ಕೆ.ಎಸ್. ನಾರಾಯಣಾಚಾರ್ಯ

ಇತ್ತೀಚಿನ ದಿನಗಳಲ್ಲಿ ಕನ್ನಡದ ಸಾಹಿತ್ಯ ಲೋಕದಲ್ಲಿ ಪೌರಾಣಿಕ, ಐತಿಹಾಸಿಕ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ಮತ್ತು ಮಾತನಾಡಬಲ್ಲಂತಹ ವ್ಯಕ್ತಿಗಳು ಇನ್ನೂ ನಮ್ಮೊಂದಿಗೆ ಇದ್ದವರು ಎಂದರೆ  ಆವರು ಕೆ. ಎಸ್. ನಾರಾಯಣಾಚಾರ್ಯರು ಎಂದರೆ ಅತಿಶಯೋಕ್ತಿಯೇನಲ್ಲ. ನಾರಾಯಣಚಾರ್ಯರು ಕೇವಲ ಕನ್ನಡಕ್ಕೇ ಸೀಮಿತವಾಗದೇ ಭಾರತೀಯ ಸಂಸ್ಕೃತಿಯ ಹಿರಿಯ ವಿದ್ವಾಂಸರು, ಲೇಖಕರು, ಧರ್ಮ ಪ್ರಚಾರಕರು ಮತ್ತು ಹೆಮ್ಮೆಯ ಪ್ರವಚನಕಾರರೂ ಹೌದು. ಬೆಂಗಳೂರು ಜಿಲ್ಲೆಯ ಕಾನಕನಹಳ್ಳಿ ಅಂದರೆ ಈಗಿನ ಕನಕಪುರದ ಶ್ರೀ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್ ಮತ್ತು ರಂಗನಾಯಕಮ್ಮ ದಂಪತಿಗಳಿಗೆ 1933ರ… Read More ಕೆ.ಎಸ್. ನಾರಾಯಣಾಚಾರ್ಯ

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹೇಮಾವತಿ ನದಿಯ ತಟದಲ್ಲಿರುವ ಗೊರೂರು ಎಂಬ ಗ್ರಾಮದಲ್ಲಿ ಶ್ರೀನಿವಾಸ ಅಯ್ಯಂಗಾರ್ ಮತ್ತು ಲಕ್ಷಮ್ಮ ದಂಪತಿಗಳಿಗೆ 1904ರ ಜುಲೈ 4ರಂದು ರಾಮಸ್ವಾಮಿ ಅಯ್ಯಂಗಾರ್ ಅವರು ಜನಿಸುತ್ತಾರೆ. ಓದಿನಲ್ಲಿ ಬಹಳ ಚುರುಕಾಗಿದ್ದ ರಾಮಸ್ವಾಮಿಗಳು ತಮ್ಮ ಹಳ್ಳಿಯಲ್ಲಿಯೇ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಉನ್ನತ ವ್ಯಾಸಂಗಕ್ಕಾಗಿ ಹಾಸನದ ಸರ್ಕಾರಿ ಪ್ರೌಢಶಾಲೆಗೆ ಸೇರಿಕೊಂಡು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಗಾಂಧೀಯವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದ್ದಲ್ಲದೇ, ಗಾಂಧಿಯವರ ಪರಮ ಅನುಯಾಯಿಯಾಗಿ ಅವರ… Read More ಗೊರೂರು ರಾಮಸ್ವಾಮಿ ಅಯ್ಯಂಗಾರ್

ಆಟಗಾರರ ಆಯ್ಕೆ ಮತ್ತು ಆಟಗಾರರ ವರ್ತನೆ

ಕ್ರಿಕೆಟ್ ಪ್ರಿಯರಿಗೆಲ್ಲರಿಗೂ ನೆನಪಿರುವಂತೆ ಎಂಭತ್ತರ ದಶಕದಲ್ಲಿ ಪಂಜಾಬ್ ಪರವಾಗಿ ಆಡುತ್ತಿದ್ದ ಎಡಗೈ ಸ್ಪಿನ್ನರ್ ರಾಜೇಂದರ್ ಸಿಂಗ್ ಗೋಯಲ್ ರಣಜೀ ಪಂದ್ಯಾವಳಿಗಳಲ್ಲಿ 637 ವಿಕೆಟ್ ಪಡೆದಿರುವ ದಾಖಲೆಯನ್ನು ಇದುವರೆಗೂ ಯಾರೋಬ್ಬರಿಗೂ ಮುರಿಯುವುದಿರಲಿ ಅದರ ಹತ್ತಿರಕ್ಕೂ ಬರಲು ಸಾಧ್ಯವಾಗಿಲ್ಲ. ಅದೇ ರೀತಿ ದೆಹಲಿ ತಂಡಕ್ಕೆ ಆಡುತ್ತಿದ್ದ ಭಾಸ್ಕರ್ ಪಿಳ್ಳೆ ದೇಶೀಯ ಕ್ರಿಕೆಟ್ಟಿನಲ್ಲಿ ಸಾವಿರಾರು ರನ್ನುಗಳ ಸರದಾರ. ಭಾರತ ಕ್ರಿಕೆಟ್ ತಂಡದ ಹೆಸರಾಂತ ಆರಂಭಿಕ ಆಟಗಾರ ಸುನೀಲ್ ಗವಾಸ್ಕರ್ ಕ್ರಿಕೆಟ್ಟಿನಿಂದ ನಿವೃತ್ತಿ ಹೊಂದಿದಾಗ ಆವರ ಸ್ಥಾನವನ್ನು ತುಂಬುವ ಸಾಮರ್ಥ್ಯ ಯಾರಿಗಿದೇ ಎಂದು… Read More ಆಟಗಾರರ ಆಯ್ಕೆ ಮತ್ತು ಆಟಗಾರರ ವರ್ತನೆ

ಬಾಳಗಂಚಿ ಊರ ಹಬ್ಬ ಆಚರಿಸುವಿಕೆ

ನಮ್ಮೂರು ಬಾಳಗಂಚಿಯ ಸಮಸ್ತ ಗ್ರಾಮಸ್ಥರಿಗೆ ಸಾಷ್ಟಾಂಗ ಪ್ರಣಾಮಗಳು. ಕಳೆದ ವರ್ಷ ದೊಡ್ಡ ಹಬ್ಬಕ್ಕೆ ಊರಿಗೆ ಬಂದು ಸಂಭ್ರಮಿಸಿ ಹೋದ ನಂತರ, ಊರಿಗೆ ಬರುವ ಅವಕಾಶವೇ ದೊರೆತಿರಲಿಲ್ಲ. ಈ ವರ್ಷ ಯುಗಾದಿಯ ಸಮಯದಲ್ಲಿ ಕೋರೋನಾ ಮಾಹಾಮಾರಿಯ ಸಂಬಂಧಿತವಾಗಿ ಪ್ರಪಂಚಾದ್ಯಂತವೇ ಲಾಕ್ ಡೌನ್ ಇದ್ದ ಕಾರಣ ಊರ ಹಬ್ಬ ಮುಂದೂಡಿದ್ದು ಸ್ವಲ್ಪ ಬೇಸರವೆನಿದರೂ, ಈ ವರ್ಷ ಹಬ್ಬ ನಿಲ್ಲಿಸದೇ ಮುಂದೂಡಿರುವ ವಿಷಯ ತುಸು ನೆಮ್ಮದಿ ತಂದಿದ್ದು, ಕಾಲ ಎಲ್ಲವೂ ಸರಿ ಹೋದ ನಂತರ ಪ್ರತೀ ವರ್ಷದಷ್ಟು ವಿಜೃಂಭಣೆಯಲ್ಲದಿದ್ದರೂ ಸರಳ ಸಂಭ್ರಮವಾಗಿ,… Read More ಬಾಳಗಂಚಿ ಊರ ಹಬ್ಬ ಆಚರಿಸುವಿಕೆ

ಶಿವಗಂಗೆ

ಮೊನ್ನೆ ಸ್ನೇಹಿತರೊಬ್ಬರು ಕರೆ ಮಾಡಿ ಬಹಳ ತಿಂಗಳುಗಳಿಂದಲೂ ಮನೆಯಲ್ಲಿಯೇ ಕುಳಿತು ಬಹಳ ಬೇಸರವಾಗಿದೆ. ಇಲ್ಲೇ ಬೆಂಗಳೂರಿನ ಸುತ್ತಮುತ್ತಲೇ ಇರುವ ಸುಂದರವಾದ ಯಾವುದಾದರೂ ಪ್ರದೇಶ ಇದೆಯೇ, ಬೆಟ್ಟ ಹತ್ತುವ ಹಾಗಿರಬೇಕು. ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಪ್ರಸಿದ್ಧವಾಗಿರುವಂತಹ ಸ್ಥಳ ಇದ್ದರೆ ತುಂಬಾ ಚೆನ್ನಾಗಿರುತ್ತದೆ ಎಂದಾಗ ಥಟ್ ಅಂತಾ ಮನಸ್ಸಿಗೆ ಹೊಳೆದದ್ದೇ ತುಮಕೂರು ರಸ್ತೆಯಲ್ಲಿರುವ ಶಿವಗಂಗೆ. ನಾವು ಚಿಕ್ಕವರಿದ್ದಾಗ ಕೆಲ ವರ್ಷಗಳ ಕಾಲ ನೆಲಮಂಗಲದಲ್ಲಿ ವಾಸವಾಗಿದ್ದೆವು. ಹಾಗಾಗಿಯೇ ನನ್ನ ಬಾಲ್ಯದ ವಿದ್ಯಾಭ್ಯಾಸ ನಡೆದದ್ದೇ ನೆಲಮಂಗಲದ ಸರ್ಕಾರಿ ಶಾಲೆಯಲ್ಲಿ. ನಮ್ಮ ಮನೆಗೆ ಶನಿವಾರ… Read More ಶಿವಗಂಗೆ

ಆಧುನಿಕ ಭಗೀರಥ ರಾಜಶೇಖರ್(ರಾಜಾ)

ಅದು ಎಂಭತ್ತರ ದಶಕದ ಸಮಯ. ನನ್ನ ವಿದ್ಯಾಭ್ಯಾಸದ ಸಲುವಾಗಿ ನಾವು ನೆಲಮಂಗಲದಿಂದ ಬೆಂಗಳೂರಿನ ಬಿಇಎಲ್ ಕಾರ್ಖಾನೆ ಹಿಂದಿನ ಲೊಟ್ಟೇಗೊಲ್ಲಹಳ್ಳಿ ಗ್ರಾಮಕ್ಕೆ ಸ್ಥಳಾಂತರಗೊಂಡು ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹೋಗುತ್ತಿದ್ದ ನನಗೆ ನಮ್ಮ ಮನೆಯ ಬಳಿ ಯಾವುದೇ ಶಾಖೆ ಇರದಿದ್ದದ್ದು ತುಸು ಬೇಸರವೆನಿಸಿತ್ತು, ನಮ್ಮ ಶಾಲೆ ಮಧ್ಯಾಹ್ನನದ ಪಾಳಿಯಲ್ಲಿದ್ದು 1 – ಸಂಜೆ 5:30ಕ್ಕೆ ಮುಗಿಯುತ್ತಿತ್ತು. ಅದೊಂದು ದಿನ ನಮ್ಮ ಶಾಲೆಯ ಹಿಂಬಾಗದಲ್ಲಿದ್ದ ಬಿಇಎಲ್ ಸೊಸೈಟಿಯ ಪಕ್ಕದಲ್ಲಿ ಶಾಖೆ ನಡೆಯುವುದನ್ನು ನೋಡಿ ಆನಂದವಾಗಿ… Read More ಆಧುನಿಕ ಭಗೀರಥ ರಾಜಶೇಖರ್(ರಾಜಾ)

ಮಾರ್ವಾಡಿಗಳು ನಮ್ಮವರು

ಅದು ತೊಂಬತ್ತರ ದಶಕ ಅಂತ್ಯದ ಸಮಯ. ಆಗ ತಾನೇ ಮದುವೆಯಾಗಿದ್ದ ನಮಗೆ ಮಧುಚಂದ್ರಕ್ಕೆ ಹೋಗಬೇಕೆನ್ನುವ ತವಕ. ಈಗಿನಂತೆ ವಿದೇಶಕ್ಕೆ ಹೋಗುವ ಅರ್ಥಿಕ ಸಧೃಡತೆಯಾಗಲೀ, ಅನುಕೂಲತೆಗಳು ಇಲ್ಲದಿದ್ದಾಗ, ಜೈಪುರ್, ಉದಯಪುರ್, ಬಾಂಬೆಯ ಕಡೆ ಸುತ್ತಾಡಿಬರುವುದೆಂದು ತೀರ್ಮಾನಿಸಿಯಾಗಿತ್ತು. ಇದೇ ಸ್ಥಳಗಳಿಗೆ ಹೋಗಲು ತೀರ್ಮಾನಿಸಿದ್ದರ ಹಿಂದೆಯೂ ಒಂದು ಬಲವಾದ ಕಾರಣವಿದ್ದು, ನಮ್ಮಾಕಿಯ ಜೊತೆ ಬಾಲ್ಯದಿಂದಲೂ ನೆರೆಹೊರೆಯವರಾಗಿದ್ದು, ಸಹಪಾಠಿಯೂ ಆಗಿದ್ದು ಆಕೆಯ ಮದುವೆಯೂ ಸಹಾ ನಮ್ಮ ಮದುವೆಯಾಗಿ 15-20 ದಿನಗಳ ನಂತರ ದೂರದ ರಾಜಾಸ್ಥಾನದ ಮಾರ್ವಾಡ್ ಗಂಜಿನ ದೇವಗಡ್ ಮಜಾರಿಯಾ ಎಂಬ ಊರಿನ… Read More ಮಾರ್ವಾಡಿಗಳು ನಮ್ಮವರು

ಪುಳಿಯೋಗರೆ

ಇದು ದಕ್ಷಿಣ ಭಾರತದ ಜನಪ್ರಿಯ ಆಹಾರವೂ ಹೌದು ಮತ್ತು ದೇವಸ್ಥಾನಗಳಲ್ಲಿನ ಸುಪ್ರಸಿದ್ಧ ಪ್ರಸಾದವೂ ಹೌದು. ಪುಳಿಯೋಗರೇ ಎಂಬ ಹೆಸರು ಕೇಳಿದೊಡನೆ ನಮ್ಮ ಬಾಯಲ್ಲಿ ನೀರೂರುವ ಹಾಗೆಯೇ ಥಟ್ ಅಂತಾ ನೆನಪಾಗೋದೇ ಐಯ್ಯಂಗಾರ್ ಪುಳಿಯೋಗರೇ. ಬ್ರಾಹ್ಮಣರ ಒಂದು ಪಂಗಡವಾದ ಐಯ್ಯಾಂಗಾರರು ಈ ಪಾಕವಿಧಾನವನ್ನು ಬಹಳ ಚೆನ್ನಾಗಿ ಕರಗತ ಮಾಡಿಕೊಂಡು ಅದನ್ನು ತಮ್ಮ ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. ಅಂತಹ ರುಚಿಕರವಾದ ಪುಳಿಯೋಗರೇ ಗೊಜ್ಜನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ. ಒಮ್ಮೆ ಶುಚಿಯಾಗಿ ನೀರು ಬೆರಸದೇ… Read More ಪುಳಿಯೋಗರೆ

ತೂಕ ಮತ್ತು ಅಳತೆ

ಅದೊಂದು ಕೋಳಿ ಅಂಗಡಿ ಇನ್ನೇನು ಅಂಗಡಿಯನ್ನು ಮುಚ್ಚಬೇಕು ಎನ್ನುವ ಸಮಯದಲ್ಲಿ ಅಂಗಡಿಗೆ ಬಂದ ಮಹಿಳೆಯೊಬ್ಬಳು ಇನ್ನೂ ಕೋಳಿ ಸಿಗುತ್ತದೆಯೇ? ಎಂದು ವಿಚಾರಿಸುತ್ತಾಳೆ. ಕಟುಕ ತನ್ನ ಆಳವಾದ ಫ್ರೀಜರ್ ಅನ್ನು ತೆರೆದುನೋಡಿ ಅಲ್ಲಿ ಉಳಿದಿದ್ದ ಏಕೈಕ ಕೋಳಿಯನ್ನು ಹೊರತೆಗೆದು ತಕ್ಕಡಿಯಮೇಲಿಟ್ಟು 1.5 ಕೆ.ಜಿ. 🐓 ಇದೆ ಕೊಡ್ಲಾ ಎಂದು ಕೇಳುತ್ತಾನೆ. ತಕ್ಷಣವೇ ಮಹಿಳೆಯು ಕೋಳಿಯ ಗಾತ್ರ ಮತ್ತು ಪ್ರಮಾಣವನ್ನು ನೋಡಿ, ಇದಕ್ಕಿಂತ ಸ್ವಲ್ಪ ದೊಡ್ಡದಿದ್ದರೆ ಕೋಡ್ತೀರಾ ಎಂದು ವಿನಮ್ರವಾಗಿ ಕೇಳುತ್ತಾಳೆ. ಕೂಡಲೇ ಕಟುಕನು ಆ ಕೋಳಿಯನ್ನು ಮತ್ತೆ ತನ್ನ… Read More ತೂಕ ಮತ್ತು ಅಳತೆ