ಕಿತ್ತಳೇಹಣ್ಣಿನ ಸಿಪ್ಪೆಯ ಗೊಜ್ಜು

ಈಗೆ ಕಿತ್ತಳೇ ಹಣ್ಣಿನ ಸೀಜನ್. ಎಲ್ಲಾ ಕಡೆಯಲ್ಲಿಯೂ ಸುಲಭವಾಗಿ ಕೆಜಿಗೆ 30-40 ರೂಪಾಯಿಗಳಿಗೆಲ್ಲಾ ಕಿತ್ತಳೆ ಹಣ್ಣು ಸಿಗುತ್ತಿದೆ. ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೇ ಹಣ್ಣಿನ ನಿಯಮಿತ ಸೇವನೆಯಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ ಮತ್ತು ರಕ್ತ ಪರಿಶುದ್ಧಗೊಳಿಸುತ್ತದೆ ಜಠರದ ಆರೋಗ್ಯವನ್ನೂ ಕಾಪಾಡುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಕಿತ್ತಳೇ ಹಣ್ಣನ್ನು ಮಾತ್ರವೇ ತಿಂದು ಇಲ್ಲವೇ ಅದರ ಜ್ಯೂಸ್ ಮಾಡಿಕೊಂಡು ಸೇವಿಸುತ್ತೇವೆಯೇ ಹೊರತೂ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ನಿಜವಾದ ಸತ್ವ ಇರುವುದೇ ಕಿತ್ತಳೇ ಸಿಪ್ಪೆಯಲ್ಲಿಯೇ ಎಂದರೆ ಆಶ್ಚರ್ಯವಾಗುತ್ತದೆ. ಹಾಗಾಗಿಯೇ ನಾವಿಂದು… Read More ಕಿತ್ತಳೇಹಣ್ಣಿನ ಸಿಪ್ಪೆಯ ಗೊಜ್ಜು

ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಇಡೀ ದೇಶದಲ್ಲಿ ಕಮಲವನ್ನು ಅರಳಿಸುವುದು ಒಂದು ರೀತಿಯಾದರೇ, ದಕ್ಷಿಣ ಭಾರತದ ಕೇರಳ ಮತ್ತು ಪೂರ್ವ ಭಾಗದ ಪಶ್ಚಿಮ ಬಂಗಳದ್ದೇ ಒಂದು ಸಾಹಸ ಗಾಥೆ. ಕೇರಳದಲ್ಲಿ ಕಮ್ಯೂನಿಷ್ಟರ ಕಾಟವಾದರೇ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟರ ತದ್ರೂಪಾಗಿರುವ ತೃಣಮೂಲ ಕಾಂಗ್ರೇಸ್ಸಿಗರ ಜೊತೆಗಿನ ಹೋರಾಟ. ತಲೆ ತಲಾಂತರಗಳಿಂದಲೂ ಎರಡೂ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಮತ್ತೊಂದು ಘನ ಘೋರ ದುರ್ದೈವವೇ ಸರಿ. ಈ ಎರಡೂ ರಾಜ್ಯಗಳಲ್ಲಿರುವ ಹಿಂದೂಗಳು ಪರಮ ದೈವ ಭಕ್ತರಾದರೂ, ರಾಜಕೀಯವಾಗಿ ಅದೇಕೋ ಕಮ್ಯೂನಿಷ್ಟರನ್ನು… Read More ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಪಂಚಾಮೃತ ಮತ್ತು ಪಂಚಲೋಹ

ಸಾಧಾರಣವಾಗಿ ಬಹುತೇಕ ಎಲ್ಲಾ ದೇವಸ್ಥಾನಗಳಿಗೂ ಬೆಳಗ್ಗೆ ಹೋದಾಗ ತೀರ್ಥದ ರೂಪದಲ್ಲಿ ಪಂಚಾಮೃತ ಕೊಟ್ಟು ಅದನ್ನು ಭಕ್ತಿಯಿಂದ ಸೇವಿಸಿದ ನಂತರ ತುಳಸೀ ಮತ್ತು ಪಚ್ಚ ಕರ್ಪೂರ ಹಾಕಿದ ತೀರ್ಥವನ್ನು ಕೊಡುವುದನ್ನು ನಾವು ನೋಡಿದ್ದೇವೆ. ಪ್ರತೀ ದಿನ ದೇವರ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ,ಜೊತೆಗೆ ಬಾಳೆಹಣ್ಣು, ಎಳನೀರು, ನೀರಿನ ಮುಖಾಂತರ ಅಭಿಷೇಕವನ್ನು ಮಾಡಿದ ನಂತರ ಅವೆಲ್ಲವನ್ನೂ ಒಂದು ಶುಭ್ರವಾದ ಬೆಳ್ಳಿ ಇಲ್ಲವೇ ಹಿತ್ತಾಳೆ, ಕಂಚು ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಬಂದ ಭಕ್ತಾದಿಗಳಿಗೆ ತೀರ್ಥದ ರೂಪದಲ್ಲಿ… Read More ಪಂಚಾಮೃತ ಮತ್ತು ಪಂಚಲೋಹ

ನೆನೆದವರ ಮನದಲ್ಲಿ ಪೇಜಾವರ ಶ್ರೀ ಗಳು

ನಮಗೆಲ್ಲಾ ತಿಳಿದಿರುವಂತೆ ಈ ದೇಶ ಕಂಡ ಮಾಹಾ ಯತಿಳಾಗಿದ್ದಂತಹ ಪೇಜಾವರ ಶ್ರೀಗಳು ಕಳೆದ ವರ್ಷ ಇದೇ ಸಮಯದಲ್ಲಿಯೇ ನಮ್ಮನಗಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಪೇಜಾವರ ಶ್ರೀಗಳ ಇಚ್ಚೆಯಂತೆಯೇ ಅವರ ವೃಂದಾವನವನ್ನು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನೆನ್ನೆ ಡಿ.17ರಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪೂರ್ಣಪ್ರಮಾಣದ ವೃಂದಾವನ ಪ್ರತಿಷ್ಠಾಪನೆಯಾಗಿದೆ. ಶ್ರೀಗಳು ನಿಧನರಾದಾಗ ಅದೇ ಸ್ಥಳದಲ್ಲಿ ಅವರ ಭೌತಿಕ ಶರೀರವನ್ನು ವೃಂದಾವನಸ್ಥಗೊಳಸಿ ತಾತ್ಕಾಲಿಕವಾಗಿ ವೃಂದಾವನವೊಂದನ್ನು ನಿರ್ಮಿಸಿ ನಂತರ ಮಾಧ್ವ ಸಂಪ್ರದಾಯದಂತೆ ಶಿಲಾ ವೃಂದಾವನವನ್ನು ಅವರು ಸ್ವರ್ಗಸ್ಥರಾದ ವರ್ಷದೊಳಗೇ ನಿರ್ಮಿಸಲಾಗಿದ್ದು… Read More ನೆನೆದವರ ಮನದಲ್ಲಿ ಪೇಜಾವರ ಶ್ರೀ ಗಳು

ಗಸಗಸೆ ಪಾಯಸ

ಹಬ್ಬದ ಹರಿದಿನಗಳಲ್ಲಿ ದೇವರ ಪೂಜೆಯಷ್ಟೇ ಊಟಕ್ಕೂ ಮಹತ್ವವಿದ್ದೇ ಇರುತ್ತದೆ. ಹಬ್ಬದ ಊಟ ಎಂದರೆ ಸಿಹಿ ಭಕ್ಷಗಳೇ ಪ್ರಾಧ್ಯಾನ್ಯವಾದದರು ಎಲೆ ಕೊನೆಗೇ ಪಾಯಸ ಬಡಿಸಲೇ ಬೇಕೆಂಬ ಶಾಸ್ತ್ರ ಮತ್ತು ನಮ್ಮ ಊಟ ಆರಂಭವಾಗುವುದೇ ಪಾಯಸದಿಂದ. ಇಂದೆಲ್ಲಾ ಬಾಣಸಿಗರು ಬಗೆ ಬಗೆಯ ಪಾಯಸಗಳನ್ನು ಮಾಡುತ್ತಾರಾದರೂ, ಹಿಂದಿನ ಕಾಲದಲ್ಲಿ ಶ್ಯಾವಿಗೆ ಪಾಯಸ ಇಲ್ಲವೇ ಗಸಗಸೆ ಪಾಯಸಕ್ಕೇ ಹೆಚ್ಚಿನ ಪ್ರಾಶಸ್ತ್ರ್ಯ. ಅಂತಹ ಗಸಗಸೆ ಪಾಯಸದ್ದೇ ಕುರಿತಾದ ಮೋಜಿನ ಸಂಗತಿ ಇದೋ ನಿಮಗಾಗಿ. ಚಿಕ್ಕ ವಯಸ್ಸಿನಿಂದಲೂ ನಾನು ಗಸಗಸೆ ಪಾಯಸ ಪ್ರಿಯ. ಬಹುಶಃ ಈ… Read More ಗಸಗಸೆ ಪಾಯಸ

ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ

ಇತ್ತೀಚಿನ ಕೆಲವು ವರ್ಷಗಳಿಂದ ಡಿಸೆಂಬರ್ ತಿಂಗಳು ಬಂದಿತೆಂದರೆ, ಒಂದು ರೀತಿಯ ಆಳುಕು. ಅದಕ್ಕೆ ಕಾರಣವಿಷ್ಟೇ, ವಿಷ್ಣುವರ್ಧನ್, ಸಿ ಅಶ್ವಥ್ ಮುಂತಾದವರೆಲ್ಲರೂ ಮೃತಪಟ್ಟಿದ್ದೇ ಡಿಸೆಂಬರ್ ತಿಂಗಳಿನಲ್ಲಿ ಈಗ ಅದಕ್ಕೆ ಮತ್ತೊಂದು ಸೇರ್ಪಡೆಯೆಂದರೆ ನಾಡಿನ ಹಿರಿಯ ವಿದ್ವಾಂಸರು, ಆಧ್ಯಾತ್ಮ ಗುರುಗಳಗಿದ್ದಂತಹ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು. ಆಗಸ್ಟ್ 3, 1936ರಂದು ದೇವಾಲಯಗಳ ನಗರಿ ಉಡುಪಿಯ ಬಳಿ ಇರುವ ಬನ್ನಂಜೆ ಎಂಬ ಗ್ರಾಮದಲ್ಲಿ ವಿದ್ವಾಂಸರಾದ ತರ್ಕಕೇಸರಿ ಶ್ರೀ ನಾರಾಯಣಾಚಾರ್ಯರ ಸುಪುತ್ರರಾಗಿ ಗೋವಿಂದಾಚಾರ್ಯರು ಜನಿಸುತ್ತಾರೆ. ಶಾಲೆಯಲ್ಲಿ ಶೈಕ್ಷಣಿಕವಾಗಿ ಅವರ ವಿದ್ಯಾಭ್ಯಾಸ ಕೇವಲ ಪ್ರಾಥಮಿಕ… Read More ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ

ಜ್ಞಾನಚೂರ್ಣ ನಶ್ಯ

ಬಹುಶಃ ಇಂದಿನ ಕಾಲದಲ್ಲಿ ಯಾವುದೇ ಚಟವಿಲ್ಲದವರು ಸಿಗುವುದೇ ಅಪರೂಪ ಎಂದರೂ ತಪ್ಪಾಗಲಾರದೇನೋ?. ಇಂದಿನ ಬಹುತೇಕ ಹುಡುಗರು ಕಾಲೇಜು ಮೆಟ್ಟಿಲು ಹತ್ತುವುದರೊಳಗೇ ಬೀಡಿ ಇಲ್ಲವೇ ಸಿಗರೇಟ್ ಈ ರೀತಿ ಯಾವುದಾದರೂಂದು ತಂಬಾಕಿನ ಉತ್ಪನ್ನಕ್ಕೆ ದಾಸರಾಗಿ ಹೋಗುತ್ತಿರುವುದು ನಿಜಕ್ಕೂ ಬೇಸರ ಸಂಗತಿ. ಆದರೆ ಇವೆರೆಡರ ಹೊರತಾಗಿಯೂ ತಂಬಾಕಿನಿಂದ ತಯಾರಾದ ಹೊಗೆರಹಿತ ಸಣ್ಣದಾಗಿ ನಶೆ ಏರಿಸುವ ವಸ್ತುವೇ ನಶ್ಯ ಇಲ್ಲವೇ ನಸ್ಯ ಎಂದೂ ಕರೆಯುತ್ತಾರೆ.. ಇಂತಹ ನಶ್ಯದ ಕುರಿತಾದ ಕೆಲವು ಮೋಜಿನ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನಗೆ ತಿಳಿದಂತೆ, ನಶ್ಯಕ್ಕೂ ನಮ್ಮ… Read More ಜ್ಞಾನಚೂರ್ಣ ನಶ್ಯ

ಶ್ರೀ ಸುಬ್ರಹ್ಮಣ್ಯ ಭಾರತಿ

ಶ್ರೀ ಸುಬ್ರಹ್ಮಣ್ಯ ಭಾರತಿಯವರು ಖಡ್ಗಕ್ಕಿಂತ ಲೇಖನಿಯೇ ಹರಿತ ಎಂದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತಮ್ಮ ಉಗ್ರ ಲೇಖನಗಳು ಮತ್ತು ಕವಿತೆಗಳ ಮೂಲಕ ಇಡೀ ತಮಿಳು ನಾಡಿನ ಜನರನ್ನು ಜಾಗೃತಗೊಳಿಸಿದ ನಮ್ಮ ದೇಶ ಕಂಡ ಅಪ್ರತಿಮ ರಾಷ್ಟ್ರಭಕ್ತ ಕವಿ ಎಂದರೆ ಅತಿಶಯೋಕ್ತಿಯಾಗಲಾರದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಾದ್ಯಂತ ತಾಂಡವವಾಡುತ್ತಿದ್ದ ಜಾತಿ ಪದ್ದತಿಯ ವಿರುದ್ಧ ಆಮೂಲಾಗ್ರ ಬದಲಾವಣೆಯಾಗುವಂತೆ ತಮ್ಮ ಕವನಗಳ ಮೂಲಕ ಜನರನ್ನು ಬಡಿದೆಬ್ಬಿಸಿದ್ದಲ್ಲದೇ, ಸ್ವತಃ ಮೇಲ್ವಾತಿಯಲ್ಲಿ ಹುಟ್ಟಿದ್ದರೂ ಅದರ ಹಮ್ಮು ಬಿಮ್ಮು ಇಲ್ಲದ್ದೇ ತಮಿಳುನಾಡಿನಲ್ಲಿನ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ… Read More ಶ್ರೀ ಸುಬ್ರಹ್ಮಣ್ಯ ಭಾರತಿ

ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ದಿನಕಳೆದಂತೆ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮನುಷ್ಯರಿಗೆ ಭೂಮಿಯ ಮೇಲಿನ ಆಸೆ ಹೆಚ್ಚಾದಂತೆಲ್ಲಾ ನಮ್ಮ ಪೂರ್ವಜರು ನೆಟ್ಟು ಹೋಗಿದ್ದ ಅಥವಾ ಸ್ವಾಭಾವಿಕವಾಗಿಯೇ ನೆಟ್ಟಿದ್ದ ಗಿಡ, ಮರ ಮತ್ತು ಕಾಡುಗಳನ್ನೆಲ್ಲಾ ಕಡಿದು ನಾಡು ಮಾಡುತ್ತಿದ್ದಂತೆಯೇ ಪ್ರಾಕೃತಿಕ ವ್ಯವಸ್ಥೆಗಳು ವೆತ್ಯಾಸವಾಗಿ ಕಾಲ ಕಾಲಕ್ಕೆ ಮಳೆ ಬೆಳೆ ಸರಿಯಾಗಿ ಆಗದೇ ಇದ್ದಾಗ ಗಿಡಿ ನೆಡಿ, ಮರ ಬೆಳೆಸಿ ವನ್ಯ ಸಂಪತ್ತನ್ನು ಉಳಿಸಿ ಎನ್ನುತ್ತಾ ಆಗ್ಗಾಗ್ಗೇ ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚುಮಾಡಿ ವನ ಮಹೋತ್ಸವ ಮಾಡಿ ಕಾಟಾಚಾಕಕ್ಕೆ ಕೆಲವೊಂದು ಗಿಡಗಳನ್ನು ನೆಟ್ಟು ಫೋಟೋಗಳನ್ನು ತೆಗೆಸಿಕೊಂಡು… Read More ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ