ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಬೆಂಗಳೂರಿನ ಎಂ.ಜಿ. ರಸ್ತೆಯ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ಅಪ್ಪಟ ದಕ್ಷಿಣ ಭಾರತೀಯ ಆಹಾರಗಳ ಜೊತೆಗೆ ರುಚಿಕರವಾದ ಊಟವನ್ನು ಜನಸಾಮಾನ್ಯರಿಗೂ ಕೈ ಗೆಟುಕುವ ಬೆಲೆಯಲ್ಲಿ ಉಣಬಡಿಸುತ್ತಿದ್ದಂತಹ ಗತ ವೈಭವದ ಬೃಂದಾವನ್ ಹೋಟೆಲ್ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೆಂಗಳೂರಿನ ಎಂ ಜಿ ರಸ್ತೆಯ ಬೃಂದಾವನ್ ಹೋಟೆಲ್

ಗಾನ ಗಾರುಡಿಗ, ಎಸ್ ಪಿ ಬಾಲಸುಬ್ರಹ್ಮಣ್ಯಂ

ಶ್ರೀಪತಿ ಪಂಡಿತರಾದ್ಯುಲು ಬಾಲಸುಬ್ರಹ್ಮಣ್ಯಂ  ಎಲ್ಲರ ಪ್ರೀತಿಯ ಎಸ್ಪಿಬಿ, ಇನ್ನೂ ಅನೇಕರಿಗೆ ಬಾಲೂ  ಅವರನ್ನು ಹೇಗೆ ಪರಿಚಯಿಸ ಬೇಕು ಎಂಬುದೇ ಬಹಳ ಕಷ್ಟಕರವಾದ ವಿಷಯ. ಗಾಯಕ, ನಟ, ಸಂಗೀತ ನಿರ್ದೇಶಕ, ಕಂಠದಾನ ಕಲಾವಿದ, ಮಿಮಿಕ್ರಿ ಕಲಾವಿದ, ಸೃಜನಶೀಲವ್ಯಕ್ತಿ, ಅನೇಕ ಹೊಸಾ ಪ್ರತಿಭೆಗಳಿಗೆ ಮಾರ್ಗದರ್ಶಿ ಹೀಗೆ ಹತ್ತು ಹಲವಾರು ವ್ಯಕ್ತಿತ್ವವನ್ನು ಹೊಂದಿದ್ದರು ಎಂದರೂ ತಪ್ಪಾಗಲಾರದು. ಸ್ವಾತಂತ್ರ್ಯ ಪೂರ್ವ ಮದ್ರಾಸ್ ರೆಸೆಡೆನ್ಸಿ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಖ್ಯಾತ ಹರಿಕಥಾ ವಿದ್ವಾಸಂರಾಗಿದ್ದ ಶ್ರೀ  ಸಾಂಬಮೂರ್ತಿಗಳು ಮತ್ತು ಶಕುಂತಲಮ್ಮ ದಂಪತಿಗಳ… Read More ಗಾನ ಗಾರುಡಿಗ, ಎಸ್ ಪಿ ಬಾಲಸುಬ್ರಹ್ಮಣ್ಯಂ

ಥೈಲ್ಯಾಂಡ್ ಕ್ರಾಬಿ ಟೈಗರ್ ಗುಹೆ (ವಾಟ್ ಥಾಮ್ ಸುವಾ)

ಹೇಳಿ ಕೇಳಿ ಥೈಲ್ಯಾಂಡ್ ದೈವದತ್ತವಾದ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ದೇಶ ಎಂದರೂ ತಪ್ಪಾಗಲಾರದು. ಭಗವಂತ ಬಹಳ ಸಮಯ ಮಾಡಿಕೊಂಡು ಒಂದೊಂದು ದ್ವೀಪಗಳನ್ನು ಸೃಷ್ಟಿ ಮಾಡಿದಂತಿದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ದಕ್ಷಿಣಕ್ಕೆ ಸುಮಾರು ರಸ್ತೆಯ ಮೂಲಕ ಕ್ರಮಿಸಿದರೆ 783 ಕಿ.ಮೀ ದೂರದಲ್ಲಿರುವ ವಿಮಾನದಲ್ಲಿ ಸುಮಾರು ಒಂದು ಘಂಟೆಯಲ್ಲಿ ತಲುಪಬಹುದಾದ ಅತ್ಯಂತ ರಮಣೀಯ ದ್ವೀಪವಾದ ಕ್ರಾಬಿ ನದಿಯ ಮತ್ತು ಸಮುದ್ರದ ತಟದಲ್ಲಿರುವ ಕ್ರಾಬಿ (ಥೆಸಾಬನ್ ಮುವಾಂಗ್) ದ್ಚೀಪವನ್ನು ಸ್ವಲ್ಪ ಸುತ್ತಿ ಹಾಕಿ ಬರೋಣ. ಸುಮಾರು 60-70 ಸಾವಿರ ಜನಸಂಖ್ಯೆ ಇರುವ… Read More ಥೈಲ್ಯಾಂಡ್ ಕ್ರಾಬಿ ಟೈಗರ್ ಗುಹೆ (ವಾಟ್ ಥಾಮ್ ಸುವಾ)

ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರಾಷ್ಟ್ರಕವಿ ಶ್ರೀ ರವೀಂದ್ರ ನಾಥ್ ಟ್ಯಾಗೋರ್ ಅವರು ದೇಶದ ಸ್ತುತಿಗಾಗಿ ಬರೆದಿದ್ದದ್ದಲ್ಲ ಬದಲಾಗಿ ಐದನೆಯ ಬ್ರಿಟಿಷ್ ರಾಜ ಜಾರ್ಜ್ ಅವರನ್ನು ಹೊಗಳುವುದಕ್ಕಾಗಿ ಬರೆದ್ದದ್ದು ಎಂಬ ವಿವಾದ ಮೊದಲಿನಿಂದಲೂ ಇತ್ತು. ಈಗಲೂ ಇದೆ ಮತ್ತು ಮುಂದೆಯೂ ಇದ್ದೇಿ ಇರುತ್ತದೆ. ಕನ್ನಡಿಗರಿಗೆ ಮೂಲ ಗೀತೆಯನ್ನು ಕೇಳಿದಾಗ ಅಷ್ಟೊಂದು ಸರಿಯಾಗಿ ಅರ್ಥವಾಗದಿದ್ದದ್ದು ಈಗ ಕನ್ನಡದಲ್ಲಿಯೇ ಅದರ ಭಾವಾನುವಾದವನ್ನು ಕೇಳಿದಾಗ ಅಂದಿನ ವಿವಾದದಲ್ಲಿ ಬಹಳಷ್ಟು ತಿರುಳಿದೆ ಎಂಬುದು ಬಹಳ ಸ್ಪಷ್ಟವಾಗಿ ತಿಳಿದುಬರುತ್ತಿದೆ.   ಸಾಮಾನ್ಯವಾಗಿ ನಾವು ಭೂಮಿಯನ್ನು… Read More ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

ಛಲದಂಕ ಮಲ್ಲ ಕೆ. ವೈ. ವೆಂಕಟೇಶ್

ಚಿಕ್ಕಂದಿನಲ್ಲಿಯೇ, ಖಾಯಿಲೆಯಿಂದಾಗಿ ಕೇವಲ 4.2″ ಎತ್ತರ ಬೆಳೆದಾಗ ಸುತ್ತಮುತ್ತಲಿನವರೆಲ್ಲರೂ ಕುಳ್ಳಾ ಕುಳ್ಳಾ ಎಂದು ಆಡಿಕೊಂಡಾಗ, ತನ್ನ ಅಂಗವೈಕುಲ್ಯವನ್ನೇ ಮೆಟ್ಟಿ ನಿಂತು. ನಾನು ಎತ್ತರವಾಗಿಲ್ಲದಿದ್ದರೆ ಏನಂತೇ? ನನ್ನ ಶಕ್ತಿ ಮತ್ತು ಸಾಮರ್ಥ್ಯದಿಂದ ಭಾರತದ ತ್ರಿವರ್ಣಧ್ವಜವನ್ನು ಭಾನೆತ್ತರಕ್ಕೆ ಹಾರಿಸುತ್ತೇನೆ ಎಂಬ ಛಲದಿಂದ ಪ್ಯಾರಾ ಓಲಂಪಿಕ್ಸ್ ನಲ್ಲಿ ಭಾರತ ಗೌರವವನ್ನು ಎತ್ತಿ ಹಿಡಿದ ಕೆ. ವೈ. ವೆಂಕಟೇಶ್ ಅವರ ಸಾಧನೆಯನ್ನು ಗುರುತಿಸಿ ಕೇಂದ್ರಸರ್ಕಾರ 2020ರ ಸಾಲಿನ ಪದ್ಮಶ್ರಿ ಪ್ರಶಸ್ತಿಗೆ ಆಯ್ಕೆಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಂತಹ ಹೆಮ್ಮೆ ಸಾಧಕನ ಯಶೋಗಾಥೆಯನ್ನು ನಮ್ಮ ಕನ್ನಡದ… Read More ಛಲದಂಕ ಮಲ್ಲ ಕೆ. ವೈ. ವೆಂಕಟೇಶ್

ರೈತರ ಟ್ರಾಕ್ಟರ್ ಪೆರೇಡ್

ಕಳೆದ ಎರಡು ವರ್ಷಗಳಿಂದ ವಿದ್ಯಾರಣ್ಯಪುರದಲ್ಲಿ ಸ್ವದೇಶೀ ಜಾಗರಣ ಮಂಚ್ ಆಶ್ರಯದಲ್ಲಿ ಸಾವಯವ ಸಂತೆಯನ್ನು ನಡೆಸಿಕೊಂಡು ಹೋಗುವ ಸೌಭ್ಯಾಗ್ಯ ವಯಕ್ತಿಕವಾಗಿ ನನಗೆ ಲಭಿಸಿದೆ. ಸಾವಯವ ಕೃಷಿಯಾಧಾರಿತವಾಗಿ ಬೆಳೆದ ಬಗೆಬೆಗೆಯ ತರಕಾರಿಗಳು, ಸೊಪ್ಪುಗಳು ಮತ್ತು ಹಣ್ಣುಗಳನ್ನು ರೈತರೇ ಯಾವುದೇ ಮಧ್ಯವರ್ತಿಗಳ ನೆರವೆಲ್ಲದೇ ನೇರವಾಗಿ ಗ್ರಾಹಕರುಗಳಿಗೆ ಮಾರಾಟ ಮಾಡುವ ವೇದಿಕೆಯನ್ನು ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರು ತಾಜಾ ತಾಜ ಮತ್ತು ನಿಜವಾಗಿಯೂ ಸಾವಯವವಾಗಿ ಬೆಳೆದದ ಕೃಷಿ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸುವ ಮೂಲಕ ರೈತರಿಗೆ ಅಧಿಕ ಲಾಭಗಳಿಸಲು ಸಹಾಯ ಮಾಡುತ್ತಿದ್ದಾರೆ. ರೈತರು, ಈ… Read More ರೈತರ ಟ್ರಾಕ್ಟರ್ ಪೆರೇಡ್

ಕೈ ತುತ್ತು

ಕೈ ತುತ್ತು ಎನ್ನುವ ಪದ ಕೇಳಿದ ತಕ್ಷಣ ಥಟ್ ಅಂತಾ ನಮಗೇ ಗೊತ್ತಿಲ್ಲದ ಹಾಗೆ ಹಂಸಲೇಖ ಮತ್ತು ಪ್ರಭಾಕರ್ ಅವರ ಜೋಡಿ ನೀಡಿದ ಅತ್ಯುತ್ತಮ ಹಾಡುಗಳಲ್ಲಿ ಒಂದಾದ ಕೈ ತುತ್ತು ಕೊಟ್ಟೋಳು ಐ ಲವ್ ಯೂ ಎಂದಳೋ ಮೈ ಮದರ್ ಇಂಡಿಯಾ ಎನ್ನುವ ಹಾಡನ್ನು ನಮ್ಮ ಮನಸ್ಸಿನ ಮುಂದೆ ಬಂದು ಆ ಹಾಡನು ಗುನುಗಲು ಆರಂಭಿಸುತ್ತೇವೆ. ಆದರೆ ನಿಜವಾಗಿಯೂ ಅಮ್ಮನ ಇಲ್ಲವೇ ಅಜ್ಜಿಯ ಕೈ ತುತ್ತಿನ ರುಚಿಯನ್ನು ಬಲ್ಲವರೇ ಬಲ್ಲ ಅದರ ಸವಿಯನ್ನು. ಹಾಗಾಗಿ ಅಂತಹ ಅಪರೂಪದ… Read More ಕೈ ತುತ್ತು

ಪರಾಕ್ರಮ ದಿನ

ಇವತ್ತು ಜನವರಿ 23, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟಿದ ದಿನ. ಸಾಧಾರಣವಾಗಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳುವವರು ಬದುಕಿದ್ದಲ್ಲಿ ಅವರ ಆಯಸ್ಸು ಇನ್ನಷ್ಟು ವೃದ್ದಿಯಾಗಲಿ ಎಂದು ವರ್ಧಂತಿ ಆ‍ಚರಿಸುತ್ತೇವೆ. ಅಕಸ್ಮಾತ್ ಆವರು ಮೃತಪಟ್ಟಿದ್ದಲ್ಲಿ ಜಯಂತಿಯನ್ನು ಆಚರಿಸುತ್ತೇವೆ. ಸುಭಾಷ್ ಚಂದ್ರ ಬೋಸ್ ಅವರ 126 ನೇ ಜನ್ಮದಿನದಂದು ಅದನ್ನು ವರ್ಧಂತಿ ಕರೆಯಬೇಕೋ ಇಲ್ಲವೇ ಜಯಂತಿ ಎಂದು ಹೇಳಬೇಕೋ ಎಂಬ ಜಿಜ್ಞಾಸೆ ಬಹಳ ವರ್ಷಗಳಿಂದಲೂ ನನಗೆ ಕಾಡುತ್ತಿತ್ತು. ಬಹುಶಃ ಇಂತಹ ಜಿಜ್ಞಾಸೆ ಹಲವಾರು ಜನರಿಗೆ ಕಾದಿರುವುದನ್ನು ಗಮನಿಸಿದ ಪ್ರಸಕ್ತ… Read More ಪರಾಕ್ರಮ ದಿನ

ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಅಭಿಯಾನ

ನಾವೆಲ್ಲರೂ ಕೇಳಿ, ಓದಿ, ನೋಡಿ ತಿಳಿದಿರುವಂತೆ ಅಯೊಧ್ಯೆ ಪ್ರಭು ಶ್ರೀರಾಮ ಚಂದ್ರನ ಜನ್ಮಸ್ಥಳ. ಆತ ತನ್ನ ಆದರ್ಶಗಳಿಂದಾಗ ಮರ್ಯಾದಾ ಪುರುಶೋತ್ತಮ ಎನಿಸಿಕೊಂಡಿದ್ದಲ್ಲದೇ, ಸಕಲ ಹಿಂದೂಗಳ ಆರಾಧ್ಯ ದೈವವಾಗಿ ಪ್ರತಿನಿತ್ಯವೂ ಪ್ರಪಂಚಾದ್ಯಂತ ಕೋಟ್ಯಾಂತರ ಮನ ಮತ್ತು ಮನೆಗಳಲ್ಲಿ ಪೂಜೆಗೆ ಪಾತ್ರರಾಗುತ್ತಿದ್ದಾನೆ. ವಾಲ್ಮೀಕಿ ವಿರಚಿತ ರಾಮಯಣ ಪ್ರಪಂಚದ ಅತ್ಯಂತ ಪುರಾತನ ಗ್ರಂಥವಾಗಿದ್ದು ಇಂದಿಗೂ ಅನೇಕ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ ಪ್ರಪಂಚಾದ್ಯಂತ ಹಲವಾರು ದೇಶಗಳಲ್ಲಿ ಪ್ರಭು ಶ್ರೀರಾಮ ಆಡಳಿತಾತ್ಮಕವಾಗಿ ಆದರ್ಶ ಪುರುಷನಾಗಿ ಆರಾಧಿಸುತ್ತಾರೆ. ಇಂತಹ ಪ್ರಭು ಶ್ರೀರಾಮನ ಮಂದಿರ ಕೆಲವು ಮತಾಂಧರ… Read More ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಅಭಿಯಾನ