ಹರಿಕಥಾ ಸಾಮ್ರಾಟ ಗಮಕಿ ಬಾಳಗಂಚಿ ನಂಜುಂಡಯ್ಯನವರು

ಅದೊಂದು ಕುಗ್ರಾಮ. ಹೆಸರಿಗಷ್ಟೇ ಅಗ್ರಹಾರ ಎಂದಿದ್ದರೂ, ಇದ್ದದ್ದು ಎಂಕ, ನಾಣಿ, ಸೀನ ಅಂತಾ ಹತ್ತಾರು ಸಂಪ್ರದಾಯಸ್ಥರ ಮನೆ. ಕೃಷಿ ಪ್ರಧಾನವಾಗಿದ್ದ ಆ ಊರಿನಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಸಾಹಿತ್ಯದ ಗಂಧವೇ ಇಲ್ಲದಿದ್ದರೂ ಜನಪದ ಸಾಹಿತ್ಯಕ್ಕೇನು ಕೊರತೆ ಇರಲಿಲ್ಲ. ಅಂತಹ ಊರಿನಲ್ಲೊಂದು ಅನರ್ಘ್ಯ ರತ್ನದಂತೆ, ತಾಯಿಯ ಕಡೆಯ ದೂರ ಸಂಬಧಿಯೊಬ್ಬರು ಮಾಡುತ್ತಿದ್ದ ಗಮಕ ವಾಚನದಿಂದ ಆಕರ್ಷಿತರಾಗಿ, ಮಹಾಭಾರತದ ಏಕಲವ್ಯನಂತೆ, ದೈವದತ್ತವಾದ ಶರೀರ ಮತ್ತು ಶಾರೀರದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹರಿಕಥೆ, ಗಮಕ ವಾಚನ, ವ್ಯಾಖ್ಯಾನವಲ್ಲದೇ, ನಾಟಕದ ಮಟ್ಟುಗಳು ಮತ್ತು… Read More ಹರಿಕಥಾ ಸಾಮ್ರಾಟ ಗಮಕಿ ಬಾಳಗಂಚಿ ನಂಜುಂಡಯ್ಯನವರು

ಕನ್ಯಾನ ಭಾರತ ಸೇವಾಶ್ರಮದ ಪರಶುರಾಮ

ಪಾಂಡವರ ತಾಯಿ ಕುಂತೀ ಮದುವೆಗೆ ಮುಂಚೆ, ಅವರ ತಂದೆಯ ಮನೆಯಲ್ಲಿದ್ದಾಗ ದೂರ್ವಾಸಮುನಿಗಳು ಬಂದಿದ್ದಾಗ ಅವರ ಆರೈಕೆಗಳಿಂದ ಸಂತೃಪ್ತರಾಗಿ ದೂರಲೋಚನೆಯಿಂದ ಮಕ್ಕಳಾಗುವ ಐದು ವರಗಳನ್ನು ಕೊಟ್ಟಾಗ, ಬಾಲಕಿ ಕುಂತೀದೇವಿ ಆ ವರಗಳನ್ನು ಪರೀಕ್ಷಿಸಿ ಸೂರ್ಯದೇವನ ವರದಿಂದ ಕರ್ಣನ ಜನವಾದಾಗ, ಮದುವೆಗೆ ಮುಂಚೆಯೇ ಮಗುವೇ ಎಂದು ಸಮಾಜಕ್ಕೆ ಅಂಜಿ ಆ ಮಗುವನ್ನು ಒಂದು ಬುಟ್ಟಿಯಲ್ಲಿಟ್ಟು ನದಿಯಲ್ಲಿ ತೇಲಿ ಬಿಟ್ಟು ನಂತರ ಆ ಮಗು ಅಗಸರಿಗೆ ಸಿಕ್ಕಿ ಬೆಳೆದು ದೊಡ್ಡವನಾದ ಕಥೆ ಎಲ್ಲರಿಗೂ ತಿಳಿದಿದೆ. ಅದೇ ರೀತಿ ಎಂಭತ್ತರ ದಶಕದಲ್ಲಿ ಮಂಗಳೂರಿನ… Read More ಕನ್ಯಾನ ಭಾರತ ಸೇವಾಶ್ರಮದ ಪರಶುರಾಮ

ಅಕ್ಷರಗಳ ಬ್ರಹ್ಮರಾಕ್ಷಸ ರವಿ ಬೆಳಗೆರೆ

ಅದು ಎಪ್ಪತ್ತರ ದಶಕ. ಬಳ್ಳಾರಿಯ ಸಂಪ್ರದಾಯಸ್ಥ ಮನೆತನದ ಚಿಗುರು ಮೀಸೆಯ ಚುರುಕು ಹುಡುಗನೊಬ್ಬ ಸಹವಾಸ ದೋಷದಿಂದ ಹಳಿಬಿಟ್ಟು ಶಾಲೆಗೆ ಸರಿಯಾಗಿ ಹೋಗದೇ ಪೋಲಿಯಾಗಿ ಅಲೆಯುತ್ತಿದ್ದಾಗ ಮತ್ತೆ ಅಮ್ಮನ ಪ್ರೋತ್ಸಾಹದ ಮೇರೆಗೆ ಅಮ್ಮಾ ಮಗ ಒಟ್ಟೊಟ್ಟಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಅಮ್ಮಾ ತೇರ್ಗಡೆಯಾದರೆ, ಮಗ ನಪಾಸ್. ಮತ್ತೆ ಛಲ ಬಿಡದ ತ್ರಿವಿಕ್ರಮನಂತೆ, ಪುನಃ ಪರೀಕ್ಷೇ ಬರೆದು ತೇರ್ಗಡೆ ಹೊಂದಿ, ತನ್ನೂರಿನಲ್ಲೇ ಪದವಿ ಪಡೆದು ನಂತರ ದೂರದ ಧಾರವಾಡದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರೆಗೂ ಹಿಂದಿರುಗಿ ನೋಡಲೇ… Read More ಅಕ್ಷರಗಳ ಬ್ರಹ್ಮರಾಕ್ಷಸ ರವಿ ಬೆಳಗೆರೆ

ಜೀವನ ಮತ್ತು ರೈಲು ಗಾಡಿ

ನಮ್ಮ ಜೀವನದ ಪಯಣ ಎನ್ನುವುದು ಒಂದು ರೀತಿಯಲ್ಲಿ ರೈಲು ಗಾಡಿ ಇದ್ದಂತೆ. ಬಾಲ್ಯ, ಪ್ರೌಢ, ಯೌವನ ಮತ್ತು‌ ವೃದ್ದಾಪ್ಯಗಳು ನಮ್ಮ ಪಯಣದಲ್ಲಿ ಬರುವ ನಿಲ್ದಾಣಗಳು. ಈ ಸುದೀರ್ಘ ಪಯಣದಲಿ, ನಮ್ಮೊಂದಿಗೆ ಬಂದು ಹೋಗುವ ಬಂಧು-ಮಿತ್ರರೆಲ್ಲರೂ, ಸಹ ಪ್ರಯಾಣಿಕ ರಾಗಿ, ಅವರವರ ನಿಲ್ದಾಣಗಳು ಬಂದಾಗ ನಮ್ಮೀ ಬೋಗಿಯಿಂದ ಇಳಿದು‌ ಹೋಗುವರು. ಆದರೆ, ನಮ್ಮೀ ಭೋಗಿಯನ್ನು ಸರಾಗವಾಗಿ ಎಳೆದುಕೊಂಡು ಹೋಗುವ ಇಂಜಿನ್ಗಳು, ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿ ತಂದೆ-ತಾಯಿಯರಾದರೇ, ಯೌವ್ವನದಲ್ಲಿ, ಬಾಳಸಂಗಾತಿ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳುಗಳು. ಈ ಎಂಜೀನ್‌ಗಳು ಸ್ವಲ್ಪ ಆಚೀಚೆಯಾದರೂ… Read More ಜೀವನ ಮತ್ತು ರೈಲು ಗಾಡಿ

ಕಾರ್ತಿಕ್ ಸಾಹುಕಾರ್

ಬಿಹಾರದ ಗಯಾ ಜಿಲ್ಲೆಯ ಗೆಹ್ಲಾರ್‌ ಎಂಬ ಕುಗ್ರಾಮದಲ್ಲಿನ ಒಬ್ಬಾಕೆಗೆ ಆರೋಗ್ಯ ಸರಿ ಇಲ್ಲದಿದ್ದಾಗ ಚಿಕಿತ್ಸೆಗೆಂದು ಗುಡ್ಡ ಹಿಂದಿರುವ ಊರಿಗೆ ತಲುಪಲು ಸುಮಾರು 40 ಕಿಮೀ ಹೋಗಲಾರದೇ, ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೇ ಮೃತಪಟ್ಟಾಗ ಆಕೆಯ ಪತಿ ದಶರಥ್‌ ಮಾಂಝಿ ಸುತ್ತಿಗೆ, ಹಾರೆಗಳಿಂದ ಏಕಾಂಗಿಯಾಗಿ ಸುಮಾರು 22 ವರ್ಷಗಳ ಕಾಲ ಕಡಿದು ಆ ಎರಡೂ ಊರುಗಳ ನಡುವಿನ ಅಂತರವನ್ನು ಕೆಲವೇ ಕೆಲವು ನಿಮಿಷಗಳಷ್ಟು ದೂರಕ್ಕೆ ತಂದಾಗ ಇಡೀ ಪ್ರಪಂಚವೇ ನಿಬ್ಬೆರಗಾಗಿತ್ತು. ಅದೇ ರೀತಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ… Read More ಕಾರ್ತಿಕ್ ಸಾಹುಕಾರ್

ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಿಂದಿರುವ ಅನೇಕ ಪೌರಾಣಿಕ ಹಿನ್ನಲೆಗಳು, ಪಟಾಕಿ ಮತ್ತು ಅದರ ಬಳಕೆಯ ಉಲ್ಲೇಖಗಳು ಹೇರಿದಂತೆ ಅಂದು ಮತ್ತು ಇಂದಿನ ಪಟಾಕಿ ತಯಾರಿಕೆಯ ಹಿಂದಿರುವ ವೆತ್ಯಾಸಗಳ ಕುರಿತಾದ ವೈಚಾರಿಕಪೂರ್ಣ ಲೇಖನ ಇದೋ ನಿಮಗಾಗಿ… Read More ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

ಶಾಂತಾ ರಂಗಸ್ವಾಮಿ

ಬ್ರಿಟೀಷರು ಭಾರತವನ್ನು ಬಿಟ್ಟು ಹೋದರೂ, ಭಾರತೀಯರು ಬ್ರೀಟಿಷರಿಂದ ಕಲಿತ ಇಂಗ್ಲೀಷ್ ಭಾಷೆ, ಅವರ ವೇಷ ಭೂಷಣ ಮತ್ತು ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಅವರು ಕಲಿಸಿಕೊಟ್ಟ ಕ್ರಿಕೆಟ್ ಆಟವನ್ನು ಅಪ್ಪಿ ಮುದ್ದಾಡುತ್ತಿದ್ದೇವೆ. ಇತ್ತೀಚೆಗಂತೂ ಭಾರತದಲ್ಲಿ ಕ್ರಿಕೆಟ್ ಎನ್ನುವುದು ಒಂದು ರೀತಿಯ ಧರ್ಮವಾಗಿದೆ ಎಂದರೂ ತಪ್ಪಾಗಲಾರದು. ಈ ರೀತಿಯ ಬದಲಾವಣೆಯಾದದ್ದು ಕಪಿಲ್ ದೇವ್ ಅವರ ತಂಡ 1983ರ ವರ್ಲ್ಡ್ ಕಪ್ ಗೆದ್ದ ನಂತರ ಎನ್ನುವುದು ಗಮನಿಸಬೇಕಾದ ಅಂಶ ಅದಕ್ಕೂ ಮೊದಲು ಕ್ರಿಕೆಟ್ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಆಟಕ್ಕುಂಟು ಲೆಕ್ಕಕ್ಕಿಲ್ಲ. ಎಪ್ಪತ್ತರ… Read More ಶಾಂತಾ ರಂಗಸ್ವಾಮಿ

ಸುಧೀರ್

ಅದು ಎಂಬತ್ತರ ದಶಕ ಮಲ್ಲೇಶ್ವರದ ಕೋದಂಡರಾಮಪುರದ ರಾಮಮಂದಿರದ ಎರುರಿಗಿದ್ದ ಕೆಲವು ಸಣ್ಣ ಸಣ್ಣ ಮನೆಯೊಂದರಲ್ಲಿ ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದ ನಟರೊಬ್ಬರು ಇದ್ದರು. ವರನಟ ರಾಜಕುಮಾರರ ತಮ್ಮ ವರದಪ್ಪನವರ ಮನೆ ಅಲ್ಲಿಂದ ಕೂಗಳತೆಯ ದೂರದಲ್ಲಿತ್ತು. ನಾಟಕ ಅಥವಾ ಚಿತ್ರೀಕರಣವಿಲ್ಲದಿದ್ದಲ್ಲಿ ಸಂಜೆ ನೀಟಾಗಿ ಡ್ರೆಸ್ ಮಾಡಿಕೊಂಡು ಕೈ ಬೆರಳಲ್ಲೊಂದು ಕೀ ಚೈನ್ ತಿರುಗಿಸಿಕೊಂಡು ಸಿಳ್ಳೇ ಹಾಕುತ್ತಾ ತಮ್ಮ ಮನೆಯಿಂದ ಹೊರಡುತ್ತಿದ್ದ ವೈಯ್ಯಾಳಿಕಾವಲ್ ರಾಜೇಶ್ ಹೋಟೆಲ್ ಕಡೆಗೆ ಹೋಗುತ್ತಿದ್ದ ಆ ಅಜಾನುಬಾಹು ನಟನನ್ನು ನೋಡಿದರೆ ನಿಜಕ್ಕೂ ಭಯವೆನಿಸುತ್ತಿತ್ತು. ನಮ್ಮಂತಹ ಚಿಕ್ಕಮಕ್ಕಳು… Read More ಸುಧೀರ್

ಪರಿಸರ ಪ್ರೇಮಿ, ವೃಕ್ಷಮಾತೆ ಸಾಲುಮರ ತಿಮ್ಮಕ್ಕ

ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, 385 ಆಲದ ಮರಗಳು ಸೇರಿದಂತೆ 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ 114 ವರ್ಷದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ ಆಗಿರುವ ಸಂಧರ್ಭದಲ್ಲಿ ಅವರ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಪರಿಸರ ಪ್ರೇಮಿ, ವೃಕ್ಷಮಾತೆ ಸಾಲುಮರ ತಿಮ್ಮಕ್ಕ