ರಾಹುಲ್ ತೆವಾಟಿಯ

2014ರ ಐಪಿಲ್ ಹರಾಜು ಪ್ರಕ್ರಿಯೆಯಲ್ಲಿ ಹರಿಯಾಣದ ಫರೀದಾಬಾದಿನ 21 ವಯಸ್ಸಿನ ಅಷ್ಟೇನು ಖ್ಯಾತನಾಗಿರದಿದ್ದ ಆಲ್ರೌಂಡರ್ ರಾಹುಲ್ ತೆವಾಟಿಯಾ ಎಂಬ ಯುವಕನನ್ನು ಮೂಲ ಬೆಲೆಯಾದ 10 ಲಕ್ಷಗಳಿಗೆ ರಾಜಸ್ಥಾನ್ ರಾಯಲ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಸುಮಾರು ಮೂರು ವರ್ಷಗಳ ಕಾಲ ಅಲ್ಲೊಂದು ಇಲ್ಲೊಂದು ಪಂದ್ಯಗಳನ್ನು ಆಡಿಸಿ ಡಗ್ ಔಟಿನಲ್ಲಿ ನೀರನ್ನು ಹೊತ್ತು ತರಲು ಬಳಸಿಕೊಳ್ಳುತ್ತದೆ. 2017ರಲ್ಲಿ ರಾಜಸ್ಥಾನ್ ತಂಡದಿಂದ ಹೊರಬಿದ್ದು ಹರಾಜಿನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪಾಲಾದರೂ ಹೆಚ್ಚಿನ ಬದಲಾವಣೆ ಇಲ್ಲದೇ ಒಂದೇ ವರ್ಷಕ್ಕೆ ಅವರನ್ನು ಕೈಬಿಟ್ಟಿತ್ತು.… Read More ರಾಹುಲ್ ತೆವಾಟಿಯ

ಶುಂಠಿ ತೊಕ್ಕು (ಅಲ್ಲಂ ಪಚ್ಚಡಿ)

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಚೆಟ್ನಿಗಳೋ, ಪಲ್ಯವೋ ಇಲ್ಲವೇ ಸಾಗು ಮಾಡುವುದು ಸಹಜ. ಅದೇ ಚೆಟ್ನಿ, ಪಲ್ಯ, ಸಾಗು ತಿಂದು ಬೇಜಾರು ಆಗಿರುವವರಿಗೆ ಸ್ವಲ್ಪ ವಿಭಿನ್ನವಾಗಿರುವ ಮತ್ತು ಆರೋಗ್ಯಕರವಾಗಿರುವ ಮತ್ತು ತುಂಬಾ ದಿನಗಳವರೆಗೂ ಇಟ್ಟು ಕೊಂಡು ತಿನ್ನಬಹುದಾದ ಶುಂಠಿ ತೊಕ್ಕು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಶುಂಠಿ ತೊಕ್ಕು ತಯಾರಿಸಲು ಬೇಕಾಗುವ ಸಾಮಗ್ರಿಗಳು ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಕೊಂಡ ಶುಂಠಿ… Read More ಶುಂಠಿ ತೊಕ್ಕು (ಅಲ್ಲಂ ಪಚ್ಚಡಿ)

ಮಾಮರವೆಲ್ಲೋ ಕೋಗಿಲೆ ಎಲ್ಲೋ, ನಾ ಕಂಡಂತೆ ಎಸ್ಪಿಬಿ

ಎಪ್ಪತರ ದಶಕದಲ್ಲಿ ನನಗೆ ಆಗಿನ್ನೂ ಬುದ್ಧಿ ಬಂದ ಸಮಯದಲ್ಲಿ ನಾನು ಬಹಳ ಕಾಲ ಗುನುಗುತ್ತಿದ್ದ ಮತ್ತು ಈಗಲೂ ನನಗೆ ನೆನಪಿನಲ್ಲಿ ಇರುವ ದೇವರಗುಡಿ ಚಿತ್ರದ ಚಿ.ಉದಯಶಂಕರ್ ಸಾಹಿತ್ಯ ರಚನೆಯ, ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿ ಶ್ರೀ ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿರುವ ಮಾಮರವೆಲ್ಲೋ ಕೋಗಿಲೆ ಎಲ್ಲೋ, ಏನೀ ಸ್ನೇಹ ಸಂಬಂಧ, ಎಲ್ಲಿಯದೋ ಈ ಅನುಬಂಧ ಹಾಡು ಇಂದಿನ ದಿನಕ್ಕೆ ನಿಜಕ್ಕೂ ಅನ್ವರ್ಥವಾಗಿದೆ. ಜೂನ್ 4, 1946 ರಲ್ಲಿ ಆಂಧ್ರ ಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿ ತಮಿಳುನಾಡಿನ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿ… Read More ಮಾಮರವೆಲ್ಲೋ ಕೋಗಿಲೆ ಎಲ್ಲೋ, ನಾ ಕಂಡಂತೆ ಎಸ್ಪಿಬಿ

ಒರಳು ಕಲ್ಲು ಚಿತ್ರಾನ್ನ

ಸಭೆ ಸಮಾರಂಭಗಳಲ್ಲಿ ಎಲೆಯ ಕೊನೆಗೆ ಅಥವಾ ಮನೆಗಳಲ್ಲಿ ಬೆಳಗಿನ ತಿಂಡಿಗೆ ನಿಂಬೇಹಣ್ಣಿನ ಚಿತ್ರಾನ್ನ ಮಾಡುವುದು ವಾಡಿಕೆ ಅದರೇ ಅದೇ ರೀತಿಯ ಚಿತ್ರಾನ್ನ ತಿಂದು ಬೇಸರವಾಗಿದ್ದಲ್ಲಿ, ಸಾಂಪ್ರದಾಯಕವಾಗಿ ಅಡುಗೆಯಾದ ಒರಳು ಕಲ್ಲು ಚಿತ್ರಾನ್ನ ಮಾಡುವುದನ್ನು ನಮ್ಮ ಅನ್ನಪೂರ್ಣ ಮಾಲಿಕೆಯಲ್ಲಿ ತೋರಿಸಿ ಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಓರಳು ಕಲ್ಲು ಚಿತ್ರಾನ್ನ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ತೆಂಗಿನಕಾಯಿ ತುರಿ- 1 ಬಟ್ಟಲು ಜೀರಿಗೆ – 1 ಚಮಚ ಬೆಲ್ಲ- ಸಣ್ಣ ಗಾತ್ರ ಹುಣಸೇ ಹಣ್ಣು –… Read More ಒರಳು ಕಲ್ಲು ಚಿತ್ರಾನ್ನ

ಜೀವವಿದ್ದಲ್ಲಿ ಮಾತ್ರವೇ ಜೀವನ

ಕಳೆದ ಒಂದು ವಾರದಲ್ಲಿ, ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜ್ಯಸಭಾಸದಸ್ಯರು, ನಾಲ್ಕು ಬಾರಿ ಸಾಂಸದರಾಗಿ ಕೇಂದ್ರದಲ್ಲಿ ಮಂತ್ರಿಗಳಾಗಿದ್ದವರು ಮತ್ತು ಹಿರಿಯ ಶಾಸಕರಲ್ಲದೇ. ಹೆಸರಾಂತ ಗಾಯಕರರಾದ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡಿದ್ದೇವೆ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಚಿಂತಾಜನಕವಾಗಿದೆ. ಇವರೆಲ್ಲರೀ ಪರಿಸ್ಥಿತಿಯ ಹಿಂದೆ ಮಹಾಮಾರಿ ಕೂರೋನಾ ಕೈವಾಡವಿರುವುದು ಸ್ಪಷ್ಟವಾಗಿದೆ. ಸಚಿವರು, ಶಾಸಕರು, ಸಮಾಜದ ಗಣ್ಯವ್ಯಕ್ತಿಗಳಿಗೇ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲವೆಂದರೆ, ಇನ್ನು ಸಾಮಾನ್ಯ ಜನಗಳ ಪಾಡೇನು? ಸರ್ಕಾರ ಮತ್ತು ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ವಹಿಸಿದ್ದರೂ, ಸಮಾಜದಲ್ಲಿ ದಿನೇ… Read More ಜೀವವಿದ್ದಲ್ಲಿ ಮಾತ್ರವೇ ಜೀವನ

ಸೂಳೆ ಕೆರೆ (ಶಾಂತಿ ಸಾಗರ)

ಸೂಳೆಕೆರೆ ಎಂಬ ಹೆಸರನ್ನು ಕೇಳಲು ಮುಜುಗರ ಎನಿಸಿದರೂ, ಅ ಕೆರೆಯನ್ನು ಕಟ್ಟಿಸುವ ಹಿಂದಿರುವ ಪತಿತ ಪಾವನೆಯ ಪಾವಿತ್ರತೆ ನಿಜಕ್ಕೂ ಅದ್ಭುತವಾಗಿದ್ದು ಅದರ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಸೂಳೆ ಕೆರೆ (ಶಾಂತಿ ಸಾಗರ)

ಗೌರವ

ನಮ್ಮ ಸನಾತನ ಧರ್ಮದಲ್ಲಿ ಮೊತ್ತ ಮೊದಲಬಾರಿಗೆ ನಮಗೆ ಅರಿವೇ ಇಲ್ಲದಂತೆಯೇ ನಮಗೆಲ್ಲಾ ಕಲಿಸುವುದೇ ದೈವ ಭಕ್ತಿ ಮತ್ತು ಗುರು ಹಿರಿಯರಿಗೆ ಗೌರವವನ್ನು ಕೊಡುವುದೇ ಆಗಿದೆ. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುತು ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಮನೆಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳು ಸ್ವಲ್ಪ ಅಕ್ಕ ಪಕ್ಕದಲ್ಲಿ ನೋಡಿದ್ದು ಮತ್ತು ಕೇಳಿದ್ದು ಅದಕ್ಕೆ ಅರಿವಾಗುತ್ತಿದೆ ಅಂದ ತಕ್ಷಣ ಅದಕ್ಕೆ ಪ್ರತಿಯಾಗಿ ಅದು ಕೈ ಕಾಲು ಬಡಿಯುತ್ತಲೋ ಇಲ್ಲವೇ ಕಿಸಕ್ಕನೇ ನಗುವ ಮೂಲಕ ಪ್ರತ್ಯುತ್ತರ… Read More ಗೌರವ

ಕೊಡುಗೈ ರಾಜು

ಅದು 1998. ನನ್ನ ಮದುವೆಗಾಗಿ ಹೆಣ್ಣು ನೋಡುತ್ತಿದ್ದ ಸಮಯದಲ್ಲಿ ತಮ್ಮ ಮಗಳ ಜಾತಕವನ್ನು ಹಿಡಿದುಕೊಂಡು ಮೊತ್ತ ಮೊದಲ ಬಾರಿಗೆ ಸುಮಾರು 6 ಅಡಿಯಷ್ಟು ಎತ್ತರದ ಸುಂದರ ಮೈಕಟ್ಟಿನ ನಡು ವಯಸ್ಸಿನವರು ನಮ್ಮ ಮನೆಗೆ ಬಂದು ತಮ್ಮನ್ನು ತಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಳ್ಳುತ್ತಾರೆ. ಒಂದು ಗಂಡಿಗೆ ಒಂದು ಹೆಣ್ಣು ಎಂದು ಹುಟ್ಟಿಸುವಾಗಲೇ ಬ್ರಹ್ಮ ಬರೆದು ಕಳುಹಿಸಿರುತ್ತಾನೆ ಎಂಬಂತೆ ಜಾತಕಗಳೆಲ್ಲವೂ ಕೂಡಿ ಬಂದ ಕಾರಣ, ಅದೇ ಗುರುವಾರ ಸಂಜೆ ನನ್ನ ಜೀವನದಲ್ಲಿಯೇ ಪ್ರಪ್ರಥಮವಾಗಿ ಮತ್ತು ಅಧಿಕೃತವಾಗಿ… Read More ಕೊಡುಗೈ ರಾಜು

ದೇವರು ಎಷ್ಟು ದೊಡ್ಡವರು?

ಅದೊಂದು ಸಂಪ್ರದಾಯಸ್ಥ ಕುಟುಂಬ. ಅದೊಂದು ದಿನ ಅ ಮನೆಯ ಸಣ್ಣ ವಯಸ್ಸಿನ ಹುಡುಗನೊಬ್ಬ ತನ್ನ ತಂದೆಯನ್ನುದ್ದೇಶಿಸಿ, ಅಪ್ಪಾ, ನಾವು ನಂಬುವ ದೇವರು ದೊಡ್ಡವರಾಗಿರುತ್ತಾರೆ? ಅವರ ಗಾತ್ರವೇನು? ಎಂದು ಮುಗ್ಧತೆಯಿಂದ ಕೇಳುತ್ತಾನೆ. ಮಗನ ಪ್ರಶ್ನೆಯಿಂದ ಕೊಂಚ ಆಶ್ವರ್ಯ ಚಕಿತನಾದ ತಂದೆ ಒಂದು ಕ್ಶಣ ಮೌನವಾಗಿ ಯೋಚಿಸಿ ಇದಕ್ಕೆ ಹೇಗೆ ಉತ್ತರಿಸುವುದು ಎಂದು ನೋಡುತ್ತಿರುವಾಗಲೇ ಆಗಸದಲ್ಲಿ ವಿಮಾನವೊಂದು ಹೋಗುತ್ತಿರುತ್ತದೆ. ಕೂಡಲೇ ಮಗೂ, ಆ ವಿಮಾನದ ಗಾತ್ರ ಎಷ್ಟು ಎಂದು ಹೇಳಬಲ್ಲೆಯಾ ಎಂದು ಪ್ರಶ್ನಿಸುತ್ತಾನೆ. ಆಗಸದತ್ತ ದಿಟ್ಟಿಸಿ ವಿಮಾನವನ್ನು ನೋಡಿದ ಹುಡುಗ,… Read More ದೇವರು ಎಷ್ಟು ದೊಡ್ಡವರು?