು ಉಪ್ಪಿಟ್ಟು ರವೆ – 1/2 ಕಪ್ ಅವರೇಕಾಳು – 1/2 ಕಪ್ ಸಾಸಿವೆ – 1/2… Read More ಅವರೇಕಾಳು ಉಪ್ಪಿಟ್ಟು

ಗೌತಮ ಕ್ಷೇತ್ರ ಗವಿ ಗಂಗಾಧರೇಶ್ವರ ದೇವಾಲಯ

ಬೆಂಗಳೂರು ಉದ್ಯಾನ ನಗರಿ ಎಂದು ಹೇಗೆ ಪ್ರಖ್ಯಾತವಾಗಿದೆಯೇ, ಅದೇ ರೀತಿ ಧಾರ್ಮಿಕವಾಗಿ ದೇವಲಯಗಳ ನಗರೀ ಎಂದರೂ ಅತಿಶಯೋಕ್ತಿಯೇನಲ್ಲ. ಬೆಂಗಳೂರಿನ ಪ್ರತೀ ಬಡಾವಣೆಗಳ್ಲಿಯೂ ಕನಿಷ್ಠಪಕ್ಷ ಎರಡು ದೇವಾಲಯಗಳನ್ನು ಕಾಣ ಬಹುದಾಗಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ವಿಖ್ಯಾತವಾಗಿ ಎಷ್ಟೇ ಮುಂದುವರೆದಿದೆಯೋ, ಈ ದೇವಾಲಯಗಳಲ್ಲಿನ ಧಾರ್ಮಿಕ ಚಟುವಟಿಗೆಗಳ ಮೂಲಕ ಅಷ್ಟೇ ಲೋಕಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಬಸವನಗುಡಿಯ ಪಕ್ಕದ ಕೆಂಪೇಗೌಡನಗರ ಅರ್ಥಾಥ್ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಭಾರತದಲ್ಲಿರುವ ಅತ್ಯಂತ ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದಾಗಿದೆ. ಸಾವಿರಾರು ವರ್ಷಗಳ ಐತಿಹ್ಯವಿರುವ… Read More ಗೌತಮ ಕ್ಷೇತ್ರ ಗವಿ ಗಂಗಾಧರೇಶ್ವರ ದೇವಾಲಯ

ಸ್ವಾಮಿ ಹರ್ಷಾನಂದರು

ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ 3 ನೇ ರ‌್ಯಾಂಕ್ ಮತ್ತು ಹನ್ನೆರಡನೇ ತರಗತಿಯಲ್ಲಿ ರಾಜ್ಯಕ್ಕೆ 5 ನೇ ರ‌್ಯಾಂಕ್ ಪಡೆದ ನಂತರ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗಿನಲ್ಲಿ ಚಿನ್ನದ ಪದಕದೊಂದಿಗೆ ಮೊದಲನೇ ರ‌್ಯಾಂಕ್ ಗಳಿಸಿ ಕೈತುಂಬ ಸಂಬಳ ತರುವ ಹೆಚ್.ಎ.ಎಲ್ ಕಾರ್ಖಾನೆಯನ್ನು ಸೇರಿದ ಎರಡೇ ವಾರಗಳಲ್ಲಿ ಎಲ್ಲವನ್ನೂ ತ್ಯಜಿಸಿ, ಉಟ್ಟ ಬಟ್ಟೆಯಲ್ಲಿಯೇ ರಾಮಕೃಷ್ಣ ಆಶ್ರಮ ಸೇರಿ, ಕಾವಿ ನಿಲುವಂಗಿಯನ್ನು ಧರಿಸಿ ಧೀರ ಸನ್ಯಾಸಿಗಳಾಗಿ ನಂತರ ಸ್ವಾಮಿ ಹರ್ಷಾನಂದರಾಗಿ ದೇಶಾದ್ಯಂತ ರಾಮಕೃಷ್ಣ ಆಶ್ರಮದ ವಿವಿಧ ಶಾಖೆಗಳಲ್ಲಿ… Read More ಸ್ವಾಮಿ ಹರ್ಷಾನಂದರು

ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಂಸ್ಮರಣೆ

ಈ ದೇಶ ಕಂಡ ಅತ್ಯುತ್ತಮ ದೇಶಭಕ್ತ, ಅತ್ಯಂತ ಧೈರ್ಯಶಾಲಿ ಪ್ರಧಾನಿಗಳು, ಸರಳ ಮತ್ತು ಸಜ್ಜನ ರಾಜಕಾರಣಿ ಶ್ರೀ ಲಾಲ ಬಹದ್ದೂರ್ ಶಾಸ್ತ್ರಿಗಳು ಎಂದರೆ ಅತಿಶಯೋಕಿಯೇನಲ್ಲ. ಸ್ವಾತಂತ್ರ್ಯಾ ನಂತರ ದೇಶದ ಪ್ರಥಮ ಪ್ರಧಾನ ಮಂತ್ರಿಗಳಾಗಿದ್ದ ಶ್ರೀ ಜವಹರಲಾಲ್ ನೆಹರೂ ಅವರ ಹಠಾತ್ ನಿಧನದಾದಾಗ ದೇಶವನ್ನು ಎರಡನೇ ಪ್ರಧಾನಮಂತ್ರಿಗಳಾಗಿ ಮುನ್ನಡೆಸಿದವರೇ ಶ್ರೀಯುತರಾದ ಲಾಲ್ ಬಹದ್ದೂರ್ ಶಾಸ್ತ್ರಿಗಳು. ಆಕಾರದಲ್ಲಿ ವಾಮನರೂಪಿಯಾಗಿ ಕೃಶಕಾಯದ ಶಾಸ್ತ್ರಿಗಳು ಇಷ್ಟು ದೊಡ್ಡ ದೇಶವನ್ನು ಹೇಗೆ ಮುನ್ನಡೆಸಬಲ್ಲರು ಎಂದು ಎಲ್ಲರೂ ಯೋಚಿಸುತ್ತಿದ್ದರೇ, ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಡುವಂತೆ… Read More ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಂಸ್ಮರಣೆ