ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ

ಪ್ರತೀ ದಿನ, ಅದೇ ಹುಳಿ ಸಾರು, ಪಲಾವ್ ಇಲ್ಲವೇ ಪುಳಿಯೋಗರೇ ತಿಂದು ಬೇಜಾರಾಗಿದ್ದಲ್ಲಿ , ಅನ್ನದ ಜೊತೆ ಕಲಸಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ ಮತ್ತು ಥಟ್ ಅಂತ ಮಾಡಬಹುದಾದ ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ನೆನಸಿದ ಕಡಲೇಬೇಳೆ – 1 ಬಟ್ಟಲು ಮೆಂತ್ಯ ಸೊಪ್ಪು – 1 ಕಟ್ಟು ಹಸಿರು ಮೆಣಸಿನಕಾಯಿ… Read More ಮೆಂತ್ಯ ಸೊಪ್ಪಿನ ಮಟೋಡಿ ಪಲ್ಯ

ನನಗೆ ಹಿಂದೀ ಬರೋದಿಲ್ಲ, ನಾವು ದ್ರಾವಿಡರು

ಕಳೆದ ಒಂದೂವರೆ ವರ್ಷಗಳಿಂದ ಕೂರೋನಾ ಮಹಾಮಾರಿ ವಕ್ಕರಿಸಿ ಇಡೀ ವಿಶ್ವವೇ ಒಂದು ರೀತಿ ಸ್ಥಬ್ಧವಾಗಿದ್ದು ಎಲ್ಲೆಡೆಯೂ ಲಾಕ್ ಡೌನ್ ಪರಿಸ್ಥಿತಿ ಇದ್ದು ಈಗ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿಯೋ ಇಲ್ಲವೇ, ನಾವೇ ಅದರೊಂದಿಗೇ ಜೀವನ ನಡೆಸುವ ಕಲೆಯನ್ನು ಕಲಿತುಕೊಂಡಿದ್ದೇವೆ ಎನ್ನಬಹುದಾದ ಪರಿಸ್ಥಿತಿಯಲ್ಲಿ, ಕೂರೋನಾಕ್ಕಿಂತಲೂ ಹೆಚ್ಚಾಗಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಪ್ರತೀ ದಿನವೂ ಮಾಧ್ಯಮದವರ ಕೂರೋನಾ ಕುರಿತಾದ ಕಾರ್ಯಕ್ರಮಗಳಿಂದ ಭಯಭೀತರನ್ನಾಗಿ ಮಾಡಿಸುವ ಜೊತೆಗೆ ಹಾಗೇ ಸುಮ್ಮನೆ ವಿಷಯಾಂತರ ಮಾಡುತ್ತಾ,, ಪ್ರಕಾಶ್ ರೈ ಕೆ.ಜಿ.ಎಫ್ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ,… Read More ನನಗೆ ಹಿಂದೀ ಬರೋದಿಲ್ಲ, ನಾವು ದ್ರಾವಿಡರು

ಧೈರ್ಯಂ  ಸರ್ವತ್ರ ಸಾಧನಂ

ಮುಖಪುಟದ ಮುಖಾಂತರವೇ ಪರಿಚಯವಾದ ಮೂಲತಃ ಮುಧೋಳದವರಾದರೂ ಸದ್ಯ ಕೊಪ್ಪಳದಲ್ಲಿರುವ ಶ್ರೀ ಶಿವಶರಣಪ್ಪ ಬಳಿಗಾರ್ ಅವರು ಕಳೆದ ಮೂರ್ನಾಲ್ಕು ವಾರಗಳಿಂದಲೂ ಸಾಮಾಜಿಕ ಜಾಲ ತಾಣಗಳಲ್ಲಿ ಅಷ್ಟೊಂದು ಕಾಣಸಿಗಲಿಲ್ಲ, ಎನೋ ಕೆಲಸ ಕಾರ್ಯದಲ್ಲಿ ನಿರತರಾಗಿ ಇರಬಹುದೇನೋ ಎಂದು ಕೊಂಡಿದ್ದರೆ ಇಂದು ಬೆಳಿಗ್ಗೆ ಅವರ ಮುಖಪುಟದ ಗೋಡೆಯಲ್ಲಿ ಅವರದ್ದೇ ಲೇಖನ ಓದಿ ಒಂದು ಕಡೆ ಮತ್ತೊಂದೆಡೆ ಸಂತೋಷವಾಯಿತು. ಅವರ ಬರೆದದ್ದನ್ನು ಹಾಗೆಯೇ ಇಲ್ಲಿ ಪ್ರಕಟಿಸುತ್ತಿದ್ದೇನೆ. ಅವ್ವನಿಗೆ ಕಾಲುಸೆಪ್ಟೆಕ್ ಆದ ಕಾರಣ ಯಲಬುರ್ಗಾ ತಾಲ್ಲೂಕಿನ ಸರಕಾರಿ ಆಸ್ಪತ್ರೆಯಲ್ಲಿ 4-5 ದಿನ ಚಿಕಿತ್ಸೆ ಗಾಗಿ… Read More ಧೈರ್ಯಂ  ಸರ್ವತ್ರ ಸಾಧನಂ

ಗೋಗಳ್ಳರು

ನಾವೆಲ್ಲರೂ ಚಿಕ್ಕಂದಿನಿಂದಲೂ, ಪಂಚತ್ರಂತ್ರ ಮತ್ತು ಅಕ್ಬರ್ ಬೀರ್ಬಲ್ ಕಥೆಗಳನ್ನು ಕೇಳಿಕೊಂಡು ಬೆಳೆದವರೇ ಆಗಿದ್ದು, ಅಲ್ಲಿ ಕಳ್ಳರು ಬಹಳ ಚಾಣಕ್ಯತನದಿಂದ ಎಲ್ಲರನ್ನೂ ಬೇಸ್ತುಗೊಳಿಸಿ ತಮ್ಮ ಕೈಚಳಕವನ್ನು ತೋರಿಸುವುದನ್ನು ಕೇಳಿದ್ದೇವೆ, ಓದಿದ್ದೇವೆ. ಪ್ರಸ್ತುತವೂ ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅದಕ್ಕೆ ಉದಾಹರಣೆಯಾಗಿ ಒಂದು ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಸಾಮಾನ್ಯವಾಗಿ ರಾತ್ರಿಯ ಹೊತ್ತು ದನಗಳನ್ನು ಕದಿಯಲು ಬರುವ ಕಳ್ಳರು ಮಾಡುವ ಮೊದಲ ಕೆಲವೆಂದರೆ, ಹಸುಗಳ ಕುತ್ತಿಗೆಗೆ ಕಟ್ಟಲಾಗಿರುವ ಗಂಟೆಗಳನ್ನು ಶಬ್ಧ ಬಾರದಂತೆ ತೆಗೆದುಬಿಡುತ್ತಾರೆ ನಂತರ ಹಸುಗಳ ಬಾಯಿಗೆ ಶಬ್ಧ ಮಾಡದಂತೆ ಸಣ್ಣ ಬುಟ್ಟಿಯನ್ನು… Read More ಗೋಗಳ್ಳರು

KL 7BT 369

ಅರೇ ಇದೇನಿದು KL 7BT 369 ಎಂಬ ವಿಚಿತ್ರ ಶೀರ್ಷಿಕೆ? ಇದು ಯಾವ ನಂಬರ್? ಮತ್ತು ಈ ನಂಬರಿನ ಹಿಂದಿರುವ ರೋಚಕ ಕಥೆಯೇನು ಎಂದು ತಿಳಿಯುವ ಕಾತುರ ನಿಮಗಿದ್ದಲ್ಲಿ, ನಮಗೂ ಸಹಾ ಈ ನಂಬರಿನ ಕೂತೂಹಲಕಾರಿ ವಿಷಯಗಳನ್ನು ನಿಮ್ಮೊಂದಿಗೆ ಬಿಚ್ಚಿಡುವ ಮನಸ್ಸಾಗುತ್ತಿದೆ ಮೂಲತಃ ಕೇರಳಿಗರಾದರೂ, ದಕ್ಷಿಣ ಭಾರತದ ಸಿನಿಮಾರಂಗದ ಪ್ರಸ್ತುತ ಖ್ಯಾತನಾಮರಾದ ಹಲವರಲ್ಲಿ ಮೊಹಮ್ಮದ್ ಕುಟ್ಟಿ ಇಸ್ಮಾಯಿಲ್ ಪಾನಿ ಪರಂಬಿಲ್  ಅರ್ಥಾತ್ ಎಲ್ಲರ ಪ್ರೀತಿಯ ಮಮ್ಮುಟ್ಟಿ ಅವರ ಪರಿಚಯ ಯಾರಿಗೆ ತಾನೇ ಇಲ್ಲ? ಇತ್ತೀಚೆಗಷ್ಟೇ ತಮ್ಮ  69 ನೇಯ ಹುಟ್ಟುಹಬ್ಬವನ್ನು… Read More KL 7BT 369

ಹೀರೇಕಾಯಿ ತೊವ್ವೆ

‍ಮದುವೆ. ಮುಂಜಿ, ನಾಮಕರಣ ಹೀಗೆ ಯಾವುದೇ ಸಮಾರಂಭಗಳ ಉಟದಲ್ಲಿ ತೊವ್ವೆ ಬಹಳಷ್ಟು ಮಹತ್ವವನ್ನು ಪಡೆದಿರುತ್ತದೆ. ಇಂದು ಅಂತಹ ಸಾಂಪ್ರದಾಯಕವಾದ ಹೀರೇಕಾಯಿ ತೊವ್ವೆ ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಹೀರೇಕಾಯಿ ತೊವ್ವೆ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ತೊಗರೀ ಬೇಳೆ – 1 ದೊಡ್ಡ ಬಟ್ಟಲು ಹೆಸರು ಬೇಳೆ – 1 ಸಣ್ಣ ಬಟ್ಟಲು ಜೀರಿಗೆ – 1/2 ಚಮಚ ಹಸಿ ಮೆಣಸಿನಕಾಯಿ 4-5 ಕತ್ತರಿಸಿದ ಮಧ್ಯಮ ಗಾತ್ರದ ಹೀರೇಕಾಯಿ… Read More ಹೀರೇಕಾಯಿ ತೊವ್ವೆ

ಧೋಲ್ಕಲ್ ಗಣೇಶ

ನಮ್ಮ ದೇಶದಲ್ಲಿ ಹಲವಾರು ಗಣೇಶನ ಪ್ರಸಿದ್ಧ ದೇವಾಲಯಗಳಿವೆ. ಆದರೆ, ಛತ್ತೀಸ್ ಘಡದ ರಾಯ್‌ಪುರದಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ದಾಂತೇವಾಡ ಜಿಲ್ಲೆಯ ದಟ್ಟವಾದ ಕಾಡಿನ ಮಧ್ಯದಲ್ಲಿ ಧೋಲ್ಕಲ್ ಎಂಬ ಪರ್ವತದ ತುತ್ತ ತುದಿಯಲ್ಲಿ ಯಾವುದೇ ಮಂಟಪವಿಲ್ಲದೇ ಬಟ್ಟ ಬಯಲಿನಲ್ಲಿರುವ ಈ ಸುಂದರ ವಿಘ್ನವಿನಾಶಕನ ಬಗ್ಗೆ ಬಹುತೇಕರಿಗೆ ತಿಳಿದೇ ಇರಲಿಲ್ಲ. ಸುಮಾರು 13,000 ಅಡಿಗಳಷ್ಟು ಎತ್ತರದ ಈ ಡೋಲ್ಕಲ್ ಬೆಟ್ಟದ ತುತ್ತ ತುದಿಯಲ್ಲಿರುವ ಈ ಗಣೇಶನ ಮೂರ್ತಿಯನ್ನು ಸ್ಥಳೀಯ ಪತ್ರಕರ್ತ ಮತ್ತು ಪುರಾತತ್ವ ಇಲಾಖೆಯಿಂದ ನಡೆಸುತ್ತಿದ್ದ ಭಾರಿ ಶೋಧ… Read More ಧೋಲ್ಕಲ್ ಗಣೇಶ

ಆರೋಗ್ಯಕರ ಮಸಾಲೆಯುಕ್ತ ಆಂಧ್ರ ಶೈಲಿಯ ಪುದಿನಾ ಚಟ್ನಿ

ದೋಸೆ, ಇಡ್ಲಿ, ಚಪಾತಿ ಮತ್ತು ಅನ್ನದ ಜೊತೆ ಕಲೆಸಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಕಾಯಿ ಚೆಟ್ನಿ, ಹುರುಗಡಲೇ ಚೆಟ್ನಿ, ಕಡಲೇಕಾಯಿ ಚೆಟ್ನಿಗಳನ್ನು ಮಾಡುವುದು ಸಹಜ. ಆದರೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಆರೋಗ್ಯಕರವಾದ ಮತ್ತು ಮಸಾಲಯುಕ್ತ ಆಂಧ್ರ ಶೈಲಿಯ ಪುದಿನಾ ಚಟ್ನಿಯನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಆಂಧ್ರ ಶೈಲಿಯ ಪುದಿನಾ ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಪುದಿನಾ – 1 ಕಪ್ ಕಡ್ಲೆಬೇಳೆ – 4 ಚಮಚ ಉದ್ದಿನಬೇಳೆ… Read More ಆರೋಗ್ಯಕರ ಮಸಾಲೆಯುಕ್ತ ಆಂಧ್ರ ಶೈಲಿಯ ಪುದಿನಾ ಚಟ್ನಿ

ಹೆಣ್ಣು ಮಕ್ಕಳ ದಿನ

ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರವನ್ನು ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುವ ಮೂಲಕ ಆ ದಿನವನ್ನು ಕುಟುಂಬದಲ್ಲಿರುವ ಹೆಣ್ಣು ಮಕ್ಕಳಿಗೆ ಸಮರ್ಪಿಸಲಾಗಿದೆ. ಕುಟುಂಬದಲ್ಲಿ ಹೆಣ್ಣುಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಮೃದು ಧೋರಣೆಯಿಂದ ನೋಡಿಕೊಳ್ಳುವುದನ್ನೇ ದುರುಪಯೋಗ ಪಡಿಸಿಕೊಂಡು ನಾನಾ ರೀತಿಯ ಅಪಸವ್ಯವಗಳಿಗೆ ಕಾರಣೀಭೂತರಾಗುತ್ತಿರುವ ಈ ಸಂಧರ್ಭದಲ್ಲಿ ಅರ್ಥಗರ್ಭಿತವಾಗಿ ಹೆಣ್ಣು ಮಕ್ಕಳ ದಿನವನ್ನು ಹೇಗೆ ಆಚರಿಸಬೇಕು ಎನ್ನುವ ಸವಿವರ ಇದೋ ನಿಮಗಾಗಿ… Read More ಹೆಣ್ಣು ಮಕ್ಕಳ ದಿನ